ತೆಂಗಿನಕಾಯಿಯನ್ನು ವಿಜ್ಞಾನದ ಭಾಷೆಯಲ್ಲಿ ಕೋಕೋಸ್ ನ್ಯೂಸಿಫೆರಾ ಎಂದು ಕರೆಯಲಾಗುತ್ತದೆ. ತೆಂಗಿನ ಮರಗಳನ್ನು ನಮ್ಮ ಇಡೀ ಗೃಹ ಭೂಮಿಯ ಮೇಲೆ ಇರುವ ನೈಸರ್ಗಿಕವಾಗಿ ವ್ಯಾಪಕವಾದ ಹಣ್ಣಿನ ಮರ ಹೊಂದಿರುವ ಸಾಲಿನಲ್ಲಿ ಸೇರಿಸಲಾಗುತ್ತದೆ. ಇಂದು, ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಬೆಳೆಸಲಾಗುತ್ತದೆ ಮತ್ತು ಅವುಗಳ ಸುವಾಸನೆ, ಪಾಕಶಾಲೆಯ ಬಳಕೆಗಳು ಮತ್ತು ಅನೇಕ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗಾಗಿ ಹೆಚ್ಚು ಜನಪ್ರಿಯವಾಗಿದೆ. ನಾವಿಂದು ತೆಂಗಿನಕಾಯಿಯ ಪ್ರಯೋಜನಗಳು ಹಾಗೂ ಅದನ್ನು ನಿಮ್ಮ ಆಹಾರದಲ್ಲಿ ಸೇವಿಸಬಹುದಾದ ಕೆಲವು ಸರಳ ಮಾರ್ಗಗಳನ್ನು ತಿಳಿಸಲಿದ್ದೇವೆ.
ತೆಂಗಿನ ಉತ್ಪನ್ನಗಳ ವಿಧಗಳು
- ತೆಂಗಿನಕಾಯಿಯೊಳಗಿನ ಕಚ್ಚಾ ಬಿಳಿ ಪದರವನ್ನು ಕರ್ನಲ್ ಎಂದು ಕರೆಯಲಾಗುತ್ತದೆ. ಇದು ದೃಢವಾದ ವಿನ್ಯಾಸ ಮತ್ತು ಸ್ವಲ್ಪ ಸಿಹಿ ರುಚಿಯ ಜೊತೆಗೆ ಪರಿಮಳವನ್ನು ಹೊಂದಿದೆ .
- ಒಂದು ಸಂಪೂರ್ಣ ತೆಂಗಿನ ಕಾಯಿ ಇದ್ದಾಗ, ಅದರ ಹೊರಗಿರುವ ಚಿಪ್ಪು ಹೊರೆತುಪಡಿಸಿ ಒಳಗಿನ ಬಿಳಿ ಪದಾರ್ಥವನ್ನು ಸೇವನೆ ಮಾಡಬಹುದು. ಅದನ್ನು ತುರಿದುಕೊಂಡು ಇಲ್ಲವೇ ಕತ್ತರಿಸಿ ಸಣ್ಣ ತುಂಡುಗಳಾಗಿ ಮಾಡಿಕೊಂಡು ನಿಮ್ಮ ಆಹಾರ ಪದಾರ್ಥದಲ್ಲಿ ಸೇರಿಸಿಕೊಂಡು ಅಥವಾ ಬರಿ ಬಾಯಿಯಲ್ಲಿ ಜಗಿದು ತಿನ್ನುವ ಮೂಲಕ ಕೂಡ ಸೇವನೆ ಮಾಡಬಹುದು.
World Coconut Day 2022: ವಿಶ್ವ ತೆಂಗಿನಕಾಯಿ ದಿನದ ಇತಿಹಾಸ ಮತ್ತು ಮಹತ್ವ,
- ತೆಂಗಿನ ಹಾಲು ಮತ್ತು ಕಚ್ಚಾ ಕೆನೆಯನ್ನು ತುರಿದ ಕಾಯಿಯನ್ನು ಒತ್ತಿ ಅದರ ರಸ ತೆಗೆಯುವ ಮೂಲಕ ತಯಾರಿಸಲಾಗುತ್ತದೆ
- ಒಣಗಿದ ತೆಂಗಿನಕಾಯಿಯನ್ನು ಸಾಮಾನ್ಯವಾಗಿ ತುರಿದು ಹಾಕಿ ಅಡುಗೆ ಅಥವಾ ಬೇಕಿಂಗ್‌ನಲ್ಲಿ ಬಳಸಲಾಗುತ್ತದೆ. ಇನ್ನು ನುಣ್ಣಗೆ ಪುಡಿ ಮಾಡಿಕೊಂಡು ಕೂಡ ಅಡಿಗೆಯಲ್ಲಿ ಬಳಸಬಹುದು.
- ತೆಂಗಿನ ಎಣ್ಣೆಯನ್ನು ಇದರ ಕಾಯಿಯಿಂದ ಹೊರತೆಗೆಯಲಾಗುತ್ತದೆ ಮತ್ತು ಇತರ ಸಸ್ಯಜನ್ಯ ಎಣ್ಣೆಗಳ ಬದಲಿಗೆ ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸಬಹುದು.
ತೆಂಗಿನ ಕಾಯಿಯಲ್ಲಿರುವ ಪೋಷಕಾಂಶಗಳು (Proteins)
- ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಇತರೆ ಅನೇಕ ಹಣ್ಣುಗಳಿಗೆ ಹೋಲಿಸಿಕೊಂಡರೆ, ತೆಂಗಿನಕಾಯಿಯು ದೇಹಕ್ಕೆ ಹೆಚ್ಚಿನ ಕೊಬ್ಬನ್ನು ಒದಗಿಸುತ್ತದೆ.
- ಇದರ ಜೊತೆಗೆ ತೆಂಗಿನ ಕಾಯಿಯು ಪ್ರೋಟೀನ್, ಹಲವಾರು ಪ್ರಮುಖ ಖನಿಜಗಳು ಮತ್ತು ಸ್ವಲ್ಪ ಪ್ರಮಾಣದ ಬಿ ಜೀವಸತ್ವಗಳನ್ನು ಸಹ ಹೊಂದಿರುತ್ತವೆ. ಆದರೂ ತೆಂಗಿನಕಾಯಿಯು, ಇದನ್ನು ಹೊರತುಪಡಿಸಿ ಇತರ ಹೆಚ್ಚಿನ ಜೀವಸತ್ವಗಳನ್ನು ಹೊಂದಿಲ್ಲ.
ತೆಂಗಿನಕಾಯಿ-ಬೆಲ್ಲ ಒಟ್ಟಿಗೆ ತಿಂದ್ರೆ ಬೇಗ ಸ್ಲಿಮ್ ಆಗ್ಬೋದು
- ತೆಂಗಿನಕಾಯಿಯಲ್ಲಿರುವ ಖನಿಜಗಳು (Minerals) ನಿಮ್ಮ ದೇಹದಲ್ಲಿನ ಅನೇಕ ಕಾರ್ಯಗಳನ್ನು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ತೆಂಗಿನಕಾಯಿಯಲ್ಲಿ ವಿಶೇಷವಾಗಿ ಮ್ಯಾಂಗನೀಸ್ (Manganese) ಅಧಿಕವಾಗಿದೆ, ಇದು ಮೂಳೆಯ ಆರೋಗ್ಯಕ್ಕೆ ಮತ್ತು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಲೆಸ್ಟ್ರಾಲ್‌ನ ಚಯಾಪಚಯ ಕ್ರಿಯೆಗೆ ಅವಶ್ಯಕವಾಗಿದೆ.
- ತೆಂಗಿನಕಾಯಿಯಲ್ಲಿ ತಾಮ್ರ ಮತ್ತು ಕಬ್ಬಿಣ ಸಮೃದ್ಧವಾಗಿವೆ, ಇದು ಕೆಂಪು ರಕ್ತ ಕಣಗಳನ್ನು ರೂಪಿಸಲು ಸಹಾಯ ಮಾಡುತ್ತದೆ, ಜೊತೆಗೆ ಸೆಲೆನಿಯಮ್, ನಿಮ್ಮ ಜೀವಕೋಶಗಳನ್ನು ರಕ್ಷಿಸುವ ಪ್ರಮುಖ ಉತ್ಕರ್ಷಣ ನಿರೋಧಕವಾಗಿದೆ.
- ತೆಂಗಿನಕಾಯಿಯಲ್ಲಿರುವ ಹೆಚ್ಚಿನ ಕೊಬ್ಬು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳ (MCT) ರೂಪದಲ್ಲಿದೆ. ಮನುಷ್ಯನ ದೇಹವು ಇತರ ರೀತಿಯ ಕೊಬ್ಬುಗಳಿಗಿಂತ ವಿಭಿನ್ನವಾಗಿ MCT ಗಳನ್ನು ಚಯಾಪಚಯಗೊಳಿಸುತ್ತದೆ, ತೆಂಗಿನಕಾಯಿಯ ಅಂಶಗಳನ್ನು ನಿಮ್ಮ ಸಣ್ಣ ಕರುಳಿನಿಂದ ನೇರವಾಗಿ ಹೀರಿಕೊಳ್ಳುತ್ತದೆ ಮತ್ತು ವೇಗವಾಗಿ ಇದನ್ನು ಬಳಸಿಕೊಳ್ಳುವ ಮೂಲಕ ಶಕ್ತಿಯನ್ನು ಉತ್ಪಾದಿಸುತ್ತದೆ.
- ಸ್ಥೂಲಕಾಯತೆ ಹೊಂದಿರುವ ಜನರಲ್ಲಿ MCT ಗಳ ಪ್ರಯೋಜನಗಳ ಕುರಿತಾದ ಒಂದು ವಿಮರ್ಶೆಯ ಪ್ರಕಾರ, ಪ್ರಾಣಿಗಳ ಆಹಾರದಿಂದ (Animal food) ತಯಾರಾಗುವ ದೀರ್ಘ-ಸರಪಳಿಯ ಸ್ಯಾಚುರೇಟೆಡ್ ಕೊಬ್ಬುಗಳ (saturated cholesterol) ಬದಲಿಗೆ ತೆಂಗಿನ ಕಾಯಿಯನ್ನು ಸೇವಿಸಿದಾಗ ಈ ಕೊಬ್ಬುಗಳು ದೇಹದ ಕೊಬ್ಬಿನ ನಷ್ಟವನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗಿದೆ.