ಡೆಂಗ್ಯೂ ಹಲವರನ್ನು ಬೆಚ್ಚಿ ಬೀಳುವಂತೆ ಮಾಡುವ ಕಾಯಿಲೆ. ಸ್ಪಲ್ಪ ಯಾಮಾರಿದರೂ ಜೀವಕ್ಕೇ ಅಪಾಯವಾಗಬಹುದು. ಹೀಗಾಗಿ ಡೆಂಗ್ಯೂ ಜ್ವರ ತಗುಲಿದ ಸಮಯದಲ್ಲಿ ಜಸ್ಟ್ ಜ್ವರ ಅಲ್ವಾ ಅಂತ ನಿರ್ಲಕ್ಷ್ಯ ವಹಿಸುವ ಬದಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಡೆಂಗ್ಯೂ ಜ್ವರವಿದ್ದಾಗ ಕೆಲವೊಂದು ಆಹಾರ ಸೇವಿಸಲೇಬಾರದು. ಅದ್ಯಾವುದೆಂದು ತಿಳಿಯಿರಿ.
ಆಗಾಗ ಬದಲಾಗುತ್ತಿರುವ ವಾತಾವರಣದಿಂದ ವೈರಲ್ ಫೀವರ್ ಹೆಚ್ಚಾಗುತ್ತಿದೆ. ಸುಲಭವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಜ್ವರ ಹರಡುತ್ತಿದೆ. ಅದರ ಮಧ್ಯೆ ಆಗಾಗ ಬರುವ ಬಿಸಿಲು ಮಳೆಯ ಆಟ ಸೊಳ್ಳೆಯ ಉತ್ಪತ್ತಿಯನ್ನು ಹೆಚ್ಚಿಸಿದ್ದು, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಮೊದಲಾದ ಜ್ವರಗಳ ಭೀತಿ ಎದುರಾಗುತ್ತಿದೆ. ಅದರಲ್ಲೂ ದೀಪಾವಳಿಯವರೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಬಹುದು. ಆದ್ದರಿಂದ, ನೀವು ಡೆಂಗ್ಯೂ ಸಮಯದಲ್ಲಿ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಡೆಂಗ್ಯೂ ಜ್ವರದಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು. ಇಲ್ಲದಿದ್ದರೆ, ನಿಮ್ಮ ಪ್ಲೇಟ್‌ಲೆಟ್‌ಗಳು ವೇಗವಾಗಿ ಕಡಿಮೆಯಾಗಬಹುದು ಮತ್ತು ಇದು ಮಾರಕವಾಗಬಹುದು.
ಡೆಂಗ್ಯೂ ಜ್ವರ ಎಂದರೇನು ?
ಡೆಂಗ್ಯೂ ಸೊಳ್ಳೆ (Mosquito)ಯಿಂದ ಹರಡುವ ರೋಗವಾಗಿದ್ದು, ಇದರ ಮುಖ್ಯ ಲಕ್ಷಣಗಳೆಂದರೆ ಅಧಿಕ ಜ್ವರ (Fever), ಶೀತ, ದದ್ದು ಮತ್ತು ಪ್ಲೇಟ್‌ಲೆಟ್‌ಗಳ ಕುಸಿತ. ಡೆಂಗ್ಯೂನಲ್ಲಿ ಪಪ್ಪಾಯಿ ಎಲೆಗಳು ಆಡಿನ ಹಾಲು, ಗಿಲೋಯ್ ಇತ್ಯಾದಿಗಳ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಡೆಂಗ್ಯೂ ಜ್ವರದಲ್ಲಿ ಕೆಲವು ಪದಾರ್ಥಗಳನ್ನು ತಿನ್ನಲೇಬಾರದು. ಈ ಆಹಾರಗಳನ್ನು ತಿನ್ನುವುದರಿಂದ, ಡೆಂಗ್ಯೂ ತೀವ್ರವಾಗಬಹುದು ಮತ್ತು ಪ್ಲೇಟ್‌ಲೆಟ್‌ಗಳು ಬೇಗ ಕಡಿಮೆಯಾಗಬಹುದು. ಅಂಥಾ ಆಹಾರ ಯಾವುದು ಎಂದು ತಿಳಿದುಕೊಳ್ಳುವುದು ಮುಖ್ಯ.
ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ; ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ
ಭಾರತದಲ್ಲಿ ಈ ವರ್ಷ ಎಷ್ಟು ಡೆಂಗ್ಯೂ ಪ್ರಕರಣಗಳಿವೆ ?
ಭಾರತ ಸರ್ಕಾರದ ಪ್ರಕಾರ, ಈ ವರ್ಷದ ಆಗಸ್ಟ್ ಅಂತ್ಯದವರೆಗೆ, ಭಾರತದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳು 30627ರಷ್ಟಿದೆ ಮತ್ತು ಈ ಅವಧಿಯಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಂಕಿಅಂಶಗಳು ತುಂಬಾ ಆತಂಕಕಾರಿಯಾಗಿದೆ. ಡೆಂಗ್ಯೂ ಜ್ವರದ ಸಂದರ್ಭ ಸೂಕ್ತ ಕಾಳಜಿ ವಹಿಸದಿದ್ದರೆ ಸಾವಿನ (Death) ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು.
ಮಸಾಲೆ ಆಹಾರ: ಡೆಂಗ್ಯೂ ಜ್ವರದಲ್ಲಿ ಮಸಾಲೆಯುಕ್ತ ಆಹಾರವನ್ನು (Spicy food) ಸೇವಿಸಬಾರದು. ಇದು ಡೆಂಗ್ಯೂ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು. ಏಕೆಂದರೆ, ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್, ಆಸಿಡ್ ನಂತಹ ಸಮಸ್ಯೆಗಳು ಉಂಟಾಗುತ್ತವೆ. ಇದು ನಿಮ್ಮ ನೋವನ್ನು ಹೆಚ್ಚಿಸುತ್ತದೆ.
ಹುರಿದ ಮತ್ತು ಜಂಕ್ ಫುಡ್: ಕರಿದ ಮತ್ತು ಜಂಕ್ ಫುಡ್ ಸಾಮಾನ್ಯವಾಗಿ ಆರೋಗ್ಯಕ್ಕೆ (Health) ಹಾನಿಕರ. ಡೆಂಗ್ಯೂ ಸಮಯದಲ್ಲಿ ಇಂಥಾ ಆಹಾರಗಳಿಂದ ಸಂಪೂರ್ಣವಾಗಿದೂರವಿರಬೇಕು. ಏಕೆಂದರೆ, ಇಂತಹ ಆಹಾರವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. ಇದರೊಂದಿಗೆ ಡೆಂಗ್ಯೂನಿಂದ ಚೇತರಿಸಿಕೊಳ್ಳುವುದು ವಿಳಂಬವಾಗಬಹುದು. ಮತ್ತೊಂದೆಡೆ, ಕರಿದ ಆಹಾರವನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
Mosquito Diseases : ಈ ಸೀಸನ್‌ನಲ್ಲಿ ಈ ರೋಗಗಳ ಬಗ್ಗೆ ಎಚ್ಚರವಾಗಿರಿ !
ಮಾಂಸಾಹಾರ: ಮುಖ್ಯವಾಗಿ ಡೆಂಗ್ಯೂ ತಗುಲಿದ್ದಾಗ ಮಾಂಸಾಹಾರ (Nonveg) ಸೇವನೆ ಸಲ್ಲದು. ಹೀಗೆ ಮಾಡುವುದರಿಂದ ನಿಧಾನವಾಗಿ ನಿಮ್ಮ ಜೀರ್ಣಶಕ್ತಿ ದುರ್ಬಲಗೊಳ್ಳುತ್ತಾ ಹೋಗುತ್ತದೆ ಮತ್ತು ಮಾಂಸಾಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಇದರಿಂದಾಗಿ ಪ್ಲೇಟ್‌ಲೆಟ್‌ಗಳು ವೇಗವಾಗಿ ಕುಸಿಯಬಹುದು.
ಕಾಫಿ: ಡೆಂಗ್ಯೂನಲ್ಲಿ ಕಾಫಿ ಅಥವಾ ಇತರ ಕೆಫೀನ್ ಪಾನೀಯಗಳನ್ನು ಸೇವಿಸಬಾರದು. ಕಾಫಿ ಅಥವಾ ಕೆಫೀನ್ ಇರುವ ಪಾನೀಯಗಳನ್ನು ಕುಡಿಯುವುದರಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ಪ್ಲೇಟ್‌ಲೆಟ್‌ಗಳು ಹೆಚ್ಚಾಗುವುದಿಲ್ಲ ಮತ್ತು ಡೆಂಗ್ಯೂ ತೀವ್ರವಾಗಬಹುದು. ಹಾಗಾಗಿ ಡೆಂಗ್ಯೂ ಜ್ವರದಿಂದ ಬೇಗ ಮುಕ್ತಿ ಪಡೆಯಲು ಕಾಫಿಯಿಂದ ದೂರವಿರಿ.
ಮದ್ಯ: ಡೆಂಗೆ ತಗುಲಿದ್ದಾಗ ಅಪ್ಪಿತಪ್ಪಿಯೂ ಮದ್ಯ (Alcohol) ಸೇವಿಸಬಾರದು. ಮದ್ಯಪಾನವು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಮತ್ತು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದರಿಂದಾಗಿ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವ ಸಮಸ್ಯೆ ಉಂಟಾಗಬಹುದು. ಡೆಂಗ್ಯೂನಲ್ಲಿ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ನೀವು ತೆಂಗಿನ ನೀರನ್ನು ಸೇವಿಸಬಹುದು.