ಮಾಗಿದ ಹಲಸಿನ ಹಣ್ಣಿನ ಆರೋಗ್ಯ ಲಾಭಗಳು ಹಲವು, ಸಿಕ್ಕಿದ್ರೆ ಬಿಡ್ಬೇಡಿ!

By Suvarna News  |  First Published May 18, 2022, 11:24 AM IST

ಹಸಿದಾಗ ಹಲಸು,ಉಂಡಾಗ ಮಾವು ಎನ್ನುವ ಮಾತಿದೆ. ಅಂದ್ರೆ ಹಸಿವಾದಾಗ ಹಲಸಿನ ಹಣ್ಣು ತಿನ್ನಬೇಕು. ಹಲಸಿನ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕರಿಗೆ ಹಲಸಿನ ಹಣ್ಣನ್ನು ಹೇಗೆ ತಿನ್ಬೇಕು ಅನ್ನೋದೇ ತಿಳಿದಿಲ್ಲ. 
 


ವಾಸನೆ (Smell) ಮೂಲಕವೇ ಜನರನ್ನು ತನ್ನತ್ತ ಸೆಳೆಯುವ ಶಕ್ತಿ ಹಲಸಿನ ಹಣ್ಣಿ (Jackfruit ) ಗಿದೆ. ರುಚಿ (Taste) ಯ ವಿಷದ್ಯದಲ್ಲೂ ಹಲಸಿನ ಹಣ್ಣು ಮುಂದಿದೆ. ಹಲಸಿನ ಹಣ್ಣನ್ನು ಮತ್ತೆ ಮತ್ತೆ ತಿನ್ನಬೇಕೆನ್ನಿಸುತ್ತದೆ. ಬೇಸಿಗೆ (Summer) ಕಾಲದಲ್ಲಿ ಸಿಗುವ ಹಣ್ಣು ಹಲಸು. ಋತುವಿನ ಹಣ್ಣನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಹಲಸಿನ ಹಣ್ಣು ಫೈಬರ್ (Fiber) ನಿಂದ ಸಮೃದ್ಧವಾಗಿದೆ. ಇದು ರುಚಿಗೆ ಮಾತ್ರವಲ್ಲ ಆರೋಗ್ಯ (Health)ಕ್ಕೂ ಒಳ್ಳೆಯದು. ಮಾಗಿದ ಹಲಸಿನ ಹಣ್ಣಿನಲ್ಲಿ ಪ್ರೋಟೀನ್ (Protein) ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದಲ್ಲದೆ, ಇದರಲ್ಲಿರುವ ಪೊಟ್ಯಾಸಿಯಮ್ ಹೃದಯ (Heart) ಸಂಬಂಧಿ ಸಮಸ್ಯೆಯಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಹಲಸು ನಿಮ್ಮ ಯಕೃತ್ತಿ (Liver) ಗೂ ತುಂಬಾ ಪ್ರಯೋಜನ (Benefit) ಕಾರಿ. ಮಾಗಿದ ಹಲಸಿನ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆ ಕೇಳಿದ್ರೆ ಈಗ್ಲೇ ತಂದು ತಿಂದು ತೇಗ್ತೀರಿ!

ಹಲಸಿನ ಹಣ್ಣು ಸೇವನೆ ಮಾಡುವುದ್ರಿಂದ ಆಗುವ ಪ್ರಯೋಜನ 

Tap to resize

Latest Videos

ಜೀರ್ಣಕ್ರಿಯೆ (Digestion) ಗೆ ಒಳ್ಳೆಯದು : ಬೇಸಿಗೆಯಲ್ಲಿ ಅನೇಕರು ಜೀರ್ಣಕ್ರಿಯೆ ಸಮಸ್ಯೆಯನ್ನು ಎದುರಿಸುತ್ತಾರೆ. ಆಹಾರ (Food) ಸರಿಯಾಗಿ ಜೀರ್ಣವಾಗುವುದಿಲ್ಲ. ನಿಮಗೂ ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಮಾಗಿದ ಹಲಸಿನ ಹಣ್ಣನ್ನು ಆಹಾರದ ರೂಪದಲ್ಲಿ ಸೇವನೆ ಮಾಡಿ.  ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುವ ಮೂಲಕ ನಿಮ್ಮ ತೂಕವನ್ನು ಇಳಿಸಲು ನೆರವಾಗುತ್ತದೆ.

Food Tips : ಕಾಫಿ ಹೀರುವ ಮೊದಲು ಈ ಆಹಾರ ಸೇವಿಸ್ಬೇಡಿ

ರೋಗನಿರೋಧಕ ಶಕ್ತಿ ಬಲಪಡಿಸಲು ಹಲಸಿನ ಹಣ್ಣು : ಮಾಗಿದ ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿ ಕಂಡುಬರುತ್ತದೆ. ವಿಟಮಿನ್-ಸಿ ನಿಮ್ಮ ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಅಲ್ಲದೆ, ಇದು ನಿಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಯಕೃತ್ತಿನ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿ : ಮಾಗಿದ ಹಲಸಿನ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಲಿವರ್ ಕೂಡ ಆರೋಗ್ಯಕರವಾಗಿರುತ್ತದೆ. ಇದರಲ್ಲಿ ಕಂಡುಬರುವ ಪೋಷಕಾಂಶಗಳು ನಿಮ್ಮ ಯಕೃತ್ತನ್ನು ಬಲಪಡಿಸುತ್ತದೆ. ಇದರಲ್ಲಿ ರೈಬೋಫ್ಲಾವಿನ್, ಸತು, ತಾಮ್ರ ಮತ್ತು ನಿಯಾಸಿನ್ ಅಂಶಗಳಿದ್ದು ಯಕೃತ್ತನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಹೃದಯವನ್ನು ಆರೋಗ್ಯವಾಗಿಡುತ್ತೆ ಹಲಸಿನ ಹಣ್ಣು : ಮಾಗಿದ ಹಲಸು ನಿಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕಂಡುಬರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಸಮಸ್ಯೆ ಕಾಡಬಾರದು ಎನ್ನುವವರು ಹಲಸಿನ ಹಣ್ಣನ್ನು ಡಯಟ್ ನಲ್ಲಿ ಸೇರಿಸಿ.  

ತೂಕ ನಿಯಂತ್ರಣಕ್ಕೆ ಸಹಕಾರಿ : ಮಾಗಿದ ಹಲಸಿನ ಹಣ್ಣಿನಲ್ಲಿ ಉರಿಯೂತ ನಿವಾರಕ ಗುಣಗಳೂ ಇವೆ. ಇದು ನಿಮ್ಮ ದೇಹದಲ್ಲಿ ಹೆಚ್ಚುತ್ತಿರುವ ಬೊಜ್ಜನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಇದನ್ನು ರೆಸ್ವೆರಾಟ್ರೊಲ್ ಎಂಬ ಉತ್ಕರ್ಷಣ ನಿರೋಧಕದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ರಕ್ತ ಪರಿಚಲನೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ತೂಕ ಕಡಿಮೆ ಮಾಡ್ಬೇಕು ಎನ್ನುವವರು ಹಲಸಿನ ಹಣ್ಣಿನ ಸೇವನೆಯನ್ನು ಶುರು ಮಾಡಿ. 

Food Trend: ಮ್ಯಾಂಗೋ ಮ್ಯಾಗಿ ತಯಾರಿಸುವ ವೀಡಿಯೋ ವೈರಲ್‌

ಹಲಸಿನ ಎಲೆಗಳು ಸಹ ಪ್ರಯೋಜನಕಾರಿ : ಹಲಸಿನ ಹಣ್ಣುಗಳು ಮಾತ್ರವಲ್ಲ ಹಲಸಿನ ಎಲೆಗಳೂ ನಿಮ್ಮ ಉತ್ತಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಯಿಯಲ್ಲಿ ಗುಳ್ಳೆಗಳ ಸಮಸ್ಯೆ ಇರುವವರು ಹಲಸಿನ ಎಲೆಗಳನ್ನು ಜಗಿಯಬೇಕು. ಇದರಿಂದ ಅವರ ಬಾಯಿ ಹುಣ್ಣಿಗೆ ಸಾಕಷ್ಟು ಪರಿಹಾರ ಸಿಗುತ್ತದೆ. ಹಲಸಿನ ಕಾಯಿ ಕೂಡ ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ಪಿತ್ತ ಸಮಸ್ಯೆಯಿರುವವರು ಎಳೆ ಹಲಸಿನ ಕಾಯಿಯ ಪಲ್ಯ ಮಾಡಿ ಸೇವನೆ ಮಾಡ್ಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. 

click me!