Banana Recipes: ಮನೆಯಲ್ಲಿ ಬೇಕಾದಷ್ಟು ಬಾಳೆಹಣ್ಣಿದ್ಯಾ..ಹಾಗಿದ್ರೆ ಈ ರೆಸಿಪಿಗಳನ್ನು ಟ್ರೈ ಮಾಡಿ

By Suvarna News  |  First Published Jan 18, 2022, 6:26 PM IST

ಮನೆ (Home)ಯಲ್ಲಿ ಬೇಕಾದಿಷ್ಟು ಬಾಳೆಹಣ್ಣಿದೆ. ಆದ್ರೆ ತಿನ್ನೋಕೆ ಬೇಜಾರು. ಸುಮ್ನೆ ಹಾಳಾಗಿ ಹೋಗ್ತಿರೋ ಬಾಳೆಹಣ್ಣು (Banana) ನೋಡಿ ಬೇಜಾರಾಗ್ತಿದ್ಯಾ. ಹಾಗಿದ್ರೆ ಬಾಳೆಹಣ್ಣಿನಿಂದ ರುಚಿಕರವಾದ ಈ ತಿಂಡಿಗಳನ್ನು ತಯಾರಿಸಿ.


ಹಳ್ಳಿಯಲ್ಲಿರುವ ಹಲವು ಮನೆಗಳಲ್ಲಿ ಬೇಕಾದಷ್ಟು ಬಾಳೆಹಣ್ಣಿದ್ರೂ ತಿನ್ನೋರಿಲ್ಲ ಅನ್ನೋದೆ ಸಮಸ್ಯೆ. ಊಟ ಆದ ಮೇಲೆ ಒಂದೆರಡು ಬಾಳೆಹಣ್ಣು (Banana) ತಿಂದ್ರೂ ಮುಗಿಯೋದಿಲ್ಲ. ಹೀಗಾಗಿ ಹಣ್ಣುಗಳು (Fruits) ಸುಮ್ನೆ ಹಾಳಾಗುತ್ತವೆ ಅನ್ನೋ ಬೇಜಾರು. ನಗರದಲ್ಲಿ ವಾಸವಿದ್ದವರು ಬಾಳೆಹಣ್ಣುಗಳನ್ನು ಖರೀದಿಸಿ, ಅಡುಗೆಮನೆಯ ಒಂದು ಮೂಲೆಯಲ್ಲಿ ಇರಿಸಿ ಮರೆತು ಬಿಟ್ಟಿರ್ತಾರೆ. ಮತ್ತೆ ನೋಡಿದಾಗ ಸಿಕ್ಕಾಪಟ್ಟೆ ಹಣ್ಣಾಗಿ ಹೋಗಿರುವ ಬಾಳೆಹಣ್ಣನ್ನು ಏನು ಮಾಡೋದು ಅನ್ನೋ ಯೋಚನೆ. ಹೀಗಿದ್ದಾಗ ಆ ಬಾಳೆಹಣ್ಣುಗಳನ್ನು ಎಸೆಯಬೇಡಿ. ಬದಲಾಗಿ, ಅವುಗಳಿಂದ ಕೆಲವು ರುಚಿಕರವಾದ ಸಿಹಿತಿಂಡಿಗಳನ್ನು ತಯಾರಿಸಬಹುದು. ಬಾಳೆಹಣ್ಣಿನಿಂದ ನೀವು ಮಾಡಬಹುದಾದ 6 ಪಾಕವಿಧಾನಗಳು ಇಲ್ಲಿವೆ.

ಬಾಳೆಹಣ್ಣಿನ ಬೋಂಡಾ 
ಬೋಂಡಾ ದಕ್ಷಿಣಭಾರತದ ಫೇಮಸ್ ಟೀ ಸ್ನ್ಯಾಕ್ಸ್. ಆಲೂ ಬೋಂಡಾ, ಈರುಳ್ಳಿ ಬೋಂಡಾ, ಎಗ್ ಬೋಂಡಾ ಎಂದು ನಾನಾ ರೀತಿಯ ಬೋಂಡಾವನ್ನು ತಯಾರಿಸುತ್ತಾರೆ. ಅದೇ ರೀತಿ ಬಾಳೆಹಣ್ಣಿನಿಂದಲೂ ಸಿಹಿಯಾದ, ರುಚಿಕರವಾದ ಬೋಂಡಾವನ್ನು ತಯಾರಿಸಬಹುದು. ಕಡ್ಲೆಹಿಟ್ಟು, ಹಸಿಮೆಣಸು, ಈರುಳ್ಳಿ (Onion)ಯನ್ನು ಸೇರಿಸಿ ಬನಾನ ಬೋಂಡಾವನ್ನು ತಯಾರಿಸಬಹುದು.

Tap to resize

Latest Videos

Pedicure: ಬಾಳೆಹಣ್ಣಿನ ಸಿಪ್ಪೆಯಿಂದ ಪಾದಗಳ ಕಾಳಜಿ

ಮಸಾಲೆಯುಕ್ತ ಬನಾನ ಬ್ರೆಡ್  
ಸಾಮಾನ್ಯ ಬ್ರೆಡ್‌ನಂತೆಯೇ ಬಾಳೆಹಣ್ಣನ್ನು ಸೇರಿಸಿ ಬನಾನ ಬ್ರೆಡ್ (Bread) ತಯಾರಿಸಲಾಗುತ್ತದೆ. ಸ್ಪಲ್ಪ ಪ್ರಮಾಣದಲ್ಲಿ ಮೈದಾ (Maida) ಸೇರಿಸಿ, ಬಾಳೆಹಣ್ಣನ್ನು ಕಿವುಚಿಕೊಂಡು ಹಿಟ್ಟನ್ನು ನಾದಿ ಇದನ್ನು ತಯಾರಿಸುತ್ತಾರೆ. ಮಸಾಲೆಯುಕ್ತ ಬನಾನ ಬ್ರೆಡ್ ಊಟದ ನಂತರ ಸವಿಯಲು ಚೆನ್ನಾಗಿರುತ್ತದೆ.

ಪಳಂ ಪೂರಿ 
ಪಳಂ ಪೂರಿ ಹೆಚ್ಚಾಗಿ ಮಲಯಾಳಿಗರು ತಯಾರಿಸುವ ತಿಂಡಿಯಾಗಿದೆ. ಪಳಂ ಎಂದರೆ ಬಾಳೆಹಣ್ಣು. ನೇಂದ್ರ ಬಾಳೆಹಣ್ಣಿನ ಸಿಪ್ಪೆ ತೆಗೆದು ಉದ್ದಕ್ಕೆ ಸೀಳಿ ಎರಡು ಭಾಗ ಮಾಡಿ, ಕಡಲೇಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಬಿಡಬೇಕು. ನಸು ಕಂದು ಬಣ್ಣಕ್ಕೆ ಬಂದಾಗ ತೆಗೆಯಬೇಕು. ಸಿಹಿಯಾದ ಬಾಳೆಹಣ್ಣಿನ ಈ ತಿಂಡಿಯು ಸಂಜೆಯ ಟೀಯೊಂದಿಗೆ ಸವಿಯಲು ಸೂಪರ್.

Health Tips: ಹೆಚ್ಚು ಉಪ್ಪನ್ನು ಸೇವಿಸಿದ ನಂತರ ತಿನ್ನಬೇಕಾದ ಆಹಾರಗಳಿವು

ಬಾಳೆಹಣ್ಣಿನ ಪುಡ್ಡಿಂಗ್  
ಮನೆಯಲ್ಲಿದ್ದಾಗ ಸಿಹಿ ತಿಂಡಿ ಏನಾದರೂ ತಿನ್ನಬೇಕು ಅಂತನಿಸಿದಾಗ ನೀವು ಸುಲಭವಾಗಿ ಬಾಳೆಹಣ್ಣಿನ ಪುಡ್ಡಿಂಗ್‌ (Pudding)ನ್ನು ಮಾಡಬಹುದು. ಇದನ್ನು ತಯಾರಿಸಲು ಮೊದಲಿಗೆ ಬ್ರೆಡ್‌ನ್ನು ಸಣ್ಣದಾಗಿ ಕತ್ತರಿಸಿ ದೊಡ್ಡ ಪಾತ್ರೆಯನ್ನು ಹಾಕಿ ಹಾಲು ಸೇರಿಸಿ ಇಡಬೇಕು. ಮೈಕ್ರೋವೇವ್‌ನ್ನು ಮುಂಚಿತವಾಗಿ 325 ಡಿಗ್ರಿ ಬಿಸಿ ಮಾಡಿಟ್ಟುಕೊಳ್ಳಬೇಕು. ಬೇಯಿಸುವ ಪಾತ್ರೆಗೆ ಎಣ್ಣೆ ಸವರಿ ಇಡಬೇಕು. ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆ, ಸಕ್ಕರೆ, ವೆನಿಲ್ಲಾ ರಸವನ್ನು ಮಿಕ್ಸ್ ಮಾಡಿ ಈ ಮಿಶ್ರಣವನ್ನು ಬ್ರೆಡ್ ಮಿಶ್ರಣದ ಜತೆಗೆ ಬೆರೆಸಬೇಕು. ಅದಕ್ಕೆ ಹಿಸುಕಿದ ಬಾಳೆಹಣ್ಣು ಮತ್ತು ಒಣದ್ರಾಕ್ಷಿ ಸೇರಿಸಿಕೊಳ್ಳಬೇಕು. ಇದನ್ನೀಗ ಮೊದಲೇ ಎಣ್ಣೆ ಸವರಿಟ್ಟು ಬೇಯಿಸುವ ಪಾತ್ರೆಗೆ ಹಾಕಿ 1 ಗಂಟೆ ಬೇಯಿಸಿದರೆ ಬಾಳೆಹಣ್ಣಿನ ಪುಡ್ಡಿಂಗ್ ರೆಡಿ. ಇದು ಮಾಡಲು ಸುಲಭ ಮತ್ತು ತಿನ್ನಲು ರುಚಿಕರವಾಗಿದೆ. ಮನೆಗೆ ಅತಿಥಿಗಳು ಬಂದಾಗಲೂ ಇದನ್ನು ತಯಾರಿಸಿಕೊಡಬಹುದು. 

ಬನಾನ ಬ್ರೆಡ್ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ 
ಬನಾನಾ ಬ್ರೆಡ್ ಗ್ರಿಲ್ಡ್ ಚೀಸ್ ಸ್ಯಾಂಡ್‌ವಿಚ್ (Sandwich) ತಯಾರಿಸಲು ಬಾಳೆಹಣ್ಣಿನ ಚೂರುಗಳನ್ನು ಕತ್ತರಿಸಿ ಚೀಸ್ (Cheese)ನೊಂದಿಗೆ ಹರಡಿಕೊಳ್ಳಬೇಕು ಇದನ್ನು ಗ್ರಿಲ್ ಮೇಲಿಟ್ಟು ರೋಸ್ಟ್ ಮಾಡಿಕೊಳ್ಳಬೇಕು. ಅಥವಾ ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಬೆಣ್ಣೆ ಸೇರಿಸಿಯೂ ಈ ಬನಾನ ಸ್ಯಾಂಡ್‌ವಿಚ್ ಮಾಡಿಕೊಳ್ಳಬಹುದು. 

ಬನಾನ ಬೇಕನ್  
ಬೇಕನ್ ಒಂದು ಅಮೇರಿಕನ್ ಬ್ರೇಕ್ ಫಾಸ್ಟ್ ಆಗಿದೆ. ಸಸ್ಯಾಹಾರಿಗಳು ಈ ಬನಾನ ಬೇಕನ್ ಮಾಡಿ ತಿನ್ನಬಹುದು. ಬನಾನ ಬೇಕನ್ ಅನ್ನು ಬಾಳೆಹಣ್ಣಿನ ಸಿಪ್ಪೆಯಿಂದ ಸುಲಭವಾಗಿ ತಯಾರಿಸಬಹುದಾಗಿದೆ. ಇದಕ್ಕೆ ಸಾಸ್ ಮತ್ತು ಇತರ ಮಸಾಲೆಗಳನ್ನು ಸೇರಿಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಇವಿಷ್ಟೇ ಅಲ್ಲದೆ ಬಾಳೆಹಣ್ಣಿನಿಂದ ಸುಲಭವಾಗಿ ಹಲ್ವಾ, ಪಾಯಸ, ಬನ್ಸ್ ಮೊದಲಾದ ರುಚಿಕರ ಸಿಹಿ ತಿನಿಸುಗಳನ್ನು ತಯಾರಿಸಬಹುದು.

click me!