Recipe Tips : ಪಲ್ಯ, ಅನ್ನ ಉಳಿದ್ರೆ ಎಸೆಯೋ ಬದಲು ಹೀಂಗ್ ಮಾಡ್ಕೊಂಡು ತಿನ್ನಿ

By Suvarna News  |  First Published May 29, 2023, 1:22 PM IST

ಅದೇ ನಿನ್ನ ರಾತ್ರಿ ಮಿಕ್ಕಿರೋ ಅನ್ನ ತಿನ್ಬೇಕಾ?, ಈ ಸಬ್ಜಿ ಬೆಳಿಗ್ಗೆ ಮಾಡಿದ್ದಲ್ವಾ.. ನನಗೆ ಬೇಡ ಅಂತಾ ಮಕ್ಕಳು ಮೂಗು ಮುರಿಯುತ್ತಾರೆ. ಹಾಳಾಗದ ಆಹಾರ ಎಸೆಯೋಕೆ ಮನಸ್ಸಾಗದ ಅಮ್ಮಂದಿರು ಕೈ ಕೈ ಹಿಸುಕಿಕೊಳ್ತಾರೆ. ಮಕ್ಕಳಿಗೆ ತಿಳಿಯದೆ ಈ ಮಿಕ್ಕ ಆಹಾರ ಖಾಲಿಯಾಗ್ಬೇಕೆಂದ್ರೆ ಈ ಪ್ಲಾನ್ ಮಾಡಿ. 
 


ನೀವು ಅದೆಷ್ಟೇ ಕಡಿಮೆ ಅಡುಗೆ ಮಾಡಿ, ಮನೆಯವರೆಲ್ಲ ಎರಡು ಹೊತ್ತು ತಿಂದ್ರೂ ಅನ್ನ, ರೊಟ್ಟಿ ಮಿಕ್ಕದೆ ಇರೋದಿಲ್ಲ. ಕೊನೆಪಕ್ಷ ಪಲ್ಯ, ಸಾಂಬಾರ್ ಆದ್ರೂ ಇದ್ದೆ ಇರುತ್ತೆ. ಈ ಉಳಿದ ಆಹಾರವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಕಾಡುತ್ತದೆ. ಫ್ರಿಜ್ ನಲ್ಲಿ ಇಟ್ಟರೆ ಅದು ಹಾಗೆ ಮೂರ್ನಾಲ್ಕು ದಿನ ಇರುತ್ತೆ. ಬೇರೆಯವರಿಗೆ ನೀಡೋದು ಸರಿಯೆನ್ನಿಸೋದಿಲ್ಲ. ಹಾಗಾಗಿಯೇ ಬಹುತೇಕರು ಇದನ್ನು ಕಸಕ್ಕೆ ಹಾಕ್ತಾರೆ. ಮತ್ತೆ ಕೆಲವರು ಯಾಕೆ ಹಾಳ್ಮಾಡೋದು ಅಂತಾ, ಬೇಸರದಲ್ಲಿ ತಿನ್ನುತ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ರೆ ಇನ್ಮುಂದೆ ಉಳಿದ ತರಕಾರಿ ಸಾಂಬಾರ್ ಅಥವಾ ಪಲ್ಯವನ್ನು ಎಸೆಯಬೇಡಿ. ಅದನ್ನು ಬೇರೆ ರೀತಿಯ ಅಡುಗೆಗೆ ಬೆರೆಸಿ, ರುಚಿ ಬದಲಿಸಿಕೊಂಡು ಸೇವನೆ ಮಾಡಿ. 

ಈಗಿನ ದಿನಗಳಲ್ಲಿ ತರಕಾರಿ (Vegetable) ಬೆಲೆ ಗಗನಕ್ಕೇರಿದೆ. ಒಂದೆರಡು ದಿನ ಹೆಚ್ಚಿದೆ ಅಂತಾ ಕಸಕ್ಕೆ ಹಾಕ್ಬಹುದು. ಇದು ಪ್ರತಿ ದಿನವಾದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಕಡಿಮೆ ಖರ್ಚಿನಲ್ಲಿ ಮನೆ ನಡೆಸಬೇಕು ಎನ್ನುವವರು ಹೊಸ ಹೊಸ ದಾರಿಗಳನ್ನು ಕಂಡು ಹಿಡಿದುಕೊಳ್ಬೇಕು. ನಾವಿಂದು ಮಿಕ್ಕ ತರಕಾರಿಯಿಂದ ಏನೆಲ್ಲ ಮಾಡ್ಬಹುದು ಅಂತಾ ನಿಮಗೆ ಹೇಳ್ತೇವೆ.

Tap to resize

Latest Videos

ಚಪಾತಿ ರೌಂಡ್ ಆಗ್ಬೇಕು ಅಂದ್ರೆ ಹೀಗ್ ಮಾಡಿ

ಪಕೋಡಾ (Pakoda) : ಚಪಾತಿ, ದೋಸೆಗೆ ಮಾಡಿದ ಪಲ್ಯ ಹಾಗೆ ಇದೆ ಅಂದ್ರೆ ಅದನ್ನು ಎಸೆಯುವ ಬದಲು ಪಕೋಡಾ ಮಾಡಿ. ಡ್ರೈ ತರಕಾರಿ ಉಂಡೆ ಮಾಡಲು ಬರುವಂತಿರಬೇಕು. ಅದನ್ನು ಉಂಡೆಕಟ್ಟಿ, ಕಡಲೆ ಹಿಟ್ಟಿನಲ್ಲಿ ಅದ್ದಿ ಪಕೋಡಾ ಸಿದ್ಧಪಡಿಸಿದ್ರೆ ಆಯ್ತು. ಇದ್ರಿಂದ ತರಕಾರಿ ವೇಸ್ಟ್ ಆಗೋದಿಲ್ಲ. ನೀವು ಕೂಡ ರುಚಿ ರುಚಿ ಪರೋಕಾ ತಿಂದಂತಾಗುತ್ತದೆ.

ಪರಾಠ (Paratha) : ಆಲೂಗೆಡ್ಡೆ, ಕ್ಯಾಬೇಜ್  ಸೇರಿದಂತೆ ತರಕಾರಿಯಿಂದ ತಯಾರಿಸಿದ ಪದಾರ್ಥ ಹಾಗೆ ಇದೆ ಎಂದಾಗ ನೀವು ಅದನ್ನು ಪರಾಠಕ್ಕೆ ಬಳಸಬಹುದು. ಸಬ್ಜಿಯನ್ನು ಕೂಡ ನೀವು ಹಿಟ್ಟಿನೊಂದಿಗೆ ಬೆರೆಸಿ ಅದನ್ನು ಲಟ್ಟಿಸಿ ಪರಾಠ ತಯಾರಿಸಬಹುದು. ಪರಾಠಕ್ಕೆ ಎರಡೂ ಬದಿಗಳಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ, ಬೇಯಿಸಿ ತಿನ್ನಬಹುದು. ತರಕಾರಿ ತಿನ್ನದ ಮಕ್ಕಳಿಗೆ ಇದು ಬೆಸ್ಟ್ ಐಡಿಯಾ.

Kitchen Tips : ಸೌತೆಕಾಯಿ ಕಹಿ ಹೋಗಲಾಡಿಸಲು ಇಲ್ಲಿದೆ ಸುಲಭದ ಪರಿಹಾರ

ಫ್ರೈಡ್ ರೈಸ್ (Fried Rice) : ನೀವು ಅನ್ನ ಮಿಕ್ಕಿದ್ರೆ ಚಿತ್ರಾನ್ನ ಮಾತ್ರ ಮಾಡ್ಬೇಕೆಂದೇನಿಲ್ಲ. ಫ್ರೈಡ್ ರೈಸ್ ಕೂಡ ತಯಾರಿಸಬಹುದು. ಮಿಕ್ಕ ಅನ್ನ ಹಾಗೂ ಡ್ರೈ ತರಕಾರಿಯನ್ನು ಬಳಸಿಕೊಂಡು ನೀವು ಫ್ರೈಡ್ ರೈಸ್ ತಯಾರಿಸಬಹುದು. ಬೆಳಿಗ್ಗೆ ಉಳಿದ ಅನ್ನವನ್ನು ನೀವು ಮಧ್ಯಾಹ್ನ ಅಥವಾ ಸಂಜೆ ಈ ವಿಧಾನದಲ್ಲಿ ಸೇವನೆ ಮಾಡಬಹುದು. ಬಾಣೆಲೆ ಬಿಸಿಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ, ಜೀರಿಗೆ ಹಾಕಿ. ಅದು ಬಿಸಿಯಾಗ್ತಿದ್ದಂತೆ ಉಳಿದಿರುವ ತರಕಾರಿ ಪಲ್ಯ ಹಾಕಿ ಹಾಗೆ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿ ಹೆಚ್ಚಿಸಬೇಕೆಂದ್ರೆ ಫ್ರೈಡ್ ರೈಸ್ ಪುಡಿಯನ್ನು ಸೇರಿಸಿ.

ಮ್ಯಾಗಿ (Maggie) : ಮಕ್ಕಳ ಫೆವರೆಟ್ ಮ್ಯಾಗಿ. ಅದನ್ನು ಹೀಗೆ ಕೊಟ್ಟರೂ ಮಕ್ಕಳು ಸೇವನೆ ಮಾಡ್ತಾರೆ. ನೀವು ಅನ್ನ, ಸಾಂಬಾರ್, ರೊಟ್ಟಿ, ಸಬ್ಜಿ ಮಾಡಿ ಮಕ್ಕಳಿಗೆ ತಿನ್ನಿಸಲು ಹರಸಾಹಸ ಪಡ್ತಿದ್ದರೆ, ಮ್ಯಾಗಿಗೆ ತರಕಾರಿ ಬೆರೆಸಿ. ರಾತ್ರಿ ಉಳಿದ ಆಲೂಗಡ್ಡೆ, ಬಟಾಣಿ ಅಥವಾ ಎಲೆಕೋಸಿನ ಸಬ್ಜಿಯನ್ನು ನೀವು ಮ್ಯಾಗಿ ಜೊತೆ ಬೆರೆಸಿ ನೀಡಬಹುದು. ಮ್ಯಾಗಿ ತಯಾರಿಸಿದ ನಂತ್ರ ಇವುಗಳನ್ನು ಮ್ಯಾಗಿಗೆ ಹಾಕಿ, ಮಿಕ್ಸ್ ಮಾಡಿ, ಬಿಸಿ ಮಾಡಿ ಮಕ್ಕಳಿಗೆ ನೀಡಬೇಕಾಗುತ್ತದೆ.   

ತಂಬುಳಿ : ಬೆಳಿಗ್ಗೆ ಉಪಹಾರಕ್ಕೆ ಮಾಡಿದ ಮಾವಿನ ಕಾಯಿ, ಶುಂಠಿಯಂತಹ ಚಟ್ನಿ ಉಳಿದಿದೆ ಎಂದಾದ್ರೆ ನೀವದನ್ನು ತಂಬುಳಿಯಾಗಿ ಪರಿವರ್ತಿಸಬಹುದು. ಅದಕ್ಕೆ ಸ್ವಲ್ಪ ಕಾಯಿ ತುರಿ ಬೆರೆಸಿ, ಮಿಕ್ಸಿ ಮಾಡಿ, ನೀರು ಹಾಕಿ, ಒಗ್ಗರಣೆ ನೀಡಿದ್ರೆ ರುಚಿ ಬದಲಾಗುತ್ತದೆ.
 

click me!