ಬೆಂಗಳೂರಿನಲ್ಲಿ ಆನ್ ಲೈನ್ (Online) ಫುಡ್ ಡೆಲಿವರಿ ಪಡೆಯೋ ಗ್ರಾಹಕರಿಗೆ ಗುಡ್ ನ್ಯೂಸ್‌ವೊಂದಿದೆ. ಇನ್ಮುಂದೆ ಆನ್‌ಲೈನ್‌ನಲ್ಲೂ ಸ್ಟ್ರೀಟ್ ಫುಡ್ (Stree food) ಸಿಗುತ್ತೆ. ಮಾತ್ರವಲ್ಲ ಕಡಿಮೆ ದರದಲ್ಲಿ ನುರಿತ ಬಾಣಸಿಗರು ತಯಾರಿಸಿದ ಗುಣಮಟ್ಟದ ಆಹಾರದ ರುಚಿಯನ್ನು ನೀವು ಸವಿಯಬಹುದು. ಅರೆ ಇದ್ಹೇಗೆ ಸಾಧ್ಯ ಅಂತಿರಾ ? ಇಲ್ಲಿದೆ ಮಾಹಿತಿ.
ಕಾಲ ಬದಲಾಗ್ತಿರೋ ಹಾಗೆಯೇ ಜನಜೀವನವೂ ಬದಲಾಗ್ತಿರುತ್ತೆ. ಜೀವನಶೈಲಿ (Lifestyle)ಯೂ ಚೇಂಜ್ ಆಗುತ್ತದೆ. ಹಿಂದೆಲ್ಲಾ ಮನೆಯಲ್ಲೇ ಅಚ್ಚುಕಟ್ಟಾಗಿ ಅಡುಗೆ ತಯಾರಿಸಿ ಎಲ್ಲರೂ ಊಟ ಮಾಡುತ್ತಿದ್ದರು. ಆದ್ರೆ ಈಗ ಒತ್ತಡದ ಜೀವನಶೈಲಿಯಿಂದಾಗಿ ಎಲ್ಲರೂ ಸೋಮಾರಿಗಳೇ. ಹೊತ್ತಿಗೆ ಅಡುಗೆ (Cooking) ತಯಾರಿಸೋಕು ಅಯ್ಯೋ ಅಡುಗೆ ಮಾಡ್ಬೇಕಲ್ಲಾ ಅಂತ ಮೂಗು ಮುರೀತಾರೆ. ಇನ್ನು ಕೆಲವೊಮ್ಮೆ ಆಫೀಸಿನಿಂದ ಮನೆಗೆ ಲೇಟಾಗಿ ಬಂದಾಗ, ಹೊರಗೆ ಮಳೆ ಬರುತ್ತಿರುವಾಗ, ಕೆಲಸ ಮಾಡಿ ಸುಸ್ತಾದಾಗ ಅಡುಗೆ ಮಾಡಲು ಉತ್ಸಾಹವಿರುವುದಿಲ್ಲ. ಇಂಥಾ ಸಂದರ್ಭದಲ್ಲಿ ಆನ್‌ಲೈಡ್ ಫುಡ್ ಡೆಲಿವರಿ ಆಪ್ (Online food delivery app)ಗಳು ಹೆಚ್ಚು ನೆರವಾಗುತ್ತವೆ. ಬಿಸಿಬಿಸಿಯಾದ, ರುಚಿಕರವಾದ ಫುಡ್ ಆರ್ಡರ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಮನೆ ಬಾಗಿಲಿನ ಮುಂದಿರುತ್ತದೆ.
ಆದ್ರೆ ಈ ಫುಡ್ ಡೆಲಿವರಿ ಆಪ್‌ಗಳ ದೊಡ್ಡ ಸಮಸ್ಯೆಯೆಂದರೆ ಇವು ಕೇವಲ ಹೆಸರಾಂತ ಹೊಟೇಲ್‌ಗಳಿಂದ ಮಾತ್ರ ಆರ್ಡರ್ ತೆಗೆದುಕೊಳ್ಳುತ್ತವೆ. ಸಣ್ಣಪುಟ್ಟ. ಅಂಗಡಿ, ಸ್ಟ್ರೀಟ್ ಸ್ಟಾಲ್‌ಗಳಿಂದ ಫುಡ್ ಡೆಲಿವರಿ ಮಾಡುವುದಿಲ್ಲ. ಹೀಗಾಗಿ ಸ್ಟ್ರೀಟ್ ಫುಡ್ ಇಷ್ಟಪಡುವವರಿಗೆ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋದು ಅಂದ್ರೆ ದೊಡ್ಡ ತಲೆನೋವು. ಆದ್ರೆ ಬೆಂಗಳೂರಿನಲ್ಲಿ ಇನ್ಮುಂದೆ ಅಂಥಾ ಸಮಸ್ಯೆ ಇರಲ್ಲ. ಸ್ಟ್ರೀಟ್ ಫುಡ್ ಸ್ವಿಗ್ಗಿ,, ಜೋಮೇಟೋ ಮೂಲಕಾನೂ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ.
undefined
ಯುವತಿಗೆ ಮಿಸ್ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಬಿಬಿಎಂಪಿ ಸಾಥ್
ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳಲ್ಲಿ ನಿರೀಕ್ಷೆ ಮಾಡಿದಕ್ಕಿಂತ ಕಡಿಮೆ ದರದಲ್ಲಿ ಫುಡ್ ಸಿಗಲಿದೆ. ಇದು ಅಚ್ಚರಿ ಅನಿಸಿದರೂ ಸತ್ಯ. ಫುಡ್ ಪ್ರಿಯರಿಗೆ ಬಿಬಿಎಂಪಿ ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಬಿಬಿಎಂಪಿ (BBMP) ಸಾಥ್ ನೀಡಲಿದೆ. ಇಷ್ಟಕ್ಕೂ ಫುಡ್ ಪ್ರಿಯರಿಗೂ ಕೇಂದ್ರದ ಯೋಜನೆಗೂ ಏನು ಸಂಬಂಧ ಅಂತೀರಾ..? ಆ ಬಗ್ಗೆ ಇಲ್ಲಿದೆ ಮಾಹಿತಿ.
ಕಡಿಮೆ ದರದಲ್ಲಿ ಸಿಗುತ್ತೆ ಗುಣಮಟ್ಟದ ಆಹಾರ
ಗುಣಮಟ್ಟದ ಆಹಾರ (Quality food) ಕಡಿಮೆ ದರದಲ್ಲಿ ಬೇಕು ಅನ್ನೋರು ಇನ್ಮುಂದೆ ಕೇಂದ್ರದ ಈ ಯೋಜನೆಯಿಂದ ಅನುಕೂಲವಾಗಲಿದೆ. ಮಾತ್ರವಲ್ಲ ಬಿಬಿಎಂಪಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿರುವ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೂ ಉಪಯೋಗ ಸಿಗಲಿದೆ. ಮಾತ್ರವಲ್ಲ ಸ್ಟ್ರೀಟ್ ಫುಡ್ ತಿನ್ನಲು ಇಷ್ಟಪಡುವವರು ಇನ್ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋದಿಂದ ಆರ್ಡರ್ ಮಾಡಬಹುದು. ಈ ಬಗ್ಗೆ ಬಿಬಿಎಂಪಿ ಎಂಟು ವಲಯದ ಬೀದಿ ಬದಿ ವ್ಯಾಪಾರಿ (Street vendor)ಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. FSSAI ನುರಿತ ಬಾಣಸಿಗರಿಂದ ತರಬೇತಿ ನೀಡುವ ಯೋಜನೆ ಇದಾಗಿದೆ. ತರಬೇತಿ ನೀಡಿದ ಬಳಿಕ ಸರ್ಟಿಫಿಕೇಟ್ ಕೂಡಾ ನೀಡಲಾಗುತ್ತೆ. ಮಾತ್ರವಲ್ಲ ವ್ಯಾಪಾರವನ್ನು ಆರಂಭಿಸಲು ಸಾಲವನ್ನು ಸಹ ಕೊಡುತ್ತಾರೆ. ಸಾಲ ನೀಡಿದ ನಂತರ ವ್ಯಾಪಾರಕ್ಕೆ ನಿರ್ದಿಷ್ಟ ಜಾಗ ಗುರ್ತಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತಾರೆ. ಹೀಗಾಗಿ ಇನ್ಮುಂದೆ ಬೀದಿ ಬದಿಯ ಆಹಾರ ಅಂತ ಮೂಗು ಮುರಿಯುವಂತಿಲ್ಲ. ಯಾಕಂದ್ರೆ ಈ ಆಹಾರ ಸಹ ನುರಿತ ಬಾಣಸಿಗರಿಂದಲೇ ತಯಾರಾಗುತ್ತದೆ.
ಮಗನ ಕಿತಾಪತಿಗೆ ಅಪ್ಪನ ಭಯಾನಕ ರಿಫ್ಲೈ... ಫೋಸ್ಟ್ ವೈರಲ್
ಏನಿದು ಯೋಜನೆ ?
- ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ನೀಡುವುದು
- ಪ್ರತಿಯೊಬ್ಬರಿಗೆ 3,250 ರೂ ಕೇಂದ್ರ ಹಣ ವ್ಯಯ ಮಾಡುತ್ತೆ
- FSSAI ಮೂಲಕ ತರಬೇತಿ ನೀಡುವುದು
- ಒಂದು ವಾರದ ತರಬೇತಿ ನೀಡುವ ಯೋಜನೆ
- ಗುಣಮಟ್ಟದ, ರುಚಿಯಾದ ಆಹಾರ ತಯಾರು ಮಾಡುವ ಕುರಿತಂತೆ ತರಬೇತಿ
- ಈಗಾಗಲೇ ಬೇರೆ ರಾಜ್ಯದಲ್ಲಿ ತರಬೇತಿ ನೀಡಲಾಗಿದೆ
- ತರಬೇತಿ ನೀಡಿದ ವ್ಯಾಪಾರಿಗಳಿಗೆ ಪಾಲಿಕೆ ನಿರ್ದಿಷ್ಟ ಜಾಗ ಗುರ್ತಿಸುತ್ತೆ
- ಬಿಬಿಎಂಪಿ ಗುರ್ತಿಸಿದ ಜಾಗದಲ್ಲಿಯೇ ಆಹಾರ ಸಿದ್ದಪಡಿಸಬೇಕು
- ಸ್ವಿಗ್ಗಿ, ಝೋಮ್ಯಾಟೋ ಸೇರಿದಂತೆ ಆನ್ ಲೈನ್ ಫುಡ್ ಡೆಲವರಿ ಆಪ್ ಗಳ ಜತೆ ಟೈಯಪ್
- ಯಾರಾದರೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಬೇಕು ಅಂದ್ರೆ ಇಲ್ಲಿಂದ ಪೂರೈಕೆ
- ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ವ್ಯಾಪಾರಿಗಳಿಗೆ ತರಬೇತಿ
- ಈಗಾಗಲೇ 2000 ವ್ಯಾಪಾರಿಗಳಿಗೆ ತರಬೇತಿ ನೀಡಿರೋ ಪಾಲಿಕೆ
ಅದೇನೆ ಇರ್ಲಿ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅದೆಷ್ಟೋ ಮಂದಿಗೆ ಉಪಯೋಗವಾಗುವುದಂತೂ ಖಂಡಿತ. ಮಾತ್ರವಲ್ಲ ಇದಕ್ಕೆ ಬಿಬಿಎಂಪಿ ಸಹ ಸಾಥ್ ನೀಡಿರುವುದರಿಂದ ಇನ್ಮುಂದೆ ಬೆಂಗಳೂರಿಗರೂ ಸ್ವಚ್ಛವಾಗಿ ತಯಾರಿಸಿದ, ರುಚಿಕರವಾದ ಸ್ಟ್ರೀಟ್ ಫುಡ್‌ನ್ನು ಸಹ ಸವಿಯಬಹುದು.