ಸೆ.9 ಹಾಗೂ 10ರಂದು ದೆಹಲಿಯಲ್ಲಿ ನಡೆಯಲಿರುವ G20 ಶೃಂಗಸಭೆಗೆ ಭಾರಿ ತಯಾರಿ ನಡೆಯುತ್ತಿದೆ. ವಿಶೇಷ ಅತಿಥಿಗಳ ಆತಿಥ್ಯಕ್ಕೆ ಯಾವುದೇ ಕೊರತೆಯಾಗಬಾರದು ಎಂದು ಭಾರತ ಸರ್ಕಾರ ಜಾಗರೂಕತೆಯಿಂದ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ವಿಶ್ವ ನಾಯಕರಿಗೆ ಆಹಾರ ಬಡಿಸಲು ಚಿನ್ನ- ಬೆಳ್ಳಿ ಲೇಪಿತ ಪಾತ್ರೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿ ಜಿ20 ಶೃಂಗಸಭೆಗೆ ಅದ್ಧೂರಿಯಾಗಿ ಸಿದ್ಧಗೊಂಡಿದೆ. ಸೆ.9 ಹಾಗೂ 10ರಂದು ನಡೆಯಲಿರುವ G20 ಶೃಂಗಸಭೆಗೆ ಭಾರಿ ತಯಾರಿ ನಡೆಯುತ್ತಿದೆ. ಐತಿಹಾಸಿಕ ಸಭೆಗೆ ವಿಶೇಷ ಅತಿಥಿಗಳ ಆತಿಥ್ಯಕ್ಕೆ ಯಾವುದೇ ಕೊರತೆಯಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಜಾಗರೂಕತೆಯಿಂದ ಸಿದ್ಧತೆಗಳನ್ನು ನಡೆಸುತ್ತಿದೆ. ದೇಶದ ಪ್ರತಿಯೊಂದು ವೈಶಿಷ್ಟ್ಯತೆಯನ್ನು ಅತಿಥಿಗಳಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಜಾಗತಿಕ ನಾಯಕರೂ, ವಿವಿಧ ದೇಶಗಳ ಪ್ರತಿನಿಧಿಗಳೂ ಆಗಮಿಸಲಿದ್ದಾರೆ. ಸದ್ಯ, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗಾಗಿ ಚಿನ್ನ- ಬೆಳ್ಳಿ ಲೇಪಿತ ಪಾತ್ರೆಗಳಿಂದ ಆಹಾರ ಬಡಿಸಲಾಗುತ್ತದೆ ಎನ್ನುವ ಸುದ್ದಿ ದೊರಕಿದೆ.
G20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ದೇಶಗಳ ಮುಖ್ಯಸ್ಥರು ಮತ್ತು ಇತರ ವಿಶ್ವ ನಾಯಕರಿಗೆ ಆಹಾರ ಬಡಿಸಲು ಭಾರತದ ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾದ ಸಂಕೀರ್ಣವಾಗಿ ಕೆತ್ತನೆಗಳುಳ್ಳ ಬೆಸ್ಪೋಕ್ ಬೆಳ್ಳಿ ಪಾತ್ರೆಗಳಲ್ಲಿ ಭವ್ಯವಾದ ಭೋಜನವನ್ನು ನೀಡಲಾಗುವುದು ಎಂದು ಜೈಪುರ ಮೂಲದ ಮೆಟಲ್ ವೇರ್ ಸಂಸ್ಥೆ ತಿಳಿಸಿದೆ. ಅದಕ್ಕಾಗಿ ವಿಭಿನ್ನ ಕಲಾಕೃತಿಗಳ ಚಿನ್ನ ಮತ್ತು ಬೆಳ್ಳಿ ಪಾತ್ರೆಗಳನ್ನು ಸಿದ್ಧಪಡಿಸಲಾಗಿದೆ.
G20 Summit: ಮಹತ್ವದ ಶೃಂಗಸಭೆಗೆ ಭಾರತದ ಪ್ರಮುಖ ಶಾಶ್ವತ ಕೊಡುಗೆ ಏನು? ಇದರ ಉದ್ದೇಶ, ಕೊಡುಗೆಗಳು ಹೀಗಿದೆ..
ಐಷಾರಾಮಿ ಟೇಬಲ್‍ವೇರ್ ಮತ್ತು ಬೆಳ್ಳಿ, ಚಿನ್ನ ಲೇಪಿತ ಪಾತ್ರೆ
ಭಾರತದ ಸಂಸ್ಕೃತಿಯನ್ನು ಬಿಂಬಿಸುವಂತೆ ಈ ಪಾತ್ರೆಗಳನ್ನು ಸೊಗಸಾದ ಕೆತ್ತನೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೈಪುರ ರಾಜ್ಯದಿಂದ ಐಆರ್‌ಐಎಸ್ ಬೆಳ್ಳಿ ಸಾಮಾನುಗಳು ಮತ್ತು ಚಿನ್ನದ ಲೇಪನವುಳ್ಳ ಪಾತ್ರೆಗಳನ್ನ (Silver-gold plated tableware) ಅತಿಥಿಗಳಿಗಾಗಿ (Guests) ತರಿಸಲಾಗಿದೆ. ಬೆಳ್ಳಿ ಪಾತ್ರೆಗಳನ್ನು ಬಳಸುತ್ತಿರುವ ಉದ್ದೇಶವೆಂದರೆ ಅದು, ಹೆಚ್ಚು ನೈರ್ಮಲ್ಯದಿಂದಿರುತ್ತದೆ ಎಂದು ಐಆರ್ಐಎಸ್ನ ರಾಜೀವ್ ಪಬುವಾಲ್ ತಿಳಿಸಿದ್ದಾರೆ. ಐರಿಸ್ ಜೈಪುರ್ ಮಂಗಳವಾರ ನವದೆಹಲಿಯಲ್ಲಿ ತನ್ನ ಕೆಲವು ಬೆಳ್ಳಿ ಪಾತ್ರೆಗಳ ಪ್ರದರ್ಶನ ನಡೆಸಿದ್ದು ವಿವಿಧ ಐಷಾರಾಮಿ ಹೋಟೆಲ್‍ಗಳಿಗಾಗಿ ಟೇಬಲ್‍ವೇರ್ ಮತ್ತು ಬೆಳ್ಳಿ ಪಾತ್ರೆಗಳನ್ನು ತಯಾರಿಸಿ ನಿಯೋಜಿಸಲಾಗಿದೆ ಎಂದು ಹೇಳಿದೆ. ಹೋಟೆಲ್‍ಗಳಲ್ಲಿ ಅದ್ದೂರಿ ಔತಣಕೂಟಗಳು ಮತ್ತು ಭೋಜನಕ್ಕಾಗಿ ಈ ಪಾತ್ರೆಗಳನ್ನು ವಿದೇಶಿ ಅತಿಥಿಗಳು ಬಳಸಲಿದ್ದಾರೆ.
ಅತಿಥಿಗಳಿಗೆ ಬೆಳ್ಳಿಯ ತಟ್ಟೆ, ಚಿನ್ನದ ಲೋಟ, ಚಿನ್ನದ ಚಮಚಗಳ ವ್ಯವಸ್ಥೆ ಮಾಡಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೌಲ್, ಸ್ಪೂನ್ ಗಳನ್ನೂ ವಿವಿಧ ವಿನ್ಯಾಸಗಳಲ್ಲಿ ವಿಶೇಷವಾಗಿ ಮಾಡಲಾಗಿದೆ. ಹೆಚ್ಚಿನ ಪಾತ್ರೆಗಳನ್ನು ಸ್ಟೀಲ್ ಅಥವಾ ಹಿತ್ತಾಳೆ ಬೇಸ್‍ನೊಂದಿಗೆ ಬೆಳ್ಳಿಯ ಸೊಗಸಾದ ಲೇಪನದೊಂದಿಗೆ ಮಾಡಲಾಗಿರುತ್ತದೆ. ಸ್ವಾಗತ ಪಾನೀಯಗಳನ್ನು ನೀಡಲು ಬಳಸುವ ಪಾತ್ರೆಗಳು ಚಿನ್ನದ ಲೇಪನವನ್ನು ಹೊಂದಿರಲಿದೆ ಎಂದು ಬೆಳ್ಳಿ ಪಾತ್ರೆಗಳ ಸಂಸ್ಥೆಯ ಲಕ್ಷ್ ಪಬುವಾಲ್ ಮಾಹಿತಿ ನೀಡಿದ್ದಾರೆ. ವಿದೇಶಿ ಅತಿಥಿಗಳು ಈ ವಿಶೇಷ ಪಾತ್ರಗಳ ಮೂಲಕ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಜಿ20 ಆರಂಭಕ್ಕೂ ಮುನ್ನ ಮೋದಿ ಜಕರ್ತಾ ಪ್ರಯಾಣ, ಇಲ್ಲಿದೆ ಬಿಡುವಿಲ್ಲದ 3 ದಿನದ ವೇಳಾಪಟ್ಟಿ!
ಜಿ20 ಶೃಂಗಸಭೆಯ ಈ ವಿಶೇಷ ಸಂದರ್ಭದಲ್ಲಿ 200 ಕುಶಲಕರ್ಮಿಗಳು ಸುಮಾರು 15,000 ಬೆಳ್ಳಿ ಪಾತ್ರೆಗಳನ್ನು ರಚಿಸಿದ್ದಾರೆ.. ಟೇಬಲ್ವೇರ್ ಮತ್ತು ಸಿಲ್ವರ್ ವೇರ್ ವಿನ್ಯಾಸಗಳು ಭಾರತದ ಶ್ರೀಮಂತ ಪರಂಪರೆ ಮತ್ತು ಅದರ ಜಾಗತಿಕ ಪ್ರಾಮುಖ್ಯತೆಯ ಪ್ರತೀಕವಾಗಿದೆ ಎಂದು ರಾಜೀವ್ ಪಬುವಾಲ್ ಹೇಳಿದರು. ಸೂಕ್ಷ್ಮವಾಗಿ ರಚಿಸಲಾದ ಟೇಬಲ್‌ವೇರ್ ಅನ್ನು ಜೈಪುರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಕುಶಲಕರ್ಮಿಗಳು ತಯಾರಿಸಿದ್ದಾರೆಂದು ರಾಜೀವ್ ತಿಳಿಸಿದ್ದಾರೆ. ಹಿಂದೆ, ನಾವು ಇತರ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು ಆದರೆ ಇಲ್ಲಿರುವ ಈ ಎಲ್ಲಾ ಬೆಳ್ಳಿಯ ಸಾಮಾನುಗಳನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ. ಇದು 'ಮೇಕ್ ಇನ್ ಇಂಡಿಯಾ' ಮತ್ತು 'ಮೇಡ್ ಇನ್ ಇಂಡಿಯಾ' ತತ್ವವನ್ನು ಉತ್ತೇಜಿಸಲು ಉತ್ತಮ ಪ್ರಯತ್ನವಾಗಿದೆ ಪಬುವಾಲ್ ಹೇಳಿದರು.
ಮೆನುವಿನಲ್ಲಿ ಏನಿದೆ?
ಮೆನುವಿನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ಸೇರಿಸಲಾಗಿದೆ. ಅತಿಥಿಗಳು ಯಾವ ರೀತಿಯ ಖಾದ್ಯಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಂಡು ಅವುಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದಕ್ಕಾಗಿ ಖ್ಯಾತ ಹೋಟೆಲ್ ಗಳಲ್ಲಿ ಕೆಲಸ ಮಾಡುವ ಅಡುಗೆ ತಜ್ಞರನ್ನು ಈಗಾಗಲೇ ದೆಹಲಿಗೆ ಕರೆತರಲಾಗಿದೆ.
ನಂಬಲರ್ಹ ಮೂಲಗಳ ಪ್ರಕಾರ ಮೆನುವಿನಲ್ಲಿ 30 ರಿಂದ 40 ಖಾದ್ಯಗಳಿವೆಯಂತೆ.ಈಗಾಗಲೇ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ದೇಶದ ವಿವಿಧ ಭಾಗದ ಜನಪ್ರಿಯವಾಗಿರುವ ಭಕ್ಷ್ಯಗಳು ಈ ಲಿಸ್ಟ್ನಲ್ಲಿವೆ ಎನ್ನಲಾಗಿದೆ. ಬೇರೆ ಪ್ರದೇಶಗಳಿಂದ ಬರುವ ಮಾಧ್ಯಮ ಪ್ರತಿನಿಧಿಗಳಿಗೂ ವಿಶೇಷ ಮೆನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.