
ಶಂಖಪುಷ್ಪದ ಹೂವು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡ ಬೇಡ ಎಂದರೂ ಮನೆಯಂಗಳದಲ್ಲಿ ಹುಟ್ಟಿಕೊಳ್ಳುವ ಬಳ್ಳಿ ಇದು. ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಇದು ಕಾಣಸಿಗುತ್ತದೆ. ಬಿಳಿಯ ಪುಷ್ಪದಲ್ಲಿ ಆರೋಗ್ಯಕರ ಗುಣಗಳು ಹೆಚ್ಚಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ನೀಲಿ ಬಣ್ಣದ ಶಂಖಪುಷ್ಪವನ್ನು ನೈಸರ್ಗಿಕ ಬಣ್ಣವಾಗಿ ಆಹಾರಗಳಲ್ಲಿಯೂ ಬಳಸಲಾಗುತ್ತದೆ. ಬ್ಲ್ಯೂ ಪೀ ಎಂದೂ ಕರೆಯುವ ಶಂಖಪುಷ್ಪ ಆಹಾರಕ್ಕೆ ಬಳಸಲಾಗುತ್ತದೆ. ಆಹಾರಕ್ಕೆ ಮಾತ್ರವಲ್ಲದೇ, ಇದರಿಂದ ಹಲವಾರು ಪ್ರಯೋಜನಗಳು ಇವೆ. ಏಕಾಗ್ರತೆ, ನೆನಪಿನ ಶಕ್ತಿಗೆ ಇದನ್ನು ಬಳಸಲಾಗುತ್ತದೆ. ಇದರ ತಂಬುಳಿ ಮಾಡಿ ಬೇಸಿಗೆ ಕಾಲದಲ್ಲಿ ಸೇವನೆ ಮಾಡಲಾಗುತ್ತದೆ.
ಉರಿಯೂತದ ಸಾಮರ್ಥ್ಯವು ಕಲಿಕೆ, ಆಲೋಚನೆ, ನೆನಪಿಟ್ಟುಕೊಳ್ಳುವುದು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಗಮನದಂತಹ ಮೆದುಳಿನ ಕಾರ್ಯಗಳಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಜೀರ್ಣಕ್ರಿಯೆಲ್ಲಿಯೂ ಇದರ ಪಾತ್ರ ಮಹತ್ವದ್ದಾಗಿದೆ. ಕಿಬ್ಬೊಟ್ಟೆಯ ನೋವು, ಕಿಬ್ಬೊಟ್ಟೆಯ ಹಿಗ್ಗುವಿಕೆ, ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆಗಳಿಗೂ ಇದು ಪ್ರಯೋಜನಕಾರಿ ಎನ್ನಲಾಗುತ್ತದೆ. ದೀರ್ಘಕಾಲದ ತಲೆನೋವು, ಉದ್ವೇಗದ ಸಮಸ್ಯೆಗಳಿಗೆ ಈ ಶಂಖಪುಷ್ಪದಿಂದ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
ಬದಲಾಗ್ತಿರೋ ಹವಾಮಾನಕ್ಕೆ ಬೆಟ್ಟದ ನೆಲ್ಲಿ: ಆರೋಗ್ಯಕರ ಪೇಯ ಹೇಳಿಕೊಟ್ಟ ಡಾ.ಪದ್ಮಿನಿ ಪ್ರಸಾದ್
ಇದೀಗ, ನೀಲಿ ಶಂಖಪುಷ್ಪದಿಂದ ಅನ್ನ ಮಾಡಬಹುದು ಎಂದರೆ ನಂಬುವಿರಾ? ನಂಬಲೇಬೇಕು. ಈ ಬ್ಲೂರೈಸ್ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫುಡ್ ವ್ಲಾಗರ್ ಪ್ರತಿಮಾ ಪ್ರಧಾನ್ ಅವರು ಇದರ ರೆಸಿಪಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಅನ್ನವನ್ನು ಮಾಡುವ ಹಂತ ಹಂತದ ಮಾಹಿತಿಯನ್ನು ಅವರು ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ನೋಡುವಂತೆ ಅವರು, ಮೊದಲಿಗೆ ಶಂಖಪುಷ್ಪದ ಹೂವುಗಳನ್ನು ತೊಳೆಯುತ್ತಾರೆ. ಅವುಗಳ ಎಸಳುಗಳನ್ನು ಒಂದೊಂದಾಗಿ ಬಿಡಿ, ತೊಟ್ಟಿನ ಬುಡದಲ್ಲಿರುವ ಹಸಿರು ಬಣ್ಣದ ತುಣುಕನ್ನು ಬಿಡಿಸುವುದನ್ನು ನೋಡಬಹುದು. ಬಳಿಕ, ಅವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸುತ್ತಾರೆ. ಇಷ್ಟು ಆಗುವ ಹೊತ್ತಿಗೆ ಮತ್ತೊಂದೆಡೆ, ಸ್ವಲ್ಪ ಅಕ್ಕಿಯನ್ನು ಪಾತ್ರೆಯಲ್ಲಿ ನೆನೆಸಿಡುತ್ತಾರೆ. ಸ್ವಲ್ಪ ಸಮಯ ಬಿಟ್ಟು ನೀರು ಕುದಿದು, ಶಂಖಪುಷ್ಪದ ಎಸಳುಗಳು ಬಣ್ಣ ಬಿಡುತ್ತವೆ. ನೀರು ನೀಲಿಯಾಗಿ ಕಾಣುತ್ತದೆ.
ಆ ಸಮಯದಲ್ಲಿ ಎಸಳುಗಳನ್ನು ಕೈಹುಟ್ಟಿನಿಂದ ತೆಗೆದುಹಾಕುತ್ತಾರೆ. ಬಳಿಕ, ಅದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಸುಮಾರು ಇಪ್ಪತ್ತು ನಿಮಿಷ ಇಟ್ಟು ಅನ್ನ ಮಾಡುತ್ತಾರೆ, ಅದಕ್ಕೆ ಮೇಲಿನಿಂದ ಉಪ್ಪು, ತುಪ್ಪ ಹಾಕುತ್ತಾರೆ. ಬಳಿಕ, ನಾಲ್ಕಾರು ಚಮಚ ತುಪ್ಪ ಹಾಕಿ, ಅದಕ್ಕೆ ಗೋಂಡಂಬಿ, ಒಣದ್ರಾಕ್ಷಿ, ಮಸಾಲೆ ಎಲೆ, ಲವಂಗ, ಈರುಳ್ಳಿ ಸೇರಿದಂತೆ ಕೆಲವು ಮಸಾಲೆಗಳನ್ನು ಹಾಕಿ ಫ್ರೈ ಮಾಡುತ್ತಾರೆ. ಬಳಿಕ, ಅದಕ್ಕೆ ನೀಲಿ ಅನ್ನವನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡುತ್ತಾರೆ. ಬಿಸಿಯಾದ ನೀಲಿ ಘೀ ರೈಸ್ ಸಿದ್ಧವಾಗುತ್ತದೆ.
ವಾಸಿಯಾಗದ ಕೆಮ್ಮು- ಸ್ಕ್ಯಾನ್ನಲ್ಲಿ ಕಂಡದ್ದು ಗಡ್ಡೆ, ಆಪರೇಷನ್ ವೇಳೆ ಸಿಕ್ಕಿದ್ದೇ ಬೇರೆ: ವೈದ್ಯರೇ ಕಂಗಾಲು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.