Food Trend: ಜಿಲೇಬಿ ಸವಿಯೋಕೆ ಆಲೂಗಡ್ಡೆ ಸಾರು, ಇದೆಂಥಾ ಅಸಹ್ಯ ಎಂದ ನೆಟ್ಟಿಗರು

Published : Nov 09, 2022, 01:20 PM IST
Food Trend: ಜಿಲೇಬಿ ಸವಿಯೋಕೆ ಆಲೂಗಡ್ಡೆ ಸಾರು, ಇದೆಂಥಾ ಅಸಹ್ಯ ಎಂದ ನೆಟ್ಟಿಗರು

ಸಾರಾಂಶ

ಸಿಹಿ ಸಿಹಿಯಾದ ಜಿಲೇಬಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಇಂಥಾ ಜಿಲೇಬಿಯನ್ನು ಆಲೂಗಡ್ಡೆ ಜೊತೆ ಸೇರಿಸಿದ್ರೆ ಮಾಡಿದ್ರೆ ಹೇಗಿರುತ್ತೆ ? ಪಾಲಕ್ ಕಪೂರ್ ಎಂಬ ಫುಡ್ ಬ್ಲಾಗರ್ ಈ ಡಿಫರೆಂಟ್ ಜಿಲೇಬಿಯನ್ನು ಪರಿಚಯಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ. 

ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರಾಗಿರುವ ಕಾರಣ ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಹಲವು ಆಹಾರಗಳನ್ನು ಸೇರಿಸಿ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ, ಫುಡ್ ಬ್ಲಾಗರ್ಸ್ ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. 

ಫುಡ್‌ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡಿ ಟ್ರೈ ಮಾಡುತ್ತಾರೆ ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ತನ್ನ ಕೆಟ್ಟ ಕಾಂಬಿನೇಶನ್‌ನಿಂದ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಸದ್ಯಕ್ಕೆ ಎಲ್ಲರ ಗಮನ ಸೆಳೀತಾ ಇರೋದು ಜಿಲೇಬಿ ಮತ್ತು ಆಲೂಗಡ್ಡೆಯ ಕಾಂಬಿನೇಷನ್‌.

ಫುಡ್‌ ಟ್ರೆಂಡ್‌ನಲ್ಲಿ ಮ್ಯಾಗಿ ಮಿಲ್ಕ್‌ಶೇಕ್‌, ಫುಡ್ ಮಸಾಲೆ ದೋಸೆ ಐಸ್ ಕ್ರೀಂ ರೋಲ್ (Masala Dosa Ice Cream Roll), ಮೊಮೋಸ್ ಐಸ್‌ಕ್ರೀಂ ರೋಲ್‌, ಐಸ್ ಕ್ರೀಂ ಸೂಪ್‌, ಫ್ರುಟ್ ಚಾಯ್ ರೆಸಿಪಿ ಹೀಗೆ ಹಲವು ವಿಚಿತ್ರ ಆಹಾರಗಳು ಟ್ರೆಂಡ್ ಆಗಿವೆ. ಹಾಗೆ ಸದ್ಯ ವೈರಲ್ (Viral) ಆಗ್ತಿರೋದು ಆಲೂಗಡ್ಡೆ ಸಾರು ಮತ್ತು ಜಿಲೇಬಿ ಕಾಂಬಿನೇಷನ್‌.. ಅರೆ ಆಲೂಗಡ್ಡೆ ಮತ್ತು ಜಿಲೇಬಿನಾ ಅಂತ ಅಚ್ಚರಿಪಡ್ಬೇಡಿ. ಇಲ್ಲಿ ವೈರಲ್ ಆಗ್ತಿರೋದು ಅದೇ ವಿಚಿತ್ರ ಕಾಂಬಿನೇಷನ್‌

Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?

ಅಂತರ್ಜಾಲದಲ್ಲಿ ನೀವು ವಿಭಿನ್ನ ಆಹಾರ ಸಂಯೋಜನೆಗಳು (Food combination) ನೋಡಬಹುದು. ಇವುಗಳಲ್ಲಿ ಕೆಲವು ನಿಜವಾಗಿಯೂ ರುಚಿಕರವಾಗಿದ್ದರೆ. ಇನ್ನು ಕೆಲವು ನೋಡುಗರನ್ನು ಬೆಚ್ಚಿ ಬೀಳಿಸುತ್ತವೆ. ಹಲವಾರು ಬೀದಿ ವ್ಯಾಪಾರಿಗಳು ಆಹಾರದೊಂದಿಗೆ ಪ್ರಯೋಗ ಮಾಡುತ್ತಾರೆ ಮತ್ತು ವಿಲಕ್ಷಣವಾದ ಆಹಾರ ಸಂಯೋಜನೆಗಳನ್ನು ಹುಟ್ಟುಹಾಕುತ್ತಾರೆ. ಗುಲಾಬ್ ಜಾಮೂನ್ ಪಕೋಡದಿಂದ ಕೋಲ್ಡ್ ಕಾಫಿ ಮ್ಯಾಗಿಯವರೆಗೆ ಈ ಪಟ್ಟಿ ಸಾಕಷ್ಟು ಉದ್ದವಾಗಿದೆ. ಪಾಲಕ್ ಕಪೂರ್ ಎಂಬ ಆಹಾರ ಬ್ಲಾಗರ್ (Food blogger) ಅವರು ಆಲೂ ಕಿ ಸಬ್ಜಿಯೊಂದಿಗೆ ಜಲೇಬಿಯನ್ನು ಪ್ರಯತ್ನಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 

ವೀಡಿಯೊಗೆ 'ಇದುವರೆಗೆ ಅತ್ಯಂತ ವಿಲಕ್ಷಣವಾದ ಆಹಾರ ಸಂಯೋಜನೆಯನ್ನು ಪ್ರಯತ್ನಿಸಿದೆ. ಆಲೂ ಕಿ ಸಬ್ಜಿಯೊಂದಿಗೆ ತಯಾರಿಸುವ ಜಿಲೇಬಿ ಇದಾಗಿದೆ. ಮಥುರಾ, ವೃಂದಾವನದಲ್ಲಿ ಬಹಳ ಪ್ರಸಿದ್ಧವಾಗಿದೆ. ಹಾಗಾಗಿ ನಾನು ಅಂತಿಮವಾಗಿ ಮಥುರಾದ ಓಮಾ ಪೆಹಲ್ವಾನ್‌ನಿಂದ ಈ ಸಂಯೋಜನೆಯನ್ನು ಪ್ರಯತ್ನಿಸಿದೆ' ಎಂದು ಶೀರ್ಷಿಕೆ ನೀಡಲಾಗಿದೆ.  

Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್

ವೀಡಿಯೊವು 280k ವೀಕ್ಷಣೆಗಳನ್ನು ಗಳಿಸಿದೆ ಮತ್ತು ಹಲವಾರು ಬಳಕೆದಾರರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದಾರೆ. ಅವರಲ್ಲಿ ಅನೇಕರು ಆಹಾರ ಸಂಯೋಜನೆಯನ್ನು ನೋಡಿ ಅಸಹ್ಯ ಪಟ್ಟುಕೊಂಡಿದ್ದಾರೆ. ಒಬ್ಬ ಬಳಕೆದಾರನು ಫುಡ್ ಟ್ರೆಂಡ್‌ನಲ್ಲಿ ಏನನ್ನಾದರೂ ಮಾಡುವುದು ಎಷ್ಟು ಸರಿ ಎಂದು ಹೀಯಾಳಿಸಿದ್ದಾರೆ. ಮೂರನೆಯ ಬಳಕೆದಾರರು, ಎರಡೂ ಆಹಾರ ವಿಭಿನ್ನ ರುಚಿಯನ್ನು ಹೊಂದಿರುವಾಗ ನೀವು ಅದನ್ನು ಒಟ್ಟಿಗೆ ಸೇರಿಸಿ ಏಕೆ ಹಾಳು ಮಾಡುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?