ಮಾನ್ಸೂನ್ ಎಲ್ಲರಿಗೂ ಖುಷಿ ನೀಡುವ ಕಾಲ. ಮಳೆ ಬರುವಾಗ ಮನಸ್ಸು ಮುದಗೊಳ್ಳುತ್ತದೆ. ಆದರೆ ಮಳೆಗಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ಕೊಡದಿದ್ದರೆ ಆರೋಗ್ಯ ಹದಗೆಡೋದು ಖಂಡಿತ. ಹಾಗಿದ್ರೆ ಮಳೆಗಾಲದಲ್ಲಿ ಆಹಾರ ತಯಾರಿಸೋ ಮುನ್ನ ಏನೆಲ್ಲಾ ಟಿಪ್ಸ್ ಫಾಲೋ ಮಾಡ್ಬೇಕು.
ಮಳೆಗಾಲ ಎಂಜಾಯ್ ಮಾಡ್ಬೇಕು ಅಂದ್ರೆ ಆರೋಗ್ಯ ಕೂಡಾ ಚೆನ್ನಾಗಿರಬೇಕು. ಆರೋಗ್ಯ ಚೆನ್ನಾಗಿರಬೇಕೆಂದರೆ ತಿನ್ನುವ ಆಹಾರ ಸರಿಯಾಗಿರಬೇಕು. ಇದು ಮಳೆಗಾಲ ಮತ್ತು ಈ ಸಮಯದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಸ್ವಲ್ಪಮಟ್ಟಿಗೆ ದುರ್ಬಲವಾಗಿರುತ್ತದೆ. ಇದರಿಂದಾಗಿ, ಅನಾರೋಗ್ಯಕ್ಕೆ ಒಳಗಾಗುವ ಅಪಾಯವೂ ಹೆಚ್ಚಾಗಿರುತ್ತದೆ., ಆದ್ದರಿಂದ ತಿನ್ನೋ ಆಹಾರ ಹಾಗೂ ಆಹಾರ ತಯಾರಿಸುವ ರೀತಿಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗುತ್ತದೆ. ಹಾಗಿದ್ರೆ ಮಳೆಗಾಲದಲ್ಲಿ ಆಹಾರ ತಯಾರಿಸುವಾಗ ಯಾವೆಲ್ಲಾ ಟಿಪ್ಸ್ ಫಾಲೋ ಮಾಡ್ಬೇಕು.
1. ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ: ಹಣ್ಣುಗಳು ಮತ್ತು ತರಕಾರಿ (Vegetables)ಗಳನ್ನು ಮಾರುಕಟ್ಟೆಯಿಂದ ಮನೆಗೆ ಬಂದ ನಂತರ ಹರಿಯುವ ನೀರಿನ ಅಡಿಯಲ್ಲಿ ತೊಳೆಯುವುದು ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗೆಯೇ ಅಡುಗೆ ಮಾಡುವ ಮೊದಲು, ಅಡುಗೆ ಸಮಯದಲ್ಲಿ ಮತ್ತು ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ. ಮತ್ತು ತಿನ್ನುವ ಮೊದಲು ನಿಮ್ಮ ಕೈಗಳನ್ನು ಮತ್ತೆ ತೊಳೆಯಲು ಮರೆಯಬೇಡಿ. ಎಲ್ಲಾ ರೀತಿಯ ಮೇಲ್ಮೈಗಳಲ್ಲಿ ಬ್ಯಾಕ್ಟೀರಿಯಾಗಳು ಬದುಕಬಲ್ಲವು. ಆದ್ದರಿಂದ ಕಚ್ಚಾ ಅಥವಾ ಬೇಯಿಸಿದ ಆಹಾರವನ್ನು ಸಂಪರ್ಕಿಸಿದ ನಂತರ ಯಾವಾಗಲೂ ಪಾತ್ರೆಗಳು, ಚಾಪಿಂಗ್ ಬೋರ್ಡ್‌ಗಳು, ಕಟ್ಲರಿಗಳು ಮತ್ತು ಕೌಂಟರ್‌ಟಾಪ್‌ಗಳನ್ನು ಬಿಸಿ ಸಾಬೂನು ನೀರಿನಿಂದ ತೊಳೆಯಿರಿ.
undefined
ಮಳೆಗಾಲದಲ್ಲಿ ಆಗಾಗ ಹಸಿವಾಗೋದಕ್ಕೆ ಕಾರಣವೇನು ?
2. ಸಸ್ಯಾಹಾರ, ಮಾಂಸಾಹಾರವನ್ನು ಪ್ರತ್ಯೇಕವಾಗಿರಿಸಿ: ಯಾವಾಗಲೂ ಕಚ್ಚಾ ಮಾಂಸ, ಕೋಳಿ, ಸಮುದ್ರಾಹಾರ ಮತ್ತು ಮೊಟ್ಟೆಗಳನ್ನು ಇತರ ಆಹಾರಗಳಿಂದ ಪ್ರತ್ಯೇಕವಾಗಿ ಇರಿಸಿ. ವಿಶೇಷವಾಗಿ ಬೇಯಿಸಿದ ಆಹಾರ (Food)ಗಳನ್ನು ಬೇರೆ ಬೇರೆಯಿಡುವುದು ಮುಖ್ಯ. ಕಚ್ಚಾ ಆಹಾರಗಳು ಇತರ ಆಹಾರಗಳು ಮತ್ತು ಮೇಲ್ಮೈಗಳಿಗೆ ಸೂಕ್ಷ್ಮಜೀವಿಗಳನ್ನು ಸುಲಭವಾಗಿ ಹರಡಬಹುದು. ಆದ್ದರಿಂದ, ಅವುಗಳನ್ನು ಖರೀದಿಸುವಾಗ ದಿನಸಿ ಚೀಲಗಳಲ್ಲಿ ಪ್ರತ್ಯೇಕವಾಗಿ ಇರಿಸಿ, ಸಂಗ್ರಹಿಸುವಾಗ ರೆಫ್ರಿಜರೇಟರ್‌ನಲ್ಲಿ ಮತ್ತು ಅವುಗಳನ್ನು ಕತ್ತರಿಸಲು ಪ್ರತ್ಯೇಕ ಬೋರ್ಡ್ ಹಾಗೂ ಬೇಯಿಸಲು ಬೇರೆ ಪಾತ್ರೆ ಬಳಸಿ
3. ಆಹಾರ ಸರಿಯಾದ ತಾಪಮಾನದಲ್ಲಿ ಬೇಯಿಸಬೇಕು: ಆಹಾರದೊಳಗೆ ವಾಸಿಸುವ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಆಂತರಿಕ ತಾಪಮಾನವು ಸಾಕಷ್ಟು ಇರಬೇಕು. ನಿಮ್ಮ ಮಾಂಸ (Meat)ವನ್ನು ಸರಿಯಾಗಿ ಬೇಯಿಸಲಾಗಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನೀವು ಯಾವಾಗಲೂ ಆಹಾರ ಥರ್ಮಾಮೀಟರ್ ಅನ್ನು ಬಳಸಬಹುದು. ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲ ಇಡಲಾದ ಆಹಾರವು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಅದಕ್ಕಾಗಿಯೇ ರೆಫ್ರಿಜರೇಟರ್‌ಗಳನ್ನು ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ರೆಫ್ರಿಜರೇಟರ್ ತಾಪಮಾನವು 40 ಡಿಗ್ರಿ ಎಫ್ ಅಥವಾ ಅದಕ್ಕಿಂತ ಕಡಿಮೆ ಇರಬೇಕು ಮತ್ತು ಫ್ರೀಜರ್ ತಾಪಮಾನವು 0 ಡಿಗ್ರಿ ಎಫ್ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಬೇಯಿಸಿದ ಎರಡು ಗಂಟೆಗಳ ಒಳಗೆ ಬೇಯಿಸಿದ ಊಟವನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಕು.
ಮಳೆಗಾಲದಲ್ಲಿ ಅಕ್ಕಿ ಗಂಜಿ ಕುಡಿದ್ರೆ ಕಾಯಿಲೆ ಬೀಳೋ ಭಯವಿಲ್ಲ
4. ಹಳಸಿದ ಆಹಾರ ತಿನ್ನಬೇಡಿ: ಮಳೆಗಾಲದಲ್ಲಿ ಯಾವಾಗಲೂ ಬಿಸಿ ಬಿಸಿ (Heat) ಆಹಾರವನ್ನೇ ತಿನ್ನಿ. ಬಿಸಿ ಟೀ, ಸೂಪ್, ಬಿಸಿ ಬಿಸಿಯಾದ ಅನ್ನ-ಸಾಂಬಾರು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಫ್ರಿಡ್ಜ್‌ನಲ್ಲಿಟ್ಟ ಆಹಾರವನ್ನು ಬಿಸಿ ಮಾಡಿ ತಿನ್ನುವ ಅಭ್ಯಾಸವನ್ನು ಮಳೆಗಾಲದಲ್ಲಿ ಬಿಟ್ಟುಬಿಡಿ. ಮಾಂಸ ಮತ್ತು ಸಮುದ್ರಾಹಾರ ಸೇವನೆ ಕಡಿಮೆ ಮಾಡಿ. ಚೀಸ್ ಅನ್ನು ಪಾಶ್ಚರೀಕರಿಸಿದ ಹಾಲಿನೊಂದಿಗೆ ತಯಾರಿಸದ ಹೊರತು ಸೇವಿಸುವುದು ಒಳ್ಳೆಯದಲ್ಲ. ಮಾನ್ಸೂನ್ ಸಮಯದಲ್ಲಿ ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರುವುದು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿಡುವಲ್ಲಿ ನೆರವಾಗುತ್ತದೆ.