ಮಳೆಗಾಲ ಶುರುವಾಯ್ತು ಅಂದ್ರೆ ಚಳಿ ಚಳಿ. ಬೆಚ್ಚಗೆ ಏನಾದ್ರೂ ತಿನ್ಬೇಕು ಅಂತ ಅನ್ಸುತ್ತೆ. ಆದರೆ ತಿನ್ನೋ ಆಹಾರ ಸರಿಯಾಗಿಲ್ಲಾಂದ್ರೆ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗಾದ್ರೆ ಮಾನ್ಸೂನ್‌ನಲ್ಲಿ ತಿನ್ನಬಹುದಾದ ಉತ್ತಮ ಆಹಾರಗಳು ಯಾವುವು?
ಮಾನ್ಸೂನ್ ಸಮಯದಲ್ಲಿ ಆಹಾರದಲ್ಲಿ ಹಠಾತ್ ಬದಲಾವಣೆ ಕಂಡುಬರುತ್ತದೆ. ನಾವು ಎಂದಿಗಿಂತಲೂ ಹೆಚ್ಚು ಕರಿದ ಆಹಾರವನ್ನು ತಿನ್ನಲು ಹಂಬಲಿಸುತ್ತೇವೆ. ಹೆಚ್ಚು ಪಕೋಡಾಗಳು, ಸಮೋಸಾಗಳು ಮತ್ತು ಬಜ್ಜಿಗಳನ್ನು ಸೇವಿಸುತ್ತೇವೆ. ಆದರೆ ಅದೇ ಆಹಾರವು ನಮ್ಮನ್ನು ಮಾನ್ಸೂನ್‌ನಲ್ಲಿ ಸೋಮಾರಿಗಳನ್ನಾಗಿ ಮಾಡುತ್ತದೆ. ಮಳೆಗಾಲದ ಜ್ವರ, ಇತರ ಕಾಯಿಲೆಗಳು ವಕ್ಕರಿಸುತ್ತವೆ. ಪ್ರಪಂಚದಾದ್ಯಂತದ ಹಲವಾರು ಅಧ್ಯಯನಗಳ ಪ್ರಕಾರ, ಕರಿದ ಆಹಾರಗಳಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಅವುಗಳನ್ನು ಅಧಿಕವಾಗಿ ಸೇವಿಸುವುದರಿಂದ ಇದು ದಿನವಿಡೀ ಅತಿಯಾಗಿ ಹೊಟ್ಟೆ ತುಂಬಿರುವ ಭಾವನೆಯನ್ನು ಉಂಟುಮಾಡಬಹುದು. ಇದು ದೇಹದಲ್ಲಿ ಶಕ್ತಿಯ ಕೊರತೆಗೆ ಕಾರಣವಾಗುತ್ತದೆ. ಪರಿಣಾಮವಾಗಿ, ನೀವು ಯಾವಾಗಲೂ ದಣಿದ, ಸೋಮಾರಿತನ ಮತ್ತು ನಿದ್ರೆಯ ಭಾವನೆಯನ್ನು ಅನುಭವಿಸುತ್ತೀರಿ. ಅದಕ್ಕಾಗಿಯೇ ಮಳೆಗಾಲದಲ್ಲಿ ಈ ಅತ್ಯುತ್ತಮ ಆಹಾರಗಳನ್ನು ತಿನ್ನಿ ಮತ್ತು ಆರೋಗ್ಯವಾಗಿರಿ.
ಮಸಾಲಾ ಚಹಾ
ಮಳೆ ಬಂದ್ರೆ ಸಾಕು ಥಟ್ಟಂತ ಬಿಸಿ ಬಿಸಿ ಚಹಾ (Tea) ಕುಡಿಯುವ ನೆನಪಾಗುತ್ತದೆ. ಮಳೆಗಾಲದಲ್ಲಿ ಆರೋಗ್ಯವಾಗಿರಲು ಸಾದಾ ಚಹಾ ಕುಡಿಯುವ ಬದಲು ಮಸಾಲಾ ಚಾಯ್ ಕುಡಿಯವುದು ಒಳ್ಳೆಯದು. ಮಸಾಲಾ ಚಾಯ್ ಸಾಮಾನ್ಯವಾಗಿ ಲವಂಗ, ದಾಲ್ಚಿನ್ನಿ, ಏಲಕ್ಕಿ ಮತ್ತು ಶುಂಠಿಯನ್ನು ಒಳಗೊಂಡಿರುತ್ತದೆ, ಇವೆಲ್ಲವೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಕಾಲೋಚಿತ ಕಾಯಿಲೆಗಳು ಬರದಂತೆ ಸಹಾಯ ಮಾಡುತ್ತದೆ. ಜೊತೆಗೆ, ಚಹಾದಲ್ಲಿರವು ಕೆಫೀನ್ ಅಂಶ ಮಳೆಗಾಲದ ಸೋಮಾರಿತನವನ್ನು (Lazyness) ಹೋಗಲಾಡಿಸಿ, ರಿಫ್ರೆಶ್ ಆಗಿರುವಂತೆ ಮಾಡುತ್ತದೆ.
ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆ ಕಾಡ್ಬಾರ್ದು ಅಂದ್ರೆ ಕಹಿ ಆಹಾರ ಹೆಚ್ಚು ತಿನ್ನಿ
ಖಿಚಡಿ
ಧಾನ್ಯಗಳು ಯಾವಾಗಲೂ ಪೋಷಕಾಂಶಗಳ ಉಗ್ರಾಣವಾಗಿದೆ. ಇವು ದೇಹಕ್ಕೆ (Body) ಅಗತ್ಯವಾದ ಉತ್ತಮ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ. ಅವುಗಳನ್ನು ಆಹಾರದಲ್ಲಿ ಒಟ್ಟಿಗೆ ಬೆರೆಸುವುದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಲ್ಲದೆ ಖಿಚಡಿ ಮಾಡುವುದು ಸುಲಭ. ಮಾನ್ಸೂನ್‌ಲ್ಲಿ ಚಳಿಯಾಗುತ್ತಿರುವಾಗ ಇದನ್ನು ಬಿಸಿಬಿಸಿಯಾಗಿಯೇ ತಿನ್ನಿ.
ಸೂಪ್
ಚಳಿಯಾದ ಹವಾಮಾನವು ಬೆಚ್ಚಗಿನ ಮತ್ತು ಹಿತವಾದ ಏನನ್ನಾದರೂ ತಿನ್ನುವ ಆಸೆ ಮೂಡಿಸುತ್ತದೆ. ಹೀಗಿರುವಾಗ ಸೂಪ್ ಬೌಲ್‌ಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಸೂಪ್ ಹೊಟ್ಟೆ ತುಂಬಿಸುವುದು ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ಮಳೆಗಾಲದಲ್ಲಿ ಆಹಾರದ ರುಚಿ ಹೆಚ್ಚಿಸುವ ರುಚಿಕರ ಉಪ್ಪಿನಕಾಯಿಗಳು
ಕಷಾಯ ಮತ್ತು ಗಿಡಮೂಲಿಕೆ ಪಾನೀಯಗಳು
ಕಷಾಯವು ಪ್ರಾಚೀನ ಕಾಲದಿಂದಲೂ ಸಾಂಪ್ರದಾಯಿಕ ಔಷಧದ (Traditional medicine) ಭಾಗವಾಗಿದೆ. ವಿವಿಧ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಮಿಶ್ರಣದಿಂದ ಮಾಡಿದ ಮಿಶ್ರಣವು ನಿಮ್ಮನ್ನು ರೋಗನಿರೋಧಕ (Immunity power) ಮತ್ತು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಕಾಲೋಚಿತ ಜ್ವರವನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರೋಬಯಾಟಿಕ್‌ಗಳು
ಶಕ್ತಿಯ ಮಟ್ಟಗಳು ನಮ್ಮ ಕರುಳಿನ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಸರಿಯಾದ ಜೀರ್ಣಕ್ರಿಯೆ (Digestion) ಮತ್ತು ಚಯಾಪಚಯ ಕ್ರಿಯೆಯು ದಿನವಿಡೀ ಆರೋಗ್ಯಕರ, ಸಂತೋಷ ಮತ್ತು ಸಕ್ರಿಯವಾಗಿರಲು ನಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಮಾನ್ಸೂನ್ ಸಂಬಂಧಿತ ಅನಿಲ, ಆಮ್ಲೀಯತೆ ಮತ್ತು ಕರುಳಿನ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ಪ್ರೋಬಯಾಟಿಕ್‌ಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು.
ಮೆಕ್ಕೆಜೋಳ
ಮಳೆಗಾಲವೆಂದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಪರೀಕ್ಷಿಸುವ ಸಮಯ ಎಂದರೆ ತಪ್ಪಾಗಲಿಕ್ಕಿಲ್ಲ. ಅಲರ್ಜಿ, ಸಾಮಾನ್ಯ ಶೀತ, ನೆಗಡಿ (Cold), ಕಫ, ಜ್ವರದ ಸಮಸ್ಯೆಗಳು ಬಿಟ್ಟೂಬಿಡದೆ ಸತಾಯಿಸುತ್ತವೆ. ಹೀಗಾಗಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಮಯದ ಆಹಾರದಲ್ಲಿ ಜೋಳವನ್ನು (Corn) ಸೇರಿಸಿಕೊಳ್ಳುವುದು ಉತ್ತಮ. ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಉತ್ತಮ ಪ್ರಮಾಣದಲ್ಲಿ ಇರುತ್ತವೆ. ಇವು ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತವೆ.