ಥೈರಾಯ್ಡ್ ಇದ್ಯಾ ? ಈ ಫುಡ್ ಅವೈಡ್ ಮಾಡೋದ್ರೆ ಸರಿ, ಎಲ್ಲಾ ಸರಿ ಹೋಗುತ್ತೆ

By Suvarna News  |  First Published Jul 8, 2023, 3:42 PM IST

ಇಂದಿನ ಹದಗೆಡುತ್ತಿರುವ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ಕಳಪೆ ಆಹಾರ ಪದ್ಧತಿಯಿಂದ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿದೆ. ಮಹಿಳೆಯರು ಇದಕ್ಕೆ ಹೆಚ್ಚು ಬಲಿಯಾಗ್ತಿದ್ದಾರೆ. ಇದ್ರಲ್ಲಿ ಒಂದು ವಿಧವಾದ ಹೈಪೋಥೈರಾಯ್ಡಿಸಮ್ ಕೆಲ ಆಹಾರ ಸೇವನೆಯಿಂದ ಉಲ್ಬಣಗೊಳ್ಳುತ್ತದೆ.
 


ಈಗಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೆ ಹೋದಲ್ಲಿ ಅದು ನಮ್ಮ ಹೃದಯ ಬಡಿತ, ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ನಲ್ಲಿ ಎರಡು ವಿಧವಿದೆ. ಒಂದು ಹೈಪೋಥೈರಾಯ್ಡಿಸಮ್ ಮತ್ತೊಂದು ಹೈಪರ್ ಥೈರಾಯ್ಡಿಸಮ್. ಹೈಪೋಥೈರಾಯ್ಡಿಸಮ್ ಎನ್ನುವುದು ರಕ್ತಪ್ರವಾಹದಲ್ಲಿ ಸಾಕಷ್ಟು ಥೈರಾಯ್ಡ್ ಹಾರ್ಮೋನ್ ಇಲ್ಲದಿರುವ ಸ್ಥಿತಿಯಾಗಿದೆ. ಇದ್ರಿಂದ ಚಯಾಪಚಯ ನಿಧಾನವಾಗುತ್ತದೆ.  

ಥೈರಾಯ್ಡ್ (Thyroid) ಗ್ರಂಥಿಯು ದೇಹಕ್ಕೆ ಅಗತ್ಯವಿರುವಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸದಿದ್ದಾಗ ಮತ್ತು ಬಿಡುಗಡೆ ಮಾಡದಿದ್ದಾಗ ಹೈಪೋಥೈರಾಯ್ಡಿಸಮ್ (Hyperthyroidism) ಸಂಭವಿಸುತ್ತದೆ. ಇದು ನಿಮ್ಮ  ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಆರಂಭದಲ್ಲಿ ನಿಮಗೆ ಹೈಪೋಥೈರಾಯ್ಡಿಸಮ್ ನ ಗಮನಾರ್ಹ ಲಕ್ಷಣಗಳು ಕಾಣಿಸುವುದಿಲ್ಲ. ಆದ್ರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದಲ್ಲಿ  ಹೈಪೋಥೈರಾಯ್ಡಿಸಮ್ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ (Cholesterol) ಮತ್ತು ಹೃದಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ.  ಹೈಪೋಥೈರಾಯ್ಡಿಸಮ್ ಎಲ್ಲಾ ವಯಸ್ಸಿನ, ಲಿಂಗ ಮತ್ತು ಜನಾಂಗೀಯ ಜನರ ಮೇಲೆ ಪರಿಣಾಮ ಬೀರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ಜೀವನಶೈಲಿ ಹಾಗೂ ನಾವು ಸೇವನೆ ಮಾಡುವ ಆಹಾರ ಕೂಡ ನಮ್ಮ ಹೈಪೋಥೈರಾಯ್ಡಿಸಮ್ ಮೇಲೆ ಪ್ರಭಾವ ಬೀರುತ್ತದೆ. ಈ ಸಮಸ್ಯೆಯಿರುವವರು ಕೆಲ ಆಹಾರದಿಂದ ದೂರವಿರಬೇಕು. 

Tap to resize

Latest Videos

Healthy Food : ಮನೆಯಲ್ಲೇ ಬೋರ್ನ್ ವಿಟಾ ಮಾಡಬುಹದು, ಹೇಗೆ ಇಲ್ಲಿದೆ ನೋಡಿ

ಹೈಪೋಥೈರಾಯ್ಡಿಸಮ್ ಉಲ್ಬಣಗೊಳ್ಳಬಾರದು ಅಂದ್ರೆ ಈ ಆಹಾರದಿಂದ ದೂರವಿರಿ : 

ಸೋಯಾ (Soya) : ಹೈಪೋ-ಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರೆ  ಸೋಯಾ ಹಾಲು, ಸೋಯಾ ಬೀನ್ಸ್ ನಂತಹ ಸೋಯಾ ಹೊಂದಿರುವ ಆಹಾರ ಉತ್ಪನ್ನಗಳನ್ನು ತಿನ್ನಬಾರದು. ಐಸೊಫ್ಲಾವೊನ್ ಎಂಬ ಸಂಯುಕ್ತವು ಸೋಯಾದಲ್ಲಿ ಕಂಡುಬರುತ್ತದೆ. ಇದು ಹೈಪೋಥೈರಾಯ್ಡ್‌ನಲ್ಲಿ ಹಾನಿಯನ್ನುಂಟುಮಾಡುತ್ತದೆ ಎಂದು ಕೆಲವು ಸಂಶೋಧನೆಗಳಿಂದ ಪತ್ತೆಯಾಗಿದೆ.

ಗೋಯಿಟ್ರೋಜೆನ್‌ ಆಹಾರ : ಕೋಸುಗಡ್ಡೆ, ಹೂಕೋಸು, ಎಲೆಕೋಸು ಮತ್ತು ಪಾಲಕ ಸೇರಿದಂತೆ ಕೆಲ ಆಹಾರದಲ್ಲಿ ಗೋಯಿಟ್ರೋಜೆನ್ ಹೆಚ್ಚಿರುತ್ತದೆ. ಇದನ್ನು ಕ್ರೂಸಿಫೆರಸ್ ತರಕಾರಿ ಎಂದೂ ಕರೆಯುತ್ತಾರೆ. ಇವುಗಳನ್ನು ನೀವು ಸರಿಯಾಗಿ ಬೇಯಿಸಿ ತಿನ್ನಬೇಕಾಗುತ್ತದೆ. ಈ ತರಕಾರಿಗಳು ಆಹಾರದ ಅಯೋಡಿನ್ ಮತ್ತು ಥೈರಾಯ್ಡ್ ಹಾರ್ಮೋನುಗಳೊಂದಿಗೆ ಸ್ಪರ್ಧಿಸುವ ಗ್ಲುಕೋಸಿನೋಲೇಟ್ಸ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇವು ಹೈಪೋಥೈರಾಯ್ಡ್ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಸಂಸ್ಕರಿಸಿದ ಆಹಾರಗಳು (Processed Food) : ನೀವು ಹೈಪೋಥೈರಾಯ್ಡಿಸಮ್ ಹೊಂದಿದ್ದರೆ ಸಂಸ್ಕರಿಸಿದ ಆಹಾರದಿಂದ ದೂರವಿರುವುದು ಒಳ್ಳೆಯದು. ಸಂಸ್ಕರಿಸಿದ ಆಹಾರವು ಹೆಚ್ಚು ಸೋಡಿಯಂ ಅನ್ನು ಹೊಂದಿರುತ್ತದೆ. ಥೈರಾಯ್ಡ್ ಸಮಸ್ಯೆ ಹೊಂದಿರುವವರು ಅಧಿಕ ರಕ್ತದೊತ್ತಡದ ಅಪಾಯವನ್ನು  ಹೊಂದಿರುತ್ತಾರೆ. ಅವರು ಸಂಸ್ಕರಿಸಿದ ಆಹಾರವನ್ನು ಸೇವಿಸಿದ್ರೆ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಮಳೆಗಾಲದ ಸಂಜೆ ಬಿಸಿ ಬಿಸಿ ಚಹಾದ ಜೊತೆ ಈ ಸ್ನ್ಯಾಕ್ಸ್ ತಿನ್ನೋದನ್ನು ಮಿಸ್ ಮಾಡ್ಲೇಬೇಡಿ

ಸಕ್ಕರೆ ಆಹಾರಗಳು (Sugar Products) : ಸಕ್ಕರೆಯು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದ್ರಲ್ಲಿ ಸಂಪೂರ್ಣವಾಗಿ ಯಾವುದೇ ಪೋಷಕಾಂಶ ಇರುವುದಿಲ್ಲ. ಚಾಕೊಲೇಟ್, ಚೀಸ್ ಅಥವಾ ಹೆಚ್ಚಿನ ಸಕ್ಕರೆ ಆಹಾರವನ್ನು ಸೇವನೆ ಮಾಡಬಾರದು. ಸಕ್ಕರೆ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವ ಜನರಿಗೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ತೂಕ ಕೂಡ ಇದ್ರಿಂದ ಏರುತ್ತದೆ.

ಕೆಫೀನ್ ನಿಂದ ದೂರವಿರಿ (Cafeine) : ಹೈಪೋಥೈರಾಯ್ಡಿಸಮ್ ನಿಂದ ಬಳಲುವ ಜನರು ಕೆಫೀನ್ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡಬಾರದು. ಅದ್ರಲ್ಲೂ ಬೆಳಿಗ್ಗೆ ಕೆಫೀನ್ ಸೇವನೆ ಮಾಡಿದ ನಂತ್ರ ಥೈರಾಯ್ಡ್ ಮಾತ್ರೆ ಸೇವನೆ ಮಾಡುವ ತಪ್ಪು ಮಾಡಬಾರದು.

ಆಲ್ಕೋಹಾಲ್ (Alchohol): ಹೈಪೋಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುವ ರೋಗಿಗಳು ಆಲ್ಕೋಹಾಲ್ ಸೇವನೆ ಮಾಡಬಾರದು. ಈ ಆಲ್ಕೋಹಾಲ್, ಥೈರಾಯ್ಡ್ ಹಾರ್ಮೋನ್ ಅನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಲ್ಲೂ ಆಲ್ಕೊಹಾಲ್ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

click me!