Health Tips: ಚರ್ಮದ ಅಲರ್ಜಿ ಸಮಸ್ಯೆಯಿದ್ದರೆ ಈ ಆಹಾರಗಳನ್ನು ಸೇವಿಸಿ

By Suvarna News  |  First Published Jan 24, 2022, 2:58 PM IST

ಚರ್ಮದ ಅಲರ್ಜಿ (Skin Allergy) ಹಲವರಲ್ಲಿ ಕಂಡು ಬರುವ ಸಮಸ್ಯೆ. ಇಷ್ಟವಿದ್ದರೂ ಕೆಲವೊಂದು ಆಹಾರ (Food)ಗಳನ್ನು ತಿನ್ನಲಾಗದ ಪರಿಸ್ಥಿತಿ. ಹೀಗಿದ್ದಾಗ ಯಾವ ಆಹಾರವನ್ನು ಸೇವಿಸಬೇಕೆಂಬ ಗೊಂದಲವಿರುತ್ತದೆ. ತಜ್ಞರ ಸಲಹೆಯ ಪ್ರಕಾರ, ಚರ್ಮದ ಅಲರ್ಜಿ ಸಮಸ್ಯೆಯಿದ್ದವರು ಈ ಆಹಾರಗಳನ್ನು ಯಾವುದೇ ಆತಂಕವಿಲ್ಲದೆ ಸೇವಿಸಬಹುದು.


ಯಾವಾಗಲೂ ಆರೋಗ್ಯ (Health)ವಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಮನುಷ್ಯನ ಆಧುನಿಕ ಜೀವನಶೈಲಿ, ಆಹಾರಪದ್ಧತಿ ಕೆಲವೊಮ್ಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೊರಗಿನಿಂದ ಕಾಣಿಸಿಕೊಳ್ಳುವ ಕಾಯಿಲೆ ಒಂದು ರೀತಿಯಾದರೆ, ದೇಹದ ಆಂತರಿಕ ಸಮಸ್ಯೆಗಳು ಇನ್ನು ಕೆಲವು. ಅದರಲ್ಲೊಂದು ಚರ್ಮದ ಅಲರ್ಜಿ(Skin Allergy). ದೇಹಕ್ಕಾಗದ ತಪ್ಪಾದ ಆಹಾರವನ್ನು ಸೇವಿಸಿದಾಗ ಚರ್ಮವೂ ಪ್ರತಿಕ್ರಿಯಿಸುತ್ತದೆ. ತುರಿಕೆ, ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಅಲರ್ಜಿಯಿರುವವರು ನಿರ್ಧಿಷ್ಟವಾದ ಕೆಲವು ಆಹಾರಗಳನ್ನು ಸೇವಿಸುವುದು ಉತ್ತಮ, ಕೆಲವು ಆಹಾರಗಳನ್ನು ಸೇವಿಸದೇ ಇರುವುದು ಒಳಿತು ಎಂದು ವೈದ್ಯರೇ ಹೇಳುತ್ತಾರೆ. ವೈದ್ಯರು ಶಿಫಾರಸು ಮಾಡಿದಂತೆ ಚರ್ಮದ ಅಲರ್ಜಿಯಿದ್ದರೂ ಸೇವಿಸಬಹುದಾದ 5 ವಿಧದ ಆಹಾರಗಳು ಇಲ್ಲಿವೆ. ಇದು ಚರ್ಮದ ಅಲರ್ಜಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಅಲರ್ಜಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರಿಗೆ ದೇಹಕ್ಕೆ ಆಗದ ಆಹಾರ ಸೇವಿಸುವುದರಿಂದ ಕೈ ಮೇಲೆಲ್ಲಾ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಿಗೆ ದೇಹದಲ್ಲಿ ತುರಿಕೆ ಉಂಟಾಗುತ್ತದೆ. ಮತ್ತೆ ಕೆಲವೊಬ್ಬರಿಗೆ ಕೀವು ಕಾಣಿಸಿಕೊಳ್ಳುವುದೂ ಇದೆ. ವೆಬ್‌ಎಮ್‌ಡಿಯಲ್ಲಿ ಪ್ರಕಟವಾದ ವೈದ್ಯಕೀಯವಾಗಿ ಪರಿಶೀಲಿಸಿದ ಲೇಖನದ ಪ್ರಕಾರ, ಎಲ್ಲಾ ಆಹಾರಗಳು ಅಲರ್ಜಿಯನ್ನು ಗುಣಪಡಿಸುವುದಿಲ್ಲ. ಆದರೆ ವಿಟಮಿನ್‌ಗಳು (Vitamin), ಖನಿಜಗಳು ಮತ್ತು ಇತರ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಉತ್ತಮವಾಗಿವೆ.

Latest Videos

undefined

ಫುಡ್ ಅಲರ್ಜಿ ತಡೆಯಲು ಇಲ್ಲಿದೆ ಮನೆ ಮದ್ದು

ಮುಖದಲ್ಲಿ ಮೂಡುವ ಸಣ್ಣ ಗುಳ್ಳೆಗಳಾಗಿರಲಿ, ಅಥವಾ ಹೆಚ್ಚಾಗಿ ಕಾಣಿಸಿಕೊಳ್ಳುವ ಮೊಡವೆಯೇ ಆಗಿರಲಿ ಇದೆಲ್ಲವೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಿಂದಲೇ ಆಗುತ್ತದೆ ಎನ್ನುತ್ತಾರೆ ತಜ್ಞರು. ಚರ್ಮವು ಹೊರಗಿನ ಪ್ರಪಂಚದ ಧೂಳು, ನೀರು, ಬೆಂಕಿಯ ಇತರ ಯಾವುದರಿಂದಲೂ ನಮ್ಮನ್ನು ರಕ್ಷಿಸಿಕೊಳ್ಳುವ ಮೊದಲ ಪದರವಾಗಿದೆ. ಸೌಂದರ್ಯವೆಂಬುದು ಹೊರಗಿನ ಚರ್ಮ ಎಂಬುದೇನೋ ನಿಜ. ಆದರೆ ಚರ್ಮದ ಒಳಗಿನ ಪ್ರಕ್ರಿಯೆಯು ದೇಹದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಚರ್ಮವನ್ನು ನಿರ್ವಹಿಸುವಲ್ಲಿ ಆಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. 

ಪ್ರೋಬಯಾಟಿಕ್‌ಗಳು: ಮೊಸರು (Curd), ಉರಿಯೂತದ ಮತ್ತು ಅಲರ್ಜಿ ವಿರೋಧಿ ಪರಿಣಾಮಗಳನ್ನು ಹೊಂದಿವೆ. ಅಲರ್ಜಿಕ್ ಎಸ್ಜಿಮಾವನ್ನು ನಿರ್ವಹಿಸಲು ಇದು ಚೆನ್ನಾಗಿ ಕೆಲಸ ಮಾಡುತ್ತದೆ.

ವಿಟಮಿನ್ ಸಿ: ಕಿತ್ತಳೆ, ಸ್ಟ್ರಾಬೆರಿ, ಸೇಬುಗಳು ಮತ್ತು ಕಲ್ಲಂಗಡಿಗಳಂತಹ ವಿಟಮಿನ್ ಸಿ ಹೊಂದಿರುವ ಹಣ್ಣುಗಳು ಚರ್ಮದ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಉರಿಯೂತದ ಅಲರ್ಜಿಯ ಪ್ರತಿಕ್ರಿಯೆಯನ್ನು ಪ್ರತಿರೋಧಿಸುತ್ತವೆ. ಚರ್ಮದ ತುರಿಕೆಯೂ ವಿಟಮಿನ್ ಸಿ ಅಂಶ ದೇಹಕ್ಕೆ ಸೇರುವುದರಿಂದ ಇಲ್ಲವಾಗುತ್ತದೆ.

ಕ್ವೆರ್ಸೆಟಿನ್: ಇದು ಸೇಬು, ಈರುಳ್ಳಿ, ಚಹಾದಂತಹ ಆಹಾರಗಳಲ್ಲಿ ಇರುವ ಬಯೋಫ್ಲಾವೊನೈಡ್ ಅಂಶವಾಗಿದೆ. ಇದು ದದ್ದುಗಳಂತಹ ಚರ್ಮದ ಅಲರ್ಜಿಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

ಮೆಗ್ನೀಸಿಯಮ್: ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜಗಳು ಮತ್ತು ಬಾಳೆಹಣ್ಣುಗಳು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವ ಆಹಾರಗಳಿವೆ. ಇವು ಅಲರ್ಜಿಯನ್ನು ನಿವಾರಿಸಲು ಅತ್ಯುತ್ತಮ. ಯಾಕೆಂದರೆ, ಮೆಗ್ನೀಸಿಯಮ್ ಆಂಟಿಹಿಸ್ಟಮೈನ್ ಆಗಿದೆ. ಇದು ಅಲರ್ಜಿಯನ್ನು ಶಾಂತಗೊಳಿಸುವ ಗುಣವನ್ನು ಹೊಂದಿದೆ.

ಮಕ್ಕಳ ಅಲರ್ಜಿಗೆ ಹೀಗೊಂದು ಕಾರಣ, ಎಚ್ಚರ!

ವಿಟಮಿನ್ ಇ: ಬಾದಾಮಿ (Almond), ಸೂರ್ಯಕಾಂತಿ ಬೀಜಗಳು ಮತ್ತು ಕಡಲೆಕಾಯಿಗಳು ಗಾಮಾ ಟೋಕೋಫೆರಾಲ್ ಅನ್ನು ಒಳಗೊಂಡಿರುತ್ತವೆ, ಇದು ವಿಟಮಿನ್ ಇಯ ಒಂದು ರೂಪವಾಗಿದೆ. ಇದು ಅಲರ್ಜಿ-ಸಂಬಂಧಿತ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಡಾ.ಖುಷ್ಬೂ ಠಾಕ್ಕರ್ ಗರೋಡಿಯಾ, ಡಾ.ವಂಶಿಕಾ ಗುಪ್ತಾ ಅದುಕಿಯಾ ಮತ್ತು ರಾಧಿಕಾ ಅಯ್ಯರ್ ಎಂಬವರು ಈ ಎಲ್ಲಾ ಆಹಾರಗಳು ಆರೋಗ್ಯಕರವಾಗಿದೆ. ಎಲ್ಲಾ ಪರಿಸ್ಥಿತಿಗಳನ್ನು, ವಿಶೇಷವಾಗಿ ಅಲರ್ಜಿಗಳನ್ನು ನಿಯಂತ್ರಿಸಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ. ಉತ್ತಮ ಆಹಾರಪದ್ಧತಿಗಾಗಿ ಹೆಚ್ಚೆಚ್ಚು ಹಣ್ಣು, ತರಕಾರಿಗಳನ್ನು ಸೇವಿಸುವಂತೆ ಸಲಹೆ ನೀಡಿದ್ದಾರೆ. ಆದರೆ ಈ ಆಹಾರಗಳಲ್ಲಿ ಯಾವುದೂ ತೀವ್ರವಾದ ಚರ್ಮದ ಅಲರ್ಜಿಯನ್ನು ಹೊಂದಿರುವ ರೋಗಿಗಳಿಗೆ ಫಲಪ್ರದವಾಗುವುದಿಲ್ಲ. ಔಷಧಿಗಳ ಬದಲಿಗೆ ಇವುಗಳನ್ನು ಬಳಸಲು ಸಾಧ್ಯವಾಗದು ಎಂದು ಮಾಹಿತಿ ನೀಡಿದ್ದಾರೆ. ಒಟ್ನಲ್ಲಿ ಚರ್ಮಚ ಅಲರ್ಜಿಯಿದ್ದವರ ಆರೋಗ್ಯ ಉತ್ತಮಗೊಳ್ಳಲು ಈ ಆಹಾರಗಳ ಸೇವನೆ ಸಹಕಾರಿಯಾಗಿದೆ.

click me!