ಅಜ್ಜ-ಅಜ್ಜಿ ಮನೆ: ಜಸ್ಟ್‌ 50 ರೂ.ಗೆ ಅನ್‌ಲಿಮಿಟೆಡ್‌ ಮನೆಯೂಟ ನೀಡ್ತಾರೆ ವೃದ್ಧ ದಂಪತಿ

By Suvarna News  |  First Published Apr 25, 2022, 6:09 PM IST

ದುಬಾರಿ ದುನಿಯಾ ಇದು. ಎಲ್ಲದಕ್ಕೂ ಬೆಲೆಯೇರಿಕೆಯಾಗಿದೆ. ಒಂದ್ ಹೊತ್ತು ಊಟ (Food) ಮಾಡೋಕೆ ಹೋಟೆಲ್‌ಗೆ ಹೋಗ್ತೀವಿ ಅಂದ್ರೂ ಕೈ ತುಂಬಾ ಕಾಸು ಇರ್ಲೇಬೇಕು. ಆದ್ರೆ ಇಲ್ಲಿ ಮಾತ್ರ ಜಸ್ಟ್‌ 50 ರೂ. ಕೊಟ್ರೆ ಸಾಕು ಪ್ರೀತಿ (Love)ಯಿಂದ ಮನೆಯೂಟ ಬಡಿಸ್ತಾರೆ ವೃದ್ಧ ದಂಪತಿ. ಅದೂ ಅನ್‌ಲಿಮಿಟೆಡ್‌ ವೆರೈಟಿ ಫುಡ್. ಇದೆಲ್ಲಾ ಇರೋದು ಎಲ್ಲಿ ?


ಇವತ್ತಿನ ದಿನಗಳಲ್ಲಿ ರೆಸ್ಟೋರೆಂಟ್‌ (Restaurant)ನಲ್ಲಿ ಪೂರ್ಣ ಊಟಕ್ಕೆ ಎಷ್ಟು ವೆಚ್ಚವಾಗುತ್ತದೆ ? ನೀವು ಮೆನುವಿನಿಂದ ಕೇವಲ ಒಂದು ಅಥವಾ ಎರಡು ಐಟಂಗಳನ್ನು ಆರ್ಡರ್ ಮಾಡಲು ನಿರ್ಧರಿಸಿದ್ದರೂ ಸಹ, ನೀವು 200 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನೀವು ರಸ್ತೆ ಬದಿಯ ಚಿಕ್ಕ ಅಂಗಡಿ ಅಥವಾ ಸಣ್ಣ ಪುಟ್ಟ ಡಾಬಾದಲ್ಲಿ ಊಟ (Food) ಮಾಡಿದರೆ ಮಾತ್ರ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಆದರೆ ಇವತ್ತಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ, ರುಚಿಕರವಾಗಿ ಊಟ ಮಾಡೋಕೆ ಸಾಧ್ಯಾನ ? ಅಸಾಧ್ಯ ಅಂತ ನೀವು ಹೇಳಿದ್ರೆ ಅದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ ಉಡುಪಿಯ ವೃದ್ಧ ದಂಪತಿ (Elderly Couple)..

ಉಡುಪಿಯ ಮಣಿಪಾಲದ ವೃದ್ಧ ದಂಪತಿಗಳು ಕೇವಲ 50 ರೂ.ಗೆ ಅನಿಯಮಿತ ಮನೆಯೂಟವನ್ನು ಮಾರಾಟ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಇಳಿವಯಸ್ಸಿನ ಈ ದಂಪತಿ ತಮ್ಮ ಗ್ರಾಹಕರಿಗೆ ಬಾಳೆ ಎಲೆಗಳ ಮೇಲೆ ಸಾಂಪ್ರದಾಯಿಕ ಆಹಾರವನ್ನು ನೀಡುತ್ತಾರೆ. ಪ್ರೀತಿಯಿಂದಲೇ ವಿವಿಧ ಭಕ್ಷ್ಯಗಳನ್ನು ಬಡಿಸಿ ಆತಿಥ್ಯ ಮಾಡುತ್ತಾರೆ. ದಂಪತಿಗಳು ತಮ್ಮ ರುಚಿಕರವಾದ ರಸಂ, ದಾಲ್, ಫ್ರೈಸ್, ಉಪ್ಪಿನಕಾಯಿ, ಸಲಾಡ್, ಮೊಸರು ಮತ್ತು ಇತರ ವಸ್ತುಗಳನ್ನು ಕೇವಲ 50 ರೂಗಳಿಗೆ ನೀಡುತ್ತಿರುವುದನ್ನು ಜನರಿಗೆ ವಿತರಿಸುತ್ತಿದ್ದಾರೆ. ಇದು ಅನ್‌ಲಿಮಿಟೆಸ್‌ ಸಹ ಆಗಿದೆ. ಜನರು ಇಲ್ಲಿಗೆ ಬಂದು ಖುಷಿಯಿಂದ ಹೊಟ್ಟೆ ತುಂಬಾ ಊಟ ಮಾಡಿಕೊಂಡು ಹೋಗುತ್ತಾರೆ.  

Tap to resize

Latest Videos

ಬೇಸಿಗೆಯಲ್ಲಿ ಇಂಥಾ ಮಸಾಲೆಗಳನ್ನು ಸೇವಿಸಿದ್ರೆ ಸೆಕೆ ಇನ್ನಷ್ಟು ಹೆಚ್ಚಾಗುತ್ತೆ

ಫುಡ್ ವ್ಲಾಗರ್ ರಕ್ಷಿತ್ ರೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ವೃದ್ಧ ದಂಪತಿಗಳ ಮಹತ್ಕಾರ್ಯ ಎಲ್ಲರ ಗಮನ ಸೆಳೆದಿದೆ. ಹೋಟೆಲ್ ಗಣೇಶ್ ಪ್ರಸಾದ್ ಎಂಬ ಹೆಸರಿನ ಈ ಭೋಜನಾಲಯವನ್ನು 1951ರಿಂದ ದಂಪತಿಗಳು ನಡೆಸುತ್ತಿದ್ದಾರೆ. ಆದರೆ ಸಾಮಾನ್ಯ ಗ್ರಾಹಕರು ಇದನ್ನು ಪ್ರೀತಿಯಿಂದ 'ಅಜ್ಜ ಅಜ್ಜಿ ಮನೆ' ಎಂದು ಕರೆಯುತ್ತಾರೆ.

 
 
 
 
 
 
 
 
 
 
 
 
 
 
 

A post shared by Rakshith Rai (@rakshithraiy)

'ಈ ಸ್ಥಳವು ನನಗೆ ಒಂದು ಭಾವನಾತ್ಮಕ ಅನುಭವವನ್ನು ನೀಡಿತು. ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಹೋಮ್ಲಿ ಆಹಾರ ಇಲ್ಲಿ ಲಭ್ಯವಿದೆ. ಅದಕ್ಕಿಂತ ಹೆಚ್ಚಾಗಿ ಈ ವೃದ್ಧ ದಂಪತಿಗಳಿಂದ ನೀವು ಪಡೆಯುವ ವಾತ್ಸಲ್ಯವು ನಂಬಲಾಗದದು. ಅವರು ಖಂಡಿತವಾಗಿಯೂ ನಮ್ಮಿಂದ ಹೆಚ್ಚಿನ ಪ್ರೀತಿಗೆ ಅರ್ಹರು. ಅಜ್ಜ ಅಜ್ಜಿ ಮನೆ ಕೇವಲ ಒಂದು ತಿನಿಸು ಮಾತ್ರವಲ್ಲ. ಅದು ಭಾವನಾತ್ಮಕ ಬಂಧವಾಗಿದೆ' ಎಂದು ಎಂದು ಫುಡ್ ಬ್ಲಾಗರ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

ಮನೆ ಫುಡ್‌ ಬೇಡ, ಹೊಟೇಲ್‌ನಲ್ಲಿ ತಿನ್ನೋದೆ ಇಷ್ಟಾನ, ಆರೋಗ್ಯಕರವಾಗಿ ತಿನ್ನೋದು ಹೇಗೆ ?

ಸಂತೋಷಕರ ವೀಡಿಯೊವನ್ನು ಈಗ 1.8 ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಬಳಕೆದಾರರು ಇಷ್ಟಪಟ್ಟಿದ್ದಾರೆ. ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಜೀವನವನ್ನು ಕಟ್ಟಿಕೊಂಡಿರುವುದು ನೋಡಲು ಖುಷಿಯಾಗುತ್ತದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ವಯಸ್ಸಾದ ದಂಪತಿಗಳ ರೆಸ್ಟೋರೆಂಟ್‌ಗೆ ಭೇಟಿ ನೀಡುವುದು ಭಾವನಾತ್ಮಕ ಅನುಭವವಾಗಿದೆ ಏಕೆಂದರೆ ಅಜ್ಜ ಮತ್ತು ಅಜ್ಜಿಯಿಂದ ಪ್ರತಿಯೊಬ್ಬರೂ ಪಡೆಯುವ ಪ್ರೀತಿ ಬೆಲೆ ಕಟ್ಟಲಾಗದ್ದು ಎಂದು ಇನ್ನೊಬ್ಬರು ಹೇಳಿದ್ದಾರೆ.  ಇಂಥಾ ಇಳಿವಯಸ್ಸಿನಲ್ಲಿ ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಇದನ್ನು ನೋಡಲು ಬೇಸರವಾಗುತ್ತಿದೆ ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ. 

click me!