ಭಾರತದ ಪ್ರತಿಷ್ಠಿತ ದಕ್ಷಿಣ ಭಾರತೀಯ ಹೊಟೇಲ್ ದೋಸೆಯಲ್ಲಿತ್ತು ಎಂಟು ಜಿರಳೆ!

By Suvarna NewsFirst Published Mar 16, 2024, 2:55 PM IST
Highlights

ರೆಸ್ಟೋರೆಂಟ್ ಗೆ ಹೋದಾಗ ದೊಡ್ಡ ಕಣ್ಣು ಬಿಟ್ಟು ಆಹಾರವನ್ನೊಮ್ಮೆ ಚೆಕ್ ಮಾಡ್ಬೇಕು. ಯಾಕೆಂದರೆ ಆಹಾರದಲ್ಲಿ ಬರೀ ತರಕಾರಿ, ಮಸಾಲೆ ಮಾತ್ರವಲ್ಲ ಜಿರಳೆ, ಇರುವೆ, ಹಲ್ಲಿ ಸಿಗುವ ಸಾಧ್ಯತೆ ಇದೆ. ನವದೆಹಲಿ ಹೊಟೇಲ್ ಒಂದು ಈ ವಿಷ್ಯದಲ್ಲಿ ಸುದ್ದಿಗೆ ಬಂದಿದೆ.
 

ಆಹಾರ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಮನೆಯಲ್ಲಿ ಮಾಡಿದ ಆಹಾರ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾನೆ ಇರ್ತಾರೆ. ಆದ್ರೆ ಹೊಟೇಲ್, ರೆಸ್ಟೋರೆಂಟ್, ಬೀದಿ ಬದಿಯಲ್ಲಿ ಆಹಾರ ತಿನ್ನುವುದು ಎಲ್ಲರಿಗೂ ಇಷ್ಟು. ವಾರದಲ್ಲಿ ಒಮ್ಮೆಯಾದ್ರೂ ಹೊಟೇಲ್ ಗೆ ಹೋಗಿ ಆಹಾರ ಸೇವನೆ ಮಾಡುವವರಿದ್ದಾರೆ. ಈ ಹೊಟೇಲ್, ರೆಸ್ಟೋರೆಂಟ್ ಆಹಾರ ಮನೆಯಲ್ಲಿ ಮಾಡಿದಷ್ಟು ಸ್ವಚ್ಛವಾಗಿರಲು ಸಾಧ್ಯವೇ ಇಲ್ಲ. ಆಗಾಗ ಆಹಾರದಲ್ಲಿ ಹುಳ, ಕೊಳಕು ಸಿಕ್ಕಿರೋ ಸುದ್ದಿಗಳು ಬರ್ತಿರುತ್ತವೆ. ಈಗ ಇದೇ ರೀತಿಯ ಮತ್ತೊಂದು ಸುದ್ದಿ ಹೊರಬಂದಿದೆ.

ಆಹಾರ (Food) ದಲ್ಲಿ ಇಂದು ಕೂದಲು, ಇರುವೆ ಕಂಡ್ರೂ ವಾಕರಿಗೆ ಬರುತ್ತೆ. ಅಡುಗೆ ಮಾಡುವ ಸ್ಥಳದಲ್ಲಿ ಜಿರಳೆ (cockroach) ಕಂಡ್ರೆ ಕಥೆ ಮುಗಿದಂತೆ. ಆದ್ರೆ ಈ ಮಹಿಳೆಗೆ ದೋಸೆಯಲ್ಲಿ ಒಂದಲ್ಲ ಎರಡಲ್ಲ ಎಂಟು ಜಿರಳೆ ಸಿಕ್ಕಿದೆ.  ಘಟನೆ ನವದೆಹಲಿ (New Delhi ) ಯ ಕನ್ನಾಟ್ ಪ್ಲೇಸ್‌ನಲ್ಲಿರುವ ಜನಪ್ರಿಯ ಮದ್ರಾಸ್ ಕಾಫಿ ಹೌಸ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬರು   ದೋಸೆ ಆರ್ಡರ್ ಮಾಡಿದ್ದರು. ಅದ್ರಲ್ಲಿ ಎಂಟು ಜಿರಳೆಯನ್ನು ಅವರು ನೋಡಿದ್ದಾರೆ.  

ಈ ತರಕಾರಿ, ಹಣ್ಣು ಫ್ರೆಶ್ ಆಗಿರಲು ಫ್ರಿಜ್‌ನ ಅಗತ್ಯವೇ ಇಲ್ಲ! ಬೇಸಿಗೆಯಲ್ಲೂ ತಂದು ತಿನ್ನಿ

ಇಶಾನಿ ಹೆಸರಿನ ಮಹಿಳೆ ಆರ್ಡರ್ ಮಾಡಿದ್ದ ದೋಸೆಯಲ್ಲಿ ಈ ಜಿರಳೆ ಸಿಕ್ಕಿದೆ. ನಾನು ಪ್ಲೇನ್ ದೋಸೆ ಆರ್ಡರ್ ಮಾಡಿದ್ದೆ. ಅದರ ಮೇಲೆ ವಿಚಿತ್ರವಾದ ಕಪ್ಪು ಕಲೆಗಳನ್ನು ಗಮನಿಸಿದೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಜಿರಳೆ ಎಂದು ತಿಳಿದುಬಂತು ಎಂದು ಇಶಾನಿ ಹೇಳಿದ್ದಾಳೆ.  ಇಶಾನಿ, ಜಿರಳೆ ಮುತ್ತಿಕೊಂಡಿರುವ ದೋಸೆಯ ವೀಡಿಯೊವನ್ನು ರೆಕಾರ್ಡ್ ಮಾಡಲು ತನ್ನ ಸ್ನೇಹಿತರಿಗೆ ಕೇಳಿದ್ದಾರೆ. ಆದರೆ  ಇಡೀ ವಿಡಿಯೋ ರೆಕಾರ್ಡ್ ಆಗುವ ಮುನ್ನವೇ ಸಿಬ್ಬಂದಿಯೊಬ್ಬರು ಪ್ಲೇಟ್ ತೆಗೆದುಕೊಂಡು ಹೋಗಿದ್ದಾರೆ ಎಂದು ಇಶಾನಿ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಇಶಾನಿ ಪೊಲೀಸರಿಗೆ ಕರೆ ಮಾಡಿ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ

ನಿನ್ನೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತ ಕನ್ನಾಟ್ ಪ್ಲೇಸ್‌ನಲ್ಲಿರುವ ಮದ್ರಾಸ್‌ಕಾಫಿಹೌಸ್‌ನಲ್ಲಿದ್ದೆವು. ನಾವು ಎರಡು ದೋಸೆಗಳನ್ನು ಆರ್ಡರ್ ಮಾಡಿದೆವು. ದೋಸೆಯ ಕೆಲ ತುತ್ತುಗಳನ್ನು ನಾವು ಸೇವನೆ ಮಾಡಿದ್ದೆವು. ನಂತ್ರ ನಮಗೆ ಕಪ್ಪು ಕಲೆ ಕಾಣಿಸಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಅದು ಜಿರಲೆ ಎಂಬುದು ಗೊತ್ತಾಗಿದೆ. ಒಂದು ದೋಸೆಯಲ್ಲಿ ಎಂಟು ಜಿರಳೆಗಳು ಕಾಣಿಸಿಕೊಂಡಿವೆ. ನನಗೆ ವಾಕರಿಕೆ ಬಂದಂತಾಯ್ತು. ನಾನು ಶಾಕ್ ಗೆ ಒಳಗಾದೆ ಎಂದು ಇಶಾನಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಮಾರ್ಚ್ 7 ರಂದು  ನಡೆದಿದೆ. ರೆಸ್ಟೊರೆಂಟ್ ಇಶಾನಿಗೆ ಪರಿಹಾರ ನೀಡುವಂತೆ ಆಫರ್ ನೀಡಿತ್ತು. ಅಲ್ಲದೆ ವಿಡಿಯೋ ಮಾಡಬಾರದೆಂದು ಮನವಿ ಮಾಡಿತ್ತು. ಆದ್ರೆ ಇಶಾನಿ ಇದಕ್ಕೆ ಒಪ್ಪಿರಲಿಲ್ಲ.

ಷೇರು ಮಾರ್ಕೆಟಿನಂತೆ ಇಲ್ಲಿ ಹಾಲಿನ ಬೆಲೆಯಲ್ಲಾಗುತ್ತೆ ಏರಿಳಿತ! ಶ್ರೀ ಸಾಮಾನ್ಯನಿಗೆ ಗೊತ್ತೇ ಆಗೋಲ್ಲ

ಇದು ಅತ್ಯಂತ ಪ್ರಸಿದ್ಧ ಹೊಟೇಲ್. ಈ ಹೊಟೇಲ್ ಗೆ ಪ್ರತಿ ಗಂಟೆಗೆ ಮೂವತ್ತಕ್ಕಿಂತ ಹೆಚ್ಚು ಗ್ರಾಹಕರು ಬರ್ತಾರೆ. ಈ ಸಮಯದಲ್ಲಿ ಹೊಟೇಲ್ ಹೀಗೆ ನಿರ್ಲಕ್ಷ್ಯ ತೋರಲು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ ಎಂದು ಇಶಾನಿ ಬರೆದಿದ್ದಾರೆ. ಅಡುಗೆ ಮನೆ ನನಗೆ ಸರಿಯಾಗಿ ಕಾಣಿಸಲಿಲ್ಲ. ಆದ್ರೆ ಅಡುಗೆ ಮನೆಯಿಂದ ದುರ್ವಾಸನೆ ಬೀರುತ್ತಿತ್ತು. ಅಡುಗೆ ಮನೆಯ ಮೇಲೆ ಸರಿಯಾದ ಮೇಲ್ಛಾವಣಿ ಕೂಡ ಇಲ್ಲ. ಇವೆಲ್ಲವನ್ನೂ ನೋಡಿ ನನಗೆ ಅಸಹ್ಯವಾಯಿತು. ನನಗೆ ಆಹಾರದ ಸುರಕ್ಷತೆ (Food Safety) ಹಾಗೂ ನನ್ನ ಸುರಕ್ಷತೆ ಎರಡೂ ಮುಖ್ಯ ಎಂದು ಇಶಾನಿ ಹೇಳಿದ್ದಾರೆ.  ಕೆಲವು ಗಂಟೆಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಗಮನಾರ್ಹ ಗಮನ ಸೆಳೆದಿದೆ.  ಮೂರು ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜನರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Ishani (@ishanigram)

click me!