Street Food: ದೆಹಲಿಯ ವಡಾ ಪಾವ್ ಹುಡುಗಿ; ಯಾರೀಕೆ ಚಂದ್ರಿಕಾ ದೀಕ್ಷಿತ್?

By Sumana Lakshmeesha  |  First Published Mar 13, 2024, 5:17 PM IST

ದೆಹಲಿಯ ವಡಾ ಪಾವ್ ಹುಡುಗಿ ಎಂದೇ ಖ್ಯಾತಿ ಪಡೆದಿರುವ ಚಂದ್ರಿಕಾ ಗೆರಾ ದೀಕ್ಷಿತ್ ಅವರ ಸ್ಟಾಲ್ ಅನ್ನು ತೆರವುಗೊಳಿಸಲು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮುಂದಾಗಿದೆ. ಅಷ್ಟಕ್ಕೂ ಇವರ್ಯಾರು? ಏನೆಲ್ಲ ಪರಿಶ್ರಮದಿಂದ ಈ ಖ್ಯಾತಿಗೆ ಪಾತ್ರರಾಗಿದ್ದಾರೆ ಗೊತ್ತೇ?
 


ದೆಹಲಿಯ ಪೀತಂಪುರ ವಲಯದ ಸೈನಿಕ ವಿಹಾರದಲ್ಲಿ ವಡಾ ಪಾವ್ ಹುಡುಗಿಯೊಬ್ಬರು ಭಾರೀ ಫೇಮಸ್ ಆಗಿದ್ದಾರೆ. ಈಕೆಯ ವಡಾ ಪಾವ್ ತಿನ್ನಲು ದೂರದಿಂದಲೂ ಜನರ ಬರುತ್ತಾರೆ. ದೆಹಲಿಯ ವಡಾ ಪಾವ್ ಹುಡುಗಿ ಎಂದೇ ಖ್ಯಾತಿ ಹೊಂದಿರುವ ಬೀದಿ ಆಹಾರ ಮಾರಾಟ ಮಾಡುವಾಕೆ ಚಂದ್ರಿಕಾ ಗೆರಾ ದೀಕ್ಷಿತ್. ಇತ್ತೀಚೆಗೆ ಇವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ದೆಹಲಿ ಪೊಲೀಸ್ ಮತ್ತು ಮುನ್ಸಿಪಲ್ ಕಾರ್ಪೋರೇಷನ್ ಜತೆಗಿನ ವೈಮನಸ್ಯದಿಂದಾಗಿ ಆಕೆಯ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈಕೆಯ ವಡಾ ಪಾವ್ ಸ್ಟಾಲ್ ಅನ್ನು ತೆರವುಗೊಳಿಸಬೇಕೆಂದು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಒತ್ತಡ ಹಾಕುತ್ತಿದೆ. ಇದು ಈಕೆಯ ದುಃಖಕ್ಕೆ ಕಾರಣವಾಗಿದೆ. 

ಇಂದೋರ್ (Indore) ಮೂಲದ ಚಂದ್ರಿಕಾ ದೀಕ್ಷಿತ್ (Chandrika Dixit) ತಮ್ಮ ಹೋರಾಟವನ್ನು (Struggle) ವಿಸ್ತಾರವಾಗಿ ಹೇಳಿಕೊಂಡಿದ್ದಾರೆ. ತಮ್ಮ ಸಣ್ಣ ಉದ್ಯಮವನ್ನು ಮುಚ್ಚಿಸಲು ಮುಂದಾಗಿರುವ ದೆಹಲಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ತಳ್ಳುಗಾಡಿಯಲ್ಲಿ (Pushcart) ವಡಾ ಪಾವ್ (Vada Pav) ಮಾರುವ ಈಕೆಯ ಶಾಪ್ ಹೆಸರು “ಮುಂಬೈಕಾ ಫೇಮಸ್ ವಡಾ ಪಾವ್’ ಎಂದಾಗಿದೆ. ಮುಂಬೈನ ಅಸಲಿ ರುಚಿಯ ವಡಾ ಪಾವ್ ಅನ್ನು ದೆಹಲಿಯಲ್ಲಿ ಮಾರುತ್ತೇನೆ ಎನ್ನುವುದು ಈಕೆಯ ನಂಬಿಕೆಯಾಗಿದ್ದು, ತಮ್ಮದು  “ಅಥೆಂಟಿಕ್ ವಡಾ ಪಾವ್’ ಎಂದೂ ಹೇಳುತ್ತಾರೆ. ಕೇಶವ ಮಹಾವಿದ್ಯಾಲಯದ ಎದುರಿನಲ್ಲಿ ಈಕೆಯ ತಳ್ಳುಗಾಡಿ ಇರುತ್ತದೆ. ದೆಹಲಿ ಮುನ್ಸಿಪಲ್ ಆಡಳಿತದ ಕ್ರಮದ ವಿರುದ್ಧ ಈಕೆಯನ್ನು ಬೆಂಬಲಿಸಲು ಹಲವರು ಆಗಮಿಸಿದ್ದರು ಎನ್ನುವುದು ವಿಶೇಷ. 

ರೆಸ್ಟೋರೆಂಟ್ ಫ್ಯಾನ್ಸಿ ಆಹಾರ ತಿನ್ನೋ ಮೊದ್ಲು ಅಪಾಯದ ಬಗ್ಗೆ ಎಚ್ಚರ!

Tap to resize

Latest Videos

undefined

ಧೈರ್ಯ, ಉತ್ಸಾಹದ ಚಂದ್ರಿಕಾ
ಜೀವನದಲ್ಲಿ ದಟ್ಟವಾಗಿ ಕವಿದ ನೋವಿನಲ್ಲೂ, ಕಷ್ಟದ ದಿನಗಳಲ್ಲೂ ಚಂದ್ರಿಕಾ ದೀಕ್ಷಿತ್ ಸ್ಥಿರವಾಗಿ, ಧೈರ್ಯದಿಂದ (Courage) ನಿಂತಿದ್ದಾರೆ. ಈಕೆಯ ಪತಿ ಯಶ್ ಗೆರಾ ಹಾಗೂ ಮಗುವಿದೆ. ತಮ್ಮ ಮೂಲಸ್ಥಳದಿಂದ ದೆಹಲಿಗೆ (Delhi) ಬಂದು ನೆಲೆನಿಂತಿದ್ದಾರೆ. ಚಂದ್ರಿಕಾ ಗೆರಾ ಅವರ ಧೈರ್ಯ ಹಾಗೂ ಉತ್ಸಾಹದ ಕಾರಣದಿಂದಲೇ ಅವರ ವಡಾ ಪಾವ್ ಶಾಪ್ ಇಷ್ಟು ಖ್ಯಾತಿ ಪಡೆದಿದೆ ಹಾಗೂ ಉದ್ಯಮವನ್ನು ನೆಲೆ ನಿಲ್ಲಿಸಲು ಚಂದ್ರಿಕಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಹೋರಾಟ ಎನ್ನುವುದು ತಮಗೆ ಕರಗತವಾಗಿದೆ ಎನ್ನುವ ಚಂದ್ರಿಕಾ, ಚಿಕ್ಕ ವಯಸ್ಸಿನಲ್ಲೇ ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ. ಅನಾಥೆಯಾಗಿ ಬೆಳೆದು ದೆಹಲಿಗೆ ಆಮಿಸಿದರು. ಆರಂಭದಲ್ಲಿ ಹಲ್ದಿರಾಮ್ ಸಂಸ್ಥೆಯ ಉದ್ಯೋಗಿಯಾಗಿ ಕೆಲಸ ಶುರು ಮಾಡಿದರು. 

ತಿಂಡಿ ತಿಂದ ಕೂಡ್ಲೇ ಟಾಯ್ಲೆಟ್ ಬರುತ್ತಾ?... ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಇಲ್ಲ…

ಸ್ವಂತ ಸ್ಟಾಲ್ ಆರಂಭ
ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ, ಪುನಃ ಅವರ ಜೀವನದಲ್ಲಿ ಸಮಸ್ಯೆಗಳು ಆರಂಭವಾದವು. ಪುಟ್ಟ ಮಗನಿಗೆ ಡೆಂಗ್ಯೂ ಕಾಡಿತು. ಉದ್ಯೋಗದಿಂದ (Job) ದೂರವಾಗಬೇಕಾಯಿತು. ಸ್ವಂತದ್ದೇನಾದರೂ ಆರಂಭಿಸುವ ಆಲೋಚನೆ ಶುರುವಾಗಿದ್ದೇ ಆಗ. ಹೀಗೆ, ಮುಂಬೈ ಕಾ ಫೇಮಸ್ ವಡಾ ಪಾವ್ ಆರಂಭವಾಯಿತು. ತಮ್ಮ ಸ್ಟಾಲ್ (Stall) ಅನ್ನು ಕಡುಕಷ್ಟದಲ್ಲಿ ಆರಂಭಿಸಿದ್ದ ಚಂದ್ರಿಕಾ ಆರಂಭದಲ್ಲಿ ಕೇವಲ ಪಾವ್ ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು.

ಪರಿಶ್ರಮದಿಂದ ಹೋರಾಟ ನಡೆಸಿ ಈಗ ಖ್ಯಾತಿ ಪಡೆದುಕೊಳ್ಳುತ್ತಿರುವ ಸಮಯದಲ್ಲಿ ದೆಹಲಿ ಆಡಳಿತ ಅವರ ಸ್ಟಾಲ್ ತೆರವುಗೊಳಿಸಲು ಮುಂದಾಗಿದೆ. ಹೀಗಿದ್ದರೂ ಅವರ ಕನಸು (Dream) ಅಂತ್ಯಗೊಂಡಿಲ್ಲ. ತಮ್ಮದೇ ಸ್ವಂತ ಡಾಭಾ ಅಥವಾ ಫೈವ್ ಸ್ಟಾರ್ ಹೋಟೆಲ್ ಅನ್ನು ಆರಂಭಿಸುವ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ “ಹಣಕ್ಕಾಗಿ (Money) ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನವರು ಪೀಡಿಸುತ್ತಾರೆ’ ಎಂದು ಈಕೆ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

 

click me!