ಬೇಕಾಬಿಟ್ಟಿ ಸ್ನ್ಯಾಕ್ಸ್‌ ತಿನ್ತೀರಾ, ಕೆಟ್ಟ ಅಭ್ಯಾಸ ಬಿಡೋಕೆ ಇಲ್ಲಿದೆ ಟಿಪ್ಸ್‌

By Suvarna News  |  First Published Jul 15, 2022, 1:00 PM IST

ಆರೋಗ್ಯವಾಗಿರಬೇಕು ಅಂತ ಎಲ್ರೂ ಬಯಸ್ತಾರೆ. ಆದ್ರೆ ಹೆಲ್ದೀ ಫುಡ್ ತಿನ್ನೋಕೆ ಮಾತ್ರ ಹಿಂಜರಿಕೆ. ಎಷ್ಟು ಹೊತ್ತಿಗೂ ಚಿಪ್ಸ್, ವಡೆ ಅಂತ ಸ್ನ್ಯಾಕ್ಸ್‌ಗಳನ್ನೇ ತಿನ್ತಾರೆ. ನಿಮ್ಗೂ ಇಂಥಾ ಅನ್‌ ಹೆಲ್ದೀ ಅಭ್ಯಾಸ ಇದ್ಯಾ ? ಹಾಗಿದ್ರೆ ಆ ಕೆಟ್ಟ ಅಭ್ಯಾಸ ಬಿಡೋದ್ಹೇಗೆ ನಾವ್ ಹೇಳ್ತೀವಿ. 


ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ ಆರೋಗ್ಯಕರವಾಗಿ ತಿನ್ನಬೇಕಾದುದು ಬಹಳ ಮುಖ್ಯ. ತಿನ್ನೋ ಆಹಾರ ಸರಿಯಿಲ್ಲಾಂದ್ರೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮನುಷ್ಯ ಆರೋಗ್ಯವಾಗಿರಲು ಸಾಮಾನ್ಯವಾಗಿ ಮೂರು ಹೊತ್ತು ಆರೋಗ್ಯಕರ ಆಹಾರಗಳನ್ನು ತಿನ್ನಬೇಕು. ಆದ್ರೆ ಯಾರೂ ಹಾಗೇ ಮಾಡುತ್ತಿಲ್ಲ. ಎಲ್ಲರೂ ಎಣ್ಣೆಯಲ್ಲಿ ಚಿಪ್ಸ್, ಕರಿದ ಪದಾರ್ಥ, ಪಿಜ್ಜಾ, ಬರ್ಗರ್ ಮೊದಲಾದ ಸ್ನ್ಯಾಕ್ಸ್‌ಗಳನ್ನೇ ಹೆಚ್ಚಾಗಿ ತಿನ್ತಾರೆ. ಹೊತ್ತುಗೊತ್ತಿನ ಪರಿವೆಯಿಲ್ಲದೆ ಹಿರಿಯರು ಮತ್ತು ಕಿರಿಯರು ಬೇಕಾಬಿಟ್ಟಿ ಸ್ನ್ಯಾಕ್ಸ್‌ಗಳನ್ನು ತಿನ್ತಾನೆ ಇರ್ತಾರೆ. ಹಸಿವಾದಾಗಲ್ಲೆಲ್ಲಾ ಚಿಪ್ಸ್, ಕುರುಕಲು ತಿಂಡಿಗಳ ಪ್ಯಾಕೆಟ್ ಮಾಡಿ ತಿನ್ತಾ ಕೂತು ಬಿಡ್ತಾರೆ. ಆದ್ರೆ ಇಂಥಾ ತಿಂಡಿಗಳು ಆರೋಗ್ಯಕ್ಕೆ ಯಾವ ರೀತಿಯಲ್ಲೂ ಒಳ್ಳೆಯದಲ್ಲ. ಇದು ದೇಹವನ್ನು ಅನಾರೋಗ್ಯದೆಡೆಗೆ ದೂಡುತ್ತದೆ. ದೇಹಕ್ಕೆ ಇನ್ನಷ್ಟು ಕ್ಯಾಲೋರಿಗಳನ್ನು ಸೇರಿಸುವುದರ ಜೊತೆಗೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಬೇಕಾಬಿಟ್ಟಿ ತಿನ್ನೋ ಈ ಸ್ನ್ಯಾಕ್ಸ್‌ಗಳು ದೇಹಕ್ಕೆ ಹೊಸ ಹೊಸ ಕಾಯಿಲೆಗಳನ್ನು ಆಹ್ವಾನಿಸುತ್ತವೆ. ಹಾಗಿದ್ರೆ ಈ ಅನ್‌ ಹೆಲ್ದೀ ಅಭ್ಯಾಸದಿಂದ ದೂರವಿರಲು ಏನು ಮಾಡ್ಬೋದು. ಇಲ್ಲಿದೆ ಕೆಲವೊಂದು ಟಿಪ್ಸ್‌.  

Tap to resize

Latest Videos

ಹಣ್ಣಿಗೆ ಉಪ್ಪು, ಚಾಟ್‌ ಮಸಾಲ ಸಿಂಪಡಿಸಿ ತಿನ್ನೋ ಅಭ್ಯಾಸ ಒಳ್ಳೇದಾ ?

ಸ್ನ್ಯಾಕ್ಸ್‌ ಖರೀದಿಸಬೇಡಿ: ನಿಮ್ಮ ನೆಚ್ಚಿನ ಆಹಾರವು ಮನೆಯಲ್ಲಿದೆ ಎಂದು ನಿಮಗೆ ತಿಳಿದರೆ, ನಿಮ್ಮ ಮನಸ್ಸು ಅದನ್ನು ತಿನ್ನಲು ಹಾತೊರೆಯುತ್ತದೆ. ಹೀಗಾಗಿ ಇಂಥಾ ಅನಾರೋಗ್ಯಕರ ಸ್ನ್ಯಾಕ್ಸ್‌ (Unhealthy snacks)ಗಳನ್ನು ಖರೀದಿಸೋದನ್ನು ತಪ್ಪಿಸಿ. ಇದರಿಂದ ಹಸಿವಾದಾಗಲ್ಲೆಲ್ಲಾ ಹೋಗಿ ಆ ಸ್ನ್ಯಾಕ್ಸ್‌ಗಳನ್ನು ತಿನ್ನುವ ಅಭ್ಯಾಸವೂ (Habit) ತಪ್ಪಿ ಹೋಗುತ್ತದೆ. ಮುಂದಿನ ಬಾರಿ ನೀವು ದಿನಸಿ ಶಾಪಿಂಗ್‌ಗೆ ಹೋದಾಗ, ಮೊದಲು ಪಟ್ಟಿಯನ್ನು ಮಾಡಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಅದರಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವ ಸ್ನ್ಯಾಕ್ಸ್ ಸೇರಿಸಬೇಡಿ.

ಸಾಕಷ್ಟು ನೀರು ಕುಡಿಯಿರಿ: ಸಾಕಷ್ಟು ನೀರು (Water) ಕುಡಿಯುವ ಅಭ್ಯಾಸ ಹೆಚ್ಚಾಗಿ ಸ್ನ್ಯಾಕ್ಸ್‌ಗಳಿಗೆ ಹಂಬಲಿಸದಂತೆ ಮಾಡುತ್ತದೆ. ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ನೀವು ಅದನ್ನು ಸಾಕಷ್ಟು ಕುಡಿಯದಿದ್ದರೆ, ಹಸಿವಿನ ನೋವಿನ ಬಗ್ಗೆ ಯೋಚಿಸುವ ಮೆದುಳಿಗೆ ತಪ್ಪು ಸಂಕೇತಗಳನ್ನು ಕಳುಹಿಸಲಾಗುತ್ತದೆ. ಆದ್ದರಿಂದ, ದೇಹವು ತೇವಾಂಶದಿಂದ ಕೂಡಿರಲು ಆಗಾಗ ನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ: ಲಘು ಆಹಾರದಿಂದ ದೂರವಿರುವ ಪ್ರಮುಖ ಅಂಶವೆಂದರೆ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುವುದು. ಪ್ರತಿದಿನ ಕನಿಷ್ಠ 30-45 ನಿಮಿಷಗಳ ಕಾಲ ವ್ಯಾಯಾಮ (Exercise) ಮಾಡುವುದು ಬಹಳ ಮುಖ್ಯ, ಅದು ತ್ವರಿತ ಶಕ್ತಿಯ ವರ್ಧಕವನ್ನು ನೀಡುತ್ತದೆ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಇದರಿಂದ ಕಾಯಿಲೆಗಳು ಕಾಡೋ ಭಯವಿಲ್ಲ. 

ಡಯಾಬಿಟಿಸ್ ಇದ್ರೆ ಚಿಕನ್ ಸೈಡಿಗಿಡಿ, ಮಟನ್‌ ಟೇಸ್ಟ್ ಮಾಡಿ

ಚಿಕ್ಕನಿದ್ರೆ ತೆಗೆದುಕೊಳ್ಳಿ: ನಿಮ್ಮ ಶಕ್ತಿಯ ಮಟ್ಟವನ್ನು ರೀಚಾರ್ಜ್ ಮಾಡಲು, ಹಗಲಿನಲ್ಲಿ ಸ್ವಲ್ಪ ನಿದ್ರೆ (Sleep) ಮಾಡುವುದು ಮುಖ್ಯ. 10-15 ಕ್ವಿಕ್ ಪವರ್ ನಪ್ ಪುನರ್‌ ಯೌವನಗೊಳಿಸಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ದೇಹಕ್ಕೆ ವಿಶ್ರಾಂತಿ ಸಿಗದಿದ್ದಾಗ ರುಚಿಕರವಾದ ಏನನ್ನಾದರೂ ತಿನ್ನಲು ಹಂಬಲಿಸುತ್ತದೆ. ಹೀಗಾದಾಗ ಹೆಚ್ಚಿನವರು ಸ್ನ್ಯಾಕ್ಸ್ ತಿನ್ನಲು ಶುರು ಮಾಡುತ್ತಾರೆ.

ಹಣ್ಣುಗಳನ್ನು ತಿನ್ನಿ: ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸಿದಾಗಲ್ಲೆಲ್ಲಾ ಹೆಲ್ದೀಯಾಗಿ ಏನನ್ನಾದರೂ ತಿನ್ನಿ. ಇದು ಆಹಾರ ಅಥವಾ ಪಾನೀಯ ಯಾವುದು ಸಹ ಆಗಿರಬಹುದು. ತಿಂಡಿಗಳನ್ನು ತಿನ್ನಬೇಕೆನಿಸಿದಾಗ ಹಣ್ಣುಗಳನ್ನು (Fruits) ಹೆಚ್ಚಿಕೊಂಡು ತಿನ್ನುವ ಅಭ್ಯಾಸ ಒಳ್ಳೆಯದು. ಇದು ಹಸಿವನ್ನು ನೀಗಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕಾರಿಯಾಗಿದೆ. 

click me!