ಅನೇಕರಿಗೆ ಬೆಳಗ್ಗೆ ಒಂದು ಕಪ್ ಬಿಸಿ ಕಾಫಿಯು ದಿನದ ಕಿಕ್‌ಸ್ಟಾರ್ಟ್‌ಗೆ ಅತೀ ಅಗತ್ಯವಿದೆ. ಆದರೆ ಇನ್ನು ಕೆಲವರಲ್ಲಿ ಕಾಫಿ ಸೇವನೆ ತಲೆನೋವಿಗೂ ಕಾರಣವಾಗುತ್ತೆ. ಅದ್ಯಾಕೆ ?
ಬೆಳಗ್ಗೆ ಏಳುವಾಗ ಕೆಲವರಿಗೆ ಬೆಡ್ ಕಾಫಿ ಬೇಕೆ ಬೇಕು. ಒಂದು ದಿನ ಕಾಫಿ ಕುಡಿದಿಲ್ಲ ಎಂದರೆ ಸಾಕು ದಿವಿಡೀ ತಲೆನೋವು ಹಾಗೂ ಮೂಡ್ ಅಪ್ಸೆಟ್ ಆಗುತ್ತೆ. ಯಂಗ್ ಜನರೇಷನ್‌ನ ಬಹುತೇಕ ಮಂದಿ ಕಾಫಿಗೆ ಅಡಿಕ್ಟ್ ಆಗಿದ್ದಾರೆ. ಕಾಫಿ ಕುಡಿದರೆ ಅದೇನೊ ಒಂಥರಾ ರಿಲಾಕ್ಸ್ ಆಗುತ್ತೆ ಜೊತೆಗೆ ಅತಿಯಾದ ಒತ್ತಡದಿಂದ ಬ್ಲಾಕ್ ಆಗಿದ್ದ ಮೈಂಡ್ ರೀಫ್ರೆಶ್ ಆಗಿ ಕೆಲಸ ಮಾಡಲಾರಂಭಿಸುತ್ತೆ. ಹೀಗಿರುವಾಗ ಆರೋಗ್ಯದ ಮೇಲೆ ಅದರ ಪ್ರಭಾವ ಬಹಳಷ್ಟಿದೆ. ಆದರೆ ಇದಲ್ಲದೆಯೂ ಕೆಲವೊಬ್ಬರಿಗೆ ಕಾಫಿ ಕುಡಿಯುವ ಅಭ್ಯಾಸದಿಂದ ತಲೆನೋವು ಹೆಚ್ಚಾಗುತ್ತೆ. ಅದ್ಯಾಕೆ ಅನ್ನೋದು ನಿಮ್ಗೊತ್ತಾ ?
ಪೌಷ್ಟಿಕತಜ್ಞ ಭಕ್ತಿ ಕಪೂರ್ ಅವರ ಪ್ರಕಾರ, ಹಲವರಿಗೆ ಕಾಫಿಯನ್ನು ಕುಡಿಯುವ ಅಭ್ಯಾಸ ಆತಂಕ. ಜುಗುಪ್ಸೆಯ ಭಾವನೆ, ಸಿಟ್ಟು, ಆತಂಕಕ್ಕೆ ಕಾರಣವಾಗುತ್ತೆ. ಇದಕ್ಕೆ ನಿರ್ಧಿಷ್ಟವಾದ ಕಾರಣವೂ ಇದೆ. ಯಾಕೆಂದರೆ ನಿಮ್ಮ ಕಾಫಿಯು ಹೆಚ್ಚಿನ ಪ್ರಮಾಣದ ಕೆಫೀನ್‌ನ್ನು ಒಳಗೊಂಡಿರುತ್ತದೆ ಎಂದು ಭಕ್ತಿ ಕಪೂರ್ ಹೇಳಿದ್ದಾರೆ. ಕಾಫಿ ಆಮ್ಲೀಯ ಮತ್ತು ಮೂತ್ರವರ್ಧಕವಾಗಿದೆ. ಪರಿಣಾಮವಾಗಿ, ಕಾಫಿಯು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ನಿಮ್ಮ ದೇಹದ ಕೆಲವು ಪ್ರಮುಖ ಸಂಪನ್ಮೂಲಗಳನ್ನು ಖಾಲಿ ಮಾಡುತ್ತದೆ.
ಕಾಫಿ ಪ್ರಿಯರಾ, ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಇಲ್ಲಿ ಸಿಗುತ್ತೆ ನೋಡಿ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮುಖ್ಯ ಡಯೆಟಿಷಿಯನ್ ಶಾಲಿನಿ ಅರವಿಂದ್ ಅವರು ವಿವರಿಸುತ್ತಾ, ಕೆಫೀನ್‌ನ ಮೇಲಿನ ಅಭ್ಯಾಸದ ಅವಲಂಬನೆಯು ವಿಶೇಷವಾಗಿ ತಲೆನೋವಿಗೆ (Headache) ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ. ಕಾಫಿ (Coffee) ಅಡ್ರಿನಾಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ನಂತರ ಹಾರ್ಮೋನ್ (Harmone0 ಅಲ್ಪಾವಧಿಗೆ ಹೆಚ್ಚಿನ ಭಾವನೆಯನ್ನು ನೀಡುತ್ತದೆ. ದೇಹದಲ್ಲಿ (Body) ಕೆಫೀನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ದೀರ್ಘಕಾಲದ ಒತ್ತಡವನ್ನು ಉಂಟುಮಾಡಬಹುದು ಎಂದು ತಿಳಿಸಿದ್ದಾರೆ.
ಕಾಫಿ-ಸಂಬಂಧಿತ ಆತಂಕಗಳನ್ನು ತೊಡೆದುಹಾಕಲು ಭಕ್ತಿ ಕಪೂರ್ ಈ ಕೆಳಗಿನ ಮೂರು ಸುಲಭ ಸಲಹೆಗಳನ್ನು ಸೂಚಿಸಿದ್ದಾರೆ.
ಒಳ್ಳೆಯ ಆಹಾರದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ.ಬೆಳಗ್ಗೆದ್ದು ಕಾಫಿ ಕುಡಿಯಬೇಕು ಎಂಬುದು ಕಡ್ಡಾಯವೇನಲ್ಲ. ಹಲವು ವರ್ಷಗಳಿಂದ ಇದು ನಿಮಗೆ ಅಭ್ಯಾವಾಗಿದ್ದರೂ ಇದನ್ನು ಪರ್ಯಾಯ ಪಾನೀಯವನ್ನು ಬಳಸಿ ಬಿಟ್ಟಬಿಡಬಹುದು. ನಿಮ್ಮ ದೇಹವು ರಾತ್ರಿಯಲ್ಲಿ ಹಲವಾರು ಗಂಟೆಗಳ ಕಾಲ ಮಲಗಿರುವ ಕಾರಣ ಹಸಿವಿನಿಂದ ದಣಿದಿರುತ್ತದೆ. ಕಾಫಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಇದು ನೀವು ದಿನದಲ್ಲಿ ಸೇವಿಸುವ ಮೊದಲ ಆಹಾರವಾಗಿರಬಾರದು.
ಕಾಫಿ ಜೊತೆ ಈ ಪೇಸ್ಟ್ ಸೇರಿದ್ರೆ ಫಟಾಫಟ್ ಆಗಿ ತೂಕ ಇಳಿಯುತ್ತೆ
ಕಾಫಿಯನ್ನು ಹೆಚ್ಚು ಪೋಷಣೆ ಮಾಡುವ ಕಾಲಜನ್ ಕ್ರೀಮರ್ ಅನ್ನು ಸೇರಿಸಿ. ಈ ರೀತಿ ಕುಡಿಯುವುದರಿಂದ ಒತ್ತಡ, ಆತಂಕದ ಭಾವನೆ ಕಾಡುವುದಿಲ್ಲ. ನಿಮ್ಮ ಕಾಫಿ ಕುಡಿಯುವ ಸಮಯವನ್ನು ಸುಮಾರು 9:30-10:30 am ವರೆಗೆ ನಿಗದಿಗೊಳಿಸಿ. ಅಂದರೆ ದೇಹದಲ್ಲಿ ನಿಮ್ಮ ನೈಸರ್ಗಿಕ ಕಾರ್ಟಿಸೋಲ್ ಸ್ಪೈಕ್ ನಂತರ ಕುಡಿಯಿರಿ. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದಿಲ್ಲ/.
ಆದ್ರೆ ಕಾಫಿ ಕುಡಿಯುವ ಅಭ್ಯಾಸವನ್ನು ಹಠಾತ್ತನೆ ತ್ಯಜಿಸಬಾರದು ಎಂದು ಶಾಲಿನಿ ಅರವಿಂದ್ ಹೇಳಿದರು, ಏಕೆಂದರೆ ಅದು ಅವಲಂಬಿಸಿರುವವರಿಗೆ ಕೆಫೀನ್ ಹಿಂತೆಗೆದುಕೊಳ್ಳಲು ಕಾರಣವಾಗಬಹುದು. ಇದು ತಲೆನೋವು, ಆಯಾಸ, ಶಕ್ತಿ ಕಡಿಮೆಯಾಗುವುದು, ಅರೆನಿದ್ರಾವಸ್ಥೆ, ಖಿನ್ನತೆಯ ಮನಸ್ಥಿತಿ, ಕಿರಿಕಿರಿ ಇತ್ಯಾದಿಗಳಿಗೆ ಕಾರಣವಾಗಬಹುದು. ಕಾಫಿ ಸೇವನೆಯ ಆವರ್ತನ ಮತ್ತು ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ
ಇದಲ್ಲದೆ, ಆಹಾರ ತಜ್ಞರು ಕಾಫಿಯನ್ನು ಆರೋಗ್ಯಕರ ಮತ್ತು ಟೇಸ್ಟಿ ಪರ್ಯಾಯ ಪಾನೀಯಗಳಾದ ನೀರು, ಜೀರಾ ವಾಟರ್, ತೆಂಗಿನಕಾಯಿ ನೀರು, ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಬೆಚ್ಚಗಿನ ನೀರು, ಮಜ್ಜಿಗೆ ಅಥವಾ ಯಾವುದೇ ಆರೋಗ್ಯಕರ ತಿಂಡಿಗಳೊಂದಿಗೆ ಬದಲಿಸಲು ಸಲಹೆ ನೀಡಿದರು. ಒಬ್ಬರು ಕೆಫೀನ್ ರಹಿತ ಕಾಫಿಯನ್ನು ಪ್ರಾರಂಭಿಸಬಹುದು ಮತ್ತು ನಿಧಾನವಾಗಿ ಕಾಫಿ ಸೇವನೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.