ಕ್ಯಾಂಡಿಯನ್ನು ಹೆಚ್ಚಿನವರು ಇಷ್ಟಪಟ್ಕೊಂಡು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಆದ್ರೆ ಕ್ಯಾಂಡಿ ತಿಂದು ಲಕ್ಷ ಲಕ್ಷ ಗಳಿಸ್ಬೋದು ಅನ್ನೋದು ನಿಮ್ಗೊತ್ತಾ ? ಹೌದು ಜಸ್ಟ್ ಕ್ಯಾಂಡಿ ತಿಂದ್ರೆ ಸಾಕು ವರ್ಷಕ್ಕೆ ಭರ್ತಿ 61 ಲಕ್ಷ ಗಳಿಸ್ಬೋದು.
ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗ (Job)ಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ (Work) ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ವಿಚಾರಗಳ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಆದರೆ, ಇದು ಒಂಥರಾ ವಿಚಿತ್ರ. ದಿನವಿಡೀ ಕ್ಯಾಂಡಿ ತಿನ್ತಿದ್ರೆ ಸಾಕು ವರ್ಷಕ್ಕೆ ಲಕ್ಷಾನುಗಟ್ಟಲೆ ದುಡ್ಡು ಮಾಡ್ಬೋದು.
ಸಿಹಿ ತಿನ್ನೋಕೆ ಎಲ್ರೂ ಇಷ್ಟಪಡ್ತೀವಿ. ಎಷ್ಟು ದುಡ್ಡು ಕೊಟ್ಟಾದ್ರೂ ವೆರೈಟಿ ವೆರೈಟಿ ಚಾಕ್ಲೇಟ್ ತಿನ್ತೀವಿ. ಆದ್ರೆ ಸಿಹಿ ತಿಂದು ದುಡ್ಡು ಮಾಡ್ಬೋದು ಅನ್ನೋ ಯೋಚ್ನೆ ಯಾವತ್ತಾದ್ರೂ ನಿಮ್ಗೆ ಬಂದಿದ್ಯಾ ? ಕೆನಡಾದ ಕಂಪನಿಯು ಕ್ಯಾಂಡಿ ತಿನ್ನೋ ಹುದ್ದೆಯೊಂದನ್ನು ಸೃಷ್ಟಿಸಿದ್ದು, ಕ್ಯಾಂಡಿ ಅಧಿಕಾರಿಗೆ ವರ್ಷಕ್ಕೆ ಭರ್ತಿ 61.14 ಲಕ್ಷ ರೂ. ಆಫರ್ ಮಾಡಿದೆ. ಜುಲೈನಲ್ಲಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಲಾದ ವೇಕೆನ್ಸಿಯಲ್ಲಿ ಚೀಫ್ ಕ್ಯಾಂಡಿ ಟೇಸ್ಟರ್ ಹುದ್ದೆಗೆ ಆಹ್ವಾನಿಸಲಾಗಿದೆ. ಹೆಚ್ಚುವರಿಯಾಗಿ, ಪೋಷಕರ ಅನುಮತಿಯೊಂದಿಗೆ ಐದು ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಸ್ಥಾನವು ತೆರೆದಿರುತ್ತದೆ. ಸದ್ಯ ಈ ಹುದ್ದೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರ್ತಿರೋದಾಗಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಮಿಲ್ ಹೆಜಾಜಿ ಹೇಳಿದ್ದಾರೆ.
ಅಲಾರಂ ಹೊಡೆದಾಗಲ್ಲೆಲ್ಲಾ ಏಳ್ಬೇಕು, ತಿಂಗಳಿಗೆ ಭರ್ತಿ 26 ಲಕ್ಷ ಸಂಬಳ !
ಕ್ಯಾಂಡಿ ತಿನ್ನಿ, ಲಕ್ಷ ಲಕ್ಷ ದುಡ್ಡು ಮಾಡಿ
'ಕ್ಯಾಂಡಿಯ ಸುತ್ತ ನಿಮ್ಮ ಉತ್ತಮ ನೆನಪುಗಳನ್ನು ಕಲ್ಪಿಸಿಕೊಳ್ಳಿ, ಮತ್ತು ಅದನ್ನು ಪ್ರತಿದಿನ ಕೆಲಸದಲ್ಲಿ ಹೊಂದಿರುವಿರಿ ಎಂದು ಕಂಪೆನಿಯು ತಿಳಿಸಿದೆ. ಮುಖ್ಯ ಕ್ಯಾಂಡಿ ಅಧಿಕಾರಿಯೊಬ್ಬರು ತಿಂಗಳಿಗೆ 3,500 ಕ್ಯಾಂಡಿಗಳನ್ನು ತಿನ್ನಬೇಕು ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ತಪ್ಪಾಗಿದೆ ಎಂದು ಹೇಳಿದ್ದಾರೆ. ಚೀಫ್ ಕ್ಯಾಂಡಿ ಟೇಸ್ಟರ್ ದಿನಕ್ಕೆ ಅತಿ ಹೆಚ್ಚೆಂದರೆ 117 ಕ್ಯಾಂಡಿ ಟೇಸ್ಟ್ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಫರೆಂಡ್ ಉದ್ಯೋಗದ ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ದೊಡ್ಡವರ ಹೊರತಾಗಿ ಮಕ್ಕಳೂ ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅನೇಕ ಪೋಷಕರು ತಮ್ಮ ಮಕ್ಕಳು ಅರ್ಜಿಯನ್ನು ಭರ್ತಿ ಮಾಡುವುದನ್ನು ಚಿತ್ರೀಕರಿಸಿದ್ದಾರೆ ಮತ್ತು ವೀಡಿಯೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟೊರೊಂಟೊ ಮೂಲದ ಕಂಪನಿಯು ಕಾರ್ಡಶಿಯಾನ್ ಸೇರಿದಂತೆ ಇನ್‌ಸ್ಟಾಗ್ರಾನಲ್ಲಿ ಸುಮಾರು 340,000 ಮತ್ತು ಟಿಕ್‌ಟಾಕ್‌ನಲ್ಲಿ ಮೂರು ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಕಂಪನಿಯ ಮೂಲದ ಬಗ್ಗೆ ಮಾತನಾಡುತ್ತಾ, ಹೆಜಾಜಿ, 'ನನ್ನ ಸಹೋದರ ಮೋ, ಕ್ಯಾಂಡಿ ಹೆಡ್, ಇದನ್ನು ಸ್ಥಾಪಿಸಿದರು. ಕಂಪನಿಯು ತಮ್ಮ ಹ್ಯಾಲೋವೀನ್ ಮಾರಾಟಕ್ಕೆ ತಯಾರಿ ನಡೆಸುತ್ತಿದೆ' ಎಂದರು.
ಅದಲ್ಲದೆ ಪ್ರಪಂಚದಲ್ಲಿ ಇನ್ನೂ ಕೆಲವು ವಿಚಿತ್ರ ಜಾಬ್‌ಗಳಿವೆ. ಆ ಬಗ್ಗೆ ತಿಳಿದುಕೊಳ್ಳೋಣ.
ಪ್ರೊಫೆಷನಲ್ ಫಾರಿನರ್: ಚೀನಾದಲ್ಲಿ ವಿದೇಶಿಯರು ಸುಮ್ಮನೆ ಸೂಟ್ ಹಾಕಿಕೊಂಡು ಚೈನೀಸ್ ಉದ್ಯಮಿಗಳ ಕೈ ಕುಲುಕುವುದೇ ಒಂದು ಉದ್ಯೋಗ! ಕಾರ್ಯಕ್ರಮದಲ್ಲಿ ಫಾರಿನರ್ ಇದ್ದರೆ ಅದರ ಘನತೆಯೇ ಬೇರೆ ಎಂದು ಚೀನೀಯರು ಯೋಚಿಸುವುದರಿಂದ ಕೆಲವು ಕಂಪನಿಗಳು ವಾರಕ್ಕೆ 1000 ಡಾಲರ್ ನೀಡಿ ಫಾರಿನರ್‌ಗಳನ್ನು ಇಂಥ ಈವೆಂಟ್‌ಗಳಿಗೆ ಆಹ್ವಾನಿಸುತ್ತಾರೆ.
ಬೇಕಾಗಿದ್ದಾರೆ: 5 ದಿನ ನಾಯಿ ಆಹಾರ ತಿನ್ನುವ ಕೆಲಸ, 5 ಲಕ್ಷ ರೂ. ಸಂಬಳ !
ನಾಯಿ ಆಹಾರ ರುಚಿ ನೋಡುವುದು: ಸಾಕುಪ್ರಾಣಿಗಳ ಆಹಾರ ಉತ್ಪಾದಕ ಸಂಸ್ಥೆಗಳು ನಾಯಿಗಳ ಫುಡ್ ಟೇಸ್ಟ್ ಮಾಡುವುದಕ್ಕಾಗಿಯೇ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತವೆ. ಅವರು ಆಹಾರದ ರುಚಿ ನೋಡಿ ಬಳಿಕ ಉಗಿಯುತ್ತಾರೆ. ಜೊತೆಗೆ, ಆಹಾರದಲ್ಲಿರುವ ಪೋಷಕಾಂಶಗಳ ಕುರಿತು ಪರೀಕ್ಷೆ ನಡೆಸುತ್ತಾರೆ.
ಚಿಕನ್ ಸೆಕ್ಸರ್ :ಕೋಳಿಮರಿಗಳ ಲಿಂಗ ಪರೀಕ್ಷೆ ಮಾಡಿ ಅವು ಗಂಡೋ ಹೆಣ್ಣೋ ಹೇಳುವುದೇ ಈ ಉದ್ಯೋಗಿಗಳ ಕೆಲಸ. ಸಾಮಾನ್ಯವಾಗಿ ಆರನೇ ಇಂದ್ರಿಯವಷ್ಟೇ ಇಲ್ಲಿ ಕೆಲಸ ಮಾಡಬೇಕು. ಬ್ರಿಟನ್ ಹಾಗೂ ಜಪಾನ್‌ನಲ್ಲಿ ಸಾಮಾನ್ಯ ಉದ್ಯೋಗ ಇದಾಗಿದ್ದು, ಇವರು ವರ್ಷಕ್ಕೆ ಸುಮಾರು 60,000 ಡಾಲರ್ ಹಣ ಸಂಪಾದಿಸುತ್ತಾರೆ.
ಪ್ರೊಫೆಷನಲ್ ಲೈನ್ ಸ್ಟ್ಯಾಂಡರ್: ನಮ್ಮಲ್ಲಿ ಹೆಚ್ಚಿನವರಿಗೆ ಮಾಡಲು ತಾಳ್ಮೆ ಇಲ್ಲದ ಕೆಲಸವನ್ನು ಇವರು ಮಾಡುತ್ತಾರೆ. ಹೌದು, ಕ್ಯೂನಲ್ಲಿ ನಿಲ್ಲುವುದೇ ಇವರ ಕೆಲಸ. ಹೊಸ ಪ್ರಾಡಕ್ಟ್ ಲಾಂಚ್ ಆದಾಗ, ಬಿಗ್ ಸೇಲ್‌ಗಳು ಇದ್ದಾಗ ಈ ಲೈನ್ ಸ್ಟ್ಯಾಂಡರ್‌ಗಳು ಬ್ಯುಸಿಯಾಗಿಬಿಡುತ್ತಾರೆ. ಇವರೆಲ್ಲ ಚಾರ್ಜ್ ಮಾಡುವ ರೇಟ್ ಬೇರೆ ಇರಬಹುದು. ಆದರೆ ವಾರಕ್ಕೆ ಸುಮಾರು 1000 ಡಾಲರ್‌ನಷ್ಟು ಇವರು ದುಡಿಯುತ್ತಾರೆ.