ಟೀ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಟೀ ಕುಡಿದ ನಂತ್ರ ನೀರು ಕುಡಿಯೋರು ಕೂಡ ಅನೇಕರಿದ್ದಾರೆ. ಆದ್ರೆ ಟೀ ಕುಡಿಯೋದೇ ಒಳ್ಳೆ ಅಭ್ಯಾಸವಲ್ಲ, ಇನ್ನು ಟೀ ನಂತ್ರ ನೀರು ಕುಡಿಯೋದು ಮತ್ತಷ್ಟು ಹಾನಿಕರ. ಅದ್ರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಮಧ್ಯರಾತ್ರಿಯಲ್ಲಿ ನಿದ್ರೆಯಿಂದ ಎಬ್ಬಿಸಿ ಟೀ ಕೊಟ್ರೂ ಕುಡಿಯೋರು ನಮ್ಮಲ್ಲಿದ್ದಾರೆ. ಟೀ ಇಲ್ಲದೆ ಒಂದು ದಿನ ಇರೋದು ಕಷ್ಟ ಎನ್ನುತ್ತಾರೆ ಕೆಲವರು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಟೀ ಬೇಕೇಬೇಕು. ಮೂಡ್ ಫ್ರೆಶ್ ಮಾಡೋದ್ರಿಂದ ಹಿಡಿದು ಮನೆಗೆ ನೆಂಟರು ಬರಲಿ ಇಲ್ಲ ಮಳೆ ಬರಲಿ ಎಲ್ಲದಕ್ಕೂ ಟೀ ಕುಡಿಯುವ ಜನರಿದ್ದಾರೆ. ಟೀ ಕುಡಿಯದೆ ಹೋದ್ರೆ ಕೆಲಸ ಮಾಡೋಕೆ ಶಕ್ತಿ ಸಿಗೋದಿಲ್ಲ. ಯಾವುದು ಅತಿಯಾದ್ರೂ ಅಪಾಯ ನಿಶ್ಚಿತ. ದಿನಕ್ಕೆ ಒಂದೆರೆಡು ಕಪ್ ಗಿಂತ ಹೆಚ್ಚು ಟೀ ಸೇವನೆ ಮಾಡಿದ್ರೆ ಅದು ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ದಿನಕ್ಕೆ ಒಂದು ಬಾರಿ ಟೀ ಕುಡಿಯೋದು ಅಭ್ಯಾಸ ಮಾಡಿಕೊಂಡ್ರೆ ಒಳ್ಳೆಯದು. ಅದ್ರ ಜೊತೆ ಟೀ ಹೇಗೆ ಕುಡಿಯಬಾರದು ಎಂಬುದನ್ನು ಕೂಡ ನೀವು ತಿಳಿದಿರಬೇಕು.
ಟೀ (Tea) ಕುಡಿದ ತಕ್ಷಣ ಕೆಲವರು ನೀರು ಸೇವನೆ ಮಾಡ್ತಾರೆ. ವೈದ್ಯ (Doctor) ರ ಪ್ರಕಾರ, ಟೀಗಿಂತ ಟೀ ಕುಡಿದ ನಂತ್ರ ನೀರು ಕುಡಿದ್ರೆ ಆಗುವ ಹಾನಿ ಹೆಚ್ಚು. ಟೀ ಕುಡಿದ ತಕ್ಷಣ ನೀರು ಕುಡಿದ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. ಟೀಯಲ್ಲಿ ಕೆಫೀನ್ (Caffeine) ಅಂಶ ಇರುತ್ತದೆ. ಟೀ ಸೇವನೆ ನಂತರ ಬಾಯಾರಿಕೆಯಾಗಲು ಇದು ಕಾರಣ. ಒಂದು ಸಾಮಾನ್ಯ ಕಪ್ ಟೀನಲ್ಲಿ ಸುಮಾರು 50 ಮಿಗ್ರಾಂ ಕೆಫೀನ್ ಇರುತ್ತದೆ. ಇದು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಅತಿಯಾದ ಟೀ ಸೇವನೆ ಅತಿಯಾದ ಮೂತ್ರ (Urine) ವಿಸರ್ಜನೆಗೆ ಕಾರಣವಾಗುತ್ತದೆ. ಇದ್ರಿಂದಾಗಿ ಬಾಯಾರಿಕೆ ಹೆಚ್ಚಾಗುತ್ತದೆ.
ನಿಮ್ಮ ಕಂಕುಳ ಕೂದಲಿಂದ ಇರಿಟೇಟ್ ಆಗ್ತಾ ಇದೀರಾ? ಸಂಗಾತಿಯನ್ನು ಆಕರ್ಷಿಸಬಹುದು ಇದು!
ಟೀ ನಂತ್ರ ನೀರು ಕುಡಿದ್ರೆ ಕಾಡುತ್ತೆ ಈ ಎಲ್ಲ ಸಮಸ್ಯೆ :
ಕಾಡುತ್ತೆ ಹಲ್ಲಿನ ಸಮಸ್ಯೆ : ಬಿಸಿ ಆಹಾರದ ನಂತ್ರ ತಣ್ಣನೆಯ ಆಹಾರ ಸೇವನೆ ಮಾಡೋದು ಒಳ್ಳೆಯದಲ್ಲ. ಅದು ನಮ್ಮ ಬಾಯಿಯ ಮೇಲೆ ಪರಿಣಾಮ ಬೀರುತ್ತದೆ. ಬಿಸಿ ಚಹಾ ಕುಡಿದ ನಂತ್ರ ನೀರು ಸೇವನೆ ಮಾಡಿದ್ರೆ ಹಲ್ಲುಗಳು ಹಾಳಾಗುತ್ತವೆ. ಬಾಯಿಯ ತಾಪಮಾನ ಹಠಾತ್ ಬದಲಾವಣೆ ಆಗುವ ಕಾರಣ ಹಲ್ಲುಗಳ ನರಗಳು ತೊಂದರೆಗೊಳಗಾಗುತ್ತವೆ.
ಅಲ್ಸರ್ (Ulcer) : ಟೀ ಕುಡಿದ ತಕ್ಷಣ ನೀರು ಸೇವನೆ ಮಾಡಿದ್ರೆ ಅಲ್ಸರ್ ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ಟೀ ಸೇವನೆ ಮಾಡ್ತಿದ್ದಂತೆ ತೇಗು ಬರುತ್ತದೆ. ಇದು ಗ್ಯಾಸ್ಟ್ರಿಕ್ ಲಕ್ಷಣವಾಗಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ಜನರು ನೀರನ್ನು ಕುಡಿಯುತ್ತಾರೆ. ಇದು ಹೊಟ್ಟೆಯಲ್ಲಿ ಹುಣ್ಣುಂಟು ಮಾಡುತ್ತದೆ. ಅಲ್ಸರ್ ಸಮಸ್ಯೆಗೆ ಕಾರಣವಾಗುತ್ತದೆ.
ಮೂಗಿನಿಂದ ರಕ್ತಸ್ರಾವದ (Nose Bleeding) ಅಪಾಯ : ಟೀ ಕುಡಿದ ನಂತ್ರ ನೀರು ಕುಡಿಯೋದ್ರಿಂದ ನಿಮ್ಮ ಮೂಗಿನಿಂದ ರಕ್ತ ಬರಬಹುದು. ಶೀತ ಹಾಗೂ ಶಾಖ ಎರಡನ್ನೂ ದೇಹ ಒಂದೇ ಬಾರಿ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ರಕ್ತಸ್ರಾವ ಸಮಸ್ಯೆ ಹೆಚ್ಚು.
ಗಂಟಲು ನೋವು ಕಾಡಬಹುದು : ಬಿಸಿ ಚಹಾದ ನಂತರ ತಣ್ಣೀರು ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಮತ್ತು ಶೀತದ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಟೀ ಕುಡಿದ ತಕ್ಷಣ ನೀರನ್ನು ಕುಡಿಯಬಾರದು. ಟೀ ಕುಡಿದ ಅರ್ಧ ಗಂಟೆ ನಂತ್ರ ನೀರು ಕುಡಿಯುವುದು ಒಳ್ಳೆಯದು.
METASTATIC CANCER ಕೊನೆ ಹಂತ ತಲುಪಲು ಬಿಡೋಲ್ಲ ಈ ವ್ಯಾಯಾಮ
ಟೀಗಿಂತ ಮೊದಲು ನೀರು ಕುಡಿಯೋದು ಒಳ್ಳೆಯದಾ? : ಟೀ ಸೇವನೆ ಮಾಡಿದ ನಂತ್ರ ನೀರು ಕುಡಿಯುವ ಬದಲು ಟೀ ಸೇವನೆಗೆ ಮುನ್ನ ನೀರು ಕುಡಿಯಿರಿ.ಇದರಿಂದ ಹೊಟ್ಟೆಯ ರೋಗಗಳು ಕಡಿಮೆಯಾಗುತ್ತವೆ. ಟೀ ಅನೇಕರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿಸುತ್ತದೆ. ಅಂತವರು ಟೀ ಕುಡಿಯುವ ಮೊದಲು ನೀರು ಕುಡಿದರೆ ಗ್ಯಾಸ್ ಕಾಡುವುದಿಲ್ಲ. ಅಸಿಡಿಟಿ, ಕ್ಯಾನ್ಸರ್, ಅಲ್ಸರ್ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅನೇಕ ವರದಿಗಳು ಹೇಳಿವೆ. ಹೊಟ್ಟೆಯಲ್ಲಿರುವ ಆಮ್ಲವನ್ನು ದುರ್ಬಲಗೊಳಿಸಲು ನೀರು ಸಹಾಯ ಮಾಡುತ್ತದೆ.