ಚಳಿಗಾಲದಲ್ಲಿ ಹಾಲು-ಜಿಲೇಬಿ ತಿನ್ನಿ ಎಂದು ಹಿರಿಯರು ಹೇಳೋದ್ಯಾಕೆ ?

By Suvarna News  |  First Published Dec 4, 2022, 5:16 PM IST

ಚಳಿಗಾಲ ಶುರುವಾಗಿದೆ. ಮೈ ಕೊರೆವ ಚಳಿಗೆ ಬಗೆ ಬಗೆಯ ಆಹಾರವನ್ನು ಸವಿಯಬೇಕೆನಿಸುತ್ತದೆ. ಕೆಲವೊಬ್ಬರು ಖಾರವನ್ನು ತಿನ್ನಲು ಇಷ್ಟಪಟ್ಟರೆ, ಇನ್ನು ಕೆಲವರು ಸಿಹಿ ಸಿಹಿಯಾಗಿ ಏನಾದರೂ ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಚಳಿಯಲ್ಲೂ ಹಾಲು-ಜಿಲೇಬಿ ತಿನ್ನೋದು ಬೆಸ್ಟ್‌ ಅಂತಾರೆ ಹಿರಿಯರು. ಅದ್ಯಾಕೆ ? ಹಾಲು-ಜಿಲೇಬಿಯ ಸೇವನೆಯ ಪ್ರಯೋಜನಗಳೇನು ತಿಳಿಯೋಣ.


ಹಾಲು ಮತ್ತು ಜಿಲೇಬಿಯ (Milk and Jalebi) ಕಾಂಬಿನೇಷನ್‌ ಎಲ್ಲಾ ರೀತಿಯ ನೋವುಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ಔಷಧವಾಗಿ (Medicine) ಎಂದು ಹಿರಿಯರು ನಂಬುತ್ತಾರೆ. ಹೀಗಾಗಿಯೇ ಚಳಿಗಾಲದಲ್ಲಿ (Winter) ಬಿಸಿ ಹಾಲಿನೊಂದಿಗೆ ಜಿಲೇಬಿಯನ್ನು ಸೇವಿಸಿದರೆ ಅದು ಬೆನ್ನು ನೋವು, ಸುಸ್ತು, ಶೀತ ಮತ್ತು ಜ್ವರ (Fever), ಕೀಲು ನೋವು ಮತ್ತು ಚಡಪಡಿಕೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ.

ತಜ್ಞರು ಹೇಳುವ ಪ್ರಕಾರ ಈ ಫುಡ್ ಕಾಂಬಿನೇಷನ್‌, ಒತ್ತಡದ (Pressure) ಹಾರ್ಮೋನುಗಳ ಮೇಲೆ ಮ್ಯಾಜಿಕ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನೀವು ಬಿಸಿ ಹಾಲಿನೊಂದಿಗೆ ಜಿಲೇಬಿಯನ್ನು ಸೇವಿಸಿದಾಗ ಮೈಗ್ರೇನ್ ತಲೆನೋವನ್ನು (Headache) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಂಬಾ ತೆಳ್ಳಗಿರುವವರು ಸ್ವಲ್ಪ ತೂಕವನ್ನು ಪಡೆಯಲು ಈ ಸಂಯೋಜನೆಯನ್ನು ಸೇವಿಸಬಹುದು. ಚಳಿಗಾಲದಲ್ಲಿ ಬಿಸಿ ಹಾಲಿನೊಂದಿಗೆ ಜಿಲೇಬಿಯನ್ನು ಸೇವಿಸುವುದರಿಂದ ಅಸ್ತಮಾದಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Latest Videos

undefined

Winter Foods: ಚಳಿಗಾಲದಲ್ಲಿ ಟೊಮೊಟೊ ಸೂಪ್ ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ

ದೂಧ್-ಜಲೇಬಿಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಮೈಗ್ರೇನ್‌ ಪರಿಹರಿಸಲು ಪ್ರಯೋಜನಕಾರಿ: ಹಾಲು ಮತ್ತು ಜಿಲೇಬಿ, ತಲೆನೋವು ಮತ್ತು ಒತ್ತಡಕ್ಕೆ ಪರಿಣಾಮಕಾರಿ ಚಿಕಿತ್ಸೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ದೂಧ್-ಜಲೇಬಿಯನ್ನು ತಿನ್ನುವುದು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹಾಲಿನಲ್ಲಿರುವ ಪೋಷಕಾಂಶಗಳು ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಒತ್ತಡದಲ್ಲಿದ್ದಾಗಲೆಲ್ಲಾ ನೀವು ಈ ಸಂಯೋಜನೆಯನ್ನು ಹೊಂದಬಹುದು.

ಶೀತದಿಂದ ರಕ್ಷಿಸುತ್ತದೆ: ಶೀತ ಮತ್ತು ಕೆಮ್ಮು ಮುಂತಾದ ಋತುಮಾನದ ಕಾಯಿಲೆಗಳನ್ನು ಬೆಚ್ಚಗಿನ ಹಾಲಿನಲ್ಲಿ ನೆನೆಸಿದ ಬಿಸಿ ಜಿಲೇಬಿ ಸೇವನೆಯಿಂದ ಗುಣಪಡಿಸಬಹುದು. ಈ ರುಚಿಕರವಾದ ಸಂಯೋಜನೆಯು ಒರಟಾದ ಚರ್ಮವನ್ನು (Skin) ಗುಣಪಡಿಸಲು ಹೆಸರುವಾಸಿಯಾಗಿದೆ. ಚಳಿಗಾಲದಲ್ಲಿ ದೂದ್-ಜಲೇಬಿ ಜನಪ್ರಿಯವಾಗಲು ಇದು ಮುಖ್ಯ ಕಾರಣವಾಗಿದೆ.

ಚಳಿಗಾಲದಲ್ಲಿ ದೇಹ ಬೆಚ್ಚಗಿರಬೇಕು ಅಂದ್ರೆ ಈ ಸ್ಪೆಷಲ್ ಕಷಾಯ ಕುಡೀರಿ

ತೂಕ ಹೆಚ್ಚಿಸಿಕೊಳ್ಳುವುದು: ತೂಕ (Weight) ಹೆಚ್ಚಿಸಿಕೊಳ್ಳಲು ನೀವು ಸುಲಭ ಮಾರ್ಗ ಹುಡುಕುತ್ತಿದ್ದರೆ ಚಳಿಗಾಲದಲ್ಲಿ ದೂದ್ ಜಿಲೇಬಿ ತಿನ್ನೋದು ಒಳ್ಳೆಯದು. ಇದು ನಿಮಗೆ ಪರಿಪೂರ್ಣವಾದ ಊಟವಾಗಿದೆ. ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ಹುರಿದು ಅದ್ದಿ ತಯಾರಿಸುವುದರಿಂದ ನೈಸರ್ಗಿಕವಾಗಿ ತೂಕವನ್ನು ಹೆಚ್ಚಿಸಬಹುದು. ಹೆಚ್ಚಿನ ಸಂಖ್ಯೆಯ ಕ್ಯಾಲೋರಿಗಳು ಮತ್ತು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿರುವ ಕಾರಣ ಯಾವಾಗಲೂ ಸಂಪೂರ್ಣ ಹಾಲನ್ನು ಆರಿಸಿ.

ಹಾಲು, ಜಿಲೇಬಿಯನ್ನು ಯಾವಾಗ ಸೇವಿಸಬೇಕು ?
ಹಾಲು ಮತ್ತು ಜಿಲೇಬಿ ಆರೋಗ್ಯಕ್ಕೆ (Health) ಉತ್ತಮವಾಗಿದ್ದರೂ ಅದನ್ನು ಸರಿಯಾದ ಸಮಯದಲ್ಲಿ ಸೇವಿಸಿದರಷ್ಟೇ ಅದರ ಸರಿಯಾದ ಪ್ರಯೋಜನ ಪಡಲು ಸಾಧ್ಯ. ಈ ಸಂಯೋಜನೆಯನ್ನು ಬೆಳಗಿನ ಉಪಾಹಾರವಾಗಿ (Breakfast) ಸೇವಿಸಬೇಕು ಎಂದು ತಜ್ಞರು ನಂಬುತ್ತಾರೆ.

Health Tips: ಚಳಿಗಾಲದಲ್ಲಿ ಪಾಲಕ್-ಟೊಮೆಟೊ ಜ್ಯೂಸ್ ಕುಡಿದು ಹೆಲ್ತಿಯಾಗಿರಿ

ದೂದ್-ಜಲೇಬಿ ಮಾಡುವುದು ಹೇಗೆ ?
ಸ್ವಲ್ಪ ಬಿಸಿ ಮತ್ತು ರಸಭರಿತವಾದ ಜಿಲೇಬಿಗಳನ್ನು ಎತ್ತರದ ಗಾಜಿನಲ್ಲಿ ಹಾಕಿ ಮತ್ತು ಬೆಚ್ಚಗಿನ ಹಾಲನ್ನು ತುಂಬಿಸಿ. ಅದರ ಮೇಲೆ ತಾಜಾ ಕೆನೆ ಅಥವಾ ಮಲೈ ದಪ್ಪ ಬೆಣ್ಣೆಯೊಂದಿಗೆ ಆನಂದಿಸಿ. ನೀವು ಹತ್ತಿರದ ಸಿಹಿತಿಂಡಿ ಅಂಗಡಿಯಿಂದ ಜಿಲೇಬಿ ತರಬಹುದು ಅಥವಾ ಮನೆಯಲ್ಲಿ ಮಾಡಬಹುದು.

click me!