ತಿಂಡಿ ಕೆಲಸ ಸುಲಭವಾಗಲಿ ಎಂದು ಮನೆಯಲ್ಲಿ ಏನೋ ಮಾಡಲು ಹೋಗಿ ಮತ್ತೆ ಏನೋ ಮಾಡಿಕೊಳ್ಳಬೇಡಿ.......
ಸೌತ್ ಇಂಡಿಯನ್ ಮನೆಗಳಲ್ಲಿ ವಾರಕ್ಕೆ ಒಮ್ಮೆ ಆದರೂ ಇಡ್ಲಿ ಅಥವಾ ದೋಸೆ ಮಾಡುವ ಅಭ್ಯಾಸ ಇರುತ್ತದೆ. ಹೋಟೆಲ್‌ನಲ್ಲಿ ಮಸಾಲ ದೋಸೆಗೆ ಎಣ್ಣೆ ಜಾಸ್ತಿ ಹಾಕ್ತಾರೆ ಅಥವಾ ಹೊಟ್ಟೆ ಉಬ್ರ ಆಗುತ್ತೆ ಅಂತ ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿ ಗರಿಗರಿಯಾಗಿ ದೋಸೆ ಮಾಡಿ ಕೊಡುತ್ತಾರೆ. ಇನ್ನು ಕೆಲವರಿಗೆ ದಿನ ಬೆಳಗ್ಗೆ ಇಡ್ಲಿ ಇದ್ದುಬಿಟ್ಟರೆ ಸ್ವರ್ಗ...ನೆಮ್ಮದಿಯಾಗಿ ಸಾಂಬರ್‌ನಲ್ಲಿ ಡಿಂಪ್ ಮಾಡಿಕೊಂಡು ತಿನ್ನುತ್ತಾರೆ. ಆದರೆ ಇಲ್ಲಿ ಸಮಸ್ಯೆ ಇರುವುದು ಮನೆಯಲ್ಲಿ ಹಿಟ್ಟು ತಯಾರಿ ಮಾಡಿಕೊಳ್ಳುವುದರಲ್ಲಿ.
ಹೌದು! ಬೆಳಗ್ಗೆ ಆಫೀಸ್‌ಗೆ ಓಡಬೇಕು ರಾತ್ರಿ ಬಂದು ಅಡುಗೆ ಮಾಡಬೇಕು ಸಮಯನೇ ಸಿಗುತ್ತಿಲ್ಲ ಎನ್ನುವವರು ಒಂದು ವಾರಕ್ಕೆ ಆಗುವಷ್ಟು ದೋಸೆ ಇಡ್ಲಿ ಹಿಟ್ಟನ್ನು ರೆಡಿ ಮಾಡಿಕೊಳ್ಳುತ್ತಾರೆ. ದಿನ ಬಿಟ್ಟು ದಿನ ದೋಸೆ ಅಥವಾ ಇಡ್ಲಿ ಮಾಡಿಕೊಂಡು ಅದಕ್ಕೆ ಚಟ್ನಿ, ತುಪ್ಪ ಸಕ್ಕರೆ, ಚಟ್ನಿ ಪುಡಿ ಏನಾದರೂ ಒಂದು ವ್ಯವಸ್ಥೆ ಮಾಡಿಕೊಂಡು ತಿನ್ನಬಹುದು ಎಂದು. ಮನೆಯಲ್ಲಿ ಹಿಟ್ಟು ತಯಾರಿ ಮಾಡಿಕೊಳ್ಳುವುದು ಒಳ್ಳೆಯದ್ದು ಆದರೆ ಹೆಚ್ಚು ದಿನ ಇಡಬಾರದು ಎಂದು ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆ ಅಕ್ಕಿ, ಉದ್ದಿನಬೇಳೆ, ಅವಲಕಿ...ಹೀಗೆ ನಿಮ್ಮ ಆಯ್ಕೆ ತಕ್ಕದನ್ನು ನೀರಿನಲ್ಲಿ ನೆನೆಸಿಟ್ಟು ರಾತ್ರಿ ರುಬ್ಬಿ...ರಾತ್ರಿಯಿಂದ ಬೆಳಗ್ಗೆವರೆಗೂ ಫರ್ಮೆಂಟ್ ಆಗಲು ಬಿಡುತ್ತೀವಿ. ಅದಾದ ಮೇಲೆ ಫ್ರಿಡ್ಜ್‌ಗೆ ಇಟ್ಟು ದಿನ ಏನಾದರೂ ಮಾಡಿಕೊಂಡು ತಿನ್ನುತ್ತೀವಿ..ಇಲ್ಲಿ ಕೆಲಸ ಸುಲಭವಾಗಬಹುದು ಆದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.
ಮಡದಿಯ ಹಾರೈಕೆ ಸೆಲೆಬ್ರಿಟಿಗಳ ಆಶೀರ್ವಾದ...ಗಜ ಮತ್ತೆ ಅಬ್ಬರಿಸಲಿ; ದರ್ಶನ್ ಬಗ್ಗೆ ಬಿಗ್ ಬಾಸ್ ಅನುಷಾ ಪೋಸ್ಟ್
'ಇತ್ತೀಚಿಗೆ ಸಮಯದ ಅಭಾವದಿಂದ ಜನರು ಒಮ್ಮೆ ಇಡ್ಲಿ ಅಥವಾ ದೋಸೆ ಇಟ್ಟು ಸ್ವಲ್ಪ ಮಾಡಿಕೊಳ್ಳುವುದಿಲ್ಲ ಜಾಸ್ತಿ ಮಾಡಿಕೊಂಡು ವಾರಗಟ್ಟಲೆ ಅದನ್ನು ಸೇವಿಸುತ್ತಾರೆ. ಹಾಗೆ ಮಾಡಬಾರದು. ಫರ್ಮೆಂಟ್ ಆಗಿರುವ ಹಿಟ್ಟನ್ನು ಒಂದೇ ದಿನದಲ್ಲಿ ಕಾಲಿ ಮಾಡಬೇಕು. ಫರ್ಮೆಂಟ್ ಆಗಿರುವ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ದಿನದಿಂದ ದಿನಕ್ಕೆ ಫರ್ಮೆಂಟ್ ಆಗುತ್ತಾ ಹೋಗುತ್ತದೆ ಇದರ ಅರ್ಥ ಏನೂ ಅಂದ್ರೆ ಹುಳಿ ಹೆಚ್ಚಾಗುತ್ತಾ ಹೋಗುತ್ತದೆ. ಹುಳಿ ಅಂಶ ಸೇವಿಸುವುದರಿಂದ ಪಿತ್ತ ಹೆಚ್ಚಾಗುತ್ತದೆ ಅಸಿಡಿಟಿ ಆಗುತ್ತದೆ. ಹುಳಿ ತೇಗು, ಎದೆ ಉರಿ, ಹೊಟ್ಟೆ ಊದುವ ಸಮಸ್ಯೆ ಉಂಟಾಗುತ್ತದೆ' ಎಂದು ರುಧ್ರಾಕ್ಷ್ ಆಯುರ್ವೇದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
undefined
ಸಣ್ಣ ಪುಟ್ಟ ವಿಷಯಕ್ಕೂ ಮನಸ್ಥಾಪ ಆಗ್ತಿತ್ತು; ಬ್ರೇಕಪ್ ಕಾರಣ ಬಿಚ್ಚಿಟ್ಟ ಬಿಗ್ ಬಾಸ್ ಪವಿ