Health Tips: ಆರೋಗ್ಯಕ್ಕೆ ಕಲ್ಲಂಗಡಿ ಹಣ್ಣು ಮಾತ್ರವಲ್ಲ, ಬೀಜ ಕೂಡಾ ಒಳ್ಳೆಯದೇ

By Suvarna News  |  First Published Apr 9, 2022, 6:19 PM IST

ಕಲ್ಲಂಗಡಿ (Watermelon) ಹಣ್ಣನ್ನು ಹೇಗೆ ತಿನ್ತಾರೆ ಹೇಳಿ. ಬೀಜ (Seeds)ವನ್ನೆಲ್ಲಾ ತೆಗೆದು ಹಣ್ಣನ್ನು ಮಾತ್ರ ತಿನ್ತಾರೆ ಅಲ್ವಾ. ನೀವು ಕೂಡಾ ಹಾಗೆಯೇ ಮಾಡ್ತೀರಾ. ಹಾಗಿದ್ರೆ ಒಂದ್ ವಿಚಾರ ತಿಳ್ಕೊಳ್ಳಿ. ಕಲ್ಲಂಗಡಿ ಹಣ್ಣಿನಂತೆಯೇ ಅದರ ಬೀಜವು ಸಹ ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು.


ಬೇಸಿಗೆ (Summer) ಬಂದಿದೆ. ಬಿಸಿಲಿನ ಧಗೆಯೂ ಹೆಚ್ಚಾಗಿದೆ. ಹೀಗಾಗಿ ಜನರು ಹೆಚ್ಚೆಚ್ಚು ಹಣ್ಣು (Fruits)ಗಳನ್ನು ಖರೀದಿಸಿ ತಿನ್ನುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ನೀರಿನಂಶವುಳ್ಳ ಕಲ್ಲಂಗಡಿ ಹಣ್ಣಿ (Watermelon)ಗೆ ಹೆಚ್ಚು ಬೇಡಿಕೆಯಿದೆ. ಆದರೆ ಎಲ್ಲರೂ ಕಲ್ಲಂಗಡಿ ಹಣ್ಣನ್ನು ಹೇಗೆ ತಿನ್ತಾರೆ ಹೇಳಿ. ಬೀಜ (Seeds)ವನ್ನೆಲ್ಲಾ ತೆಗೆದು ಹಣ್ಣನ್ನು ಮಾತ್ರ ತಿನ್ತಾರೆ ಅಲ್ವಾ. ನೀವು ಕೂಡಾ ಹಾಗೆಯೇ ಮಾಡ್ತೀರಾ. ಹಾಗಿದ್ರೆ ಒಂದ್ ವಿಚಾರ ತಿಳ್ಕೊಳ್ಳಿ. ಕಲ್ಲಂಗಡಿ ಹಣ್ಣಿನಂತೆಯೇ ಅದರ ಬೀಜವು ಸಹ ಆರೋಗ್ಯ (Health)ಕ್ಕೆ ತುಂಬಾ ಒಳ್ಳೆಯದು.

ಕಲ್ಲಂಗಡಿ ಹಣ್ಣಿನ ಬೀಜದಲ್ಲಿ ಏನೇನಿದೆ ?

Tap to resize

Latest Videos

ಕ್ಯಾಲೋರಿ: ಕಲ್ಲಂಗಡಿ ಬೀಜಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿರುತ್ತವೆ. ಒಂದು ಔನ್ಸ್ ಕಲ್ಲಂಗಡಿ ಬೀಜದ ಕಾಳುಗಳು ಸರಿಸುಮಾರು 158 ಕ್ಯಾಲೋರಿಗಳನ್ನು ಹೊಂದಿರುತ್ತದೆ. 

ಮೆಗ್ನೀಸಿಯಮ್: ಕಲ್ಲಂಗಡಿ ಬೀಜಗಳಲ್ಲಿ ಕಂಡುಬರುವ ಹಲವಾರು ಖನಿಜಗಳಲ್ಲಿ ಒಂದು ಮೆಗ್ನೀಸಿಯಮ್. 4-ಗ್ರಾಂ ಸೇವೆಯಲ್ಲಿ, ನೀವು 21 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಪಡೆಯುತ್ತೀರಿ. ದೇಹದ ಅನೇಕ ಚಯಾಪಚಯ ಕ್ರಿಯೆಗಳಿಗೆ ಮೆಗ್ನೀಸಿಯಮ್ ಅತ್ಯಗತ್ಯ. ನರ ಮತ್ತು ಸ್ನಾಯುವಿನ ಕಾರ್ಯವನ್ನು ಕಾಪಾಡಿಕೊಳ್ಳಲು, ಹಾಗೆಯೇ ರೋಗನಿರೋಧಕ, ಹೃದಯ ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಅಗತ್ಯವಾಗಿರುತ್ತದೆ. ಇದು ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮ ಪಡಿಸುವುದು ಮಾತ್ರವಲ್ಲದೆ ರಕ್ತದ ಒತ್ತಡವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ. ಮೆಗ್ನೀಷಿಯಂ ಅಂಶವನ್ನು ನಮ್ಮ ದೇಹಕ್ಕೆ ಸೇರಿಸುತ್ತಾ ಹೋದರೆ, ವಯಸ್ಸಾದಂತೆ ಎದುರಾಗುವ ನೆನಪಿನ ಶಕ್ತಿಯ ಕೊರತೆ ಸಮಸ್ಯೆ ಬರುವುದಿಲ್ಲ.

ಬೇಸಿಗೆಯಲ್ಲಿ ತಿನ್ನೋಕೆ ಕಲ್ಲಂಗಡಿ ಒಳ್ಳೇದಾ ? ಕರಬೂಜ ಹಣ್ಣು ಒಳ್ಳೇದಾ ?

ಕಬ್ಬಿಣ: ಬೆರಳೆಣಿಕೆಯಷ್ಟು ಕಲ್ಲಂಗಡಿ ಬೀಜಗಳು ಸುಮಾರು 0.29 ಮಿಗ್ರಾಂ ಕಬ್ಬಿಣವನ್ನು ಅಥವಾ ದೈನಂದಿನ ಮೌಲ್ಯದ ಸುಮಾರು 1.6 ಪ್ರತಿಶತವನ್ನು ಹೊಂದಿರುತ್ತದೆ. ಕಬ್ಬಿಣವು ಹಿಮೋಗ್ಲೋಬಿನ್ನ ಪ್ರಮುಖ ಅಂಶವಾಗಿದೆ - ದೇಹದ ಮೂಲಕ ಆಮ್ಲಜನಕವನ್ನು ಸಾಗಿಸುತ್ತದೆ. ಇದು ನಿಮ್ಮ ದೇಹವು ಕ್ಯಾಲೊರಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. 

ಕೊಬ್ಬಿನಾಮ್ಲ: ಕಲ್ಲಂಗಡಿ ಬೀಜಗಳು ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳ ಉತ್ತಮ ಮೂಲವನ್ನು ಸಹ ಒದಗಿಸುತ್ತವೆ. ಈ ಕೊಬ್ಬುಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ವಿರುದ್ಧ ರಕ್ಷಿಸಲು ಮತ್ತು ರಕ್ತದಲ್ಲಿನ "ಕೆಟ್ಟ" ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ.

ಸತು: ಕಲ್ಲಂಗಡಿ ಬೀಜಗಳು ಸತುವಿನ ಉತ್ತಮ ಮೂಲವಾಗಿದೆ. ಸತುವು ಒಂದು ಪ್ರಮುಖ ಪೋಷಕಾಂಶವಾಗಿದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿದೆ. 

Children Health: ಬೇಸಿಗೆಯಲ್ಲಿ ಮಕ್ಕಳ ಶಕ್ತಿ ಹೆಚ್ಚಿಸುತ್ತೆ ಈ ಆಹಾರ

ಹಲವು ಆರೋಗ್ಯ ಸಮಸ್ಯೆಗಳಿಗೆ ಮದ್ದು

ಮಧುಮೇಹ ಇರುವವರು ದೇಹದಲ್ಲಿ ಗ್ಲೈಕೋಜನ್ ಅಂಶವನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋದರೆ, ಕ್ರಮೇಣವಾಗಿ ಮಧುಮೇಹ ಸಮಸ್ಯೆಯಿಂದ ತಾತ್ಕಾಲಿಕವಾಗಿ ಮುಕ್ತಿ ಪಡೆದುಕೊಳ್ಳಬಹುದು. ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಒಮೆಗಾ ಫ್ಯಾಟಿ ಆಮ್ಲಗಳು ಸಾಕಷ್ಟು ಕಂಡುಬರುತ್ತವೆ. ಇವುಗಳು ಜಿಂಕ್ ಅಂಶಗಳ ಸಹಿತ ಗ್ಲೈಸೆಮಿಕ್ ನಿಯಂತ್ರಣ ಮಾಡುತ್ತವೆ. ಇದರಿಂದ ಕ್ರಮೇಣವಾಗಿ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.

ಕಲಂಗಡಿ ಹಣ್ಣಿನ ಬೀಜಗಳಲ್ಲಿ ಜಿಂಕ್ ಪ್ರಮಾಣ ಸಾಕಷ್ಟಿದೆ. ದೇಹದಲ್ಲಿ ಜಿಂಕ್ ಕೊರತೆ ಉಂಟಾದರೆ ಅದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಇದರಿಂದ ಕರುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಸಹ ಕಾಣಿಸುವ ಸಾಧ್ಯತೆ ಇದೆ. ಆದರೆ ಮೆಗ್ನೀಷಿಯಂ ಮತ್ತು ಜಿಂಕ್ ಅಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣಿನ ಬೀಜಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿ ಮಾಡುತ್ತವೆ. ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಹುರಿದು ತಿನ್ನುವುದರಿಂದ ಅವುಗಳಲ್ಲಿ ಕಂಡುಬರುವ ಕಬ್ಬಿಣದ ಅಂಶ ಮತ್ತು ವಿಟಮಿನ್ ಬಿ ಅಂಶ ದೇಹಕ್ಕೆ ಸಿಗುತ್ತದೆ. ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲು ನೆರವಾಗುತ್ತದೆ. ನಿಮಗೆ ಅಲರ್ಜಿ ಸಮಸ್ಯೆ ಏನಾದರೂ ಇದ್ದರೆ ಅದಕ್ಕೆ ಇವುಗಳು ಒಳ್ಳೆಯ ಪರಿಹಾರ.

click me!