
ನಾವು ಯಾವುದೇ ಆಹಾರ ಪದಾರ್ಥಗಳನ್ನ ತೆಗೆದುಕೊಳ್ಳಲಿ, ತರಕಾರಿ, ಹಣ್ಣುಗಳನ್ನ ತೆಗೆದುಕೊಳ್ಳಿಲಿ ಅವುಗಳಲ್ಲಿ ಕಲಬೆರೆಕೆ ಇಲ್ಲದೆ ಶುದ್ದ ನೈಸರ್ಗಿಕವಾಗಿ ಅವುಗಳು ನಮ್ಮ ಕೈ ಸೇರುತ್ತವೇ ಎಂಬುದು ಬಹಳ ವರ್ಷಗಳ ಹಿಂದಿನ ಮಾತು. ಈಗ ಏನಿದ್ದರು ಕಲಬೆರಕೆಯ ಕಾಲ. ಸ್ವಾರ್ಥಕ್ಕಾಗಿ, ಹೆಚ್ಚು ಲಾಭ ಮಾಡಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಆಹಾರ ಪದಾರ್ಥಗಳಲ್ಲಿ ಕಲಬೆರೆಕೆ ಮಾಡಿ ಜನರ ಆರೋಗ್ಯವನ್ನ ಹಾಳು ಮಾಡುವಂತಹ ದಂಧೆಯದ್ದು ಒಂದು ಜಾಲವೇ ಇದೆ. ಈ ಕಲಬೆರೆಕೆ ಎನ್ನುವಂತದ್ದು ತಿಮ್ಮಪ್ಪನನ್ನು ಬಿಟ್ಟಿಲ್ಲ.
ಈಗ ದೇಶದಲ್ಲಿನ ಜನರಿಗೆ ಅಪೌಷ್ಠಿಕತೆ ಕಾಡುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಪೌಷ್ಠಿಕತೆ ಎನ್ನುವಂತದ್ದು ಕಾಡ್ತಾ ಇದ್ದು, ನಮ್ಮ ದೇಹಕ್ಕೆ ಬೇಕಾಗುವಂತಹ ಪ್ರೋಟಿನ್, ವಿಟಾಮಿನ್‌ಗಳು ಸರಿಯಾದ ಪ್ರಮಾಣದಲ್ಲಿ ಸಿಗದೇ ಇದ್ದಾಗ ಬರುವುದೆ ಅಪೌಷ್ಠಿಕತೆ. ಇದಕ್ಕೆ ಪ್ರಮುಖ ಕಾರಣ ಕಲಬೆರಕೆ ಆಹಾರದ್ದೇ ಎಂಬುದು ನಿಸ್ಸಂಶಯ. ಕಲಬೆರೆಕೆಯ ಮೂಲ ಉದ್ದೇಶವೇ ಹೆಚ್ಚು ಬೆಲೆಯ ಆಹಾರಕ್ಕೆ ಅಗ್ಗದ ಇನ್ನೇನನ್ನೋ ಬೆರೆಸಿ ಹಣ ಮಾದುವ ದಂಧೆ. ಹೀಗೆ ದಂಧೆ ಮಾಡುವಾಗ ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನ ಸೇರಿಸಿ ಬಿಡುತ್ತಾರೆ. ಇದರಿಂದ ಅಪೌಷ್ಠಿಕತೆಯ ಜೊತೆಗೆ ದೇಹಕ್ಕೂ ಹಾನಿಕಾರಕ ಅಂಶಗಳು ಸೇರುತ್ತವೆ.
ಆಹಾರಕ್ಕೆ ಕಲಬೆರೆಕೆ ಮಾಡುವುದರಿಂದ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಉದಾಹರಣೆ 100 ಗ್ರಾಂ ಭಾಸುಮತಿ ಅಕ್ಕಿಗೆ ಕಡಿಮೆ ಬೆಲೆಯ 20ಗ್ರಾಂ ಬೇರೆ ಅಕ್ಕಿಯನ್ನ ಸೇರಿಸುವುದು, ದುಬಾರಿ ಕಡಲೇಬೆಳೆಗೆ ತೊಗರಿ ಬೆಳೆಯನ್ನ ಸೇವಿಸುವುದರಿಂದ ಆ ಪ್ರಮಾಣದ ಹಾನಿ ಏನು ಆಗುವುದಿಲ್ಲ ಆದರೆ, ಅದೇ 100 ಗ್ರಾಂ ಭಾಸುಮತಿ ಅಕ್ಕಿಗೆ 20ಗ್ರಾಂ ನಷ್ಟು ಕಲ್ಲನ್ನ ಸೇರಿಸಿದರೆ ಇದರಲ್ಲಿ ನಮಗೆ ಅದರ ಅರ್ಥದಷ್ಟು ಪೋಷಕಾಂಶ ನಮ್ಮ ದೇಹಕ್ಕೆ ಸೇರುವುದಿಲ್ಲ. 20ಗ್ರಾಂ ಕಲ್ಲಿಗೆ ಅನಾವಸ್ಯಕವಾಗಿ ಬೆಲೆ ಹಣ ತೆತ್ತಬೇಕು. ಜೊತೆಗೆ ಅಪೌಷ್ಠಿಕತೆಗೆ ದಾರಿಮಾಡಿಕೊಡುತ್ತೇವೆ. 100 ಗ್ರಾಂ ಬೇಳೆ ಸೇವಿಸಿದರೆ ನಮಗೆ 20ಗ್ರಾಂ ಪ್ರೋಟೀನ್ ಬರಬೇಕಾದ ಕಡೆ ಕೇವಲ 10ಗ್ರಾಂ ಮಾತ್ರ ದೊರೆಯುತ್ತದೆ.
ಕಾಳು ಮೆಣಸಿಗೆ ಕಲ್ಲಂಗಡಿ ಬೀಜ ಬೆರೆಸುವುದು, ಗೋಧಿ ಹಿಟ್ಟಿಗೆ ಬ್ಲಿಚಿಂಗ್ ಸೇರಿಸುವುದು, ಹಾಲು ಬೆಳ್ಳಗೆ ಗಟ್ಟಿಯಾಗಿರುವಂತೆ ಚಾಕ್ ಪೌಡರ್ (chalk powder)ಬಳಕೆ ಮಾಡುವುದು, ಕೊವಾಕ್ಕೆ ಟಿಸ್ಯು ಪೆಪರ್ ಹೀಗೆ ಒಂದಾ ಎರಡಾ, ಇಂತಾ ಎಲ್ಲಾ ಆಹಾರಗಳಿಂದ ಸಿಗಬೇಕಾದ ಔಷಧೀಯ ಗುಣಗಳ ಮಟ್ಟ ಕಡಿಮೆಯಾಗುತ್ತದೆ. ಇಂತ ಕಲಬೆರೆಕೆಯ ವಸ್ತುಗಳನ್ನ ಕೊಳ್ಳುವುದರಿಂದ ಕೆಳಮಟ್ಟದ ಆಹಾರಕ್ಕೆ ಹೆಚ್ಚಿನ ಬೆಲೆಯನ್ನ ಕೊಡಬೇಕಾಗುತ್ತದೆ. ಇವತ್ತಿನ ದಿನದಲ್ಲಿ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವ ಎಲ್ಲಾ ಆಹಾರಗಳಲ್ಲಿಯೂ ಕಲಬೆರೆಕೆ ಇದ್ದೇ ಇರುತ್ತದೆ.
ಇಂತಹ ಕಲಬೆರೆಕೆಯ ಆಹಾರಗಳನ್ನ ತಿನ್ನುತ್ತಿರುವುದರಿಂದಲೇ ಕ್ಯಾನ್ಸರ್, ಡಯಾಬಿಟಿಸ್, ಬಿಪಿ, ಶುಗರ್, ಬೇಗನೆ ಹೆಣ್ಣು ಮಕ್ಕಳು ಋತುಮತಿಯರಾಗುತ್ತಿದ್ದು, ಇಂತಹ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಈ ಕಲಬೆರೆಕೆಯನ್ನ ಸರ್ಕಾರ ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಆರೋಗ್ಯವನ್ನ ನಾವೇ ನೋಡಿಕೊಳ್ಳಬೇಕಾಗಿದೆ. ಮನೆಯಲ್ಲಿಯೆ ತರಕಾರಿಗಳನ್ನ ಬೆಳೆಯುವುದು, ಹೊರಗಡೆಯ ವಸ್ತುಗಳನ್ನ ಖರೀದಿಸುವಾಗ ಜಾಗೃತಯವಾಗಿದ್ದು ಒಳ್ಳೆಯ ಆಹಾರಗಳನ್ನ ಗುರುತಿಸಿ ತೆಗೆದುಕೊಳ್ಳುವುದು, ಮನೆಯಲ್ಲಿಯೇ ಸೇವನೆಗೆ ಬೇಕಾಗುವಂತಹ ವಸ್ತುಗಳನ್ನ ತಯಾರಿ ಮಾಡಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನ ಸಮಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.
ಅದರ ಜೊತೆಗೆ ಅಂಗಡಿಗಳಲ್ಲಿ ಹೊದಾಗ ಅಲ್ಲಿಯ ಸಾಮಾಗ್ರಿಗಳನ್ನ ತುಂಬಾ ಲಕ್ಷ್ಯ ಪಟ್ಟು ಗಮನಿಸಿ, ಅದರಲ್ಲಿ ಕಲಬೆರೆಕೆ ಆಗಿದ್ಯಾ ಅಲ್ವಾ ಎಂಬುದನ್ನ ಖಚಿತ ಪಡಿಸಿಕೊಂಡು ಖರೀದಿಸುವುದು ಉತ್ತಮ. ಕೆಲಮೊಮ್ಮೆ ನಾವು ಖರೀದಿಸುವ ಭರದಲ್ಲಿ ವಸ್ತುಗಳು ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನ ಗಮನಿಸುವುದೇ ಇಲ್ಲ. ನಿರಂತರವಾಗಿ ಕಲಬೆರೆಕೆಯ ಆಹಾರಗಳನ್ನ ಸೇವಿಸುತ್ತಾ ಬರುವುದರಿಂದ ನಾವೂ ಊಹಿಸಲು ಆಗದ ಖಾಯಿಲೆಗಳಿಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ಏನೇ ತಿಂದರೂ ಅದನ್ನ ಒಮ್ಮೆ ಖಚಿತಪಡಿಸಿಕೊಂಡು ಸೇವಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.