ಹೊರಗಡೆ ಜಿಟಿ ಜಿಟಿ ಮಳೆ (Rain).ಮನೆಯ ಒಳಗೆ ಚಳಿ ಚಳಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಸ್ನ್ಯಾಕ್ಸ್ (Snacks) ತಿನ್ನೋಕೆ ಯಾರ್ ತಾನೇ ಇಷ್ಟಪಡೋದಿಲ್ಲ ಹೇಳಿ. ಆದ್ರೆ ಅದೆಲ್ಲಾ ಮಾಡೋದಕ್ಕೆ ಎಷ್ಟೆಲ್ಲಾ ಕೆಲ್ಸಾನಪ್ಪ ಅನ್ನೋರಿಗೆ ಇಲ್ಲಿ ಕೆಲವೊಂದು ಸಿಂಪಲ್ ಪಕೋಡಾ ರೆಸಿಪಿ (Recipe)ಗಳಿವೆ. ನೀವೂ ಕೂಡಾ ಟ್ರೈ ಮಾಡ್ಬೋದು.
ಮಳೆಗಾಲ (Monsoon) ಶುರುವಾಗೇ ಬಿಡ್ತು. ಈಗೆಲ್ಲಾ ಸಂಜೆಯಾದ್ರೆ ಸಾಕು ಬಿಸಿಬಿಸಿಯಾಗಿ ಟೀ (Tea), ಜೊತೆಗೆ ಏನಾದ್ರೂ ಬಜ್ಜಿ, ಬೋಂಡ, ಪಕೋಡಾ (Pakoda) ತಿನ್ನೋಣ ಅನ್ಸುತ್ತೆ. ಬಿಸಿಯಾದ, ಹಬೆಯಾಡುವ ಪಕೋಡಗಳು ಮತ್ತು ಸಮೋಸಗಳನ್ನು ಚಹಾದ ಜೊತೆಗೆ ಆನಂದಿಸಲು ಮಳೆಗಾಲಕ್ಕಿಂತ ಉತ್ತಮವಾದ ಸಮಯವಿಲ್ಲ. ಆದ್ರೆ ಮನೆಯಲ್ಲೇ ಇದನ್ನೆಲ್ಲಾ ಮಾಡ್ಕೊಳ್ಳೋದು ಅಂದ್ರೆ ಎಲ್ರಿಗೂ ಬೇಜಾರು. ಎಷ್ಟೊಂದು ಕೆಲ್ಸ ಇದ್ಯಪ್ಪಾ ಅಂತ ಗೋಳಾಡ್ತಾರೆ. ಅಂಥವರಿಗೆ ಇಲ್ಲಿ ಕೆಲವು ಈಝಿ ರೆಸಿಪಿಗಳಿವೆ. ಫಟಾಫಟ್ ಅಂತ ನೀವು ರುಚಿಕರವಾದ ಪಕೋಡಾಗಳನ್ನು ಮಾಡಿ ಸವಿಬೋದು.
ಮಿರ್ಚಿ ಪಕೋಡಾ
ಇದು ಹೆಚ್ಚಿನವರ ಪಕೋಡಾ ಆಗಿದೆ. ಮಳೆ ಮತ್ತು ಖಾರಕ್ಕಿಂತ ಬೆಸ್ಟ್ ಕಾಂಬಿನೇಷನ್ ಯಾವುದಿದೆ ಹೇಳಿ. ಹೀಗಾಗಿಯೇ ಮಳೆ ಸುರಿಯುತ್ತಿರುವಾಗ ಖಾರ ಖಾರವಾದ ಮಿರ್ಚಿ ಪಕೋಡಾ ಸವಿಯಲು ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ತಯಾರಿಸಲು ಮೊದಲಿಗೆ ಇದನ್ನು ಸೀಳಿಕೊಂಡು ಉಪ್ಪು ಚಿಮುಕಿಸಿ ಇಟ್ಟುಕೊಳ್ಳಿ. ಇನ್ನೊಂದೆಡೆ ಕಡಲೇಹಿಟ್ಟು, ಖಾರದ ಪುಡಿ, ಗರಂ ಮಸಾಲ, ಜೀರಿಗೆ, ಧನಿಯಾ, ಅರಿಶಿನ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಮಿರ್ಚಿಯನ್ನು ಇದರಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್ ಸೇರಿಸಿ ಸವಿಯಲು ಕೊಡಿ.
ಸೀಫುಡ್ ಸಿಕ್ಕಾಪಟ್ಟೆ ಇಷ್ಟಾನ ? ಹೀಗೆ ತಿಂದ್ರೆ ತೂಕ ಇಳಿಸೋದು ಸುಲಭ
ಬ್ರೆಡ್ ಪಕೋಡಾ
ಬ್ರೆಡ್‌ನ್ನು ತೆಗೆದುಕೊಂಡು ತ್ರಿಕೋನಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಿ. ಇನ್ನೊಂದೆಡೆ ಪಾತ್ರೆಯಲ್ಲಿ 1 ಕಪ್ ಕಡಲೇಹಿಟ್ಟು, ಸ್ಪಲ್ಪ ಮೈದಾ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು ಸೇರಿಸಿ. ಅರ್ಧ ಸ್ಪೂನ್ ಗರಂ ಮಸಾಲ, ಖಾರದ ಪುಡಿ, ಧನಿಯಾ, ಜೀರಿಗೆ ಪುಡಿ, ಅರಿಶಿನ ಪುಡಿ ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿಕೊಂಡು ಎಣ್ಣೆಯಲ್ಲಿ ಕರಿ. ಬಿಸಿಬಿಸಿಯಾದ ಬ್ರೆಡ್ ಪಕೋಡಾ ತಿನ್ನಲು ರೆಡಿಯಾಗಿದೆ.
ಈರುಳ್ಳಿ ಪಕೋಡಾ
ಇದು ಹೆಚ್ಚು ಜನಪ್ರಿಯವಾಗಿರುವ ಪಕೋಡಾವಾಗಿದೆ. ಇದನ್ನು ಸುಲಭವಾಗಿ ಮಾಡಿ ಸವಿಯಬಹುದು. ಈರುಳ್ಳಿಯನ್ನು ಕತ್ತರಿಸಿ ಉಪ್ಪು ಮಿಕ್ಸ್ ಮಾಡಿಟ್ಟುಕೊಳ್ಳಿ. ಇನ್ನೊಂದೆಡೆ ಕಡಲೇಹಿಟ್ಟಿಗೆ ಖಾರದ ಪುಡಿ, ಗರಂ ಮಸಾಲ, ಜೀರಿಗೆ, ಧನಿಯಾ, ಅರಿಶಿನ ಪುಡಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಬಿಸಿಯಿದ್ದಾಗಲೇ ಸವಿಯಲು ಚೆನ್ನಾಗಿರುತ್ತದೆ.
Biriyani Recipe: ಬಾಯಲ್ಲಿ ನೀರೂರಿಸೋ ಬಿರಿಯಾನಿ ರೆಸಿಪಿ ಇಲ್ಲಿವೆ!
ಪನೀರ್ ಪಕೋಡಾ
ಪನೀರ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಟೊಮೇಟೋ ರಸ ಸೇರಿಸಿ ಗ್ರೇವಿ ತಯಾರಿಸಿದರೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಹಾಗೆಯೇ ಮಳೆಗಾಲದಲ್ಲಿ ಪನೀರ್‌ನ ರುಚಿಕರವಾದ ಪಕೋಡಾವನ್ನು ಮಾಡಿ ಸವಿಯಬಹುದು. ಇದನ್ನು ತಯಾರಿಸಲು ಮೊದಲಿಗೆ ಪನೀರ್ ತುಂಡುಗಳನ್ನು ತವಾದಲ್ಲಿ ಲೈಟಾಗಿ ಫ್ರೈ ಮಾಡಿಕೊಳ್ಳಿ. ಮೇಲಿಂದ ಉಪ್ಪು, ಖಾರದ ಪುಡಿ, ಅರಿಶಿನ ಪುಡಿ ಉದುರಿಸಿ. ನಂತರ ಇನ್ನೊಂದು ಪಾತ್ರದಲ್ಲಿ 1 ಕಪ್ ಕಡಲೇಹಿಟ್ಟು, ಎರಡು ಸ್ಪೂನ್ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಗರಂ ಮಸಾಲಾ, ಧನಿಯಾ ಪುಡಿ, ಜೀರಿಗೆ, ಸ್ಪಲ್ಪ ಇಂಗು, ಕರಿಬೇವಿನ ಸೊಪ್ಪು ಸೇರಿಸಿಕೊಳ್ಳಿ. ಈ ಮಸಾಲಾದಲ್ಲಿ ಪನೀರ್ ಅದ್ದಿ ಡೀಪ್ ಫ್ರೈ ಮಾಡಿ. ಬಿಸಿಬಿಸಿಯಾಗಿರುವಾಗಲೇ ಮೇಲಿನಿಂದ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹರಡಿ ಸರ್ವ್ ಮಾಡಿ.
ಮೂಂಗ್ ದಾಲ್ ಪಕೋಡಾ
ಉದ್ದಿನಬೇಳೆಯನ್ನು ಮೊದಲೇ ನೆನೆಸಿಟ್ಟು, ರುಬ್ಬಿಕೊಂಡು ಹೂರಣವನ್ನು ತಯಾರಿಸಿ. ಹೆಚ್ಚು ನುಣ್ಣಗೆ ಆಗುವುದು ಬೇಡ, ಬಿಡಿಬಿಡಿಯಾಗಿರಲಿ. ಇನ್ನೊಂದೆಡೆ 1 ಕಪ್ ಕಡಲೇಹಿಟ್ಟಿಗೆ ಸ್ಪಲ್ಪ ಕಾರ್ನ್ ಫ್ಲೋರ್ ಸೇರಿಸಿ. ಇದಕ್ಕೆ ಖಾರದ ಪುಡಿ, ಗರಂ ಮಸಾಲ, ಜೀರಿಗೆ , ಧನಿಯಾ ಪುಡಿ, ಅರಿಶಿನ ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಸ್ಪಲ್ಪ ಕರಿಬೇವು ಸೇರಿಸಿ. ಇದಕ್ಕೆ ಹೂರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಗಳಂತೆ ಹಿಟ್ಟು ತೆಗೆದುಕೊಂಡು ಡೀಫ್ ಫ್ರೈ ಮಾಡಿ. ಬಿಸಿಬಿಸಿ ಮೂಂಗ್ ದಾಲ್ ಪಕೋಡಾ ಸಿದ್ಧವಾಗುತ್ತದೆ. ಪುದೀನಾ ಚಟ್ನಿಯೊಂದಿಗೆ ಇದನ್ನು ಸವಿಯಲು ಚೆನ್ನಾಗಿರುತ್ತದೆ.