
ಧಾರವಾಡ ಪೇಡ ( Dharwad Peda ) ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಮೂರು ಪದಾರ್ಥಗಳಿಂದ ಈ ಪೇಡವನ್ನು ಮನೆಯಲ್ಲಿ ಮಾಡಬಹುದು. ಬೂರ ಸಕ್ಕರೆ ಇದ್ದರೆ, ಇದನ್ನು ಮಾಡಲು ಹೆಚ್ಚು ಸಮಯ ಕೂಡ ಬೇಡ. ಇದನ್ನು ಬಾಯಲ್ಲಿಟ್ಟರೆ ಕರಗಿ ಹೋಗುತ್ತದೆ, ಅಷ್ಟು ಮೃದುವಾದ ತಿಂಡಿಯನ್ನು ಮಾಡುವುದು ಹೇಗೆ?
ಮೂರು ಕಪ್ ಸಕ್ಕರೆ ಬೇಕು
ಒಂದು ಚಮಚ ತುಪ್ಪ
ಮಿಲ್ಕ್ ಪೌಡರ್
ಹಾಲು
ಸಕ್ಕರೆಗೆ ಸ್ವಲ್ಪ ನೀರು ಹಾಕಿ ಸರಿಯಾಗಿ ಪಾಕ ಆಗೋಹಾಗೆ ಹುರಿದುಕೊಳ್ಳಿ. ಸಣ್ಣದಾದ ಉರಿಯಲ್ಲಿ ಪಾಕ ಮಾಡಿಕೊಳ್ಳಿ. ಆ ಸಕ್ಕರೆಪಾಕವು ಪೌಡರ್ ರೀತಿ ಆಗಬೇಕು, ಯಾವುದೇ ಕಾರಣಕ್ಕೂ ಕಲ್ಲಾಗಬಾರದು. ಇದಕ್ಕೆ ಬೂರ ಸಕ್ಕರೆ ಎನ್ನುತ್ತಾರೆ, ಅಂಗಡಿಯಲ್ಲಿ ಕೂಡ ಬೂರ ಸಕ್ಕರೆ ಸಿಗುತ್ತದೆ. ಇದನ್ನು ಹಾಕದೇನೆ ನೀವು ಸಕ್ಕರೆ ಪುಡಿ ಹಾಕಿ ಧಾರವಾಡ್ ಪೇಡ ಮಾಡ್ತೀನಿ ಅಂದ್ರೆ ಖಂಡಿತವಾಗಿಯೂ ಚೆನ್ನಾಗಿ ಬರೋದಿಲ್ಲ.
ಒಂದು ಕಾವಲಿಯನ್ನು ಬಿಸಿ ಮಾಡಿ, ಅದಕ್ಕೆ ಒಂದು ಚಮಚ ಆಗುವಷ್ಟು ತುಪ್ಪಕ್ಕೆ ಒಂದೂವರೆ ಕಪ್ ಆಗುವಷ್ಟು ಮಿಲ್ಕ್ ಪೌಡರ್ ಹಾಕಬೇಕು. ಅದನ್ನು ಸರಿಯಾಗಿ ಫ್ರೈ ಮಾಡಿಕೊಳ್ಳಿ, ಆಮೇಲೆ ಒಂದು ಕಪ್ ಹಾಲು ಹಾಕಿ ಚೆನ್ನಾಗಿ ಫ್ರೈ ಮಾಡಿ. ಒಂದೇ ಸಲ ಹಾಲು ಹಾಕುವ ಬದಲು, ಸ್ವಲ್ಪ ಸ್ವಲ್ಪ ಹಾಲು ಹಾಕುತ್ತ ಬನ್ನಿ. ಆಮೇಲೆ ಅವೆಲ್ಲವೂ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಆಮೇಲೆ ಮಿಲ್ಕ್ ಪೌಡರ್, ಮಿಲ್ಕ್ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗಿ ಉಂಡೆ ಕಟ್ಟಲು ಬರುತ್ತದೆ. ಆ ರೀತಿ ಗಟ್ಟಿ ಆಗಬೇಕು, ತುಂಬ ಗಟ್ಟಿಯೂ ಆಗಬಾರದು, ಅದಿಕ್ಕೆ ಬೂರ ಸಕ್ಕರೆ ಮಿಕ್ಸ್ ಮಾಡಿ, ಉಂಡೆ ಕಟ್ಟಿ, ಅದರ ಮೇಲೆ ಸ್ವಲ್ಪ ಸಕ್ಕರೆ ಪುಡಿ ಹಾಕಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.