
ಮನೆಯಲ್ಲಿರುವಾಗ ಏನಾದರೂ ಸಿಹಿ ತಿನ್ನೋಣ ಎಂದು ಅನಿಸುವುದು. ಸಾಮಾನ್ಯವಾಗಿ ಕಾಜು ಬರ್ಫಿ, ಕೋವಾ, ಗಿಣ್ಣ, ಮೈಸೂರು ಪಾಕ್ ತಿನ್ನುತ್ತೇವೆ. ಹೀಗಿದ್ದರೂ ಕೂಡ ಡಿಫರೆಂಟ್ ಆಗಿರೋ ಸಿಹಿ ತಿಂಡಿ ತಿನ್ನೋಣ ಎಂದು ಅನಿಸುವುದು. ಎಷ್ಟೇ ಸಿಹಿ ತಿಂಡಿ ತಿಂದರೂ ಕೂಡ ಐಸ್‌ಕ್ರೀಂಗೆ ದೊಡ್ಡ ಅಭಿಮಾನಿ ಬಳಗವಿದೆ ಎನ್ನೋದನ್ನು ಒಪ್ಪುತ್ತೀರಾ? ಹಾಗೆ ಕೊಕೊನಟ್ ಫುಡ್ಡಿಂಗ್ ಕೂಡ ಡಿಫರೆಂಟ್ ತಿಂಡಿಯಾಗಿದೆ.
ನಮ್ಮ ಆಹಾರದಲ್ಲಿ ಕೊಬ್ಬರಿಯು ಅತ್ಯಂತ ಬಹುಮುಖ ಬಳಕೆಯ ಪದಾರ್ಥವಾಗಿದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದ ಸಾಕಷ್ಟು ಜಿಲ್ಲೆಗಳಲ್ಲಿ ನಿತ್ಯವೂ ಕೊಬ್ಬರಿ ಬಳಕೆ ಆಗುವುದು, ಕೊಬ್ಬರಿ ಇಲ್ಲದೆ ಇರೋಕಾಗಲ್ಲ. ಕೊಬ್ಬರಿಯಲ್ಲಿ ಹಸಿಯಾಗಿರುವ ಕಾಯಿ, ಎಳೆನೀರು, ಒಣಕೊಬ್ಬರಿಯನ್ನು ಸಾಕಷ್ಟು ರೂಪಗಳಲ್ಲಿ ಬಳಕೆ ಮಾಡೋದುಂಟು. ಈಗ ಮೂರು ಪದಾರ್ಥಗಳನ್ನು ಬಳಸಿ, ಬಹಳ ಸರಳವಾಗಿ ಕೊಬ್ಬರಿ ಫೂಡಿಂಗ್ ( Coconut Fooding ) ಮಾಡುವುದು ಹೇಗೆ ಎಂದು ನೋಡೋಣ.
ತೆಂಗಿನಕಾಯಿ ಪೋಷಕಾಂಶಗಳ ಖನಿಜವಾಗಿದೆ. ಇದರಲ್ಲಿ ವಿಟಮಿನ್ ಬಿ6, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ತಾಮ್ರ, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳು ಇವೆ. ಈಗ ತೆಂಗಿನಕಾಯಿ ಜೊತೆಗೆ ಇನ್ನು ಎರಡು ಪದಾರ್ಥಗಳನ್ನು ಹಾಕಿ ಬಲು ರುಚಿಯಾದ ಸಿಹಿ ತಿಂಡಿ ಮಾಡೋದು ಹೇಗೆ ಎಂದು ಕಲಿಯೋಣ.
ಹಸಿಯಾದ ತೆಂಗಿನಕಾಯಿಯನ್ನು ತುರಿದುಕೊಳ್ಳಿ. ಜೊತೆಗೆ ಇದರ ನೀರನ್ನು ಹಾಗೆ ಇಟ್ಟುಕೊಳ್ಳಿ. ತುರಿದ ತೆಂಗಿನಕಾಯಿಗೆ ಕಾಯಿನೀರು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಆ ರುಬ್ಬಿಕೊಂಡ ಕಾಯಿಯನ್ನು ಅರಸೊಟ್ಟು ಅಥವಾ ತೆಳುವಾದ ಬಟ್ಟೆಯಲ್ಲಿ ಹಾಕಿ ರಸವನ್ನು ಹಿಂಡಿ. ಕಂಪ್ಲೀಟ್ ರಸ ಹಿಂಡಿದಮೇಲೆ ಅದಿಕ್ಕೆ ಸ್ವಲ್ಪ ಜೋಳದ ಹಿಟ್ಟು ( corn flour 4-5 ಚಮಚ ) ಹಾಕಿ, ಇದಕ್ಕೆ ನೀವು 6 ಚಮಚದಷ್ಟು ಸಕ್ಕರೆ ಹಾಕಿ. ಸಣ್ಣ ಬೆಂಕಿ ಉರಿಯಲ್ಲಿ ಈ ಮೂರನ್ನು ತಿರುಗಿಸಿ, ಒಂದು ಹದಕ್ಕೆ ಬರಬೇಕು. ಈ ಮಿಶ್ರಣವು ಸ್ವಲ್ಪ ದಪ್ಪಗಾಗಬೇಕು. ಅದನ್ನು ನೀವು ಎರಡು ಮೂರು ಗಂಟೆಗಳ ಕಾಲ ಹಾಗೆ ಫ್ರಿಡ್ಜ್‌ನಲ್ಲಿಡಿ.
ಆನಂತರ ಅದನ್ನು ನೀವು ತೆಗೆದಾಗ ಜೆಲ್ಲಿ ಥರ ರೆಡಿಯಾಗಿರುವುದು. ಇದರ ಮೇಲೆ ಅಲಂಕಾರಕ್ಕೆ ಬೇಕಿದ್ದರೆ ಒಣದ್ರಾಕ್ಷಿ ಹಾಕಿಕೊಂಡು ತಿನ್ನಬಹುದು. ಈ ಕೊಕೊನಟ್ ಫುಡ್ಡಿಂಗ್ ನೋಡಿದರೆ ತಿನ್ನಬೇಕು ಎಂದು ಅನಿಸುವಷ್ಟರ ಮಟ್ಟಿಗೆ ಸುಂದರವಾಗಿ ಕಾಣುವುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.