ಮಕ್ಕಳಿಗೆ ಆಹಾರ ಇಷ್ಟವಾಗುತ್ತೆ. ಆದ್ರೆ ಮನೆ ಆಹಾರ ತಿನ್ನಲು ಮಕ್ಕಳು ಮನಸ್ಸು ಮಾಡೋದಿಲ್ಲ. ಬಾಯಿ ಚಪ್ಪರಿಸಿಕೊಂಡು ತಿನ್ನುವ ಆಹಾರವನ್ನು ಮನೆಯಲ್ಲೇ ನೀವು ರೆಡಿ ಮಾಡ್ಬಹುದು. ಮಕ್ಕಳ ಸ್ಪೇಷಲ್ ರೆಸಿಪಿ ಇಲ್ಲಿದೆ.
ನವೆಂಬರ್ 14, ಮಕ್ಕಳ ಹಬ್ಬ ಅಂದ್ರೆ ತಪ್ಪಾಗಲಾರದು. ಯಾಕೆಂದ್ರೆ ಈ ದಿನ ಮಕ್ಕಳಿಗೆ ಸೀಮಿತವಾಗಿದೆ. ದೇಶದಾದ್ಯಂತ ನವೆಂಬರ್ 14ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ಹಕ್ಕುಗಳು ಮತ್ತು ಅವರ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಗೌರವ ಮತ್ತು ಶ್ರದ್ಧಾಂಜಲಿಗಳನ್ನು ಸಹ ಸಲ್ಲಿಸಲಾಗುತ್ತದೆ. ಮಕ್ಕಳ ದಿನದಂದು ಮಕ್ಕಳಿಗೆ ಉಡುಗೊರೆ ನೀಡಲಾಗುತ್ತದೆ. ಜೊತೆಗೆ ಮಕ್ಕಳಿಗಾಗಿ ಕಾರ್ಯಕ್ರಮ, ಪ್ರವಾಸವನ್ನು ಸಹ ಏರ್ಪಡಿಸಲಾಗುತ್ತದೆ.
ಮಕ್ಕಳಿ (Children) ಗೆ ತಿಂಡಿ ಇಷ್ಟ. ಆದ್ರೆ ಹೊರಗಿನ ತಿಂಡಿ (Breakfast) ಯನ್ನು ಮಕ್ಕಳು ಇಷ್ಟಪಟ್ಟು ಸೇವಿಸ್ತಾರೆ. ಚಾಕೋಲೇಟ್, ಜಂಕ್ ಫುಡ್, ಸ್ಟ್ರೀಟ್ ಫುಡ್ ಆರೋಗ್ಯಕ್ಕೆ ಹಾನಿಕರ. ಮನೆಯಲ್ಲಿ ಮಾಡಿದ ಆರೋಗ್ಯ (Health) ಕರ ಆಹಾರ ನೋಡಿದ್ರೆ ಮಕ್ಕಳು ದೂರ ಓಡ್ತಾರೆ. ಮನೆಯಲ್ಲಿ ಮಾಡಿದ ತಿಂಡಿಯನ್ನು ಮಕ್ಕಳು ಇಷ್ಟಪಟ್ಟು ತಿನ್ನಬೇಕು ಅಂದ್ರೆ ಕೆಲವು ರುಚಿ ರುಚಿ ಆಹಾರವನ್ನು ನೀವೇ ತಯಾರಿಸಿ. ಮಕ್ಕಳಿಗಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ಈ ರೆಸಿಪಿ (Recipe) ಟ್ರೈ ಮಾಡಿ.
ಡಬಲ್ ಚಾಕೊಲೇಟ್ ಕೇಕ್ ಮಿಕ್ಸ್ : ಮಕ್ಕಳು ಕೇಕ್ ಇಷ್ಟಪಡುತ್ತಾರೆ. ಮಕ್ಕಳ ದಿನಾಚರಣೆಯಂದು ಚಾಕೊಲೇಟ್ ಕೇಕ್ ಮಾಡಿ ತಿನ್ನಿಸಬಹುದು. ಆದರೆ ಈ ಚಾಕೊಲೇಟ್ ಕೇಕ್ ಸಾಮಾನ್ಯ ಕೇಕ್ ನಂತಿಲ್ಲ. ಇದನ್ನು ಸೂಪರ್‌ಗ್ರೇನ್ ಮತ್ತು ನೈಜ ಚಾಕೊಲೇಟ್‌ನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಶೇಕಡಾ 100ರಷ್ಟು ಸಸ್ಯಾಹಾರಿ ಮತ್ತು ಸಕ್ಕರೆ ಮುಕ್ತ ಕೇಕ್ ಇದು. ಚಾಕೊಲೇಟ್ ಕೇಕ್ ಮಿಕ್ಸ್ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಫೈಬರ್, ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಈ ಸೂಪರ್‌ಗ್ರೇನ್ ಮತ್ತು ನೈಜ ಚಾಕೊಲೇಟ್ ಕೇಕ್ ನಲ್ಲಿದೆ. ಇದ್ರ ಸೇವನೆಯಿಂದ ಮಕ್ಕಳ ಆರೋಗ್ಯ ವೃದ್ಧಿಸುತ್ತೆ.
ಸಿಕ್ಕಾಪಟ್ಟೆ ಟೀ ಕುಡಿಯೋ ಅಭ್ಯಾಸನಾ ? ಸ್ಪಲ್ಪ ಕಪ್ ಬಗ್ಗೆನೂ ಗಮನ ಇರ್ಲಿ
ಬಾದಾಮಿ ಸ್ನ್ಯಾಕ್ ಬಾರ್ : ಬಾದಾಮಿಯನ್ನು ಹಾಗೆ ನೀಡಿದ್ರೆ ಮಕ್ಕಳು ತಿನ್ನೋದಿಲ್ಲ. ಬಾದಾಮಿಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಮಕ್ಕಳು ಬಾದಾಮಿ ಸೇವನೆ ಮಾಡ್ಬೇಕು. ಮಕ್ಕಳು ಚಾಕೊಲೇಟ್ ತಿಂಡಿಗಳಿಗಿಂತ ವಿಭಿನ್ನವಾದದ್ದನ್ನು ಪ್ರಯತ್ನಿಸಲು ಬಯಸಿದರೆ, ಮಕ್ಕಳಿಗೆ ಬಾದಾಮಿ ಸ್ನ್ಯಾಕ್ ಬಾರ್‌ಗಳನ್ನು ರೆಡಿ ಮಾಡಿ ನೀಡಬಹುದು. ಈ ತಿಂಡಿ ಮಾಡಲು ಬಾದಾಮಿ, ಖರ್ಜೂರ, ಓಟ್ಸ್, ರೈಸ್ ಬ್ರಾನ್ ಆಯಿಲ್ ಇತ್ಯಾದಿಗಳು ಬೇಕಾಗುತ್ತವೆ. ಯುಟ್ಯೂಬ್ ಗಳಲ್ಲಿ ರೆಸಿಪಿ ನೋಡಿ ನೀವು ಇದನ್ನು ತಯಾರಿಸಬಹುದು. ಮಕ್ಕಳು ಇದನ್ನು ಇಷ್ಟಪಟ್ಟು ಸೇವನೆ ಮಾಡ್ತಾರೆ.
ಡಾರ್ಕ್ ಚಾಕೊಲೇಟ್ ಓಟ್ಸ್ : ಡಾರ್ಕ್ ಚಾಕೋಲೇಟ್ ಓಟ್ಸ್ ಕೂಡ ಮಕ್ಕಳಿಗೆ ಇಷ್ಟವಾಗುತ್ತೆ. ನಟ್ಸ್, ಡ್ರೈ ಫ್ರೂಟ್ಸ್, ಗೋಲ್ಡನ್ ರೋಲ್ಡ್ ಓಟ್ಸ್ ಬಳಸಿ ಇದನ್ನು ತಯಾರಿಸಬೇಕು. ಮಕ್ಕಳ ಹೃದಯ ಸೇರಿದಂತೆ ಎಲ್ಲ ಆರೋಗ್ಯಕ್ಕೆ ಇದು ಉತ್ತಮವಾಗಿದೆ. ಚಿಯಾ ಬೀಜ, ಕುಂಬಳಕಾಯಿ ಬೀಜ, ಕೋಕಾ, ಹಿಮಾಲಯನ್ ಪಿಂಕ್ ಉಪ್ಪು, ರಾ ಶುಗರ್ ನಿಂದ ತಯಾರಿಸಿದ ಈ ತಿಂಡಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
Raw Papaya Recipe: ಮಕ್ಕಳಿಗೆ ಇಷ್ಟವಾಗುತ್ತೆ ಪಪ್ಪಾಯಿ ಕಾಯಿಯ ಈ ರೆಸಿಪಿ
ಲಿಟಲ್ ರಾಗಿ ನೂಡಲ್ಸ್ : ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ನೂಡಲ್ಸ್ ಇಷ್ಟ. ಅನ್ನ ಬೇಡ ಎನ್ನುವ ಮಕ್ಕಳು ನೂಡಲ್ಸ್ ತಿನ್ನುತ್ತಾರೆ. ಮಕ್ಕಳಿಗೆ ನೂಡಲ್ಸ್ ತಿನ್ನಿಸೋದು ಸುಲಭ. ಆದ್ರೆ ಎಲ್ಲ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ರಾಗಿಯಿಂದ ಮಾಡಿದ ನೂಡಲ್ಸ್ ನಲ್ಲಿ ರಂಜಕ ಸಮೃದ್ಧವಾಗಿದೆ. ಇದನ್ನು ಹುರಿಯುವ ಬದಲು ಬಿಸಿಲಿನಲ್ಲಿ ಒಣಗಿಸಿ ತಯಾರಿಸಲಾಗುತ್ತದೆ. ಅಲ್ಲದೆ ನೈಸರ್ಗಿಕ ಮಸಾಲೆಗಳನ್ನು ಹಾಕೋದ್ರಿಂದ ಇದ್ರ ರುಚಿ ಹೆಚ್ಚಾಗುತ್ತದೆ. ಇದು ಸಂಪೂರ್ಣವಾಗಿ ಸಸ್ಯಾಹಾರಿ ನೂಡಲ್ಸ್ ಆಗಿದ್ದು ಇದನ್ನು ಐದು ನಿಮಿಷಗಳಲ್ಲಿ ತಯಾರಿಸಬಹುದು.