ಡಯಾಬಿಟಿಸ್ ಇದ್ರೆ ಚಿಕನ್ ಸೈಡಿಗಿಡಿ, ಮಟನ್‌ ಟೇಸ್ಟ್ ಮಾಡಿ

By Suvarna News  |  First Published Jul 1, 2022, 11:54 AM IST

ಡಯಾಬಿಟಿಸ್ (Diabetes) ಇರೋರು ತಮ್ಮ ಆರೋಗ್ಯದ (Health) ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೀವನಶೈಲಿ (Lifestyle), ಆಹಾರಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನಾನ್‌ವೆಜ್ (Nonveg) ವಿಷ್ಯಕ್ಕೆ ಬಂದಾಗ ಸಕ್ಕರೆ ಕಾಯಿಲೆ ಇರೋರಿಗೆ ಯಾವುದು ಬೆಸ್ಟ್‌.


ಡಯಾಬಿಟಿಸ್  (Diabetes) ಕಾಣಿಸಿಕೊಂಡ ನಂತರ ವ್ಯಕ್ತಿಯೊಬ್ಬನ ಜೀವನಶೈಲಿ (Lifestyle) ಸಂಪೂರ್ಣವಾಗಿ ಬದಲಾಗುತ್ತದೆ. ಸಕ್ಕರೆ ಕಾಯಿಲೆ ಇರೋರು ತಮಗೆ ಇಷ್ಟವಾದ ಆಹಾರಗಳನ್ನೆಲ್ಲಾ ತಿನ್ನುವಂತಿಲ್ಲ. ಪ್ರಮುಖವಾಗಿ ಈ ಕಾಯಿಲೆ ಇರುವವರು ಊಟ-ತಿಂಡಿಯ ವಿಷ್ಯದಲ್ಲಿ ಎಷ್ಟು ಜಾಗರೂಕತೆ, ವಹಿಸುತ್ತಾರೋ ಅಷ್ಟು ಒಳ್ಳೆಯದು. ಎಲ್ಲದರಲ್ಲೂ ನೀತಿ-ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಭಾರತೀಯ ನಾನ್‌ ವೆಜ್ ರೆಸ್ಟೊರೆಂಟ್‌ಗೆ ಹೋದರೂ ಚಿಕನ್‌, ಮಟನ್ ಭಕ್ಷ್ಯಗಳನ್ನು ನೀವು ಕಾಣಬಹುದು. ಎಲ್ಲರೂ ಇದರಲ್ಲಿ ಟೇಸ್ಟಿ ಎನಿಸಿದ ಆಹಾರಗಳನ್ನು ಆಯ್ದುಕೊಳ್ಳುತ್ತಾರೆ. ಆದರೆ ಡಯಾಬಿಟಿಸ್ ಪೇಶೆಂಟ್ಸ್ ಚಿಕನ್ ಅಥವಾ ಮಟನ್ ಯಾವುದನ್ನು ತಿನ್ನೋದು ಒಳ್ಳೆಯದು ?

ಆಹಾರ (Food)ಗಳ ಸೇವನೆಯ ವಿಷ್ಯದಲ್ಲಿ ಆಯ್ಕೆಗಳು ಎದುರಾದಾಗ, ಕೆಲವರು ನಾನ್ ವೆಜ್ (Nonveg) ಇಷ್ಟಪಟ್ಟರೆ ಇನ್ನು ಕೆಲವರು, ಸಸ್ಯಾಹಾರ ಪದಾರ್ಥ ಗಳನ್ನು ಮಾತ್ರ ಸೇವನೆ ಮಾಡಲು ಇಷ್ಟಪಡುತ್ತಾರೆ. ಮಾಂಸಾಹಾರ ಹಾಗೂ ಸಸ್ಯಾಹಾರ ಎರಡರಲ್ಲೂ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಸಿಗುತ್ತವೆ. ಹಾಗಾಗಿ ಮಾಂಸಾಹಾರ ಹಾಗೂ ಸಸ್ಯಾಹಾರ ಇವೆರಡೂ ಕೂಡ ಮಧುಮೇಹಿಳ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಮಿತವಾಗಿರಬೇಕು. ಜೊತೆಗೆ ಡಯಾಬಿಟಿಸ್ ಇರೋರು ಯಾವ ರೀತಿಯ ಮಾಂಸ ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನು ತಿಳ್ಕೋಬೇಕು.

Tap to resize

Latest Videos

ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಕಾರಿ ಈ ದ್ವಿದಳ ಧಾನ್ಯಗಳು

ಮಧುಮೇಹಿಗಳ ಆರೋಗ್ಯಕ್ಕೆ ಮಾಂಸಾಹಾರ ಒಳ್ಳೆಯದೇ ?
ಸಕ್ಕರೆಕಾಯಿಲೆ ಇರುವವರು, ತಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡು, ಕಟ್ಟುಮನಿಟ್ಟಿನ ಆಹಾರ ಪದ್ಧತಿ ಯನ್ನು ಅನುಸರಿಸಬೇಕಾಗುತ್ತದೆ. ತಮಗೆ ಇಷ್ಟವಿದ್ದರೂ ಕೂಡ ಕೆಲ ವೊಂದು ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ಕಡೆಗಣಿಸ ಬೇಕಾಗುತ್ತದೆ. ಇನ್ನು ನಾನ್ ವೆಜ್ ವಿಷ್ಯಕ್ಕೆ ಬರುವುದಾದರೆ, ಕೋಳಿ ಮಾಂಸಕ್ಕಿಂತಲೂ, ಆಡಿನ ಮಾಂಸವನ್ನು ಮಿತವಾಗಿ ಸೇವನೆ ಮಾಡಬಹುದಂತೆ

ಬೇರೆ ಯಾವುದೇ ಮಾಂಸಾಹಾರ ಪದಾರ್ಥಗಳಿಗೆ ಹೋಲಿಸಿದರೆ, ಹೆಚ್ಚಿನವವರು ಇಷ್ಟಪಟ್ಟು ಸೇವನೆ ಮಾಡುವುದು ಚಿಕನ್. ಇದು ಕೇವಲ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಕೂಡಾ ಚಿಕನ್‌ನಲ್ಲಿ ಇರುತ್ತದೆ. ಆದ್ರೆ ಮಧುಮೇಹಿಗಳು ಚಿಕನ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವಂತಿಲ್ಲ. ಯಾಕೆಂದರೆ ಈ ಮಾಂಸ ಜೀರ್ಣಗೊಳ್ಳಲು ಹೆಚ್ಚಿನ ಶ್ರಮ ತೆಗೆದುಕೊಳ್ಳುತ್ತವೆಯಂತೆ. ಆದರೆ ಇದರಲ್ಲಿ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವ ಗಳಾಗಿರುವ , ರಿಬೋಫ್ಲಾವಿನ್, ಕಬ್ಬಿನಾಂಶ, ಸತು, ಪೋಸ್ಪರಸ್, ಥೈಮೇನ್, ವಿಟಮಿನ್ ಬಿ12 ಯಥೇಚ್ಛವಾಗಿ ಕಂಡು ಬರುವುದರಿಂದ ಮಿತವಾಗಿ ಸೇವನೆ ಮಾಡುವು ದರಲ್ಲಿ ತಪ್ಪಿಲ್ಲ.

ಮಧುಮೇಹಿಗಳು ಹಲಸಿನ ಹಣ್ಣು ಅಥವಾ ಕಾಯಿ ಯಾವುದು ತಿಂದ್ರೆ ಒಳ್ಳೇದು ?

ಚಿಕನ್ ಅಥವಾ ಮಟನ್ ಯಾವುದು ಒಳ್ಳೆಯದು ?
ಮಟನ್‌ನಿಂದ ತಯಾರಿಸಿದ ಭೋಜನವನ್ನು ತಿನ್ನುವ ಅವಕಾಶವನ್ನು ಭಾರತೀಯರು ಬಿಡುವುದಿಲ್ಲ. ಏಕೆಂದರೆ, ಮಟನ್ ಬಿರಿಯಾನಿಯು ಪರಿಮಳ, ರುಚಿ ಮತ್ತು ಪೋಷಕಾಂಶಗಳ ಪರಿಪೂರ್ಣ ಮಿಶ್ರಣವಾಗಿದೆ. ಇದು ಹಸಿವನ್ನು ತ್ವರಿತವಾಗಿ ಪೂರೈಸುತ್ತದೆ. ಮಧುಮೇಹ ಇರುವವರು ಮಟನ್ ಬಿರಿಯಾನಿಯನ್ನು ಮಿತವಾಗಿ ತಿನ್ನಬೇಕು. ಯಾಕೆಂದರೆ ಇದು ಬಹಳಷ್ಟು ಎಣ್ಣೆಯನ್ನು ಹೊಂದಿರುತ್ತದೆ, ವಿಶೇಷವಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ತಯಾರಿಸಿದ ಆಹಾರಗಳು ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು.

ತಜ್ಞರು ಹೇಳುವ ಪ್ರಕಾರ, ಸಕ್ಕರೆಕಾಯಿಲೆ ಇರುವವರಿಗೆ ಕೋಳಿ ಮಾಂಸಕ್ಕೆ ಹೋಲಿಸಿದರೆ ಆಡಿನ ಮಾಂಸ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ. ಆದರೆ  ಜನರು ಕೋಳಿ ಮಾಂಸ ತುಂಬಾ ಅಗ್ಗವಾಗಿರುವ ಕಾರಣದಿಂದಾಗಿ ಅದನ್ನೇ ಆಯ್ಕೆ ಮಾಡುವರು. ಆದರೆ ಆಡಿನ ಮಾಂಸವು ಕೋಳಿ ಮಾಂಸಕ್ಕಿಂತ ಹೆಚ್ಚು ಆರೋಗ್ಯಕಾರಿ ಎಂದು ಹೇಳ ಲಾಗಿದೆ. ಯಾಕೆಂದರೆ, ಇದರಲ್ಲಿ ಲೀನ್ ಪ್ರೋಟೀನ್ ಮತ್ತು ದೇಹದ ಹಾರ್ಮೋನ್‌ ನಲ್ಲಿ ಏರುಪೇರಾಗದಂತಹ ಅಮಿನೋ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಬೇರೆ ಬಗೆಯ ಮಾಂಸಗಳಿಗೆ ಹೋಲಿಕೆ ಮಾಡಿ ನೋಡುವುದಾದರೆ ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ ಎಂದು ಹೇಳಲಾಗಿದೆ.

click me!