ತೂಕ ಇಳಿಸಬೇಕು ಎನ್ನುವವರು ಐಸ್ ಕ್ರೀಂನಿಂದ ದೂರ ಇರ್ತಾರೆ. ಐಸ್ ಕ್ರೀಮ ಇಷ್ಟ ಇರೋರಿಗೆ ಐಸ್ ಕ್ರೀಂ ಬೇಡ ಅಂತ ತಲೆ ಅಲ್ಲಾಡೀಸೋದು ಕಷ್ಟದ ಕೆಲಸ. ನೀವೂ ಈ ಕೆಟಗರಿಯಲ್ಲಿ ಸೇರಿದ್ರೆ ಈ ಐಸ್ ಕ್ರೀಂ ರೆಸಿಪಿ ಟ್ರೈ ಮಾಡಿ.
ತೂಕ ಹೆಚ್ಚಳ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನುಂಟು ಮಾಡುತ್ತದೆ. ತೂಕ ನಿಯಂತ್ರಣಕ್ಕೆ ಜನರು ಹರಸಾಹಸಪಡ್ತಾರೆ. ಕೊಬ್ಬು, ಡಯಾಬಿಟಿಸ್, ಕೊಲೆಸ್ಟ್ರಾಲ್ ಸೇರಿದಂತೆ ನಾನಾ ಸಮಸ್ಯೆ ನಮ್ಮನ್ನು ಕಾಡುತ್ತದೆ. ಜನರು ತೂಕ ಹೆಚ್ಚಾಗ್ತಿದ್ದಂತೆ ಎಚ್ಚರಿಕೆ ವಹಿಸ್ತಾರೆ. ಡಯಟ್ ಆಹಾರ ಸೇವನೆ ಶುರು ಮಾಡ್ತಾರೆ. ಬಾಯಿ ಕಟ್ಟೋದು ಅನಿವಾರ್ಯವಾಗುತ್ತದೆ. ಫಿಜ್ಜಾ, ಬರ್ಗರ್ ಸೇರಿ ಐಸ್ ಕ್ರೀಂಗೆ ಕೂಡ ಬ್ರೇಕ್ ಹಾಕ್ಬೇಕಾಗುತ್ತದೆ. ಬೇಸಿಗೆಯಲ್ಲಿ ಐಸ್ ಕ್ರೀಂ ತಿನ್ನದೆ ಸುಮ್ಮನಿರೋದು ಸವಾಲಿನ ಕೆಲಸ. ಬಹುತೇಕ ಎಲ್ಲರೂ ಬೇಸಿಗೆಯಲ್ಲಿ ಐಸ್ ಕ್ರೀಂ ತಿನ್ನುತ್ತಾರೆ. ತೂಕ ಹೆಚ್ಚಾಗುತ್ತೆ ಎನ್ನುವ ಕಾರಣಕ್ಕೆ ನೀವೂ ಐಸ್ ಕ್ರೀಂ ಬಿಟ್ಟಿದ್ರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫಿಟ್ನೆಸ್ ಟ್ರೈನರ್ ಯಾಸ್ಮಿನ್ ಕರಾಚಿವಾಲಾ ಹೇಳಿದ ಟಿಪ್ಸ್ ಫಾಲೋ ಮಾಡಿ.
ಯಾಸ್ಮಿನ್ ಕರಾಚಿವಾಲಾ ಐಸ್ ಕ್ರೀಂ (Ice Cream) ತಯಾರಿಸುವ ರೆಸಿಪಿ (Recipe) ಹೇಳಿದ್ದಾರೆ. ಅವರ ಪ್ರಕಾರ, ಅವರು ಹೇಳಿದಂತೆ ಐಸ್ ಕ್ರೀಂ ತಯಾರಿಸಿ ತಿಂದ್ರೆ ತೂಕ ಏರಿಕೆ ಆಗೋ ಬದಲು ಇಳಿಯುತ್ತಂತೆ. ಯಾಸ್ಮಿನ್ ಕರಾಚಿವಾಲಾ (Yasmin Karachiwala) ಪ್ರಕಾರ, ಈ ಐಸ್ ಕ್ರೀಂ ತಯಾರಿಸಲು ಐಸ್ ಕ್ರೀಂ, ಮೇಪಲ್ ಸಿರಪ್, ಮೆಲ್ಟ್ ಡಾರ್ಕ್ ಚಾಕೋಲೇಟ್, ಸೇಬು ಮತ್ತು ಅಕ್ರೋಟ್ ಅಗತ್ಯವಿರುತ್ತದೆ.
WATCH: ಎಲ್ಲಿಗೆ ಬಂತಪ್ಪ ಕಾಲ.. ದೊಡ್ಡಣ್ಣ ಸಿನಿಮಾ ಸ್ಟೈಲ್‌ನ 'ಇವಾದೋಪು' ಟ್ರೈ ಮಾಡಿದ ಗಂಡ-ಹೆಂಡ್ತಿ!
ಸೇಬು ಮತ್ತು ಅಕ್ರೋಟ್ ನಲ್ಲಿ ಫೈಬರ್ ಇರುತ್ತದೆ. ಅದು ಚಯಾಪಚಯಕ್ಕೆ ಪ್ರಯೋಜನಕಾರಿ. ಚಯಾಪಚಯ ಕ್ರಿಯೆ ಸರಿಯಾದ್ರೆ ಅದು ನಿಮ್ಮ ತೂಕ ಇಳಿಕೆಯಲ್ಲಿ ನೆರವಾಗುತ್ತದೆ. ವೆಗನ್ ಡಯಟ್ ಫಾಲೋ ಮಾಡುವವರಿಗೆ ಅಂದ್ರೆ ಹಾಲು ಹಾಗೂ ಹಾಲಿನ ಉತ್ಪನ್ನ ಬಳಕೆ ಮಾಡದವರಿಗೆ ಈ ಐಸ್ ಕ್ರೀಂ ಪ್ರಯೋಜನಕಾರಿಯಾಗಿದೆ.
ತೂಕ ಇಳಿಸುವ ಐಸ್ ಕ್ರೀಂ ತಯಾರಿಸುವ ವಿಧಾನ : ಮೊದಲು ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆಯಬೇಕು. ನಂತ್ರ ಅದನ್ನು ಸಣ್ಣದಾಗಿ ಕತ್ತರಿಸಿ. ನಂತ್ರ ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ, ಅದಕ್ಕೆ ಕತ್ತರಿಸಿದ ಸೇಬು ಹಾಕಿ ಬೇಯಿಸಿಕೊಳ್ಳಿ. ಸೇಬು ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ. ಸೇಬುವನ್ನು ನೀರಿನಿಂದ ತೆಗೆದು ಅದು ತಣ್ಣಗಾಗಲು ಬಿಡಿ. ನಂತ್ರ ಮಿಕ್ಸಿ ಜಾರ್ ಗೆ ಸೇಬು ಹಣ್ಣು, ಡಾರ್ಕ್ ಚಾಕೋಲೇಟ್ (Dark Chocolate) ಹಾಕಿ ಮಿಕ್ಸಿ ಮಾಡಿ. ನಂತ್ರ ಈ ಮಿಶ್ರಣಕ್ಕೆ ಮೇಪಲ್ ಸಿರಪ್ ಹಾಕಿ ಮತ್ತೆ ಮಿಕ್ಸಿ ಮಾಡಬೇಕು.
ಈ ಮಿಶ್ರಣವನ್ನು ಐಸ್ ಕ್ರೀಂ (Ice Cream) ತಯಾರಿಸುವ ಜಾರ್ ಗೆ ಹಾಕಿ. ನಂತ್ರ ಅದ್ರ ಮೇಲೆ ಅಕ್ರೋಡ್ ಚೂರುಗಳನ್ನು ಉದುರಿಸಿ. ನಂತ್ರ ಈ ಮಿಶ್ರಣವನ್ನು ಫ್ರೀಜರ್ ನಲ್ಲಿ ಇಡಿ. ಒಂದೆರಡು ಗಂಟೆ ನಂತ್ರ ನಿಮ್ಮ ಐಸ್ ಕ್ರೀಂ ತಿನ್ನಲು ಸಿದ್ಧವಾಗುತ್ತದೆ.
ಐಸ್ ಕ್ರೀಂನಿಂದ ತೂಕ ಹೆಚ್ಚಳ (Weight Gain): ಒಂದು ಕಪ್ ವೆನಿಲ್ಲಾ ಐಸ್ ಕ್ರೀಮ್ 273 ಕ್ಯಾಲೋರಿಗಳು, 31 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 14.5 ಗ್ರಾಂ ಕೊಬ್ಬು ಮತ್ತು 28 ಗ್ರಾಂ ಸಕ್ಕರೆ ಹೊಂದಿರುತ್ತದೆ. ಅದೇ ಸಕ್ಕರೆ ಸೇರಿಸದ ಹಾಲು-ಆಧಾರಿತ ಐಸ್ ಕ್ರೀಮ್ ಪ್ರತಿ ಕಪ್ ನಲ್ಲಿ ಕನಿಷ್ಟ 6 ಗ್ರಾಂ ಲ್ಯಾಕ್ಟೋಸ್ ಇರುತ್ತದೆ. ಇದು ಯಾವುದೇ ಫೈಬರ್ ಹೊಂದಿರೋದಿಲ್ಲ. ಹಾಗಾಗಿ ಅತಿಯಾದ ಐಸ್ ಕ್ರೀಂ ಸೇವನೆ ಒಳ್ಳೆಯದಲ್ಲ. ಅಪರೂಪಕ್ಕೆ ಐಸ್ ಕ್ರೀಂ ಸೇವನೆ ಮಾಡಿದ್ರೆ ಚಿಂತಿಸುವ ಅಗತ್ಯವಿಲ್ಲ.
ಮಧುಮೇಹ ಇರುವವರು ಅನ್ನವನ್ನು ಹೇಗೆ ತಿನ್ನಬೇಕು?
ಐಸ್ ಕ್ರೀಮ್ ಸೇವನೆಯಿಂದಲೂ ಪ್ರಯೋಜನವಿದೆ. ಅದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದ್ರಲ್ಲಿ ಕಾರ್ಬೋಹೈಡ್ರೇಟ್ ಕಂಡು ಬರುತ್ತದೆ. ಅದ್ರ ಪೋಷಕಾಂಶ (Vitamins) ನೀವು ಅದನ್ನು ಹೇಗೆ ತಯಾರಿಸುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ.