ಇತ್ತೀಚೆಗೆ ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳು ನಾಯಿ ಕೊಡೆಗಳಂತೆ ತಲೆಯೆತ್ತುತ್ತಿವೆ. ಹೀಗಾಗಿ ಫಿಟ್‌ನೆಸ್ ಬಗ್ಗೆ ಕ್ರೇಜ್ ಇಟ್ಟುಕೊಂಡಿರೋರ ಸಂಖ್ಯೆ ಹೆಚ್ಚಾಗಿದೆ. ಹೀಗೆ ವಿಪರೀತ ವರ್ಕೌಟ್ ಮಾಡ್ತಿದ್ದ ದೇಹದಾರ್ಢ್ಯ ಪಟು ಮೃತಪಟ್ಟಿದ್ದಾರೆ. ಅದಕ್ಕೇನು ಕಾರಣ ?
ತಮಿಳುನಾಡು: ತಮಿಳುನಾಡಿನ ಕಡಲೂರು ಜಿಲ್ಲೆಯ ವಡ್ಲೂರಿನಲ್ಲಿ ಉನಲ್ಲಿ ರೋಟಿ ತಿಂದಿದ್ದು, ಆಹಾರ ಗಂಟಲಿಗೆ ಸಿಲುಕಿ ಮೃತಪಟ್ಟಿದ್ದಾರೆ. 21ರ ಹರೆಯದ ಎಂ.ಹರಿಹರನ್ ರಾಜ್ಯ ಮಟ್ಟದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ಗೆ ಮುನ್ನ ತರಬೇತಿ ಪಡೆಯುತ್ತಿದ್ದರು. ತಾಲೀಮು ಸಮಯದಲ್ಲಿ, ಅವರು ಬಿಡುವು ಮಾಡಿಕೊಂಡು ರೋಟಿ ತಿನ್ನಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ರೋಟಿಯ ಚೂರು ಗಂಟಲಿಗೆ ಸಿಲುಕಿ ಹಾಕಿಕೊಂಡಿದ್ದು, ಉಸಿರಾಡಲಾಗದೆ ಒದ್ದಾಡಿದರು. ನಂತರ ಉಸಿರುಗಟ್ಟುವಿಕೆಯಿಂದಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ
ಹರಿಹರನ್ ಸೇಲಂ ಜಿಲ್ಲೆಯ ಪೆರಿಯಾ ಕೊಲ್ಲಪಟ್ಟಿ ನಿವಾಸಿ ಎಂದು ಹೇಳಲಾಗುತ್ತಿದೆ. ಅವರು 70 ಕೆಜಿ ಅಡಿಯಲ್ಲಿ ದೇಹದಾರ್ಢ್ಯ ಪಟು (Body builder) ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಯಾಗಿದ್ದರು. ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಕಡಲೂರಿಗೆ ಬಂದಿದ್ದರು. ಅವರೆಲ್ಲರೂ ಮದುವೆ ಮಂಟಪದಲ್ಲಿ ತಂಗಿದ್ದರು. ಭಾನುವಾರ ರಾತ್ರಿ 8 ಗಂಟೆಗೆ ಹರಿಹರನ್ ವರ್ಕೌಟ್ ಮಾಡುತ್ತಿದ್ದರು. ಬಿಡುವು ಮಾಡಿಕೊಂಡು ರೋಟಿ ತಿಂದರು. ಈ ವೇಳೆ ದೊಡ್ಡ ರೊಟ್ಟಿಯೊಂದು ಗಂಟಲಲ್ಲಿ (Throat) ಸಿಲುಕಿಕೊಂಡಿತ್ತು. ಅವರಿಗೆ ಉಸಿರಾಡಲು ಸಹ ಸಾಧ್ಯವಾಗಲಿಲ್ಲ. ಸ್ಪಲ್ಪ ಹೊತ್ತಿನಲ್ಲೇ ಪ್ರಜ್ಞೆ ಸಹ ತಪ್ಪಿತು. ತರಾತುರಿಯಲ್ಲಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲಿಸಿದ ವೈದ್ಯರು (Doctors) ಮೃತಪಟ್ಟಿರುವುದಾಗಿ ಘೋಷಿಸಿದರು.
undefined
ಈ ರೆಸ್ಟೋರೆಂಟ್‌ನಲ್ಲಿ ಫುಡ್ ಡೆಲಿವರಿ ಮಾಡೋದು ಬಾಡಿ ಬಿಲ್ಡರ್ಸ್..! ತಿಂಗಳ ಆದಾಯ ಲಕ್ಷ ಲಕ್ಷ
ಹೆಚ್ಚು ಹಸಿವಿದ್ದಾಗ ತಿನ್ನುವಾಗ ಜಾಗರೂಕರಾಗಿರಿ
ಹೆಚ್ಚು ಹಸಿವಿನಿಂದ ಬಳಲುತ್ತಿರುವಾಗ ಆಹಾರ (Food) ತಿನ್ನುವಾಗ ಯಾವಾಗಲೂ ಜಾಗರೂಕರಾಗಿರುವಂತೆ ತಜ್ಞರು ಹೇಳುತ್ತಾರೆ. ಯಾಕೆಂದರೆ ಈ ಸಂದರ್ಭದಲ್ಲಿ ಬೇಗ ಬೇಗನೇ ತಿನ್ನುವ ಕಾರಣ ಘನವಸ್ತುಗಳು ಕೆಲವೊಮ್ಮೆ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ.. ಆಹಾರವು ಶ್ವಾಸನಾಳವನ್ನು ಪ್ರವೇಶಿಸುತ್ತದೆ ಮತ್ತು ಸಾವಿನ (Danger) ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೋಗಿಯು ವೈದ್ಯರನ್ನು ತಲುಪುವ ಮೊದಲು ಸಾಯುತ್ತಾನೆ.
ಹೀಗೆ ಸಾಮಾನ್ಯವಾಗಿ ಆಹಾರ ಗಂಟಲಿನಲ್ಲಿ ಸಿಲುಕಿಕೊಂಡರೆ ಜನರು ಗಂಟಲಿಗೆ ಕೈ ಹಾಕುವ ಮೂಲಕ ವಾಂತಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ಮಾಡುವುದು ಲಾರಿಕ್ಸ್ ಅನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಶ್ವಾಸಕೋಶವನ್ನು (Lungs) ತಲುಪುವ ಶ್ವಾಸನಾಳಕ್ಕೆ ಅಡಚಣೆಯುಂಟಾಗುತ್ತದೆ. ಇದನ್ನು ಲಾರಿಂಗೋಸ್ಪಾಸ್ಮ್ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾವಿನ ಸಾಧ್ಯತೆಯು ಹೆಚ್ಚಾಗುತ್ತದೆ.
ಅದೇ ಸಮಯದಲ್ಲಿ, ಆಹಾರವು ಕೆಲವೊಮ್ಮೆ ಶ್ವಾಸನಾಳಕ್ಕೆ ಹೋಗುತ್ತದೆ. ಇದರಿಂದ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ರೋಗಿಯು ಆಸ್ಪತ್ರೆಯನ್ನು ತಲುಪುವ ಹೊತ್ತಿಗೆ ಜೀವಂತವಾಗಿದ್ದರೆ, ಹೈಮ್ಲಿಚ್ ಕುಶಲತೆಯ ಮೂಲಕ ಅಂಟಿಕೊಂಡಿರುವ ಆಹಾರವನ್ನು ಸುಲಭವಾಗಿ ತೆಗೆಯಬಹುದು ಎಂದು ಅವರು ಮಾಹಿತಿ ನೀಡುತ್ತಾರೆ.
ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಇರುವೆ, ಯಪ್ಪಾ..ಯಾವಾಗ್ಲೂ ಇದೇ ಗೋಳಾ..
8 ತಿಂಗಳ ಮಗುವಿನ ಗಂಟಲಲಿತ್ತು ಬಾಟಲ್ ಮುಚ್ಚಳ
8 ತಿಂಗಳ ಮಗು ಆಕಸ್ಮಿಕವಾಗಿ 2 ಸೆಂ.ಮೀನ ಬಾಟಲ್‌ನ ರಬ್ಬರ್ ಮುಚ್ಚಳವನ್ನು ನುಂಗಿದ್ದನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಫೋರ್ಟಿಸ್ ಆಸ್ಪತ್ರೆ ವೈದ್ಯರು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಎನ್‌ಟಿ ತಜ್ಞ ಡಾ. ಎಚ್. ಕೆ. ಸುಶೀನ್ ದತ್ ಹಾಗೂ ಡಾ ನರೇಂದ್ರನಾಥ್ ಅವರ ತಂಡ ಈ ಚಿಕಿತ್ಸೆ ನಡೆಸಿದರು. ಈ ಕುರಿತು ಮಾತನಾಡಿದ ಡಾ.ನರೇಂದ್ರನಾಥ್, 8 ತಿಂಗಳ ಗಂಡು ಮಗುವು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ರಬ್ಬರ್‌ನಂತಿದ್ದ ಬಾಟಲ್‌ನ ಮುಚ್ಚಳವನ್ನು ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಪೋಷಕರಿಗೂ ತಿಳಿದಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ಧ್ವನಿಯೂ ಕ್ಷೀಣಿಸುತ್ತಾ ಬಂದಿತ್ತು ಎಂದು ಹೇಳಿದರು.
ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಹಾರ ಸೇವಿಸುತ್ತಿರಲಿಲ್ಲ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ದನಿ ಹೊರಡುತ್ತಿತ್ತು. ಇದರಿಂದ ಗಾಬರಿಯಾದ ಕುಟುಂಬಸ್ಥರು ಫೋರ್ಟಿಸ್ ಆಸ್ಪತ್ರೆಗೆ ಕರೆ ತಂದರು. ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ, ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದಾಗ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ತಿಳಿದು ಬಂದಿತ್ತು. ಕೂಡಲೇ ಆ ಮುಚ್ಚಳವನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾದೆವು ಎಂದು ಡಾ.ನರೇಂದ್ರನಾಥ್, ಮಾಹಿತಿ ನೀಡಿದ್ದಾರೆ.