ಮುಸ್ಲಿಂ ವ್ಯಾಪಾರಿಗಳಿಂದಲೇ ದೂರು, ಬೇರೆ ಮಾಂಸ ಮಾರಾಟ ಆರೋಪ, ಅಬ್ದುಲ್ ರಜಾಕ್ ವಿಚಾರಣೆಗೆ ಬುಲಾವ್

By Gowthami K  |  First Published Jul 27, 2024, 11:32 AM IST

ರಾಜಸ್ಥಾನದಿಂದ ಬೆಂಗಳೂರಿಗೆ ಕಳಪೆ ಮಾಂಸ ರವಾನೆ ಆರೋಪದ ಹಿನ್ನೆಲೆ, ಉದ್ಯಮಿ ಅಬ್ದುಲ್‌ ರಜಾಕ್‌ ಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ವಿಚಾರಣೆಗೆ ಬುಲಾವ್ ನೀಡಲಾಗಿದೆ.


ಬೆಂಗಳೂರು (ಜು.27): ರಾಜಸ್ಥಾನದಿಂದ ಬೆಂಗಳೂರಿಗೆ ಕುರಿ ಮಾಂಸದ ಬದಲು ಬೇರೆ ಮಾಂಸ ಮತ್ತು ಕಳಪೆ ಗುಣಮಟ್ಟದ ಮಾಂಸ ಮಾರಾಟವಾಗುತ್ತಿದೆ ಎಂದು ಮುಸ್ಲಿಂ ಮಾಂಸದ ವ್ಯಾಪಾರಿಗಳು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ  ಹಿಂದೂ ಸಂಘಟನೆ ಕಾರ್ಯಕರ್ತರು ರೈಲಿನ ಮೂಲಕ ಬಂದ ಮಾಂಸವನ್ನು ಸ್ಥಳದಲ್ಲೇ ಓಪನ್ ಮಾಡಿಸುವಂತೆ ಒತ್ತಡ ಹೇರಿದರು.

ಶುಕ್ರವಾರ ರಾಜಸ್ಥಾನದಿಂದ ಸುಮಾರು 90 ಬಾಕ್ಸ್‌ಗಳಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಮಾಂಸವು ಸರಬರಾಜಾಗಿತ್ತು. ಈ ಬಗ್ಗೆ ಅನುಮಾನಗೊಂಡ ಹಿಂದೂಪರ ಸಂಘಟನೆಗಳು ದಾಳಿ ನಡೆಸಿ, ಸರಬರಾಜಾಗಿರುವ ಮಾಂಸವು ಕುರಿಯದ್ದಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಬೆಂಗಳೂರು ಮಾಂಸ ದಂಧೆ ಪ್ರಕರಣ: ಬಂಧಿತ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Tap to resize

Latest Videos

undefined

ಈ ವೇಳೆ ಉದ್ಯಮಿ ಅಬ್ದುಲ್‌ ರಜಾಕ್‌ ಅವರು, 90 ಬಾಕ್ಸ್‌ಗಳಲ್ಲಿದ್ದ ಮಾಂಸವನ್ನು ಪರಿಶೀಲಿಸಲು ಅವಕಾಶ ಕೊಡದೆ ಅಡ್ಡಿಪಡಿಸಿದ್ದರು. ಬಳಿಕ ಪೊಲೀಸರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿದ್ದು ಪೊಲೀಸರ ನೆರವಿನೊಂದಿಗೆ ಬಾಕ್ಸ್‌ಗಳಲ್ಲಿದ್ದ  ಮಾಂಸದ ತುಂಡುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆರಂಭದಲ್ಲಿ ಬಾಕ್ಸ್‌ಗಳನ್ನು ತೆರೆಯಲು ಆಹಾರ ಇಲಾಖೆ ಅಧಿಕಾರಿಗಳಿಗೂ ಕೂಡ ಅವಕಾಶ ನೀಡಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯಿಂದ ಅಬ್ದುಲ್ ರಜಾಕ್ ಗೆ ಬಲಾವ್ ನೀಡಲಾಗಿದೆ. ಬೆಳಗ್ಗೆ 11ಗಂಟೆಗೆ ಕಚೇರಿಗೆ ಬರಲು ಸೂಚನೆ ನೀಡಲಾಗಿದೆ. ಡೆಸಿಗ್ನೇಟೆಡ್ ಆಫಿಸರ್ ಡಾ. ಜನಾರ್ಧನ್ ರಿಂದ ವಿಚಾರಣೆ ನಡೆಯಲಿದೆ. ಎಲ್ಲಿಂದ ಮಾಂಸ ತರಿಸಲಾಗಿದೆ? ಎಷ್ಟು ಗಂಟೆಗಳ ಕಾಲ‌‌ ಮಾಂಸ ಫ್ರೀಜ್ ನಲ್ಲಿ ಇರುತ್ತೆ? ಬ್ಯುಸಿನೆಸ್ ಗೆ ಸಂಬಂಧಿಸಿದಂತೆ ಏನೆಲ್ಲಾ ಲೈಸೆನ್ಸ್ ಇದೆ? ರಾಜಸ್ಥಾನದಲ್ಲಿ ಯಾವ ರೀತಿ ಮಾಂಸದ ಮಾರಾಟ ನಡೆಯುತ್ತೆ? ಈ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ. ಶುಕ್ರವಾರ ವಿಚಾರಣೆಗೆ ಹಾಜರಾಗಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದರು.

ಬೆಂಗಳೂರಲ್ಲಿ ಪ್ರತಿ ಕೆ.ಜಿ ಮಟನ್‌ಗೆ 750 ರೂ., ಆದರೆ ರಾಜಸ್ಥಾನದಿಂದ ತರಿಸಿಕೊಳ್ಳೋ 450 ರೂ. ಮಾಂಸ ಯಾವುದು?

ಆರೋಪ ಹಿನ್ನೆಲೆ ಮೊದಲು ಯಾವ ಪ್ರಾಣಿಯ ಮಾಂಸ ಅನ್ನೋದರ ಬಗ್ಗೆ ತನಿಖೆ ನಡೆಯಲಿದೆ. ಜೊತೆಗೆ ಮಾಂಸದ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಎಷ್ಟು ದಿನದ ಮಾಂಸ. ತಿನ್ನಲು ಯೋಗ್ಯವಾದ ಅಂಶವಿದ್ಯಾ..? ಅನ್ನೋ ಬಗ್ಗೆ ಪರಿಶೀಲನೆ ನಡೆಯಲಿದೆ.

ಕಾನೂನು ನಿಯಮ ಮೀರಿದ್ರೆ ಅಬ್ದುಲ್ ರಜಾಕ್ ಗೆ ಕಾನೂನು ಸಂಕಷ್ಟ ಎದುರಾಗಲಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಯಲಿದ್ದು, ಆರೋಗ್ಯ ಇಲಾಖೆಯ ಕಾನೂನು ಅಡಿ ಕೂಡ ಅರೆಸ್ಟ್ ಮಾಡಬಹುದು. ನಿಯಮ ಉಲ್ಲಂಘನೆ ಮಾಡಿದ್ರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ. ಸದ್ಯ ಮಾಂಸದ ಕ್ವಾಲಿಟಿ ಬಗ್ಗೆ ಪರಿಶೀಲನೆ ಮಾಡ್ತಿರೋ ಆರೋಗ್ಯ ಅಧಿಕಾರಿಗಳು, ಲ್ಯಾಬ್ ರಿಪೋರ್ಟ್ ಬಂದ ಮೇಲೆ ಅಬ್ದುಲ್ ರಜಾಕ್ ಗೆ ಸಂಕಷ್ಟ ಸಾಧ್ಯತೆ ಇದೆ.

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಡಿಓ ಡಾ ಜನಾರ್ದನ್  ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿಕೆ ನೀಡಿ, ಕುರಿ ಮಾಂಸ ಬದಲಿಗೆ ನಾಯಿ ಮಾಂಸ ಸಾಗಾಟ ಮಾಡ್ತಿದ್ರು ಅನ್ನೋದ್ನ ಮೇಲ್ಕೋಟಕ್ಕೆ ಹೇಳಕ್ಕಾಗಲ್ಲ. ಹಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ನಮ್ಮ ಇಲಾಖೆಗೂ ದೂರು ಬಂದಿದೆ. ದೂರಿನನ್ವಯ ನಾವು ತನಿಖೆಗೆ ಮುಂದಾಗಿದ್ದು ಒಂದು ಕಮಿಟಿ ರಚಿಸಲು ಮುಂದಾಗಿದ್ದೇವೆ. ಮಾಂಸ ಸಾಗಾಟಕ್ಕೆ ರಾಜ್ಯ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಲೈಸೆನ್ಸ್ ಕೊಡೋದಕ್ಕೆ ಬರೋದಿಲ್ಲ.

ಕೇಂದ್ರ FSSAI ನವರು ಮಾತ್ರ ಮಾಂಸ ಸಾಗಾಟಕ್ಕೆ‌ ಲೈಸೆನ್ಸ್ ನೀಡ್ತಾರೆ. ಮಾಂಸದಂಗಡಿಗೆ ಮಾತ್ರ ರಾಜ್ಯ ಆಹಾರ ಗುಣಮಟ್ಟ ಇಲಾಖೆ ಲೈಸೆನ್ಸ್ ನೀಡಲು ಅವಕಾಶವಿದೆ. ಹೀಗಾಗಿ ಇಂದು ಅಬ್ದುಲ್ ರಜಾಕ್ ನನ್ನು ಕಚೇರಿಗೆ ಕರೆಯಲಾಗಿದೆ. ಲೈಸೆನ್ಸ್ ಸೇರಿದಂತೆ ಡಾಕ್ಯುಮೆಂಟ್ಸ್ ತಂದು ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ. ಈಗಾಗಲೆ ಸ್ಯಾಂಪಲ್ ಟೆಸ್ಟ್ ಮಾಡಲು ಲ್ಯಾಬ್ ಗೆ ಇಂದು ಕಳಿಸಲಾಗುತ್ತೆ. 14 ದಿನಗಳೊಳಗೆ ವರದಿ ಇಲಾಖೆ ಕೈ ಸೇರಲಿದೆ, ವರದಿ ಬಂದ ಬಳಿಕ ನಿರ್ಧಾರ ಮಾಡಬಹುದು. ಇಂದು ಆಹಾರ ಗುಣಮಯ ಹಾಗೂ ಸುರಕ್ಷತೆ ಇಲಾಖೆಯಲ್ಲಿ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಮಾಂಸ ಸಾಗಾಟಕ್ಕೆ ಲೈಸೆನ್ಸ್ ಪಡೆಯದಿದ್ದಲ್ಲಿ ಕೇಂದ್ರ FSSAI ಗೆ ಆಯುಕ್ತರು ಪತ್ರ ಬರೆಯಲಿದ್ದಾರೆ. ಈ ಹಿಂದೆಯೂ ದೂರು ಬಂದಾಗ ರೆಸ್ಟೋರೆಂಟ್ ಗಳಿಗೆ ದಾಳಿ ಮಾಡಿದ್ದೆವು. ಆದ್ರೆ ಕುರಿ ಮಾಂಸ ಹೊರತಾಗಿ ಬೇರೆ ಯಾವುದು ಸಿಕ್ಕಿಲ್ಲ. ವರದಿ ಬಳಿಕ ತಪ್ಪು ಕಂಡುಬಂದಲ್ಲಿ ಅಂತವರಿಗೆ ಕಾಯ್ದೆ ಪ್ರಕಾರ 7 ವರ್ಷ ಶಿಕ್ಷೆಯಾಗಲಿದೆ ಎಂದು  ಡಾ ಜನಾರ್ಧನ್ ಹೇಳಿದ್ದಾರೆ.

click me!