
ಬೆಂಗಳೂರಿನಲ್ಲಿ ಇರುವವರಿಗೆ ಇಡ್ಲಿ-ವಡೆ ಕಾಂಬಿನೇಶನ್ ಅಂದ್ರೆ ಬಹಳ ಪ್ರಿಯ. ಫುಡ್ ಇಷ್ಟಪಡುವವರು ಈ ಸುದ್ದಿ ನೋಡಲೇಬೇಕು. ಇಡ್ಲಿಯಿಂದ ಕ್ಯಾನ್ಸರ್ ಎಂಬ ಭಯಾನಕ ಸತ್ಯ ಹೊರಬಿದ್ದಿದೆ.
ಹೌದು ರಸ್ತೆಬದಿ ಇಡ್ಲಿ ತಿನ್ನೋ ಮೊದಲು ಯೋಚನೆ ಮಾಡಿ. ನಿಮ್ಮ ನೆಚ್ಚಿನ ಇಡ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆಹಾರ ಇಲಾಖೆಯ ಇಡ್ಲಿ ಸ್ಯಾಂಪಲ್ಸ್ ಗಳಲ್ಲಿ ಆಘಾತಕಾರಿ ವರದಿ ಬಯಲಾಗಿದೆ. 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಗಳು ತಿನ್ನಲು ಆರೋಗ್ಯಕರವಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹಲವಡೆ ಇತ್ತೀಚೆಗೆ ಬಟ್ಟೆಯ ಬದಲಾಗಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ.
Snacks Recipe: ಸ್ವಲ್ಪ ಉಪ್ಪು-ಖಾರ, ಮಸಾಲೆ ಹಾಕಿ ಇಡ್ಲಿಗೆ ಕೊಡಿ ಸ್ಪೈಸಿ ಟಚ್
ಪ್ಲಾಸ್ಟಿಕ್ ಹಾಳೆ ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೆ ಆಹಾರ ಇಲಾಖೆ ಬೆಂಗಳೂರಿನ ಹಲವಡೆ ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿತು.
ಆಹಾರ ಹಾಗೂ ಗುಣಮಟ್ಟ ಇಲಾಖೆಯಿಂದ ನಗರದ ವಿವಿಧ ಭಾಗದಲ್ಲಿ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಲಾಗಿದ್ದು, ಹೋಟೆಲ್ ಹಾಗೂ ತಿಂಡಿಗಳ ಅಂಗಡಿಗಳಲ್ಲಿ ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸಿದೆ.
ಇವುಗಳಲ್ಲಿ ಕೆಲವು ಸ್ಯಾಂಪಲ್ಸ್ ಗಳ ಫಲಿತಾಂಶ ಬಂದಿದ್ದು, ಈ ಪೈಕಿ 35 ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅನ್ ಸೇಪ್ ಎಂದು ವರದಿ ಬಹಿರಂಗವಾಗಿದೆ. ಉಳಿದ ನೂರಾರು ಇಡ್ಲಿ ಸ್ಯಾಂಪಲ್ಸ್ ನ ವರದಿಗೆ ಆಹಾರ ಇಲಾಖೆ ಕಾಯುತ್ತಿದೆ.
ಮನೆಯಲ್ಲಿಯೇ ಆರೋಗ್ಯಕರ ರಾಗಿ ಇಡ್ಲಿ ತಯಾರಿಸಿ; ಹೊಟ್ಟೆತುಂಬಾ ತಿನ್ನಿ!
ಪೂರ್ಣ ವರದಿ ಬಳಿಕ ಪ್ಲಾಸ್ಟಿಕ್ ಪೇಪರ್ ಬ್ಯಾನ್ ಗೆ ಆಹಾರ ಇಲಾಖೆ ಪ್ಲಾನ್ ಮಾಡ್ತಿದೆ. ಈ ಹಿಂದೆ ಫುಡ್ ಕಲರ್ ಆಹಾರದಲ್ಲಿ ಬಳಕೆ ಅನೇಕ ರೋಗ ಮತ್ತು ಕ್ಯಾನ್ಸರ್ ಬರಲು ಕಾರಣ ಎಂಬ ವರದಿ ಬಹಿರಂಗವಾಗಿತ್ತು. ಇದಾದ ನಂತ ರಾಜ್ಯದಲ್ಲಿ ಫುಡ್ ಕಲರ್ ಬಳಕೆಯನ್ನು ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಎಲ್ಲರ ಫೇವರೆಟ್ ಇಡ್ಲಿಗೂ ಇದೇ ರೀತಿಯ ಕಂಟಕ ಬಂದಿದೆ. ಸರ್ಕಾರ ಈಗೇನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮಾತ್ರವಲ್ಲ ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಇಡ್ಲಿಯನ್ನು ಇಡೇ ರೀತಿ ಬೇಯಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಬಗ್ಗೆಯೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.