Food
Idli
ಇಡ್ಲಿ: 4, ಅಚ್ಚ ಖಾರದ ಪುಡಿ 1/2 ಟೀ ಸ್ಪೂನ್, ಜೀರಿಗೆ-ಸಾಸಿವೆ: 1/2 ಟೀ ಸ್ಪೂನ್, ಚಿಟಿಕೆ ಅರಿಶಿನ, ಗರಂ ಮಸಾಲೆ: 1/2 ಟೀ ಸ್ಪೂನ್, ಕರೀಬೇವು: 4 ಎಲೆ, ಬೆಳ್ಳುಳ್ಳಿ: 5-6 ಎಸಳು, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು
ಮೊದಲಿಗೆ ಇಡ್ಲಿಯನ್ನು ಸಣ್ಣ ಸಣ್ಣ ಭಾಗಗಳಾಗಿ ಕತ್ತರಿಸಿಕೊಳ್ಳಿ. ಒಂದು ಇಡ್ಲಿಯಲ್ಲಿ 4 ರಿಂದ 6 ಪೀಸ್ ಮಾಡಿಕೊಳ್ಳಬೇಕು.
ಒಲೆ ಮೇಲೆ ಪಾತ್ರೆ ಇಟ್ಕೊಂಡು ಎಣ್ಣೆ ಹಾಕಿ ಜೀರಿಗೆ, ಸಾಸವೆ, ಕರೀಬೇವು ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿಕೊಳ್ಳಿ.
ನಂತರ ಒಲೆ ಆಫ್ ಮಾಡಿ ಅಚ್ಚ ಖಾರದ ಪುಡಿ, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಕೊನೆಗೆ ಇದಕ್ಕೆ ಪೀಸ್ ಮಾಡಿಕೊಂಡಿರುವ ಇಡ್ಲಿ ಸೇರಿಸಿಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಕೊನೆಗೆ ಮಕ್ಕಳು ಇಷ್ಟಪಡ್ತಿದ್ರೆ ಮ್ಯಾಗಿ ಮಸಾಲೆ/ ನಿಂಬೆ ಹಣ್ಣಿನ ರಸ ಸೇರಿಸಬಹುದು.