ಕೋಲ್ಕತ್ತಾ:(ಜ.10) ಇತ್ತೀಚೆಗೆ ಮದುವೆಯಲ್ಲಿ ಹಳೆ ಸಂಪ್ರದಾಯಗಳನ್ನು ಮುರಿದು ಹೊಸತನ ಮೆರೆಯುವುದು ಸಾಮಾನ್ಯ ಎನಿಸಿ ಬಿಟ್ಟಿದೆ. ಮದುವೆ ಕಾಗದಗಳಿಂದ ಹಿಡಿದು ಅಲಂಕಾರ ಸಂಪ್ರದಾಯಗಳಲ್ಲಿಯೂ ಜನ ಇಂದು ಹೊಸತನ ಮೆರೆಯುತ್ತಿದ್ದಾರೆ. ಇದೀಗ ಬೆಂಗಾಲಿ ಸಮುದಾಯವೊಂದು ಮದುವೆಯ ಊಟದ ಮೆನುವನ್ನು ಅಡಿಕೋಲಿನಲ್ಲಿ ಬರೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆಯ ಆಹಾರ ಮೆನು ಅಡಿಕೋಲಿನಲ್ಲಿ ಪ್ರಿಂಟ್ ಆಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಮನೆ ಎಂದರೆ ಸಾಕು ಅಲ್ಲಿ ಭೂರಿ ಭೋಜನ ಸಿದ್ಧವಿರುತ್ತದೆ. ಅದರಲ್ಲೂ ಭಾರತೀಯ ಮದುವೆಗಳಲಂತೂ ಬಾಯಲ್ಲಿ ನೀರೂರಿಸುವ ಭೋಜನಕ್ಕಾಗಿಯೇ ಜನ ಮದುವೆ ಮನೆಗೆ ಬರುವುದುಂಟು. ಅದ್ದೂರಿ ಅಲಂಕಾರ ಮತ್ತು ವ್ಯವಸ್ಥೆಗಳಿಗೆ ಹೋಲಿಸಿದರೆ ಮದುವೆಯಲ್ಲಿ ನೀಡಲಾದ ಹಲವಾರು ರುಚಿಕರವಾದ ಭಕ್ಷ್ಯಗಳೇ ಅತಿಥಿಗಳಿಗೆ ದೊಡ್ಡ ಆಕರ್ಷಣೆಯಾಗಿರುತ್ತದೆ. ನೀವು ಮದುವೆಗೆ ಎಷ್ಟೇ ಖರ್ಚು ಮಾಡಿ ಆದರೆ ಮದುವೆಯಂದು ಮಾಡಿದ ಭೋಜನ ಸರಿ ಇಲ್ಲವೆಂದಾದರೆ ಜನ ಜೋಡಿ ಚೆನ್ನಾಗಿತ್ತು. ಆದರೆ ಊಟ ಅಷ್ಟಕಷ್ಟೇ ಎಂಬ ಮಾತನ್ನು ಹೇಳಿಯೇ ಹೇಳುತ್ತಾರೆ.
মেপে খাবেন, সেই জন্য। pic.twitter.com/F4C3R98Hhq
— Stereotypewriter (@babumoshoy)
30 ಸೆಂಟಿಮೀಟರ್‌ನ ಅಡಿಕೋಲಿನಲ್ಲಿ ಈ ಮೆನುವನ್ನು ಬರೆಸಲಾಗಿದೆ. ಈ ಮೆನುವಿನಲ್ಲಿ ಫಿಶ್ ಕಲಿಯ, ಫ್ರೈಡ್ ರೈಸ್, ಮಟನ್ ಮಸಾಲಾ ಸೇರಿದಂತೆ ಹಲವರು ಬಗೆಯ ವೆರೈಟಿಗಳಿದ್ದವು. ಈ ವಿವಾಹವೂ ಪಶ್ಚಿಮ ಬಂಗಾಳದ (West Bengal) ದ ಸಿಲಿಗುರಿ (Siliguri) ಯಲ್ಲಿ ನಡೆದಿದ್ದು, ಸುಶ್ಮಿತಾ ( Sushmita) ಹಾಗೂ ಅನಿಮೇಶ್ (Animesh)ಎಂಬುವರ ವಿವಾಹದ ಊಟದ ಮೆನು ಇದಾಗಿದೆ. ಇನ್ನು ಅಡಿಕೋಲಿನಲ್ಲಿ ಊಟದ ಮೆನು ನೋಡಿದ ನೆಟ್ಟಿಗರು ಯಾರಾದರೂ ಹೆಚ್ಚು ತಿನ್ನಲು ಬಯಸಿದರೆ ಅದನ್ನು ಹೊಡೆಯಲು ದಯವಿಟ್ಟು ಬಳಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ವಯೋಮಿತಿ ಏರಿಕೆ ಭೀತಿ: ತುರ್ತು ಮದುವೆಗೆ ಮುಗಿಬಿದ್ದ ಮುಸ್ಲಿಮರು!
ಪಶ್ಚಿಮ ಬಂಗಾಳದಲ್ಲಿ ಮದುವೆಗೆ ವಿನೂತನ ಮೆನು ಕಾರ್ಡ್‌ಗಳನ್ನು ಸಿದ್ಧಪಡಿಸುವ ಸಂಪ್ರದಾಯವಿದೆ. ಕಳೆದ ವರ್ಷ, ಫೆಬ್ರವರಿಯಲ್ಲಿ, ಕೋಲ್ಕತ್ತಾ ದಂಪತಿಗಳು ತಮ್ಮ ಮದುವೆಯ ಆಹಾರ ಮೆನು ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ನಂತೆ ಮುದ್ರಿಸಿದ್ದರು. ಆರಂಭದ ಸ್ಟಾರ್ಟರ್ಸ್‌ನಿಂದ ಹಿಡಿದು ಸಿಹಿತಿಂಡಿಗಳವರೆಗೆ, ಎಲ್ಲವನ್ನೂ ಅಧಿಕೃತ ದಾಖಲೆಗೆ ಅನುಗುಣವಾಗಿ ಬರೆಯಲಾಗಿತ್ತು.
ಪಿಂಕ್ ಜೊತೆ 40 ವರ್ಷಗಳ ಪ್ರೀತಿ... ಕೊನೆಗೂ ಮದುವೆಯಲ್ಲಿ ಸಮಾಪ್ತಿ