Health Benefits of Mango: ಕೆಲವರು, ರುಚಿ ರುಚಿ ಮಾವಿನ ಹಣ್ಣನ್ನು ಒಂದಾದ್ಮೇಲೆ ಒಂದರಂತೆ ನಾಲ್ಕೈದು ತಿಂದು ಬಿಡ್ತಾರೆ. ಮಾವಿನ ಹಣ್ಣು ನೋಡಿದ್ರೆ ಬಾಯಲ್ಲಿ ನೀರೂರತ್ತೆ. ಆದ್ರೆ ಕೆಲವರು ಮಾವಿನ ಹಣ್ಣಿನಿಂದ ದೂರವಿರ್ತಾರೆ. ಮಾವಿನ ಪ್ರಯೋಜನ ನಿಮಗೆ ತಿಳಿದ್ರೆ ಇಂದಿನಿಂದ್ಲೇ ಸೇವನೆ ಶುರು ಮಾಡೋದು ಗ್ಯಾರಂಟಿ.
ಹಣ್ಣು (Fruit)ಗಳ ರಾಜ (King) ಮಾವು (Mango). ಎಲ್ಲರಿಗೂ ಇಷ್ಟವಾಗುವ ಹಣ್ಣು ಮಾವು. ಏಪ್ರಿಲ್ (April) ಶುರುವಾಗ್ತಿದ್ದಂತೆ ಮಾರುಕಟ್ಟೆ (Market) ಯಲ್ಲಿರುವ ಮಾವಿನ ಹಣ್ಣು ಮನೆಗೆ ಬರಲು ಶುರುವಾಗುತ್ತದೆ. ಆರಂಭದಲ್ಲಿ ಸಿಗುವ ಹಣ್ಣುಗಳು ಅಷ್ಟು ರುಚಿಯಾಗೇನೂ ಇರೋದಿಲ್ಲ. ಸಿಹಿ ಇರಲಿ ಬಿಡಲಿ, ಮಾವು ಕಂಡ ತಕ್ಷಣ ಖರೀದಿ ಮಾಡ್ಬೇಕು ಎನ್ನಿಸೋದು ಸಹಜ. ಮೇ ತಿಂಗಳಲ್ಲಿ ಮಾವಿನ ಹಣ್ಣಿನ ರುಚಿ (Taste) ಹೆಚ್ಚಾಗುತ್ತದೆ. ಬರೀ ರುಚಿಗೆ ಮಾತ್ರವಲ್ಲ ಮಾವಿನ ಹಣ್ಣು ನಿಮ್ಮ ಆರೋಗ್ಯ (Health) ಕ್ಕೂ ತುಂಬಾ ಪ್ರಯೋಜನಕಾರಿ. ಮಾವಿನ ಹಣ್ಣು ದೇಹದ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ವಿಟಮಿನ್-ಎ, ವಿಟಮಿನ್-ಕೆ, ಖನಿಜಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಮಾವಿನ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಮಾವಿನಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಕೆ (Vitamin K ) ಕೇವಲ ರಕ್ತ ಹೆಪ್ಪುಗಟ್ಟುವಿಕೆಗೆ ಮಾತ್ರ ಪ್ರಯೋಜನಕಾರಿಯಲ್ಲ. ಇದು ರಕ್ತಹೀನತೆಯ (Anemia) ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ. ಮಾವಿನ ಹಣ್ಣು ನಮ್ಮ ಮೂಳೆಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಪ್ರತಿ ದಿನ ಮಾವಿನ ಹಣ್ಣನ್ನು ತಿನ್ಬೇಕು ಎನ್ನುತ್ತಾರೆ. ಪ್ರತಿ ದಿನ ಮಾವಿನ ಹಣ್ಣು ಸೇವನೆ ಮಾಡುವುದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಮಾವಿನ ಹಣ್ಣು ತಿಂದು ಆರೋಗ್ಯ ಕಾಪಾಡಿಕೊಳ್ಳಿ :
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ : ಸದ್ಯದ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದ್ರೆ ನೀವೂ ಮಾವಿನ ಹಣ್ಣು ತಿನ್ನೋದನ್ನು ಮರೆಯಬೇಡಿ.
undefined
ಡ್ರೋನ್ ಮೂಲಕ ದಿನಸಿ ಮನೆ ಬಾಗಿಲಿಗೆ ತಲುಪಿಸಲಿದೆ ಸ್ವಿಗ್ಗಿ, ಬೆಂಗಳೂರಿನಲ್ಲಿ ನಡೆಯಲಿದೆ ಮೊದಲ ಪ್ರಯೋಗ
ತೂಕ ಇಳಿಕೆಗೆ ಮಾವಿನ ಹಣ್ಣು : ತೂಕ ಏರಿಕೆ ಈಗ ಸಾಮಾನ್ಯ ಸಮಸ್ಯೆ. ಬೇಸಿಗೆಯಲ್ಲಿ ಮದುವೆ ಸಮಾರಂಭಗಳು ಹೆಚ್ಚು. ಅತಿಯಾದ ಸೇವನೆಯಿಂದ ಮತ್ತೊಂದಿಷ್ಟು ತೂಕ ಏರಿರುತ್ತದೆ. ಆದ್ರೆ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಮಾವಿನ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಾವಿನ ಹಣ್ಣಿನಲ್ಲಿ ಕಂಡುಬರುವ ಫೈಬರ್ ಗಳು ನಿಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ಹಸಿವು ಕಡಿಮೆಯಾಗ್ತಿದ್ದಂತೆ ಆಹಾರ ಸೇವನೆ ಕಡಿಮೆಯಾಗುತ್ತದೆ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.
ನೆನಪಿನ ಶಕ್ತಿ ಹೆಚ್ಚಿಸುತ್ತೆ ಮಾವಿನ ಹಣ್ಣು : ಮಾವಿನ ಹಣ್ಣು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ನೆನಪಿನ ಶಕ್ತಿ ಕಡಿಮೆಯಿದೆ ಎನ್ನುವವರಿಗೆ ಮಾವಿನ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಗ್ಲುಟಾಮಿನ್ ಆಸಿಡ್ ಎಂಬ ಪೋಷಕಾಂಶವಿದ್ದು, ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾವು ಗರ್ಭಿಣಿಯರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಕ್ಯಾನ್ಸರ್ ನಿಂದ ರಕ್ಷಣೆ : ಮಾವಿನ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮಾವಿನ ಹಣ್ಣಿನಲ್ಲಿರುವ ಕ್ವೆರ್ಸೆಟಿನ್, ಅಸ್ಟ್ರಾಗಾಲಿನ್ ಮತ್ತು ಫಿಸೆಟಿನ್ ನಿಮ್ಮ ದೇಹವನ್ನು ಕ್ಯಾನ್ಸರ್ ಅಪಾಯದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Kitchen Tips : ಮಡಿಕೆ ನೀರು ತಣ್ಣಗಿರಲು ಈ ಟಿಪ್ಸ್ ಫಾಲೋ ಮಾಡಿ
ಜೀರ್ಣಕ್ರಿಯೆಗೆ ಒಳ್ಳೆಯದು ಮಾವು : ಮಾವಿನ ಹಣ್ಣಿನಲ್ಲಿರುವ ಕಿಣ್ವಗಳು ದೇಹದಲ್ಲಿನ ಪ್ರೋಟೀನ್‌ಗಳನ್ನು ಒಡೆಯಲು ಕೆಲಸ ಮಾಡುತ್ತವೆ. ಇದರಿಂದ ನಿಮ್ಮ ಆಹಾರವೂ ಸುಲಭವಾಗಿ ಜೀರ್ಣವಾಗುತ್ತದೆ
ಚರ್ಮಕ್ಕೆ ಪ್ರಯೋಜನಕಾರಿ ಮಾವು : ಇಷ್ಟೇ ಅಲ್ಲ ಮಾವಿನ ಹಣ್ಣು ಚರ್ಮಕ್ಕೆ ಪ್ರಯೋಜನಕಾರಿ. ಮಾವಿನ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ, ಸೋಂಕಿನಿಂದ ಚರ್ಮವನ್ನು ರಕ್ಷಿಸುತ್ತದೆ.