ಸೆಕೆ, ಸೆಕೆ ಅಂತಾ ಫ್ರಿಜ್ ಗೆ ಕೈ ಹಾಕಿ ತಣ್ಣನೆ ನೀರು ಕುಡಿಯುತ್ತೇವೆ. ಆದ್ರೆ ಫ್ರಿಜ್ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದೇ ಕಾರಣಕ್ಕೆ ಅನೇಕರು ಮಣ್ಣಿನ ಮಡಿಕೆ ಇಟ್ಟುಕೊಳ್ತಾರೆ. ಅದ್ರ ನೀರು ಕೂಲ್ ಆಗಿರಬೇಕೆಂದು ಬಯಸ್ತಾರೆ.
ಬೇಸಿಗೆ (Summer) ಅಂದ್ಮೇಲೆ ಬಿಸಿಲಿರ್ಲೇಬೇಕು. ಆದ್ರೆ ಈ ಬಾರಿ ಸೂರ್ಯ (Sun) ನ ಅಬ್ಬರ ಹೆಚ್ಚಾಗಿದೆ. 120 ವರ್ಷದ ನಂತ್ರ ಇದೇ ಮೊದಲ ಬಾರಿ ಇಷ್ಟೊಂದು ಬಿಸಿ (Hot ) ತಾಪ ಕಾಣಿಸಿಕೊಂಡಿದೆ. ಬಿಸಿಲು ಹೆಚ್ಚಾಗ್ತಿದ್ದಂತೆ ಅದರಿಂದ ರಕ್ಷಣೆ ಪಡೆಯಲು ನಾವು ನೆರಳಿನ ಮೊರೆ ಹೋಗ್ತೇವೆ. ತಂಪಾದ ಆಹಾರ (Food ) ಸೇವನೆ ಮಾಡ್ತೇವೆ. ಕೋಲ್ಡ್ (Cold ) ನೀರು (Water) ಕುಡಿಯಲು ಬಯಸ್ತೇವೆ. ಬಿಸಿಲ ಬೇಗೆಯಲ್ಲಿ ತಣ್ಣನೆಯ ನೀರು ಜೀವ (Life ) ಉಳಿಸುತ್ತದೆ. ಅದರಲ್ಲೂ ಸುಡು ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಅಥವಾ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಮನೆ (Home) ಸೇರಿದವರಿಗೆ ತಕ್ಷಣ ತಣ್ಣನೆಯ ನೀರು ಕುಡಿಯುವ ಬಯಕೆಯಾಗುತ್ತದೆ. ಗಂಟಲು (Throat ) ಒಣಗುತ್ತಿರುವಾಗ ತಣ್ಣೀರು ದೇಹಕ್ಕೆ ಚೈತನ್ಯ ನೀಡುತ್ತದೆ. ಈಗಿನ ದಿನಗಳಲ್ಲಿ ಬಹುತೇಕರ ಮನೆಯನ್ನು ಫ್ರಿಜ್ ಆವರಿಸಿದೆ. ತಣ್ಣನೆಯ ನೀರಿಗಾಗಿ ಫ್ರಿಜ್ ಗೆ ಕೈ ಹಾಕ್ತಾರೆ. ಇನ್ನೂ ಕೆಲವರು, ಹಳೆ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಮಡಿಕೆಯಲ್ಲಿ ನೀರನ್ನು ಇಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಹಳೆ ಕಾಲದಲ್ಲಿ ಫ್ರಿಜ್ ಇರಲಿಲ್ಲ. ಆಗ ಜನರು ಮಡಿಕೆ ನೀರನ್ನು ಬಳಸ್ತಾ ಇದ್ದರು. ಮಡಿಕೆ ನೀರು ತಣ್ಣಗಿರುತ್ತದೆ ನಿಜ. ಆದ್ರೆ ಫ್ರಿಜ್ ನಲ್ಲಿಟ್ಟ ನೀರಿನಷ್ಟು ತಣ್ಣಗಿರುವುದಿಲ್ಲ ಎಂದು ಜನರು ಹೇಳ್ತಿರುತ್ತಾರೆ.
ಸಹಜವಾಗಿ, ಫ್ರಿಜ್ ನಲ್ಲಿರುವ ನೀರು ಬೇಗನೆ ತಣ್ಣಗಾಗುತ್ತದೆ. ಆದರೆ ಕೆಲವೊಮ್ಮೆ ಫ್ರಿಜ್ ನೀರು ಆರೋಗ್ಯಕ್ಕೂ ಹಾನಿಕಾರಕ. ಮಣ್ಣಿನ ಮಡಿಕೆ, ನೀರನ್ನು ನೈಸರ್ಗಿಕವಾಗಿ ತಂಪಾಗಿಸುವ ಮೂಲಕ, ಬಾಹ್ಯ ತಾಪಮಾನ ಮತ್ತು ದೇಹದ ಉಷ್ಣತೆಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನೀವೂ ಮನೆಯಲ್ಲಿ ಮಡಿಕೆ ಬಳಸುತ್ತಿದ್ದು, ಆರೋಗ್ಯಕರ ಮಡಿಕೆ ನೀರು ಸೇವನೆ ಮಾಡಲು ಬಯಸಿದ್ದರೆ ನಿಮಗೊಂದಿಷ್ಟು ಸಲಹೆಗಳಿವೆ. ಅದನ್ನು ಪಾಲಿಸುವ ಮೂಲಕ ಮಡಿಕೆ ನೀರನ್ನು ಕೂಡ ತಂಪಾಗಿಸಬಹುದು.
ನೇರವಾಗಿ ನೆಲಕ್ಕೆ ಮಣ್ಣಿನ ಮಡಿಕೆ ಇಡಬೇಡಿ : ಸಾಮಾನ್ಯವಾಗಿ ನಾವೆಲ್ಲ ಈ ತಪ್ಪನ್ನು ಮಾಡ್ತೇವೆ. ಮಣ್ಣಿನ ಹೂಜಿಯಲ್ಲಿ ನೀರು ಹಾಕಿದ್ದರೆ ಅದನ್ನು ನೇರವಾಗಿ ನೆಲಕ್ಕೆ ಇಡ್ತೇವೆ. ನೆಲ ಬಿಸಿ ಇರುವ ಕಾರಣಕ್ಕೆ ಹೂಜಿ ನೀರು ತಣ್ಣಗಾಗುವುದಿಲ್ಲ. ಮತ್ತಷ್ಟು ಬಿಸಿಯಾಗುತ್ತದೆ. ಹಾಗಾಗಿ ಹೂಜಿಯಲ್ಲಿ ನೀರಿಡುವಾಗ ಅದರ ಕೆಳಗೆ ಮಣ್ಣಿನ ಮಡಿಕೆಯನ್ನು ಇಡಿ. ಮಾರುಕಟ್ಟೆಯಲ್ಲಿ ಸಾಕಷ್ಟು ಮಣ್ಣಿನ ಪಾತ್ರೆಗಳು ಈಗ ಲಭ್ಯವಿದೆ. ಒಂದು ವೇಳೆ ಮಣ್ಣಿನ ಮಡಿಕೆ ಖರೀದಿ ಸಾಧ್ಯವಿಲ್ಲವೆಂದಾದ್ರೆ ದೊಡ್ಡ ಪಾತ್ರೆಯಲ್ಲಿ ಮಣ್ಣನ್ನು ಹಾಕಿ, ಅದರ ಮೇಲೆ ಹೂಜಿಯನ್ನು ಇಡಿ.
ಚೈನೀಸ್ ಫುಡ್‌ನಲ್ಲಿ ಬಳಸೋ ಸೋಯಾ ಸಾಸ್‌ನಿಂದ ಆರೋಗ್ಯಕ್ಕೆಷ್ಟು ಪ್ರಯೋಜನವಿದೆ ನೋಡಿ
ಮಣ್ಣಿನ ಮಡಿಕೆ ಸುತ್ತ ಬಟ್ಟೆ ಕಟ್ಟಿ : ಬೇಸಿಗೆಯಲ್ಲಿ ಹೊರಗಿನ ತಾಪಮಾನ ಬಿಸಿಯಾಗಿರುವ ಕಾರಣ ಮಡಿಕೆಯಲ್ಲಿರುವ ನೀರು ಕೂಡ ಬಿಸಿಯಾಗಲು ಪ್ರಾರಂಭಿಸುತ್ತದೆ. ಮಡಿಕೆಯೊಳಗಿರುವ ನೀರನ್ನು ಬಾಹ್ಯ ತಾಪಮಾನದಿಂದ ಸುರಕ್ಷಿತವಾಗಿರಿಸಲು ಹತ್ತಿ ಬಟ್ಟೆಯನ್ನು ಬಳಸಬಹುದು. ಹತ್ತಿ ಬಟ್ಟೆಯನ್ನು ಒದ್ದೆ ಮಾಡಿ ಮತ್ತು ಅದನ್ನು ಮಡಿಕೆಯ ಸುತ್ತ ಸುತ್ತಿ. ಪದೇ ಪದೇ ಹೀಗೆ ಮಾಡುತ್ತಿರಬೇಕು. ಇದರಿಂದ ಮಡಿಕೆಯಲ್ಲಿರುವ ನೀರು ಬಿಸಿಯಾಗುವುದಿಲ್ಲ.
HEALTH TIPS : ರುಚಿಯಾಗಿರುತ್ತೆ ಅಂತಾ ಅಪ್ಪಿತಪ್ಪಿಯೂ ಇವರು ಜೇನುತುಪ್ಪ ಸೇವಿಸ್ಬಾರದು
ಮಡಿಕೆ ಖರೀದಿ ವೇಳೆ ಇದನ್ನು ಗಮನಿಸಿ :
ಮಡಿಕೆ ಖರೀದಿಸುವಾಗ ಕೆಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಬೇಸಿಗೆ ಬಂದಂತೆ ಮಡಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಆದ್ರೆ ಎಲ್ಲ ಮಡಿಕೆಗಳಲ್ಲೂ ನೀರು ತಂಪಾಗಿರುವುದಿಲ್ಲ. ಮೊದಲನೆಯದಾಗಿ ನಿಮ್ಮ ಬೆರಳುಗಳಿಂದ ಮಡಕೆಯ ಬಲವನ್ನು ಪರಿಶೀಲಿಸಿ. ಸ್ವಲ್ಪ ದಪ್ಪಗಿನ ಮೇಲ್ಮೈ ಹೊಂದಿರುವ ಮಡಿಕೆ ಖರೀದಿ ಮಾಡಲು ಮರೆಯದಿರಿ. ಜೋರಾಗಿ ಶಬ್ಧ ಮಾಡುವ ಮಡಿಕೆ ಹೆಚ್ಚು ದೃಢವಾಗಿರುತ್ತದೆ ಮತ್ತು ಅದರಲ್ಲಿ ನೀರು ಹೆಚ್ಚು ಸಮಯ ತಣ್ಣಗಿರುತ್ತದೆ.