Saffron Health Benefits: ಕೋವಿಡ್ ಕಾಲದಲ್ಲಿ ಆಹಾರದಲ್ಲಿರಲಿ ಕೇಸರಿ

Suvarna News   | Asianet News
Published : Jan 14, 2022, 09:56 PM IST
Saffron Health Benefits: ಕೋವಿಡ್ ಕಾಲದಲ್ಲಿ ಆಹಾರದಲ್ಲಿರಲಿ ಕೇಸರಿ

ಸಾರಾಂಶ

ಕೇಸರಿ (Saffron) ಕಾಸ್ಟ್ಲೀ ಅನ್ನೋದು ಹಲವರಿಗೆ ಗೊತ್ತು. ಅಷ್ಟೇ ಅಲ್ಲ ಇದನ್ನು ಹಾಲಿಗೆ ಸೇರಿಸಿ ಕುಡಿಯುವುದು ಆರೋಗ್ಯ (Health)ಕ್ಕೆ ಉತ್ತಮ ಅನ್ನೋದು ಹಲವರಿಗೆ ತಿಳಿದಿರುವ ವಿಷಯ. ಆದ್ರೆ ಕೇಸರಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆ (Problem)ಗಳು ಬಗೆಹರಿಯುತ್ತದೆ ಅನ್ನೋದು ನಿಮಗೆ ತಿಳಿದಿದ್ಯಾ ?

ಕೇಸರಿಯು, ಕೇಸರಿ ಕ್ರೋಕಸ್‌ನ ಹೂವುಗಳಿಂದ ತಯಾರಿಸುವ ಒಂದು ಮಸಾಲೆಯಾಗಿದೆ. ನೇರಳೆ ಬಣ್ಣದ ಹೂವಿನ ಎಳೆಗಳನ್ನು ಒಣಗಿಸಿ ಕೇಸರಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಎಳೆಗಳನ್ನು ಬಳಸಿ ಆಹಾರ ಪದಾರ್ಥಗಳ ರುಚಿ, ಬಣ್ಣ, ಪರಿಮಳವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಹೀಗಾಗಿಯೇ ಕೇಸರಿಯನ್ನು ಸಾಂಬಾರು ಪದಾರ್ಥ, ಮಸಾಲೆ ಪದಾರ್ಥವೆಂದು ಪರಿಗಣಿಸಲಾಗಿದೆ. ಕೇಸರಿ ಸಿಹಿ ರುಚಿಯನ್ನು ಹೊಂದಿದ್ದು, ಸಿಹಿ ಪದಾರ್ಥಗಳು ಮತ್ತು ಸಿಹಿತಿಂಡಿಗಳಲ್ಲಿ ಸೇರಿಸಲು ಸೂಕ್ತವಾಗಿದೆ. ಇದನ್ನು ಬಹಳಷ್ಟು ಸಿಹಿ ಖಾದ್ಯ ತಯಾರಿಕೆಗಳು ಮತ್ತು ಹಾಲು ಮತ್ತು ಬೆಣ್ಣೆ ಹಾಲಿನಂತಹ ಸಿಹಿ ಪಾನೀಯಗಳಿಗೆ ಸೇರಿಸಲಾಗುತ್ತದೆ. ಕೇಸರಿ ಎಳೆಗಳಲ್ಲಿ ಔಷಧೀಯ ಗುಣಗಳು ಸಹ ಇರುವುದರಿಂದ ಇದನ್ನು ಸೌಂದರ್ಯ ವರ್ಧಕ ಉತ್ಪನ್ನ, ಔಷಧಿಗಳಲ್ಲೂ ಬಳಸಲಾಗುತ್ತದೆ.

ಕೇಸರಿ ಸೇವನೆ ರುಚಿಯಾಗಿರುವುದು ಮಾತ್ರವಲ್ಲ ಆರೋಗ್ಯಕ್ಕೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಕೇಸರಿ ಸೇವನೆಯಿಂದ ಆರೋಗ್ಯಕ್ಕಿರುವ ಪ್ರಯೋಜನಗಳೇನು ತಿಳಿಯೋಣ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆಹಾರ ಪದಾರ್ಥಗಳಲ್ಲಿ ಕೇಸರಿ (Saffron)ಯ ಬಳಕೆ ಹಲವು ಆರೋಗ್ಯ (Health) ಸಮಸ್ಯೆಗಳನ್ನು ಬಗೆಹರಿಸುತ್ತದೆ. ಶುಂಠಿ, ಬೆಳ್ಳುಳ್ಳಿ, ಅರಿಶಿನ, ಕರಿಮೆಣಸು, ಲವಂಗ ಮೊದಲಾದ ಮಸಾಲೆ ಪದಾರ್ಥಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೆಯೇ ಕೇಸರಿ ಸೇವನೆಯಿಂದ ಸಹ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜ್ವರ, ಶೀತ ಮತ್ತು ಉಸಿರಾಟದ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಕೇಸರಿಯನ್ನು ಹಲವು ಶತಮಾನಗಳಿಂದ ಬಳಸಲಾಗುತ್ತಿದೆ. ಹಾಗೆಯೇ ಕೇಸರಿಯ ಸೇವನೆ ಕೋವಿಡ್‌ (Covid)ನಿಂದ ಉಂಟಾಗುವ ಖಿನ್ನತೆ, ಒತ್ತಡದಂತಹ ಮಾನಸಿಕ ಸಮಸ್ಯೆಯನ್ನು ಬಗೆಹರಿಸುತ್ತದೆ.

Health Tips: ಹೆಚ್ಚು ಹಾಲು ಹಾಕಿದ ಟೀ ಕುಡಿದ್ರೆ ಆರೋಗ್ಯ ಸಮಸ್ಯೆನೂ ಹೆಚ್ಚು

ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಕೇಸರಿಯಲ್ಲಿರುವ ವಿಟಮಿನ್ (Vitamin) ಸಿ ಅಂಶ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ದೇಹದಲ್ಲಿ ಅನಾರೋಗ್ಯದ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕೇಸರಿಯಲ್ಲಿರುವ ಬಯೋ ಆಕ್ಟಿವ್ ಅಂಶ ಉರಿಯೂತದ ಸಮಸ್ಯೆಯನ್ನು ಬಗೆಹರಿಸುತ್ತದೆ. ರಕ್ತದೊತ್ತಡದ ನಿಯಂತ್ರಿಸುವುದರಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಸ್ನಾಯುಗಳ ಬೆಳವವಣಿಗೆಗೂ ಕೇಸರಿ ಸೇವನೆ ಉತ್ತಮವಾಗಿದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಕೇಸರಿಯಲ್ಲಿರುವ ಕ್ರೋಸಿನ್, ಕ್ರೊಸೆಟಿನ್ ಅಂಶಗಳು ದೇಹದಲ್ಲಿ ರಕ್ತದಲ್ಲಿನ ಹೆಚ್ಚುವರಿ ಗ್ಲುಕೋಸ್ ಸಂಗ್ರಹವನ್ನು ತಡೆಯುತ್ತದೆ. ಕೇಸರಿಯಲ್ಲಿರುವ ಉತ್ಕರ್ಷಣಾ ನಿರೋಧಕ ಅಂಶಗಳು ಮಧುಮೇಹಿಗಳ ದೇಹದಲ್ಲಿರುವ ಗ್ಲುಕೋಸ್ ಪ್ರಮಾಣವನ್ನು ಸಮತೋಲನದಲ್ಲಿಟ್ಟು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು.

ಮೂಳೆಯ ಆರೋಗ್ಯ ವೃದ್ಧಿಯಾಗುತ್ತದೆ
ಕೇಸರಿ ಎಳೆಯಲ್ಲಿ ಖನಿಜ ಮತ್ತು ಕ್ಯಾಲ್ಸಿಯಂ ಅಂಶಗಳು ಅಧಿಕವಾಗಿರುತ್ತವೆ. ಹೀಗಾಗಿ ಕೇಸರಿಯನ್ನು ನಿಯಮಿತವಾಗಿ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂಳೆ ಬಲಗೊಳ್ಳುತ್ತದೆ. ಮೂಳೆ ಸಂಬಂಧಿತ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಕಡಿಮೆಯಾಗುತ್ತದೆ. ಮೂಳೆಗೆ ಸಂಬಂಧಿಸಿದ ರೋಗವಾದ ಆಸ್ಟಿಯೋಪೋರೋಸಿಸ್ ಸಮಸ್ಯೆಯೂ ಕೇಸರಿ ಸೇರಿಸಿದ ಹಾಲು ಕುಡಿಯುವುದರಿಂದ ಕಡಿಮೆಯಾಗುತ್ತಾ ಹೋಗುತ್ತದೆ. ಜತೆಗೆ ಮೂಳೆಗಳು ಹೆಚ್ಚು ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಕೇಸರಿ ಸೇವನೆ ನರಮಂಡಲದ ಅಸ್ವಸ್ಥತೆಯನ್ನು ಸಹ ಕಡಿಮೆ ಮಾಡುತ್ತದೆ. ಅಲ್ಝಮೈರ್, ಮರೆವು ಸೇರಿದಂತೆ ಇತರ ಹಲವು ಸಮಸ್ಯೆಗಳು ಕೇಸರಿ ಸೇವನೆಯಿಂದ ಬಗೆಹರಿಯುತ್ತದೆ.

Kids and Their Bones: ಕೊರೋನಾದಿಂದ ಮಕ್ಕಳನ್ನು ಕಾಡುತ್ತಿದೆ ಮೂಳೆ ಸಮಸ್ಯೆ.. ಪರಿಹಾರ ಏನು?

ಕೇಸರಿಯನ್ನು ಹೇಗೆ ಸೇವಿಸಬೇಕು ?
ಕೇಸರಿಯನ್ನು ಹಾಲು (Milk) ಅಥವಾ ಚಹಾಕ್ಕೆ ಸೇರಿಸಿ ಸೇವಿಸುವುದು ಅದರ ರುಚಿ ಮತ್ತು ಪರಿಮಳವನ್ನು ಸವಿಯಲು ಮತ್ತು ಅದು ಒದಗಿಸುವ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಇದರ ಜೊತೆಗೆ, ಕೇಸರಿಯನ್ನು ಪಲಾವ್ ಅಥವಾ ಸಾದಾ ಅನ್ನಕ್ಕೆ ಸೇರಿಸಿಕೊಂಡು ಸಹ ಸೇವಿಸಬಹುದು. ಕೇಸರಿ ನೀರು ಕುಡಿಯುವುದರಿಂದ ಸಹ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಕೇಸರಿಯ ಐದರಿಂದ ಏಳು ಎಳೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ ಸ್ವಲ್ಪ ಸಮಯದ ನಂತರ ಸೇವಿಸುವುದು ಆರೋಗ್ಯಕ್ಕೆ ಉಪಕಾರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?