ಇಡ್ಲಿ ಉತ್ತಮ ಆಹಾರ. ಅದನ್ನು ಮತ್ತಷ್ಟು ಉತ್ತಮವಾಗಿಸುತ್ತದೆ ಬೀಟ್‌ರೂಟ್. ಅದದೇ ತಿಂಡಿಗಳನ್ನು ತಿಂದು ಬೋರಾಗಿದೆ ಎಂದರೆ ಈ ಆರೋಗ್ಯಕರ ಬೀಟ್‌ರೂಟ್ ಇಡ್ಲಿಗಳನ್ನೇಕೆ ತಯಾರಿಸಬಾರದು? ಅದರಲ್ಲೂ ಸ್ವಲ್ಪ ಮಸಾಲೆ ಪ್ರಿಯರಾದರೆ ಬೀಟ್ರೂಟ್ ಇಡ್ಲಿ ಫ್ರೈ ತಯಾರಿಸಿ.
ದಿನಾ ತಿಂಡಿಗೆ ಇಡ್ಲಿ, ದೋಸೆ, ಉಪ್ಪಿಟ್ಟು ಅವವೇ ತಿಂದು ಯಾರಿಗಾದರೂ ಬೋರಾಗುತ್ತದೆ. ಹೊಸ ತಿಂಡಿ ಏನಪ್ಪಾ ಮಾಡುವುದೆಂದು ಹುಡುಕುತ್ತಿದ್ದರೆ, ಬೀಟ್ರೂಟ್ ಇಡ್ಲಿ ಫ್ರೈಯನ್ನೇಕೆ ಪ್ರಯತ್ನಿಸಬಾರದು?
ಮಸಾಲೆ ಬೇಡವೆಂದಾದಲ್ಲಿ ಬೀಟ್ರೂಟ್ ಇಡ್ಲಿಗೇ ತಯಾರಿ ನಿಲ್ಲಿಸಬಹುದು. ಫ್ರೈ ಮಾಡಿಕೊಂಡಾಗ ಹೆಚ್ಚು ಹೊಸತನ ಸಿಗುತ್ತದೆ.
ಒಟ್ಟು ಅಡುಗೆ ಸಮಯ: 40 ನಿಮಿಷಗಳು
ತಯಾರಿ ಸಮಯ: 10 ನಿಮಿಷಗಳು
ಅಡುಗೆ ಸಮಯ: 30 ನಿಮಿಷಗಳು
ರೆಸಿಪಿ ಸರ್ವಿಂಗ್ಸ್: 2
undefined
ಬೀಟ್ರೂಟ್ ಇಡ್ಲಿ ತಯಾರಿಸಲು ಬೇಕಾದ ಸಾಮಾಗ್ರಿಗಳು
ಬೀಟ್ರೂಟ್ ಇಡ್ಲಿ ಫ್ರೈ ಮಾಡುವುದು ಹೇಗೆ?
1.ಎರಡು ಪ್ರತ್ಯೇಕ ಬಟ್ಟಲುಗಳಲ್ಲಿ, ಅಕ್ಕಿ ಮತ್ತು ಬೇಳೆಯನ್ನು ತೊಳೆಯಿರಿ ಮತ್ತು 6-7 ಗಂಟೆಗಳ ಕಾಲ ನೆನೆಸಿ. ನಂತರ, ಅವುಗಳನ್ನು ನಯವಾಗಿ ಬ್ಲೆಂಡರ್‌ನಲ್ಲಿ ಪೇಸ್ಟ್ ಮಾಡಿ. ಅದನ್ನು ರಾತ್ರಿಯಿಡೀ ಹುದುಗು ಬರಲು ಬಿಡಿ.
2. ಬ್ಲೆಂಡರ್ನಲ್ಲಿ, ಕತ್ತರಿಸಿದ ಬೀಟ್ರೂಟ್ ಅನ್ನು ಹಾಕಿ ಮತ್ತು ಪೇಸ್ಟ್ ತಯಾರಿಸಿಕೊಳ್ಳಿ. ಪೇಸ್ಟ್ ಮೃದುವಾಗಲು ನೀವು 1-2 ಚಮಚದಷ್ಟು ನೀರನ್ನು ಸೇರಿಸಬಹುದು.
3. ಇಡ್ಲಿ ಹಿಟ್ಟು ಹುದುಗಿಸಿದ ನಂತರ, ಬೀಟ್ರೂಟ್ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ, ¼ ಕಪ್ ನೀರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
4. ಇಡ್ಲಿ ಪ್ಲೇಟ್‌ಗಳನ್ನು ತುಪ್ಪ ಅಥವಾ ಎಣ್ಣೆಯಿಂದ ಗ್ರೀಸ್ ಮಾಡಿ ಮತ್ತು ಬೀಟ್ರೂಟ್ ಹಿಟ್ಟನ್ನು ಅದರಲ್ಲಿ ಸುರಿಯಿರಿ. ಇಡ್ಲಿಗಳನ್ನು 15-20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಇಡ್ಲಿಗಳನ್ನು ಅಚ್ಚಿನಿಂದ ತೆಗೆಯುವ ಮೊದಲು ಸ್ವಲ್ಪ ತಣ್ಣಗಾಗಲು ಬಿಡಿ.
5. ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ ಹೊಟ್ಟಿಸಿ. ನಂತರ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.
6. ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಈರುಳ್ಳಿ ತಮ್ಮ ಕಚ್ಚಾತನವನ್ನು ಕಳೆದುಕೊಳ್ಳುವವರೆಗೆ ಮತ್ತು ಅರೆಪಾರದರ್ಶಕವಾಗುವವರೆಗೆ ಬೇಯಿಸಿ. ಈ ಹಂತದಲ್ಲಿ, ನೀವು ಸ್ವಲ್ಪ ಗರಂ ಮಸಾಲವನ್ನು ಸೇರಿಸುವ ಮೂಲಕ ಮಸಾಲೆ ಮಟ್ಟವನ್ನು ಹೆಚ್ಚಿಸಬಹುದು.
7. ಈ ಮಧ್ಯೆ, ಬೀಟ್ರೂಟ್ ಇಡ್ಲಿಗಳನ್ನು ಅಚ್ಚಿನಿಂದ ತೆಗೆದು ಪ್ರತಿಯೊಂದನ್ನೂ ನಾಲ್ಕು ತುಂಡುಗಳಾಗಿ ಕತ್ತರಿಸಿ. ಬೀಟ್ರೂಟ್ ಇಡ್ಲಿ ತುಂಡುಗಳನ್ನು ಮಸಾಲೆ ಇರುವ ಬಾಣಲೆಗೆ ಹಾಕಿ ಮತ್ತು ಮಸಾಲೆ ಚೆನ್ನಾಗಿ ಲೇಪಿತವಾಗುವವರೆಗೆ ಅಂದರೆ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಕೊತ್ತಂಬರಿ ಸೊಪ್ಪು ಸೇರಿಸಿ.
8. ನಿಮ್ಮ ಬೀಟ್ರೂಟ್ ಇಡ್ಲಿ ಫ್ರೈ ಬಡಿಸಲು ಸಿದ್ಧವಾಗಿದೆ! ನೀವು ಈ ಇಡ್ಲಿಗಳನ್ನು ಕಡಲೆಕಾಯಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಬಹುದು!