Holi : ರಂಗಿನಾಟದ ಜೊತೆ ಸಮೋಸ ಸಹವಾಸ ಬೇಡ

By Suvarna News  |  First Published Feb 28, 2023, 5:19 PM IST

ಸಮೋಸಾ ಅಂದ್ರೆ ಅದ್ರಲ್ಲಿ ಆಲೂಗಡ್ಡೆ ಇರ್ಲೇಬೇಕು. ಹಬ್ಬದ ಸಂದರ್ಭದಲ್ಲಿ ಸಮೋಸಾ ತಿನ್ನೋರು ಜಾಸ್ತಿ. ಹೋಳಿಯಲ್ಲಿ ಕೋಲ್ಡ್ ಡ್ರಿಂಕ್ಸ್ ಹಾಗೂ ಸಮೋಸಾಕ್ಕೆ ಎಲ್ಲಿಲ್ಲದ ಬೇಡಿಕೆಯಿರುತ್ತದೆ. ಈ ಬಾರಿ ನಿಮ್ಮ ಮೆನ್ಯುವಿನಲ್ಲಿ ಸಮೋಸಾ ಸೇರಿಸೋ ಮೊದಲು ಇದನ್ನು ಓದಿ.
 


ಹೋಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಯಾವುದೇ ಹಬ್ಬವಾದರೂ ಸರಿ ಮನೆಯ ಮಹಿಳೆಯರು ವಾರ ಮುಂಚೆಯೇ ತಯಾರಿ ಆರಂಭಿಸುತ್ತಾರೆ. ಹಬ್ಬಕ್ಕೆ ಬೇಕಾಗುವ ಸಾಮಾನು, ಪೂಜಾ ಸಾಮಗ್ರಿ, ಹಬ್ಬದ ಅಡುಗೆಗಳ ಬಗ್ಗೆ ಅವರು ಮುಂಚಿತವಾಗಿಯೇ ಪ್ಲಾನ್ ಮಾಡಿಕೊಳ್ಳುತ್ತಾರೆ. 

ಹೋಳಿ (Holi) ಹಬ್ಬದ ದಿನ ಕೂಡ ಕೆಲವರು ಉಪವಾಸ (Fasting), ವೃತಗಳನ್ನು ಮಾಡುವ ಪದ್ಧತಿ ಇಟ್ಟುಕೊಂಡಿರುತ್ತಾರೆ. ಇನ್ಕೆಲವರು ರೊಟ್ಟಿ, ಚಪಾತಿ, ಹಣ್ಣು, ಸಲಾಡ್ ಮುಂತಾದವುಗಳನ್ನು ಸೇವಿಸುತ್ತಾರೆ. ಹಾಗೆಯೇ ಹೋಳಿ ಹಬ್ಬ (Festival) ದ ದಿನ ಕೂಡ ನೈವೇದ್ಯ ಮುಂತಾದ ಆಚರಣೆಗೆ ಖಾದ್ಯಗಳನ್ನು ಮಾಡುತ್ತಾರೆ. ಕೆಲವು ಮನೆಗೆ ದೂರದ ಸಂಬಂಧಿಗಳು ಬರುತ್ತಾರೆ. ಆಗ ನಾವು ಎಲ್ಲರಿಗೂ ಸರಿ ಎನಿಸುವ ಎಲ್ಲರಿಗೂ ಇಷ್ಟವಾಗುವ, ಸೈಡ್ ಇಫೆಕ್ಟ್ ಆಗದ ಅಡುಗೆಯನ್ನೇ ಮಾಡಿಬಡಿಸಬೇಕಾಗುತ್ತದೆ. ಹೀಗಿರುವಾಗ ಈಗಿನವರು ಇಷ್ಟಪಡುವಂತಹ ಹೊಸ ರೀತಿಯ ಅಡುಗೆಯನ್ನು ಮಾಡಬೇಕಾಗುತ್ತದೆ. ಈಗಿನವರು ಹೊಸ ಶೈಲಿಯ, ಕರಿದ ತಿಂಡಿಗಳನ್ನೇ ಇಷ್ಟಪಟ್ಟು ತಿನ್ನುತ್ತಾರೆ. ನಿಮ್ಮ ಹೊಸ ಶೈಲಿಯ ಅಡುಗೆಯಲ್ಲಿ ಸಮೋಸಾ ಸೇರಿದ್ದರೆ ಅದನ್ನು ಮೆನು ಲಿಸ್ಟ್ ನಿಂದ ತೆಗೆಯುವುದು ಉತ್ತಮ. ಏಕೆಂದರೆ ಸಮೋಸಾದಿಂದ ಅನೇಕ ರೀತಿಯ ತೊಂದರೆಗಳು ಆಗುತ್ತವೆ. ಮನೆಯವರು ಅಥವಾ ಮನೆಗೆ ಬಂದ ನೆಂಟರು ಕೆಲವು ಖಾಯಿಲೆಗಳಿಂದ ಬಳಲುತ್ತಿದ್ದರೆ ಅಂತವರಿಗೆ ನೀವು ನೀಡುವ ಸಮೋಸಾ ಮಾರಕವಾಗಬಹುದು.

Tap to resize

Latest Videos

HEALTHY RECIPES : ಬಾಯಲ್ಲಿ ನೀರೂರಿಸುತ್ತೆ ಈ ಟೊಮೇಟೊ ಚಟ್ನಿ

ಸಮೊಸಾದಲ್ಲಿರುವ ಆಲೂಗಡ್ಡೆಯಿಂದ ಕ್ಯಾನ್ಸರ್ :  ಆಲೂಗಡ್ಡೆಯಲ್ಲಿ ಹೆಚ್ಚಿನ ಪಿಷ್ಟದ ಅಂಶವಿದೆ. ಆಲೂಗಡ್ಡೆಯನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ರಾಸಾಯನಿಕ ಅಕ್ರಿಲಾಮೈಡ್ ಉತ್ಪಾದನೆಯಾಗುತ್ತದೆ. ಇದು ಕೆಲವು ಕೈಗಾರಿಕೆಯ ಪ್ರಕ್ರಿಯೆಗಳಲ್ಲಿ ಬಳಸುವ ವಿಷಕಾರಿ ರಾಸಾಯನಿಕವಾಗಿದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿಗೆ ಇದೆ. ಹಾಗಾಗಿ ಸಮೋಸಾ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಮೊಸಾದಲ್ಲಿ ಆಲೂಗಡ್ಡೆ ಇದ್ದೇ ಇರುತ್ತೆ. ಸಾಮಾನ್ಯವಾಗಿ ಎಲ್ಲರೂ ಆಲೂಗಡ್ಡೆಯನ್ನು ಇಷ್ಟಪಡುತ್ತಾರೆ. ಇದನ್ನು ದೀರ್ಘಕಾಲದವರೆಗೆ ಫ್ರಿಜ್ ನಲ್ಲಿಟ್ಟು ನಂತರ ಬಿಸಿ ಮಾಡಿ ತಿಂದರೂ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಫ್ರಿಜ್ ನಲ್ಲಿಟ್ಟ ಆಲೂಗಡ್ಡೆಯಲ್ಲಿರುವ ಅಮೈನೋ ಆಮ್ಲವು  ಆಸ್ಪ್ಯಾರಜಿನ್ ನೊಂದಿಗೆ ಬೆರೆತು ಅಕ್ರಿಲಾಮೈಡ್ ಎಂಬ ರಾಸಾಯನಿಕ ಬಿಡುಗಡೆಮಾಡುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಹಾಗಾಗಿ ನೀವು ಹಬ್ಬಕ್ಕೆ ಆಲೂ ಸಮೊಸಾ ತಯಾರಿಸುವ ಮೊದಲು ಸ್ವಲ್ಪ ಯೋಚಿಸಿ, ಆರೋಗ್ಯ ಕಾಪಾಡಿಕೊಳ್ಳಿ.

ಕೊಲೆಸ್ಟ್ರಾಲ್ ಹೆಚ್ಚು ಇರುವವರಿಗೆ ಸಮೊಸಾ ಬೇಡ : ಹೋಳಿ ಹಬ್ಬ ಆಚರಿಸಲೆಂದು ಬಂದ ಸಂಬಂಧಿಗಳಲ್ಲಿ ಅಥವಾ ನಿಮ್ಮ ಮನೆಯಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿದ್ದರೆ ಸಮೋಸಾ ಬೇಡವೇ ಬೇಡ. ಏಕೆಂದರೆ ಸಮೊಸಾದಲ್ಲಿ ಸಾಕಷ್ಟು ಟ್ರಾನ್ಸ್ ಕೊಬ್ಬುಗಳಿವೆ. ಈ ಟ್ರಾನ್ಸ್ ಕೊಬ್ಬುಗಳು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ನರಗಳನ್ನು ಬ್ಲಾಕ್ ಮಾಡುತ್ತವೆ. ಹಾಗಾಗಿ ಯಾರಿಗೆ ಕೊಲೆಸ್ಟ್ರಾಲ್ ಹೆಚ್ಚಿದೆಯೋ ಅವರು ಕರಿದ ಪದಾರ್ಥಗಳಿಂದ ದೂರವಿರಬೇಕು.

ಶುಗರ್ ಸಮಸ್ಯೆ ಇರುವವರು ಸಮೊಸಾ ತ್ಯಜಿಸಿ : ಮಧುಮೇಹಿಗಳಿಗೂ ಸಮೋಸಾ ಒಳ್ಳೆಯದಲ್ಲ. ಇಂತಹ ಕರಿದ ಪದಾರ್ಥಗಳ ಸೇವನೆಯಿಂದ ಟೈಪ್ 2 ಡಯಾಬಿಟೀಸ್ ಬರಬಹುದು. ಸಮೋಸಾ ಶರೀರದಲ್ಲಿನ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಿಂದ ಊಹಿಸಲಾಗದ ಸಮಸ್ಯೆ ರೋಗಿಯನ್ನು ಬಾಧಿಸಬಹುದು. ಹಾಗಾಗಿ ಮಧುಮೇಹಿಗಳು ಸಮೊಸಾದಿಂದ ದೂರವಿರುವುದು ಒಳ್ಳೆಯದು.

ಹೃದಯದ ತೊಂದರೆ ಇರುವವರಿಗೆ ಸಮೊಸಾ ನಿಷಿದ್ಧ : ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅವಶ್ಯಕ.  ಹಾಗಾಗಿ ಹೃದಯದ ತೊಂದರೆಯಿಂದ ಬಳಲುತ್ತಿರುವವರು, ಹೃದ್ರೋಗಿಗಳು ಸಮೋಸಾವನ್ನು ಮರೆಯುವುದು ಒಳ್ಳೆಯದು. ಇದು ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸಿ ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಹಾರ್ಟ್ ಅಟ್ಯಾಕ್, ಹಾರ್ಟ್ ಫೇಲ್ ಮುಂತಾದ ತೊಂದರೆಗಳು ಉದ್ಭವವಾಗುತ್ತದೆ.

ಬೊಜ್ಜು ಸೌಂದರ್ಯ ಹಾಳು ಮಾಡೋದು ಮಾತ್ರವಲ್ಲ, ಸಾವನ್ನೂ ಸಮೀಪ ತರುತ್ತೆ!

ರಕ್ತದೊತ್ತಡದ ಸಮಸ್ಯೆ : ರಕ್ತದೊತ್ತಡದ ಸಮಸ್ಯೆಯಿಂದ ಮೆದುಳು, ಕಿಡ್ನಿ ವೈಫಲ್ಯ ಉಂಟಾಗಬಹುದು. ಸಮೊಸಾದಂತಹ ಕರಿದ ಪದಾರ್ಥಗಳಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚುತ್ತದೆ.
 

click me!