ಅಮುಲ್‌ನಿಂದ ಹೊಸ ಪ್ರಾಡಕ್ಟ್‌, ಮಾರುಕಟ್ಟೆಗೆ ಬರಲಿದೆ ಹೈ ಪ್ರೋಟೀನ್ ಸೂಪರ್ ಮಿಲ್ಕ್

By Vinutha Perla  |  First Published May 16, 2024, 4:29 PM IST

ದೇಶದ ನಂ.1 ಡೈರಿ ಉತ್ಪನ್ನ ಸಂಸ್ಥೆ ಅಮುಲ್‌ನ ಹೊಸ ಪ್ರಾಡಕ್ಟ್‌ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಹೈ ಪ್ರೋಟೀನ್ ಸೂಪರ್ ಮಿಲ್ಕ್ ಮತ್ತು ಸಾವಯವ ಮಸಾಲೆಗಳು ಸದ್ಯದಲ್ಲೇ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
 


ದೇಶದ ನಂ.1 ಡೈರಿ ಉತ್ಪನ್ನ ಸಂಸ್ಥೆ ಅಮುಲ್‌ನ ಹೊಸ ಪ್ರಾಡಕ್ಟ್‌ ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ. ಹೈ ಪ್ರೋಟೀನ್ ಸೂಪರ್ ಮಿಲ್ಕ್ ಮತ್ತು ಸಾವಯವ ಮಸಾಲೆಗಳು ಸದ್ಯದಲ್ಲೇ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಈ ಸೂಪರ್‌ ಮಿಲ್ಕ್‌ನಲ್ಲಿ ಪ್ರತಿ ಗ್ಲಾಸ್‌ನಲ್ಲಿ ಗಮನಾರ್ಹವಾದ 35 ಗ್ರಾಂ ಪ್ರೋಟೀನ್ ಲಭ್ಯವಿರಲಿದೆ. ಪ್ಯಾಕೇಜಿಂಗ್‌ನಲ್ಲಿರುವ ಪೌಷ್ಟಿಕಾಂಶದ ವಿವರಗಳ ಪ್ರಕಾರ, ಅಮುಲ್ ಟೋನ್ಡ್ ಹಾಲು ಸಾಮಾನ್ಯವಾಗಿ 200 ಮಿಲಿಲೀಟರ್‌ಗಳಿಗೆ (ಮಿಲಿ) ಸುಮಾರು 3 ಗ್ರಾಂ ಪ್ರೋಟೀನ್‌ನ್ನು ಹೊಂದಿರುತ್ತದೆ. ಆದರೆ ಪೂರ್ಣ ಕೆನೆ ರೂಪಾಂತರವು ಸುಮಾರು 7 ಗ್ರಾಂಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಅಮುಲ್ ಎಂಡಿ ಜಾಯೆನ್ ಮೆಹ್ತಾ ಮಾತನಾಡಿ, 'ನಮ್ಮ ಯಾವುದೇ ಉತ್ಪನ್ನಗಳಲ್ಲಿ ಇದು ಅತ್ಯುನ್ನತ ಮಟ್ಟದ ಪ್ರೋಟೀನ್ ಆಗಿದೆ. ಹೀಗಾಗಿಯೇ ನಾವಿದನ್ನು ಸೂಪರ್ ಮಿಲ್ಕ್ ಎಂದು ಕರೆಯುತ್ತೇವೆ' ಎಂದಿದ್ದಾರೆ.

Latest Videos

undefined

ನಾರಿಯೇ'ಅಮುಲ್' ಶಕ್ತಿ; ದೇಶದ ನಂ.1 ಡೈರಿ ಸಂಸ್ಥೆಯಲ್ಲಿದೆ 36 ಲಕ್ಷ ಮಹಿಳೆಯರ ಪಾಲು!

ಅಮುಲ್ ಈಗಾಗಲೇ ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲಸ್ಸಿ, ಮಿಲ್ಕ್‌ಶೇಕ್‌ಗಳು, ಮಜ್ಜಿಗೆ ಮತ್ತು ಹಾಲೊಡಕು ಪ್ರೋಟೀನ್‌ನ ಹೈ-ಪ್ರೋಟೀನ್ ಆವೃತ್ತಿಗಳನ್ನು ಪರಿಚಯಿಸಿದೆ. ಪ್ರತಿಯೊಂದೂ 15-20 ಗ್ರಾಂ ಪ್ರೋಟೀನ್‌ನ್ನು ಹೊಂದಿರುತ್ತದೆ. ಹೆಚ್ಚಿನ ಪ್ರೊಟೀನ್ ಹಾಲಿನ ಜೊತೆಗೆ ಕಂಪನಿಯು 2023ರಲ್ಲಿ 55,000 ಕೋಟಿ ರೂಪಾಯಿ ($7.2 ಬಿಲಿಯನ್) ಮೀರಿದ ವಾರ್ಷಿಕ ವಹಿವಾಟು ಸಾಧಿಸಿದೆ. ಮುಂದಿನ ವಾರ ವಿವಿಧ ಸಾವಯವ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ.

'ಸಾವಯವ ಮಸಾಲೆಗಳು ಈ ವಾರವೇ ಮಾರುಕಟ್ಟೆಗೆ ಬರಲಿವೆ. ನಮ್ಮ ಸಾವಯವ ವಿಭಾಗದಿಂದ ಇನ್ನೂ 20 ಉತ್ಪನ್ನಗಳು ಬಿಡುಗಡೆಯಾಗಲಿದೆ' ಎಂದು ಮೆಹ್ತಾ ಹೇಳಿದ್ದಾರೆ.

ಐಕಾನಿಕ್‌ 'ಅಮೂಲ್‌ ಗರ್ಲ್‌' ಚಿತ್ರ ಬಿಡಿಸಿದ್ದ ಸಿಲ್ವಸ್ಟರ್‌ ಡ ಕುನ್ಹಾ ವಿಧಿವಶ!

ಅಮುಲ್ ಅಮೆರಿಕದ ಮಾರುಕಟ್ಟೆ ಮೇಲೂ ಕಣ್ಣಿಟ್ಟಿದೆ. 'ನಾವು ಬೆಣ್ಣೆ, ಚೀಸ್, ತುಪ್ಪ, ಶ್ರೀಖಂಡ್, ಐಸ್ ಕ್ರೀಮ್ ಮತ್ತು ಪನೀರ್‌ನ್ನು ಯುಎಸ್‌ಗೆ ರಫ್ತು ಮಾಡುತ್ತಿದ್ದೇವೆ. ಯುಎಸ್‌ನಲ್ಲಿರುವ ನಮ್ಮ ಗ್ರಾಹಕರು ಅಮುಲ್ ಗೋಲ್ಡ್‌ನಂತಹ ಹೆಚ್ಚಿನ ಕೊಬ್ಬಿನ ಹಾಲು ಸೇರಿದಂತೆ ಹೆಚ್ಚು ಭಾರತೀಯ ರುಚಿಯನ್ನು ಹೊಂದಿರುವ ನಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಯಸುತ್ತಿದ್ದಾರೆ' ಎಂದು ಮೆಹ್ತಾ ಹೇಳಿದರು.

click me!