ಬೆಳಗ್ಗೆ ಕಾರ್ಪೋರೇಟ್‌ ಜಾಬ್‌, ಸಂಜೆಯಾದ್ರೆ ಟೀ-ಆಮ್ಲೆಟ್ ಮಾರಾಟ ಮಾಡೋ ಕೆಲ್ಸ!

By Vinutha Perla  |  First Published May 16, 2024, 1:09 PM IST

ಇವತ್ತಿನ ದಿನಗಳಲ್ಲಿ ಬರೀ ನೈನ್‌ ಟು ಫೈವ್ ಜಾಬ್‌ ಇದ್ರಷ್ಟೇ ಆಗಲ್ಲ. ಸೈಡ್ ಬಿಸಿನೆಸ್ ಏನಾದ್ರೂ ಬೇಕು ಅನ್ನೋದು ಬಹುತೇಕ ಹಲವರಿಗೆ ಅರಿವಾಗಿದೆ. ಹೀಗಾಗಿಯೇ ಬಿಟೆಕ್‌ ವಡಾಪವಾ, ಚಾಯ್‌ವಾಲಾಗಳ ವೀಡಿಯೋ ಆಗಾಗ ವೈರಲ್‌ ಆಗುತ್ತಿರುತ್ತದೆ. ಹಾಗೆಯೇ ಇತ್ತೀಚಿಗೆ ಬೆಳಗ್ಗೆ ಕಾರ್ಪೋರೇಟ್‌ ಜಾಬ್‌, ಸಂಜೆಯಾದ್ರೆ ಟೀ-ಆಮ್ಲೆಟ್ ಮಾರಾಟ ಮಾಡೋ ವ್ಯಕ್ತಿಯೊಬ್ಬನ ವೀಡಿಯೋ ವೈರಲ್ ಆಗಿದೆ.


ಕಾರ್ಪೊರೇಟ್ ಉದ್ಯೋಗಿ ಟೀ ಸ್ಟಾಲ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಚಾಯ್‌ವಾಲಾ ತನ್ನ ಉದ್ಯೋಗದ ಕುರಿತು ಗ್ರಾಹಕರ ಜೊತೆ ಮಾತನಾಡುವುದನ್ನು ನೋಡಬಹುದು. ಆರ್‌ಜೆ ಸ್ಪೀಡಿ ಕಿಂಗ್ ಹರ್ಯಾನ್ವಿ ಅವರು ಚಾಯ್ ಮಾರಾಟಗಾರರೊಂದಿಗೆ ನಡೆಸಿದ ಸಂಭಾಷಣೆಯನ್ನು ತಮ್ಮ ವೀಡಿಯೊದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೋದಲ್ಲಿ 'ಚಹಾ, ತಿಂಡಿ ಮಾರುವವನೂ ಕಾರ್ಪೊರೇಟ್ ಕೆಲಸ ಮಾಡುತ್ತಾನೆ, ಆದರೆ ತನ್ನ ಜೀವನೋಪಾಯಕ್ಕಾಗಿ ಅದನ್ನು ಸಂಪೂರ್ಣವಾಗಿ ಅವಲಂಬಿಸಿಲ್ಲ' ಎಂಬುದನ್ನು ತಿಳಿಸುತ್ತಾನೆ.

'ನಾನು ಇಲ್ಲಿ ಚಾಯ್ ಮತ್ತು ಆಮ್ಲೆಟ್‌ನ್ನು ಮಾರಾಟ ಮಾಡುತ್ತೇನೆ. ಜೊತೆಗೆ ನಾನು ಕಾರ್ಪೊರೇಟ್‌ ಉದ್ಯೋಗದಲ್ಲಿದ್ದೇನೆ' ಎಂದು ವ್ಯಕ್ತಿ ಹೇಳುತ್ತಾನೆ. 'COVID ನಂತರ, ನಾನು ನಿಯಮಿತ ಜಾಬ್‌ಗಳ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ಸೈಡ್ ಬಿಸಿನೆಸ್ ಮಾಡುವುದು ಅಗತ್ಯವಾಗಿದೆ' ಎಂದು ಕಾರ್ಪೊರೇಟ್ ಚಾಯ್ ವಾಲಾ ಹೇಳುತ್ತಾನೆ.

Latest Videos

undefined

ಕೊತ್ತಂಬರಿ ಸೊಪ್ಪು ಹಾಕಿ ಚಹಾ ಮಾಡೋ ಚಾಯ್‌ವಾಲಾ; ಆಕ್ಷನ್ ಹೀರೋ ತರ ಇವರ ಸ್ಟೈಲ್!

ವೀಡಿಯೊದಲ್ಲಿ ಆರ್‌ಜೆ, 'ನಿಮ್ಮ ಕಾರ್ಪೊರೇಟ್ ಮ್ಯಾನೇಜರ್ ತನ್ನ ಇನ್ನೊಂದು ಆದಾಯದ ಮೂಲದ ಬಗ್ಗೆ ತಿಳಿದರೆ ಏನಾಗುತ್ತದೆ' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಚಾಯ್‌ವಾಲಾ, 'ಆರಂಭದಲ್ಲಿ ಇಷ್ಟೊಂದು ಗ್ರಾಹಕರು ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಈಗ ಜನರು ಈಗ ಇಲ್ಲಿಗೆ ಹೆಚ್ಚಾಗಿ ಬರುತ್ತಿರುವ ಕಾರಣ ಈ ಬಗ್ಗೆ ನಮ್ಮ ಮ್ಯಾನೇಜರ್‌ಗೂ ತಿಳಿದಿದೆ' ಎನ್ನುತ್ತಾನೆ. ಮಾತ್ರವಲ್ಲ ತನ್ನ ಹಿಂದೆ ನಿಂತ ವ್ಯಕ್ತಿಯನ್ನು ಮ್ಯಾನೇಜರ್ ಎಂದು ಪರಿಚಯಿಸುತ್ತಾನೆ.

'ಮಾತ್ರವಲ್ಲ ನಮ್ಮ ಮ್ಯಾನೇಜರ್ ಕೂಡಾ ಇದೇ ಬೀದಿಯಲ್ಲಿ ಫುಡ್ ಸ್ಟಾಲ್ ಇಟ್ಟುಕೊಂಡಿದ್ದಾರೆ. ಅಲ್ಲಿ ಪಕೋಡಾಗಳನ್ನು ಮಾರಾಟ ಮಾಡುತ್ತಾರೆ' ಎಂದು ಚಾಯ್‌ವಾಲಾ ಬಹಿರಂಗಪಡಿಸುತ್ತಾರೆ. 'ಚಾಯ್-ಸ್ನ್ಯಾಕ್ ಸ್ಟಾಲ್‌ನ ಪಕ್ಕದಲ್ಲಿ ಪಕೋಡಾ ಸ್ಟಾಲ್ ನನ್ನದು' ಎಂದು ಮ್ಯಾನೇಜರ್ ಹೇಳುವುದನ್ನು ವೀಡಿಯೋದಲ್ಲಿ ನೋಡಬಹುದು.

ರಜನಿ ಸ್ಟೈಲ್ ಪಾಲಿಸೋ, ಬಿಲ್ ಗೇಟ್ಸ್ ಜೊತೆ ಕಾಣಿಸಿಕೊಂಡ ಡಾಲಿ ಚಾಯ್ ವಾಲಾ ಟೀ ಬೆಲೆ ಎಷ್ಟು?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 11.4 ಮಿಲಿಯನ್ ಜನರನ್ನು ತಲುಪಿದೆ. ವೀಡಿಯೊ ನಿಜವಾದದ್ದೇ ಅಥವಾ ಮನರಂಜನೆಗಾಗಿ ಮಾತ್ರ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 

click me!