'ಚಿಕನ್ ಟಿಕ್ಕಾ ಮಸಾಲಾ' ಕಂಡುಹಿಡಿದ ಬಾಣಸಿಗ ಅಲಿ ಅಹಮದ್ ಅಸ್ಲಾಮ್ ನಿಧನ

By Vinutha PerlaFirst Published Dec 22, 2022, 4:18 PM IST
Highlights

ಪ್ರಸಿದ್ಧ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ಅವರು 77ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಗ್ರಾಹಕರಿಗೆ ಸರ್ವ್ ಮಾಡಿದ ಚಿಕನ್ ಟಿಕ್ಕಾ ತುಂಬಾ ಡ್ರೈ ಇದೆ ಎಂದು ಗ್ರಾಹಕರು ದೂರಿದ ನಂತರ ಚಿಕನ್ ಟಿಕ್ಕಾ ಮಸಾಲಾ ಪಾಕವಿಧಾನವನ್ನು ಕಂಡು ಹಿಡಿದಿದ್ದರು. 

ಗ್ಲಾಸ್ಗೋ: ಖ್ಯಾತ ಬಾಣಸಿಗ (Chef), ಪ್ರಸಿದ್ಧ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ಅವರು 77ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸ್ಕಾಟ್ಲೆಂಡ್ ನ ಗ್ಲಾಸ್ಗೋದ ಶೀಶ ಮಹಲ್ ಹೋಟೆಲ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು. ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಹೋಟೆಲ್ ಮುಚ್ಚಲಾಗಿದೆ. 1970 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶಿಶ್ ಮಹಲ್‌ನಲ್ಲಿ ಟೊಮೆಟೊ ಸೂಪ್‌ನಿಂದ ತಯಾರಿಸಿದ ಸಾಸ್ ಅನ್ನು ಸುಧಾರಿಸುವ ಮೂಲಕ ಸಂಶೋಧಕ (Inventor) ಅಲಿ ಅಹ್ಮದ್ ಅಸ್ಲಾಮ್, ಚಿಕನ್ ಟಿಕ್ಕಾ ಮಸಾಲಾ ಖಾದ್ಯವನ್ನು ಕಂಡುಹಿಡಿದರು. 'ಅವರು ಪ್ರತಿದಿನ ತಮ್ಮ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದರು. ರೆಸ್ಟೋರೆಂಟ್ ಅವನ ಜೀವನವಾಗಿತ್ತು' ಎಂದು  ಅಹ್ಮದ್ ಸಹೋದರ ಹೇಳಿದ್ದಾರೆ

ಸರ್ವ್ ಮಾಡಿದ ಚಿಕನ್ ಟಿಕ್ಕಾ ತುಂಬಾ ಡ್ರೈ ಇದೆ ಎಂದು ಗ್ರಾಹಕರು (Customers) ದೂರಿದ ನಂತರ ಚಿಕನ್ ಟಿಕ್ಕಾ ಮಸಾಲಾ ಪಾಕವಿಧಾನವನ್ನು ಕಂಡು ಹಿಡಿದೆ ಎಂದು ಅಲಿ 2009 ರಲ್ಲಿ ಎಎಫ್ ಪಿ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಚಿಕನ್ ಟಿಕ್ಕಾ ಮಸಾಲಾ ಬ್ರಿಟನ್ ರೆಸ್ಟೋರೆಂಟ್ ಗಳಲ್ಲಿ ಭಾರೀ ಜನಮನ್ನಣೆ ಪಡೆದಿದೆ. 'ಚಿಕನ್ ಟಿಕ್ಕಾ ಮಸಾಲಾ ಈಗ ನಿಜವಾದ ಬ್ರಿಟಿಷ್ ರಾಷ್ಟ್ರೀಯ ಭಕ್ಷ್ಯವಾಗಿದೆ, ಯಾಕೆಂದರೆ ಅದು ಹೆಚ್ಚು ಜನಪ್ರಿಯವಾಗಿದೆ ಎಂದಲ್ಲ, ಅಲ್ಲದೆ ಇದು ಬ್ರಿಟನ್ ಬಾಹ್ಯ ಪ್ರಭಾವಗಳನ್ನು ಹೀರಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ವಿಧಾನದ ಪರಿಪೂರ್ಣ ಸಂಕೇತವಾಗಿದೆ' ಎಂದು ಮಾಜಿ ವಿದೇಶಾಂಗ ಸಚಿವ ರಾಬಿನ್ ಕುಕ್ ಹೇಳಿದ್ದರು.

ಚಿಕನ್ ಸೂಪ್ ಕುಡೀರಿ ಸಾಕು, ವೈರಲ್ ಸೋಂಕು ತಗುಲೋ ಭಯ ಬೇಕಿಲ್ಲ

ಮೂಲತಃ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವರಾದ ಅಲಿ, 1964ರಲ್ಲಿ ಗ್ಲಾಸ್ಗೋದ ಪಶ್ಚಿಮ ತುದಿಯಲ್ಲಿ ಶಿಶ್ ಮಹಲ್ ಅನ್ನು ತೆರೆಯುವ ಮೊದಲು ಚಿಕ್ಕ ಹುಡುಗನಾಗಿದ್ದಾಗ ತನ್ನ ಕುಟುಂಬ (Family)ದೊಂದಿಗೆ ಗ್ಲಾಸ್ಗೋಗೆ ತೆರಳಿದರು. ಗ್ಲ್ಯಾಸ್ಗೋಗೆ ಚಿಕನ್ ಟಿಕ್ಕಾ ಮಸಾಲ ಭಕ್ಷ್ಯವನ್ನು ಉಡುಗೊರೆಯಾಗಿ ನೀಡಬೇಕೆಂದು ಅವರು ಬಯಸಿದ್ದರು, ಅವರು ದತ್ತು ಪಡೆದ ನಗರಕ್ಕೆ ಏನನ್ನಾದರೂ ಮರಳಿ ನೀಡಲು ಬಯಸಿದ್ದರು. 2009 ರಲ್ಲಿ, ಷಾಂಪೇನ್, ಪರ್ಮಾ ಹ್ಯಾಮ್ ಮತ್ತು ಗ್ರೀಕ್ ಫೆಟಾ ಚೀಸ್‌ನ ಜೊತೆಗೆ ಯುರೋಪಿಯನ್ ಯೂನಿಯನ್‌ನಿಂದ "ಪ್ರೊಟೆಕ್ಟೆಡ್ ಡೆಸಿಗ್ನೇಶನ್ ಆಫ್ ಒರಿಜಿನ್" ಸ್ಥಾನಮಾನವನ್ನು ನೀಡಬೇಕೆಂದು ಅವರು ಪ್ರಚಾರ ಮಾಡಿದರು. ಅಲಿ ಅವರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಚಿಕನ್ ಟಿಕ್ಕಾ ಮಸಾಲ 

ಚಿಕನ್ ಟಿಕ್ಕಾಗಾಗಿ ಬೇಕಾದ ಪದಾರ್ಥಗಳು:

ಕೋಳಿ ಮಾಂಸ: 160 ಗ್ರಾಂ
ಮೊಸರು: 50 ಗ್ರಾಂ
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 3 tbsp
ರೆಡ್ ಚಿಲ್ಲಿ ಪೌಡರ್: 1 tbsp
ಗರಂ ಮಸಾಲಾ ಪೌಡರ್: 1 tbsp
ಕಸ್ತೂರಿ ಮೇತಿ ಪುಡಿ: 2 ಚಿಟಿಕೆ
ಉಪ್ಪು: ರುಚಿಗೆ
ಚಾಟ್ ಮಸಾಲಾ: ಒಂದು ಚಿಟಿಕೆ
ಸಾಸಿವೆ ಎಣ್ಣೆ: 2 ಟೀಸ್ಪೂನ್

ಗ್ರೇವಿಗಾಗಿ:

ಎಣ್ಣೆ: 1 tbsp
ಸಂಪೂರ್ಣ ಜೀರಿಗೆ: 1 ಟೀಸ್ಪೂನ್
ಕತ್ತರಿಸಿದ ಶುಂಠಿ: 1 ಟೀಸ್ಪೂನ್
ಕತ್ತರಿಸಿದ ಬೆಳ್ಳುಳ್ಳಿ: 2 ಟೀಸ್ಪೂನ್
ಕತ್ತರಿಸಿದ ಹಸಿರು ಮೆಣಸಿನಕಾಯಿಗಳು: 1 ಟೀಸ್ಪೂನ್
ಈರುಳ್ಳಿ ಚೌಕವಾಗಿ: 4-5 ಪಿಸಿಗಳು
ಹಸಿರು ಕ್ಯಾಪ್ಸಿಕಂ ಚೂರುಗಳು: 4-5 ಪಿಸಿಗಳು
ಈರುಳ್ಳಿ-ಟೊಮ್ಯಾಟೊ ಗ್ರೇವಿ: 3 tbsp
ನೀರು: ಅಗತ್ಯವಿರುವಷ್ಟು
ಗರಂ ಮಸಾಲಾ ಪೌಡರ್: 2 ಟೀಸ್ಪೂನ್
ಉಪ್ಪು: ರುಚಿಗೆ
ಬೆಣ್ಣೆ: 1 tbsp
ಅಡುಗೆ ಕ್ರೀಮ್: 2 ಟೀಸ್ಪೂನ್
ಕತ್ತರಿಸಿದ ಕೊತ್ತಂಬರಿ ಸೊಪ್ಪು: ಅಲಂಕಾರಕ್ಕಾಗಿ

ಮಾಡುವ ವಿಧಾನ: ಮೇಲೆ ಹೇಳಿರುವ ಪದಾರ್ಥಗಳೊಂದಿಗೆ ಚಿಕನ್‌ನ್ನು ಮ್ಯಾರಿನೇಟ್ ಮಾಡಿ. ಫ್ರಿಜ್‌ನಲ್ಲಿ 3-4 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಇಡಿ. ನಂತರ ಇದನ್ನು ತಂದೂರ್‌ ಅಥವಾ BBQ ಅಥವಾ ಒಲೆಯಲ್ಲಿ ಬೇಯಿಸಿ. ಪಕ್ಕಕ್ಕೆ ಇರಿಸಿ. ನಂತರ, 
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ. ಅದು ಸಿಡಿಯಲು ಪ್ರಾರಂಭಿಸಿದ ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮತ್ತು ಹುರಿಯಿರಿ. ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ ಮತ್ತು ಹುರಿಯಿರಿ.

ಚಿಕನ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟಾನ? ಹಾಗಿದ್ರೆ ಮಾರ್ಕೆಟ್‌ನಿಂದ ಖರೀದಿಸುವಾಗ ಈ ವಿಚಾರ ಗಮನಿಸಿ

ನಂತರ ಚಿಕನ್ ಟಿಕ್ಕಾ ಸೇರಿಸಿ ಮಿಕ್ಸ್ ಮಾಡಿ. ಈರುಳ್ಳಿ-ಟೊಮೇಟೊ ಗ್ರೇವಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಣ ಮಸಾಲೆ ಪುಡಿಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರನ್ನು ಸೇರಿಸಿ ಮತ್ತು ಕಡಿಮೆ ಶಾಖದ ಮೇಲೆ ಎಲ್ಲವನ್ನೂ ಒಟ್ಟಿಗೆ ಬೇಯಿಸಿಕೊಳ್ಳಿ. ಬೆಣ್ಣೆ ಮತ್ತು ಕೆನೆ ಸೇರಿಸಿ. ನಂತರ ಇದಕ್ಕೆ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ನಂತರ ಇದನ್ನು ಈರುಳ್ಳಿ, ನಿಂಬೆ ತುಂಡು ಮತ್ತು ಬೆಳ್ಳುಳ್ಳಿ ನಾನ್ ಜೊತೆಗೆ ಬಿಸಿಯಾಗಿ ಬಡಿಸಿ.

click me!