1.9 ಮಿಲಿಯನ್ ಜನಕ್ಕೆ ಇಷ್ಟವಾಯ್ತು ಟೀ ತಯಾರಿಸೋ ಈ ಹೊಸ ವಿಧಾನ - ನೀವೂ ಟ್ರೈ ಮಾಡಿ

Published : Jul 24, 2026, 03:08 PM IST
tea recipe

ಸಾರಾಂಶ

new style tea recipe : ಸೋಶಿಯಲ್ ಮೀಡಿಯಾದಲ್ಲಿ ಟೀ ತಯಾರಿಸುವ ಹೊಸ ಸ್ಟೈಲ್ ವೈರಲ್ ಆಗಿದೆ. ರೆಸಿಪಿ ನೋಡಿದ ಬಳಕೆದಾರರು ತಾವೂ ಟ್ರೈ ಮಾಡ್ತಿದ್ದಾರೆ.

ಮಳೆಗಾಲ ಇರ್ಲಿ ಬೇಸಿಗೆ ಕಾಲ ಇರ್ಲಿ ಬಿಸಿಬಿಸಿ ಟೀ ಒಳಗೆ ಹೋಗ್ದೆ ಕೆಲ್ಸ ಮಾಡೋಕೆ ಉತ್ಸಾಹ ಬರೋದಿಲ್ಲ. ಜನರು ದಿನಕ್ಕೆ ನಾಲ್ಕೈದು ಬಾರಿ ಟೀ ಕುಡಿತಾರೆ. ಒಂದೇ ರೀತಿ ಟೀ, ಮಾಡೋರಿಗೂ ಬೋರಿಂಗ್, ಕುಡಿಯೋರಿಗೂ ಬೋರಿಂಗ್. ಸೋಶಿಯಲ್ ಮೀಡಿಯಾದಲ್ಲಿಆಗಾಗ ಟೀ ಮೇಲೆ ಹೊಸ ಹೊಸ ಪ್ರಯೋಗ ನಡೆಯುತ್ತಿರುತ್ತೆ. ಅನೇಕರು ತಮ್ಮದೇ ಸ್ಟೈಲ್ ನಲ್ಲಿ ಟೀ ತಯಾರಿಸ್ತಾರೆ. ಈಗ ಹೊಸ ಟೀ ರೆಸಿಪಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಪೇಷಲ್ ಟೀ ಮಾಡೋದು ಹೇಗೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಟೀ ತಯಾರಿಸೋ ವಿಧಾನ ಸಂಪೂರ್ಣ ಭಿನ್ನವಾಗಿದೆ. ಇದನ್ನು ನೋಡಿ ಇಷ್ಟಪಟ್ಟ ಜನರು ಅದನ್ನು ಮನೆಯಲ್ಲಿ ಟ್ರೈ ಮಾಡ್ತಿದ್ದಾರೆ. ವಿಶಿಷ್ಟ ರುಚಿ ಟೀ ಆನಂದಿಸ್ತಿದ್ದಾರೆ. ವೀಡಿಯೊದಲ್ಲಿ ಪದಾರ್ಥಗಳನ್ನು ಬೆರೆಸುವ ವಿಧಾನವು ಭಿನ್ನವಾಗಿದೆ.

Uses of used coffee grounds: ಬಳಸಿ ಉಳಿದ ಕಾಫಿ ಪುಡಿಯನ್ನ ಫ್ರಿಡ್ಜ್‌ನಲ್ಲಿಡಿ .. ಆಮೇಲೆ ಮ್ಯಾಜಿಕ್ ನೋಡಿ

ವಿಡಿಯೋ ಪ್ರಕಾರ, ಒಲೆ ಮೇಲೆ ಒಂದು ಪಾತ್ರೆ ಇಡಲಾಗುತ್ತೆ. ಅದಕ್ಕೆ ಸಕ್ಕರೆ ಹಾಗೂ ಟೀ ಪುಡಿಯನ್ನು ಹಾಕಿ ಮಿಕ್ಸ್ ಮಾಡಲಾಗುತ್ತೆ. ಸಕ್ಕರೆ ಬಿಸಿ ಆದಂತೆ ಟೀ ಪುಡಿಯಲ್ಲಿ ಕರಗಿ ನೀರು ಬಿಡಲು ಶುರು ಮಾಡುತ್ತೆ. ಆ ಟೈಂನಲ್ಲಿ ಸ್ವಲ್ಪ ನೀರನ್ನು ಹಾಕಿ ಮಿಶ್ರಣವನ್ನು ಮತ್ತಷ್ಟು ಕುದಿಸಲಾಗುತ್ತೆ. ನಂತ್ರ ಪುಡಿಮಾಡಿದ ಶುಂಠಿ ಮತ್ತು ಏಲಕ್ಕಿಯನ್ನು ಅದಕ್ಕೆ ಸೇರಿಸಲಾಗುತ್ತದೆ. ಅದು ಕುದಿಯಲು ಪ್ರಾರಂಭಿಸಿದ ನಂತರ ಹಾಲು ಸೇರಿಸಲಾಗುತ್ತದೆ. ಹಾಲು ಚೆನ್ನಾಗಿ ಕುದ್ದ ಮೇಲೆ ಸೋಸಿದ್ರೆ ಭಿನ್ನ ರುಚಿಯ ಟೀ ಕುಡಿಯಲು ಸಿದ್ಧ.

ಹಗಲಿನಲ್ಲಿ ಅಮೃತದಂತಿರುವ ಈ ಆಹಾರ ರಾತ್ರಿ ಸೇವಿಸಿದರೆ ಇಂತಹ ಸಮಸ್ಯೆ ನಿಮಗೂ ಬರಬಹುದು!

1.9 ಮಿಲಿಯನ್ ಲೈಕ್ಸ್

ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಇಲ್ಲಿಯವರೆಗೆ 1.9 ಮಿಲಿಯನ್ಗಿಂತಲೂ ಹೆಚ್ಚು ಲೈಕ್ಗಳನ್ನು ಪಡೆದಿದೆ. ಚಹಾ ಪ್ರಿಯರು ಈ ಹೊಸ ಸ್ಟೈಲ್ ಇಷ್ಟಪಟ್ಟಿದ್ದಾರೆ. ಕೆಲವರು ಟ್ರೈ ಮಾಡಿ, ಚೆನ್ನಾಗಿದೆ ಎಂದಿದ್ದಾರೆ. ಇನ್ನೊಂದಿಷ್ಟು ಮಂದಿ ಟೀ ತಯಾರಿಸೋ ಈ ವಿಧಾನವನ್ನು ಹಾಸ್ಯ ಮಾಡಿದ್ದಾರೆ. ಕುಕ್ಕರ್ ನಲ್ಲಿಟ್ಟು ಬೇಯಿಸಿ ಅಂತ ಒಬ್ಬರು ಸಲಹೆ ನೀಡಿದ್ರೆ ಮತ್ತೊಬ್ಬರು ಇಷ್ಟೊಂದು ಶುಂಠಿ ಹಾಕಿದ್ರೆ ಗತಿ ಏನು ಅಂತ ಪ್ರಶ್ನೆ ಮಾಡಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Fish Combination: ಮೀನಿನ ಜೊತೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
Krishna Janmashtami Recipe: 10 ನಿಮಿಷದಲ್ಲಿ 1 ಕಪ್ ಅವಲಕ್ಕಿಯಿಂದ ಸಕ್ಕರೆ ಬಳಸದೆ ಮಾಡಿ ರುಚಿಯಾದ ಲಡ್ಡು