Hindu Festivals: ನಾವೇಕೆ ಮಕರ ಸಂಕ್ರಾಂತಿ ಆಚರಿಸಲೇಬೇಕು ಎಂಬುದಕ್ಕೆ 5 ಕಾರಣಗಳು..

By Suvarna News  |  First Published Jan 9, 2022, 12:30 PM IST

ಮಕರ ಸಂಕ್ರಾಂತಿಯು ಹಿಂದೂಗಳಿಗೆ ಬಹಳ ಪ್ರಮುಖವಾದ ಹಬ್ಬವಾಗಿದೆ. ಈ ದಿನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ಬೀರಲಾಗುತ್ತದೆ. 


ಹೊಸ ವರ್ಷದ ಮೊದಲ ಹಬ್ಬ ಇನ್ನೇನು ಸಮೀಪಿಸಿದೆ. ಸುಗ್ಗಿ ಕಾಲ ಸಂಭ್ರಮಿಸುವ ಸಂಕ್ರಾಂತಿಯು ದಕ್ಷಿಣಾಯನ ಮುಕ್ತಾಯವಾಗಿ ದೇವರು, ದೇವತೆಗಳ ಬೆಳಗು- ಉತ್ತರಾಯಣದ ಆರಂಭ. ಈ ದಿನದ ವಿಶೇಷಗಳೇನು, ಯಾಕಿದನ್ನು ಆಚರಿಸಲೇಬೇಕು ಎಂಬುದಕ್ಕಿಲ್ಲಿ ಐದು ಕಾರಣಗಳನ್ನು ನೀಡಲಾಗಿದೆ..

ಅತಿ ಪ್ರಮುಖ ಹಬ್ಬ
ಕರ್ನಾಟಕದಲ್ಲಿ ಸಂಕ್ರಾಂತಿ, ತಮಿಳ್ನಾಡು, ಆಂಧ್ರದಲ್ಲಿ ಪೊಂಗಲ್, ಕೇರಳದಲ್ಲಿ ಓಣಂ, ಪಂಜಾಬ್, ಹರ್ಯಾಣದಲ್ಲಿ ಲೋಹ್ರಿ, ಅಸ್ಸಾಂ(Assam)ನಲ್ಲಿ ಮಾಘ್ ಬಿಹು, ಉತ್ತರ ಪ್ರದೇಶ, ಬಿಹಾರದಲ್ಲಿ ಕಿಚಡಿ ಎಂದು ಕರೆಸಿಕೊಳ್ಳುವ ಈ ಸಂಕ್ರಾಂತಿ ಹಬ್ಬ ಭಾರತದೆಲ್ಲೆಡೆ ಸಂಭ್ರಮದ ಆಚರಣೆ ಕಾಣುತ್ತದೆ. ಗುಜರಾತ್‌ನಲ್ಲಿ ಈ ದಿನ ಗಾಳಿಪಟ ಹಬ್ಬ(kite festival) ಆಚರಿಸಲಾಗುತ್ತದೆ. ಈ ಹಬ್ಬವು ಎಲ್ಲ ಹಿಂದೂಗಳಿಗೂ ಅತಿ ಮುಖ್ಯವಾಗಿದೆ. ಎಲ್ಲ ಹಬ್ಬಗಳೂ ಚಂದ್ರನ ಕ್ಯಾಲೆಂಡರ್ ಆಧರಿಸಿ ಬಂದರೆ, ಸಂಕ್ರಾಂತಿ ಮಾತ್ರ ಸೂರ್ಯನ ಪಥ ಅನುಸರಿಸಿ ಬರುತ್ತದೆ. ಅದಕ್ಕೇ ಸಂಕ್ರಾಂತಿ ಪ್ರತಿ ವರ್ಷ ಜನವರಿ 14-15ರಂದೇ ಬರುತ್ತದೆ. ಇದು ಇಷ್ಟೊಂದು ಪ್ರಾಮುಖ್ಯತೆ ಪಡೆದ ಹಬ್ಬ ಎಂಬ ಕಾರಣಕ್ಕೇ ನಾವಿದನ್ನು ಆಚರಿಸಬೇಕು. 

Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!

Latest Videos

undefined

ಸೂರ್ಯನು ಬೇರೆ ರಾಶಿಗೆ ಕಾಲಿಡಲಿದ್ದಾನೆ..
ಸಂಕ್ರಾಂತಿಯ ದಿನ ಸೂರ್ಯನು ಮಕರ(Capricorn)ದಿಂದ ಕಟಕ(cancer) ರಾಶಿಗೆ ಪಥ ಬದಲಿಸಲಿದ್ದಾನೆ. ಮಕರವು ಶನಿಯ ರಾಶಿಯಾಗಿದ್ದು, ಶನಿಯು ಸೂರ್ಯಪುತ್ರ. ಅಂದರೆ, ಸೂರ್ಯನು ತನ್ನ ಮಗನೊಂದಿಗೆ ಜೀವಿಸಲು ಬರುತ್ತಿದ್ದಾನೆ. ಅಂದರೆ, ಇದು ಹಿಂದಿನ ಜಗಳ ಮುನಿಸುಗಳನ್ನೆಲ್ಲ ಮರೆತು, ಪ್ರೀತಿ ಹಾಗೂ ಕಾಳಜಿಯ ಜಗತ್ತಿಗೆ ಕಾಲಿಡಬೇಕಾದ ಸಮಯ. ನಮ್ಮನ್ನು ಪ್ರೀತಿಸುವವರೊಂದಿಗೆ ಹಳೆಯ ಕಹಿಯನ್ನು ಮರೆತು ಉತ್ತಮ ಸಂಬಂಧ ಹೊಂದಿ ಜೊತೆಗಿರಬೇಕಾದ ಸಮಯ. 

Makar Sankranti : ಸುಗ್ಗಿ ಹಬ್ಬದಂದು ಖಿಚಡಿ ಯಾಕೆ ಮಾಡ್ತಾರೆ?

ರೈತರಿಗೆ ಕೊಯ್ಲಿ(Harvest Season)ನ ಸಮಯ
ಭಾರತದ ರೈತರು(farmers) ರಜೆಯೇ ಇಲ್ಲದೆ ವರ್ಷವಿಡೀ ಕೃಷಿ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಅವರಿಗೆ ವೀಕೆಂಡ್ ರಜೆ ಇಲ್ಲ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಸುತ್ತುವವರಲ್ಲ. ಬದಲಿಗೆ ನಮಗೆಲ್ಲ ಬೇಕಾದ ಆಹಾರ ಬೆಳೆಸುವಲ್ಲಿ ಅವರು ತೊಡಗಿಕೊಂಡಿರುತ್ತಾರೆ. ಇವರಿಂದಲೇ ನಾವೆಲ್ಲ ಹೊಟ್ಟೆ ತುಂಬಾ ಊಟ ಮಾಡಲು ಸಾಧ್ಯ. ನೆಮ್ಮದಿಯ ಜೀವನ ನಡೆಸಲು ಸಾಧ್ಯ. ರೈತ ಕೈ ಚೆಲ್ಲಿದರೆ ನಮ್ಮ ಬದುಕು ಅತಂತ್ರವಾಗುವುದು. ಹಾಗಾಗಿ, ಸಂಕ್ರಾಂತಿ ಎಂದರೆ ದುಡಿಮೆಗೆ ಫಲ ಸಿಕ್ಕಿ ರೈತರು ಸಂಭ್ರಮಿಸುವ ಕಾಲ. ರೈತರಿಗೆ ಗೌರವಾರ್ಥವಾಗಿ ನಾವಿದನ್ನು ಆಚರಿಸಬೇಕು. ಅವರ ಖುಷಿಯಲ್ಲಿ ಪಾಲ್ಗೊಳ್ಳಬೇಕು. 

ಉತ್ತರಾಯಣ(Uttarayan Period)
ದೇವತೆಗಳಿಗೆ ನಮ್ಮ ಒಂದು ವರ್ಷವೆಂದರೆ ಒಂದು ದಿನವೆಂದರ್ಥ. ಉತ್ತರಾಯಣ- ಮೊದಲ ಆರು ತಿಂಗಳು ಅವರಿಗೆ ಹಗಲಾದರೆ, ನಂತರದ ಆರು ತಿಂಗಳು ದಕ್ಷಿಣಾಯಣ ಅವರ ಇರುಳು. ನಿದ್ರಿಸುವ ಸಮಯ. ಹಾಗಾಗಿ, ಉತ್ತರಾಯಣದಲ್ಲಿ ಯಾರಾದರೂ ಜೀವ ಬಿಟ್ಟರೆ ನೇರ ಸ್ವರ್ಗಕ್ಕೆ ಹೋಗುತ್ತಾರೆ, ಅವರಿಗೆ ಮೋಕ್ಷ ದೊರಕುತ್ತದೆ ಎಂಬ ನಂಬಿಕೆ ಇದೆ. ಮಹಾಭಾರತದಲ್ಲಿ ಕೂಡಾ ಭೀಷ್ಮ ತನ್ನ ಸಾವನ್ನು ತಾನೇ ತಂದುಕೊಳ್ಳಲು ಉತ್ತರಾಯಣ ಬರುವವರೆಗೂ ಕಾದಿದ್ದ ಕತೆ ಇದೆ. ದೇವಾನುದೇವತೆಗಳಿಗೆ ಬೆಳಗಾಗಿರುವ ಸಂದರ್ಭವನ್ನು ನಾವು ಆಚರಿಸದಿದ್ದರೆ ಹೇಗೆ? ಅವರ ಆಶೀರ್ವಾದ ಬಲದಲ್ಲೇ ನಮ್ಮ ಸುಖವಿದೆ ಎಂಬುದನ್ನು ನೆನಪಿಡಬೇಕು. 

January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

ಧೀರ್ಘ ಸುಮಂಗಲಿ
ಉತ್ತರ ಭಾರತದ ಮಹಿಳೆಯರು ಸಂಕ್ರಾಂತಿ ದಿನದಂದು ನದಿಯಲ್ಲಿ ಪವಿತ್ರವಾದ ಮುಳುಗು ಹಾಕಿ ತಮ್ಮ ಪತಿಯ ದೀರ್ಘಾಯಸ್ಸಿಗಾಗಿ ಬೇಡಿಕೊಳ್ಳುತ್ತಾರೆ. ಸಂಕ್ರಾಂತಿಯ ದಿನದಿಂದ ಹಗಲು ದೀರ್ಘವಾಗುತ್ತದೆ, ರಾತ್ರಿ ಕಿರಿದಾಗುತ್ತದೆ. ಹಾಗಾಗಿ, ಸಂಕ್ರಾಂತಿಯ ಆಚರಣೆ ಮಾಡುವುದರಿಂದ ಆಯಸ್ಸು ಹಗಲಿನಂತೆ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಹಾಗೂ ನಮ್ಮವರ ಆಯಸ್ಸನ್ನು ವೃದ್ಧಿಸಲು ಕೋರಿ ಧನಾತ್ಮಕ ಮನಸ್ಥಿತಿಯಿಂದ ಸಂಕ್ರಾಂತಿ ಆಚರಿಸಬೇಕು.

click me!