Personality Traits: ಈ 4 ರಾಶಿಯವರು ತುಂಬಾ ಎಮೋಷನಲ್ ..!

By Suvarna News  |  First Published Jan 9, 2022, 9:53 AM IST

ನಾವು ಎಷ್ಟೋ ಬಾರಿ ನೋಡಿರುತ್ತೇವೆ. ಕೆಲವರನ್ನು ಅಳುಬುರುಕ, ಅಳುಬುರುಕಿ ಎಂದು ಹೇಳುತ್ತೇವೆ. ಆದರೆ, ಅವರು ಏಕೆ ಹಾಗೆ ಎಂದು ನಾವು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದಕ್ಕೆ ರಾಶಿಚಕ್ರದ ಪ್ರಭಾವಗಳೂ ಇವೆ. ಇವುಗಳ ಪ್ರಭಾವದಿಂದ ಕೆಲವರು ತುಂಬಾ ಎಮೋಷನಲ್ ಆಗಿಬಿಡುತ್ತಾರೆ. ಹಾಗಾದರೆ ಆ ಎಮೋಷನಲ್ ರಾಶಿಗಳು ಯಾವುವು ಎಂಬುದನ್ನು ನೋಡೋಣವೇ..?


ಮನುಷ್ಯ ಎಂದ ಮೇಲೆ ಸ್ವಭಾವಗಳು (Nature) ಬೇರೆ ಬೇರೆ ಇರುವುದು ಸಹಜ. ಕೆಲವರು ಒರಟು ಎನಿಸಿದರೂ ಇನ್ನೂ ಕೆಲವರು ಮೃದು ಸ್ವಭಾವದವರಾಗಿರುತ್ತಾರೆ. ಮತ್ತೆ ಕೆಲವರು ಹಾಸ್ಯ ಪ್ರಜ್ಞೆಯುಳ್ಳವರು, ಕೆಲವರು ಗಂಭೀರ ಸ್ವಭಾವವನ್ನು ಉಳ್ಳವರು ಹೀಗೆ ನಾನಾ ವ್ಯಕ್ತಿತ್ವವುಳ್ಳವರು ನಮಗೆ ಕಾಣಸಿಗುತ್ತಾರೆ. ಕೆಲವರಿಗೆ ಸ್ವಭಾವಗಳು ಬೆಳೆದು ಬಂದ ವಾತಾವರಣದಿಂದ ಬಂದರೂ ಮತ್ತೆ ಕೆಲವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಇದಕ್ಕೆ ಅವರ ರಾಶಿ (Zodiac), ನಕ್ಷತ್ರಗಳು (Star) ಕಾರಣವಾಗಿರುತ್ತದೆ. ಅವರವರು ಹುಟ್ಟಿದ ಘಳಿಗೆ (Birth Time), ಸಮಯ, ದಿನಗಳ (Day) ಆಧಾರದ ಮೇಲೆ ರಾಶಿ, ನಕ್ಷತ್ರಗಳು ನಿರ್ಧರಿತವಾಗುತ್ತದೆ. ಇವುಗಳ ಆಧಾರದಲ್ಲಿ ವ್ಯಕ್ತಿಯ ಗುಣ, ಸ್ವಭಾವಗಳನ್ನು ತಿಳಿಯಬಹುದು. ಹೀಗಾಗಿ ಕೆಲವು ರಾಶಿಯವರಂತೂ ತುಂಬಾ ಭಾವುಕ ಜೀವಿಗಳು (Emotional People), ಅವರು ಪ್ರತಿಯೊಂದು ವಿಷಯಕ್ಕೂ ಎಮೋಶನಲ್ ಆಗಿ ಬಿಡುತ್ತಾರೆ. 

ಮೇಷ ರಾಶಿ (Aries)
ಮೇಲ್ನೋಟಕ್ಕೆ ಕಲ್ಲಿನಂತೆ ಕಂಡರೂ ಮೇಷ ರಾಶಿಯ ವ್ಯಕ್ತಿಗಳು ಬಹಳ ಭಾವುಕ ಜೀವಿಗಳು. ಎಲ್ಲ ವಿಷಯಗಳಿಗೂ ಭಾವುಕರಾಗುತ್ತಾರೆ. ಇವರು ಇಂಥದ್ದೇ ವಿಷಯಕ್ಕೆ ಭಾವುಕರಾಗುತ್ತಾರೆ ಎಂದು ಹೇಳುವುದು ಕಷ್ಟ. ಕೆಲವೊಂದು ವಿಷಯಗಳಿಗೆ ಅವರಿಗೇ ಗೊತ್ತಿಲ್ಲದಂತೆ ಭಾವನಾತ್ಮಕವಾಗಿ ಸ್ಪಂದಿಸಿಬಿಡುತ್ತಾರೆ. ಇವರಿಗೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವು ಗುಣವಿದೆ. ಅವರ ನೋವುಗಳ (Pain) ಕಥೆಗಳನ್ನು (Stories) ಕೇಳಿದರೆ ಇವರು ಸಹ ಮರುಗಿಬಿಡುತ್ತಾರೆ. ಅಲ್ಲದೆ, ತಮ್ಮನ್ನು ಮನಃಪೂರ್ವಕವಾಗಿ ಪ್ರೀತಿಸುವ ಜನರನ್ನು ಬಯಸುತ್ತಾರೆ. ಇವರು ತಮ್ಮ ನೋವನ್ನು, ಸಂಕಟವನ್ನು ಇತರರ ಬಳಿ ಹೇಳಿಕೊಳ್ಳುವುದು ಕಡಿಮೆ. ಜೊತೆಗೆ ಈ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರು (Loved one) ಕಷ್ಟಪಡುವುದನ್ನು ನೋಡಲಾಗದು. ಇವರಿಗೆ ಚಡಪಡಿಕೆ ಆರಂಭವಾಗುತ್ತದೆ. ಇನ್ನೊಂದು ವಿಷಯವೆಂದರೆ ಎದುರಿನವರು ಕಣ್ಣೀರು ಹಾಕಿದರೆ ಇವರೂ ಕಣ್ಣೀರು ಹಾಕಿಬಿಡುತ್ತಾರೆ. 

ಇದನ್ನು ಓದಿ:  Aries Trait: ಮೇಷ ರಾಶಿಯ ಈ ಹೆಸರುಗಳ ಹುಡುಗರು ಸಖತ್ ಡಾಮಿನೇಟಿಂಗ್ 

ಕರ್ಕಾಟಕ ರಾಶಿ (Cancer)
ಈ ರಾಶಿಚಕ್ರದವರೂ ಸಹ ತುಂಬಾ ಭಾವನಾತ್ಮಕ ಸ್ವಭಾವದವರು. ಆದರೆ, ಇವರ ಈ ವ್ಯಕ್ತಿತ್ವವನ್ನು ಬಲ್ಲ ಹಲವು ಜನರು ಲಾಭವನ್ನು ಪಡೆದುಕೊಳ್ಳುತ್ತಾರೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರವಾಗಿದ್ದೇನೆ (Moon). ಹೀಗಾಗಿ ಚಂದ್ರ ಪ್ರಭಾವಕ್ಕೊಳಗಾಗಿ ಇವರು ಭಾವನಾತ್ಮಕವಾಗಿಬಿಡುತ್ತಾರೆ. ಇವರನ್ನು ಹೊರಗಿನಿಂದಲ ನೋಡಲು ತುಂಬಾ ಕಠಿಣ ಎಂದು ಅನ್ನಿಸಿದರೂ, ಹತ್ತಿರ ಹೋಗಿ ನೋಡಿದಾಗಲೇ ಮೃದು ಹೃದಯಿಗಳು ಎಂದು ತಿಳಿಯುತ್ತದೆ. ಇನ್ನೊಬ್ಬರಿಗೆ ಇವಾರಾಗಿಯೇ ನೋವು ಮಾಡುವ ಸ್ವಭಾವದವರೂ ಇವರಲ್ಲ. ಇದಲ್ಲದೆ, ತಮ್ಮನ್ನು ಪ್ರೀತಿಸುವವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಸಂಬಂಧಗಳಿಗೆ (Relationship) ಅತೀವ ಬೆಲೆ ಕೊಡುವ ಇವರು, ಅವರನ್ನು ತುಂಬಾ ಪ್ರೊಟೆಕ್ಟ್ (Protect) ಮಾಡಿಕೊಳ್ಳುತ್ತಾರೆ. 

ಕನ್ಯಾ ರಾಶಿ (Virgo)
ಕನ್ಯಾ ರಾಶಿ ಚಕ್ರದ ವ್ಯಕ್ತಿಗಳು ಸಹ ಭಾವನೆಗಳೊಂದಿಗೇ ಬದುಕುವವರು. ಇವರಿಗೆ ಹೃದಯದ, ಮನಸ್ಸಿನ ಮಾತಿಗೆ ಬೆಲೆ ಕೊಡುವವರಾಗಿದ್ದು, ತೀರಾ ಬುದ್ಧಿವಂತಿಕೆಯಿಂದ (Wisdom) ಯಾವುದೇ ನಿರ್ಣಯವನ್ನು (Resolution) ಕೈಗೊಳ್ಳುವವರಲ್ಲ. ಇವರ ಇನ್ನೊಂದು ಸಮಸ್ಯೆಯೆಂದರೆ (Problem) ತಮ್ಮ ಭಾವನೆಯನ್ನು (Feeling) ಅಷ್ಟು ಅರ್ಥವಾಗುವ ಹಾಗೆ ವ್ಯಕ್ತಪಡಿಸಲು ಬರುವುದಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ಸಹ ನೇರವಾಗಿ ಹೃದಯಕ್ಕೆ (Heart) ತೆಗೆದುಕೊಳ್ಳುವ ಮನಸ್ಥಿತಿಯನ್ನು ಹೊಂದಿರುವ ಇವರು, ಬೇಗ ಭಾವನಾತ್ಮಕವಾಗಿ ಜಾರಿಬಿಡುತ್ತಾರೆ. ಅಲ್ಲದೆ, ತುಂಬಾ ಸಮಯದವರೆಗೆ ಇದರ ಬಗ್ಗೆ ಯೋಚಿಸುತ್ತಾ ಅಸಮಾಧಾನಗೊಳ್ಳುತ್ತಾರೆ. ಕನ್ಯಾ ರಾಶಿಯು ಬುಧನ (Mercury) ಪ್ರಾಬಲ್ಯವನ್ನು ಹೊಂದಿದೆ. ಇದು ಅವರನ್ನು ಮತ್ತಷ್ಟು ಭಾವನಾತ್ಮಕಗೊಳಿಸುತ್ತದೆ. ಹೀಗಾಗಿ ಇವರು ಸಣ್ಣ ವಿಷಯಗಳಿಗೂ ಯೋಚಿಸುವ, ನಿರ್ಧಾರಗಳನ್ನು ಕೈಗೊಳ್ಳುವ ಗುಣದಿಂದ ತೊಂದರೆಗೊಳಗಾಗುವ ಸಾಧ್ಯತೆಗಳೂ ಇರುತ್ತದೆ. 

ಇದನ್ನು ಓದಿ: Gemstones: ರತ್ನಗಳ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಗಮನ

ಮೀನ ರಾಶಿ (Pisces)
ಈ ರಾಶಿಚಕ್ರದವರೂ ಸಹ ತುಂಬಾ ಎಮೋಶನಲ್ ಆಗಿದ್ದಾರೆ. ಇವರು ಒಂದು ಬಾರಿ ಯಾರದ್ದಾದರೂ ಜೊತೆ ಸ್ನೇಹ ಸಂಪಾದಿಸಿದರೆ, ಸಂಬಂಧವನ್ನು ಹೊಂದಿದರೆ ಅವರು ಬಿಟ್ಟುಹೋಗದಂತೆ ಜಾಗ್ರತೆ ವಹಿಸುತ್ತಾರೆ. ಅವರನ್ನು ಉಳಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಆದರೆ, ಅವರು ತಮ್ಮ ಜೊತೆಗಿರುವ ವ್ಯಕ್ತಿಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು (Expectation) ಹೊಂದಿರುತ್ತಾರೆ. ಮೀನ ರಾಶಿಯು ಗುರು ಗ್ರಹದ ಪ್ರಾಬಲ್ಯಕ್ಕೊಳಪಟ್ಟಿದೆ. ಹೀಗಾಗಿ ಬೇಗ ಸೂಕ್ಷ್ಮಮತಿಗಳಾಗುತ್ತಾರೆ. ಇವರು ಒಮ್ಮೆ ಯಾರನ್ನಾದರೂ ಪ್ರೀತಿಸಿದರೆ (Love) ಅವರ ಬಗ್ಗೆಯೇ ಸದಾ ಚಿಂತಿಸುತ್ತಾರೆ. 

click me!