Makar Sankranti : ಸುಗ್ಗಿ ಹಬ್ಬದಂದು ಖಿಚಡಿ ಯಾಕೆ ಮಾಡ್ತಾರೆ?
ಸಂಕ್ರಾಂತಿ ಬರ್ತಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡ್ತಿದೆ. ಕೊರೊನಾ ಮಧ್ಯೆಯೇ ಜನರು ಹಬ್ಬದ ಸ್ವಾಗತಕ್ಕೆ ಮನೆ,ಮನಸ್ಸಿನ ಶುದ್ಧೀಕರಣ ಶುರು ಮಾಡಿದ್ದಾರೆ. ಸಂಕ್ರಾಂತಿಗೆ ಸಿಹಿ ತಯಾರಿಸುವ ಪ್ಲಾನ್ ನಡೆಯುತ್ತಿದೆ. ಯಾವುದೇ ಸಿಹಿ ಸಿದ್ಧವಾದ್ರೂ ಖಿಚಡಿಯೊಂದು ಊಟದಲ್ಲಿ ಇರಲೇಬೇಕು.
ಸೂರ್ಯ (Sun), ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ (Maker Sankranti )ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಜನವರಿ (January) 14 ರಂದು ಸಂಕ್ರಾಂತಿ ಹಬ್ಬ ಆಚರಿಸಲಾಗ್ತಿದೆ. ಮಕರ ಸಂಕ್ರಾಂತಿಯ ದಿನದಂದು ಗಂಗಾ ಸ್ನಾನ (Ganges bath )ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯನ್ನು ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದಂದು ಎಳ್ಳು-ಬೆಲ್ಲ ನೀಡುವ ಪದ್ಧತಿ ನಮ್ಮಲ್ಲಿದೆ. ಸಂಕ್ರಾಂತಿಯನ್ನು ಸುಗ್ಗಿ ಹಬ್ಬವಾಗಿಯೂ ಆಚರಣೆ ಮಾಡಲಾಗುತ್ತದೆ. ಸಂಕ್ರಾಂತಿಯಂದು ಸಿಹಿ ತಿನಿಸುಗಳನ್ನು ಮಾಡಿ, ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ. ಈಗಾಗಲೇ ಹಬ್ಬಕ್ಕೆ ಎಲ್ಲ ತಯಾರಿ ನಡೆದಿದೆ.
ಸಂಕ್ರಾಂತಿಯ ದಿನದಂದು ಬೆಲ್ಲ, ತುಪ್ಪ, ಉಪ್ಪು ಮತ್ತು ಎಳ್ಳು ಮಾತ್ರವಲ್ಲದೆ ಕಪ್ಪು ಉಂಡೆ ಮತ್ತು ಅಕ್ಕಿಯನ್ನು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಉದ್ದಿನ ಬೇಳೆ ಖಿಚಡಿ ಕೂಡ ಮಾಡಲಾಗುತ್ತದೆ. ಜನರು ಖಿಚಡಿ(khichdi)ಯನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ. ಇದೇ ಕಾರಣಕ್ಕೆ ದೇಶದ ಅನೇಕ ಸ್ಥಳಗಳಲ್ಲಿ ಈ ಹಬ್ಬವನ್ನು ಖಿಚಡಿ ಹಬ್ಬ ಎಂದೂ ಕರೆಯುತ್ತಾರೆ. ಸಂಕ್ರಾಂತಿಯಂದು ಖಿಚಡಿ ತಯಾರಿಸುವ ಪದ್ಧತಿ ಎಂದಿನಿಂದ ಆಚರಣೆಗೆ ಬಂತು ಮತ್ತು ಯಾಕೆ ಇದಕ್ಕೆ ಖಿಚಡಿ ಎಂದು ಕರೆಯುತ್ತಾರೆ ಎಂಬ ಬಗ್ಗೆ ನಾವು ಇಂದು ಮಾಹಿತಿ ನೀಡ್ತಿವೆ.
ಈ ಸಂಪ್ರದಾಯವನ್ನು ಯಾರು ಪ್ರಾರಂಭಿಸಿದರು?
ಮಕರ ಸಂಕ್ರಾಂತಿಯ ದಿನದಂದು ಖಿಚಡಿ ಮಾಡುವ ಪದ್ಧತಿ ಬಾಬಾ ಗೋರಖನಾಥ (Baba Gorakhnath)ರ ಕಾಲದಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಖಿಲ್ಜಿ (Khilji) ದಾಳಿ ಮಾಡಿದಾಗ, ನಾಥ ಯೋಗಿಗಳಿಗೆ ಯುದ್ಧದ ಸಮಯದಲ್ಲಿ ಆಹಾರ (Food)ವನ್ನು ತಯಾರಿಸಲು ಸಮಯ ಸಿಗಲಿಲ್ಲ. ಅವರು ಹಸಿವಿನಿಂದ ಯುದ್ಧಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಬೇಳೆಕಾಳು, ಅಕ್ಕಿ, ತರಕಾರಿಗಳನ್ನು ಒಟ್ಟಿಗೆ ಬೇಯಿಸಿ ಎಂದು ಬಾಬಾ ಗೋರಖನಾಥ್ ಸಲಹೆ ನೀಡಿದ್ದರು. ಏಕೆಂದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಖಿಚಡಿ ಪೌಷ್ಠಿಕಾಂಶದಿಂದ ಕೂಡಿದ್ದು, ಯೋಗಿಗಳ ಹೊಟ್ಟೆ ತುಂಬಿಸುತ್ತಿತ್ತು ಎನ್ನಲಾಗಿದೆ.
Bad Luck: ಈ 2 ರಾಶಿಯವರು ಮರೆತೂ ಕಪ್ಪು ದಾರವನ್ನು ಕಟ್ಟಿಸಿಕೊಳ್ಳಬಾರದು!
ಖಿಚಡಿ ಹೆಸರು ಹೇಗೆ ಬಂತು ? :
ಬಾಬಾ ಗೋರಖನಾಥ್ ಅವರಿಂದಲೇ ಇದಕ್ಕೆ ಖಿಚಡಿ ಎಂಬ ಹೆಸರು ಬಂತು. ಈ ತ್ವರಿತ ಪೌಷ್ಟಿಕ ಭಕ್ಷ್ಯಕ್ಕೆ ಖಿಚಡಿ ಎಂದು ಗೋರಖನಾಥ್ ಕರೆದರು ಎನ್ನಲಾಗಿದೆ. ಖಿಲ್ಜಿಯಿಂದ ಬಿಡುಗಡೆಯಾದ ನಂತರ, ಯೋಗಿಗಳು ಮಕರ ಸಂಕ್ರಾಂತಿಯ ದಿನದಂದು ಹಬ್ಬವನ್ನು ಆಚರಿಸಿದರು. ಅದೇ ಖಿಚಡಿಯನ್ನು ಆ ದಿನ ವಿತರಿಸಲಾಯಿತು. ಅಂದಿನಿಂದ ಮಕರ ಸಂಕ್ರಾಂತಿಯಂದು ಖಿಚಡಿ ಮಾಡುವ ಸಂಪ್ರದಾಯ ಪ್ರಾರಂಭವಾಯಿತು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಇಂದಿಗೂ, ಗೋರಖ್ಪುರದ ಬಾಬಾ ಗೋರಖನಾಥ ದೇವಾಲಯದಲ್ಲಿ ಖಿಚಡಿ ಜಾತ್ರೆ ನಡೆಯುತ್ತದೆ. ಖಿಚಡಿಯನ್ನು ಪ್ರಸಾದ ರೂಪದಲ್ಲಿ ಜನರಿಗೆ ವಿತರಿಸಲಾಗುತ್ತದೆ.
Personality Traits and Zodiacs: ಈ 4 ರಾಶಿಯ ಪುರುಷರು ಸಂಬಂಧವನ್ನು ಕಂಟ್ರೋಲ್ ಮಾಡ ಬಯಸುತ್ತಾರೆ!
ಖಿಚಡಿಯ ಧಾರ್ಮಿಕ ಮಹತ್ವವೇನು? :
ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನು ತನ್ನ ಮಗನಾದ ಶನಿಯನ್ನು ಭೇಟಿಯಾಗಲು ಅವನ ಮನೆಗೆ ಬರುತ್ತಾನೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಉದ್ದಿನ ಬೇಳೆ ಶನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯದೇವ ಮತ್ತು ಶನಿದೇವರು ಮಕರ ಸಂಕ್ರಾಂತಿಯಂದು ಉದ್ದಿನ ಬೇಳೆಯನ್ನು ಸೇವಿಸುವ ಮೂಲಕ ಸಂತೋಷಪಡುತ್ತಾರೆ. ಇದಲ್ಲದೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಕಿ ಚಂದ್ರನಿಗೆ, ಉಪ್ಪು ಶುಕ್ರನಿಗೆ, ಅರಿಶಿನ ಗುರುವಿಗೆ, ಹಸಿರು ತರಕಾರಿ ಬುಧಕ್ಕೆ ಸಂಬಂಧ ಹೊಂದಿದೆ. ಖಿಚಡಿ ಶಾಖವನ್ನು ಮಂಗಳದೊಂದಿಗೆ ಜೋಡಿಸಲಾಗಿದೆ. ಹಾಗಾಗಿ ಸಂಕ್ರಾಂತಿಯಂದು ಖಿಚಡಿ ಮಾಡಿದರೆ ಅದು ಎಲ್ಲ ಗ್ರಹಗಳಿಗೆ ಅರ್ಪಿಸಿದಂತಾಗುತ್ತದೆ.