
ಕಳೆದ 22 ವರ್ಷಗಳ ಕಾಲ ಮೇಕಪ್ ಬಳಸಿ ಸರಿಯಾಗಿ ತೊಳೆಯದೆ ತೊಂದರೆ ಅನುಭವಿಸಿದ ಮಹಿಳೆಯ ಕಥೆ ಇಲ್ಲಿದೆ ನೋಡಿ.ಮೇಕಪ್ ಮಾಡಿಕೊಂಡ ಮುಖವನ್ನು ಸರಿಯಾಗಿ ತೊಳೆಯದ ಕಾರಣ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಿದ್ದಾಳೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನಗೆ ಮುಖದ ಮೇಲೆ ಸಾವಿರಾರು ಇರುವೆಗಳು ಓಡಾಡಿದಂತೆ ಭಾಸವಾಗಿದ್ದನ್ನು, ನೋವು ಅನುಭವಿಸಿದ್ದನ್ನು ವಿಡಿಯೋ ಮೂಲಕ ಹೇಳಿಕೊಂಡಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣಗಳಲ್ಲಿ ವಾಸಿಸುವ ಬಹುತೇಕ ಮಹಿಳೆಯರು ಮೇಕಪ್ ಸಾಮಗ್ರಿಗಳನ್ನು ಬಳಸುವುದು ಸಾಮಾನ್ಯ. ಆದರೆ, ಚರ್ಮಕ್ಕೆ ಹೊಂದುವ, ಉತ್ತಮ ಗುಣಮಟ್ಟದ ಮೇಕಪ್ ಬಳಸಿ, ಸರಿಯಾಗಿ ತೊಳೆಯಬೇಕು. ಚೀನಾದ ಈ ಮಹಿಳೆ 22 ವರ್ಷಗಳಿಂದ ಮೇಕಪ್ ಬಳಸಿ ಸರಿಯಾಗಿ ತೊಳೆಯದ ಕಾರಣ ಚರ್ಮದ ಸಮಸ್ಯೆ ಎದುರಿಸುತ್ತಿದ್ದಾರೆ. ಮೇಕಪ್‌ನಿಂದ ತೀವ್ರ ಅಲರ್ಜಿ, ಮುಖ ಊತ ಮತ್ತು ವಿರೂಪಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಜಿಲಿನ್ ಪ್ರಾಂತ್ಯದ 37 ವರ್ಷದ ನ್ಯೂಯೋಮಿಯನ್ ಎಂಬ ಮಹಿಳೆ ಈ ವಿಡಿಯೋ ಹಂಚಿಕೊಂಡಿದ್ದರು. ಈ ಮಹಿಳೆಯ ಮುಖದ ಮೇಲೆ ಕೆಂಪು ಗುಳ್ಳೆಗಳು, ಊತ ಹಾಗೂ ಸಣ್ಣ ಸಣ್ಣ ಗಡ್ಡೆಗಳು ಮುಂತಾದ ಅಲರ್ಜಿಯ ಲಕ್ಷಣಗಳು ಅವರ ಮುಖದಲ್ಲಿ ಕಾಣಿಸಿಕೊಂಡವು. ಈ ಮಹಿಳೆ ತನ್ನ ಹರೆಯದ ವಯಸ್ಸಾದ 14ನೇ ವಯಸ್ಸಲ್ಲಿ ಒಂದು ಕ್ರೀಮ್ ಬಳಸಿದಾಗ ಅಲರ್ಜಿ ಕಂಡುಬಂತು ಎಂದು ಹೇಳುತ್ತಾರೆ. ಆದರೆ, 15ನೇ ವಯಸ್ಸಿನಿಂದ ಸಂಪೂರ್ಣವಾಗಿ ಮೇಕಪ್ ಬಳಸಲು ಶುರು ಮಾಡಿದರು. ಆದರೆ, ಸರಿಯಾಗಿ ಮುಖವನ್ನು ತೊಳೆಯದ ಕಾರಣ ಭಾರೀ ಸಮಸ್ಯೆಗೆ ಒಳಗಾದರು. ನಂತರ, ತನ್ನ ಮುಖದ ಅಲರ್ಜಿಯನ್ನು ಮುಚ್ಚಿಕೊಳ್ಳುವುದಕ್ಕಾಗಿ ಅಗ್ಗದ ಫೌಂಡೇಶನ್‌ಗಳು ಬಳಸಲು ಶುರು ಮಾಡಿದರು. ಈ ಅಗ್ಗದ ಮೇಕಪ್ ಫೌಂಡೇಷನ್‌ಗಳಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು ಎಂದು ತಿಳಿಸಿದ್ದಾರೆ.
2011ರಲ್ಲಿ ಸೌಂದರ್ಯ ವರ್ಧನೆಗೆ ಇಂಜೆಕ್ಷನ್ ತೆಗೆದುಕೊಂಡರು. ಇದು ಸಮಸ್ಯೆ ಇನ್ನಷ್ಟು ಹೆಚ್ಚಿಸಿತು. 25 ವರ್ಷದವರೆಗೂ ಸಮಸ್ಯೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಂತರ ತೀವ್ರ ನೋವು ಅನುಭವಿಸಿದರು. ಮುಖದ ಮೇಲೆ ಸಾವಿರಾರು ಇರುವೆಗಳು ಓಡಾಡುವಂತೆ ಅನಿಸುತ್ತಿತ್ತು ಎಂದು ಹೇಳಿದ್ದಾರೆ. ಹೀಗಾಗಿ, ಮಹಿಳೆ ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ, ಬೇರೆಯವರು ಬಳಸುವುದನ್ನು ನೋಡಿ ಉತ್ಪನ್ನ ಬಳಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಮಹಿಳೆಯರು ಮೇಕಪ್ ಸಾಮಗ್ರಿಯನ್ನು ಬಳಸಿದ ನಂತರ ನಿಮಗೆ ಅಲರ್ಜಿ ಲಕ್ಷಣಗಳು ಕಂಡುಬಂದಲ್ಲಿ ಅನ್ನು ನಿಲ್ಲಿಸಿಬಿಡಿ. ಜೊತೆಗೆ, ನಿಮಗಾದ ಅಲರ್ಜಿಗೆ ಕೂಡಲೇ ಚಿಕಿತ್ಸೆ ಪಡೆಯಿರಿ. ಮುಂದಿನ ದಿನಗಳಲ್ಲಿ ಮೇಕಪ್ ಸಾಮಗ್ರಿಗಳನ್ನು ಬಳಸಬೇಕೆಂದರೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಗಳೊಂದಿಗೆ ನಿಮ್ಮ ಚರ್ಮಕ್ಕೆ ಸೂಕ್ತವಾಗುವ ಮೇಕಪ್ ಸಾಮಗ್ರಿ ಬಳಸುವುದು ನಿಮ್ಮ ಮುಖ ಮತ್ತು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.