
ಇದೀಗ ಶಾಕಿಂಗ್ ವರದಿಯೊಂದು ಬಂದಿದೆ. ಅದೇನೆಂದರೆ, ಕೃತಕ ಉಗುರು ಅಂದರೆ ಅಕ್ರಿಲಿಕ್ ಉಗುರುಗಳನ್ನು ಬಳಸುತ್ತಿದ್ದ 35 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಅಪರೂಪದ ಚರ್ಮದ ಕ್ಯಾನ್ಸರ್‌ಗೆ ಒಳಗಾಗಿದ್ದು, ಇದೀಗ ಇದು ಬಹಳ ಮಹಿಳೆಯರಲ್ಲಿ ಆತಂಕ ಉಂಟು ಮಾಡುತ್ತಿದೆ. ಈ ಚರ್ಮದ ಕ್ಯಾನ್ಸರ್‌ಗೆ ಸುಬುಂಗುವಲ್ ಮೆಲನೋಮಾ (Subungual Melanoma) ಎನ್ನಲಾಗುತ್ತಿದೆ. ಮೇಲಿಂದ ಮೇಲೆ ಅಕ್ರಿಲಿಕ್ ಉಗುರುಗಳ ಬಳಕೆಯಿಂದ ಇದು ಸಂಭವಿಸುವುದಾಗಿ ವೈದ್ಯರು ಹೇಳಿದ್ದಾರೆ.
ಜೆಲಿ ಪಾಲಿಶ್‌ನಿಂದ ಉಲ್ಬಣ
ಅಕ್ರಿಲಿಕ್ ಉಗುರುಗಳು ನೇರವಾಗಿ ಕ್ಯಾನ್ಸರ್ ಅನ್ನು ಉಂಟುಮಾಡುವುದಿಲ್ಲ, ಆದರೆ ಅವುಗಳನ್ನು ಗುಣಪಡಿಸಲು ಬಳಸುವ UV ದೀಪಗಳು, ರಾಸಾಯನಿಕಗಳು ಕ್ಯಾನ್ಸರ್‌ಕಾರಕವಾಗಿವೆ ಎಂದು ಹೇಳಲಾಗುತ್ತಿದೆಯಾದರೂ, ಈ ಮಹಿಳೆಯಲ್ಲಿ ಉಗುರು ಬಳಕೆಯೇ ಕ್ಯಾನ್ಸರ್ ತಂದೊಡ್ಡಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ, ಜೆಲ್ ಪಾಲಿಶ್ ಅನ್ನು ಗುಣಪಡಿಸಲು ಬಳಸುವ UV ಲೈಟ್‌ಗಳಿಂದ ಈ ಸಮಸ್ಯೆ ಉಲ್ಬಣಿಸುತ್ತದೆ. ಉಗುರುಗಳ ಮೇಲೆ ಕಪ್ಪು ಗೆರೆಗಳು ಅಥವಾ ಉಗುರು ಬದಲಾವಣೆ ಆರಂಭಿಕ ಹಂತವಾಗಿದೆ. ಆದರೆ ಇದನ್ನು ಆರಂಭದಲ್ಲಿ ಗುರುತಿಸುವುದು ಕಷ್ಟವಾಗುತ್ತದೆ. ತಡವಾಗಿ ಇದು ಪತ್ತೆಯಾಗುವ ಕಾರಣದಿಂದ ಜೀವಕ್ಕೆ ಅಪಾಯ ತಂದೊಡ್ಡಬಲ್ಲುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಉಗುರಿನ ಕೆಳಗೆ ಕಣ್ಮರೆಯಾಗದ ಕಪ್ಪು ಗೆರೆ (ಕಂದು, ಕಪ್ಪು ಅಥವಾ ನೀಲಿ). ಉಗುರು ವಿಭಜನೆಯಾಗುವುದು, ಮೇಲೆಕ್ಕೆ ಎತ್ತುವುದು ಅಥವಾ ಗುಣಪಡಿಸದ ಗಾಯಗಳು ಇದರ ಆರಂಭಿಕ ಸೂಚನೆಗಳಾಗಿವೆ. ಬಳಿಕ ಉಗುರುಗಳ ಹೊರಪೊರೆಯ ಸುತ್ತಲೂ ಬಣ್ಣ ಬದಲಾವಣೆ ಅಥವಾ ರಕ್ತಸ್ರಾವ ಉಂಟಾಗುತ್ತದೆ. ಆದ್ದರಿಂದ ಕೃತಕ ಉಗುರುಗಳನ್ನು ಬಳಸುವುದು ಅನಿವಾರ್ಯವಾದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.