ನಿಂಬೆ ಹಣ್ಣು ಸೌಂದರ್ಯ ವರ್ದಕವಾಗಿ ಕೆಲಸ ಮಾಡುತ್ತದೆ. ಚರ್ಮಕ್ಕೆ ಹೊಳಪು ನೀಡಲು ನಿಂಬೆ ಸಹಕಾರಿ. ಆದ್ರೆ ನಿಂಬೆ ಹಣ್ಣನ್ನು ಚರ್ಮಕ್ಕೆ ಅನ್ವಯಿಸಿಕೊಳ್ಳೋಕೂ ವಿಧಾನವಿದೆ. ಹೆಂಗ್ ಹೆಂಗೋ ಹಚ್ಚಿಕೊಂಡ್ರೆ ಯಡವಟ್ಟಾಗುತ್ತೆ.
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ನೀಡುವಷ್ಟು ಮಹತ್ವವನ್ನು ನಾವು ದೇಹದ ಇತರ ಭಾಗದ ಸೌಂದರ್ಯಕ್ಕೆ ನೀಡೋದಿಲ್ಲ. ಮುಖ ಸುಂದರವಾಗಿರಬೇಕು, ಹೊಳೆಯುತ್ತಿರಬೇಕು, ಎಲ್ಲರನ್ನು ಆಕರ್ಷಿಸಬೇಕು ಎಂಬುದು ಬಹುತೇಕ ಎಲ್ಲರ ಆಸೆ. ಕನ್ನಡಿ ಮುಂದೆ ಕುಳಿತು ಗಂಟೆಗಟ್ಟಲೆ ಮುಖಕ್ಕೆ ಆರೈಕೆ ಮಾಡಿಕೊಳ್ಳುವವರಿದ್ದಾರೆ. ವಾರಕ್ಕೆ ನಾಲ್ಕು ಬಾರಿ ಬ್ಯೂಟಿಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡೋರಿದ್ದಾರೆ. ಮನೆಯಲ್ಲಿಯೇ ನಾವು ಅನೇಕ ಮನೆ ಮದ್ದುಗಳನ್ನು ಮಾಡಿಕೊಳ್ತಾ ಮುಖದ ಅಂದ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಮನೆ ಮದ್ದು ಎಂದಾಗ ನಮಗೆ ಮೊದಲು ನೆನಪಾಗೋದು ನಿಂಬೆ ಹಣ್ಣು.
ಅನೇಕ ಖಾಯಿಲೆ (Disease) ಗಳಿಗೆ ಮಾತ್ರವಲ್ಲದೆ ಸೌಂದರ್ಯ (Beauty) ವರ್ದಕವಾಗಿ ನಿಂಬೆ ಹಣ್ಣು ಕೆಲಸ ಮಾಡುತ್ತದೆ. ನಿಂಬೆ ರಸದಲ್ಲಿ ವಿಟಮಿನ್ ಸಿ (Vitamin C) ಇರುವುದರಿಂದ ಇದನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಆಲ್ಫಾ ಹೈಡ್ರಾಕ್ಸಿ ಆಮ್ಲ ಹೇರಳವಾಗಿರುತ್ತದೆ. ನೀವು ಚರ್ಮಕ್ಕೆ ಹೊಳಪು ನೀಡ್ಬೇಕು, ಚರ್ಮವನ್ನು ಶುದ್ಧೀಕರಿಸಬೇಕು ಎಂದಾದ್ರೆ ನಿಂಬೆ ಹಣ್ಣನ್ನು ಬಳಸಬೇಕು. ನಿಂಬೆಯಲ್ಲಿರುವ ವಿಟಮಿನ್ ಸಿ ನಿಮ್ಮ ವಯಸ್ಸನ್ನು ಮುಚ್ಚಿಡುವ ಕೆಲಸ ಮಾಡುತ್ತದೆ. ಚರ್ಮದಲ್ಲಿ ಕಾಲಜನ್ ಮಟ್ಟ ಹೆಚ್ಚಿದ್ದರೆ ನಮಗೆ ವಯಸ್ಸಾದಂತೆ ಕಾಣುತ್ತದೆ. ನೀವು ನಿಂಬೆ ರಸವನ್ನು ಚರ್ಮಕ್ಕೆ ಹಚ್ಚುವುದ್ರಿಂದ ಈ ಕಾಲಜನ್ ಮಟ್ಟ ಕಡಿಮೆಯಾಗುವ ಮೂಲಕ ನಮ್ಮ ವಯಸ್ಸನ್ನು ಮರೆಮಾಚಬಹುದು. ಕಣ್ಣ ಕೆಳಗಿನ ಕಪ್ಪು ಕಲೆ ಹೋಗಲಾಡಿಸಲು ನಿಂಬೆ ರಸ ಪರಿಣಾಮಕಾರಿ.
ನಿಂಬೆ ಹಣ್ಣಿನ ರಸವನ್ನು ಚರ್ಮದ ಟೋನ್ ಗೆ ಸಹ ಬಳಕೆ ಮಾಡಲಾಗುತ್ತದೆ. ನಮ್ಮ ಚರ್ಮದಲ್ಲಿ ಹೆಚ್ಚುವರಿ ಎಣ್ಣೆ ಉತ್ಪಾದನೆ ಆಗದಂತೆ ಅದು ನೋಡಿಕೊಳ್ಳುತ್ತದೆ. ನಿಂಬೆ ಹಣ್ಣು ಚರ್ಮಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ನಿಂಬೆ ಹಣ್ಣನ್ನು ಕತ್ತರಿಸಿ ರಸ ತೆಗೆದು ಇಲ್ಲವೆ ಪೀಸ್ ಮಾಡಿ ಅದನ್ನು ನೇರವಾಗಿ ಚರ್ಮದ ಮೇಲೆ ಉಜ್ಜುತ್ತಾರೆ.
ಆರ್ಥಿಕ, ಮಾನಸಿಕ ಸಮಸ್ಯೆಗಳಿಗೆ ನಿಂಬೆ ಹಣ್ಣಿನ ಪರಿಹಾರ!
ನಿಂಬೆ ಹಣ್ಣನ್ನು ಚರ್ಮಕ್ಕೆ ನೇರವಾಗಿ ಮಸಾಜ್ ಮಾಡಿದ್ರೆ ಏನಾಗುತ್ತೆ? : ಈ ಮೊದಲೇ ಹೇಳಿದಂತೆ ನಿಂಬೆ ಹಣ್ಣಿನ ರಸದಿಂದ ಸಾಕಷ್ಟು ಪ್ರಯೋಜನವಿದೆ. ಹಾಗಂತ ನೀವು ನೇರವಾಗಿ ನಿಂಬೆ ರಸ ಅಥವಾ ಕತ್ತರಿಸಿದ ತುಂಡನ್ನು ಚರ್ಮದ ಮೇಲೆ ಉಜ್ಜಿದ್ರೆ ಅದ್ರಿಂದ ಲಾಭವಾಗುವ ಬದಲು ನಷ್ಟವುಂಟಾಗುತ್ತದೆ. ನಿಂಬೆ ರಸವು 2 pH ಮಟ್ಟಕ್ಕಿಂತ ಹೆಚ್ಚು ಆಮ್ಲೀಯವಾಗಿರುತ್ತದೆ. ಇದರಿಂದಾಗಿ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯಾಗುತ್ತದೆ.
• ನೀವು ನಿಂಬೆ ಹಣ್ಣಿನ ರಸವನ್ನು ನೇರವಾಗಿ ಚರ್ಮಕ್ಕೆ ಹಾಕಿ ಉಜ್ಜಿದಾಗ ಹೈಪರ್ಪಿಗ್ಮೆಂಟೇಶನ್ ಮತ್ತು ಚರ್ಮ ಕೆಂಪು ಬಣ್ಣಕ್ಕೆ ತಿರುಗುವ ಅಪಾಯವಿರುತ್ತದೆ.
• ಚರ್ಮದ ಕಿರಿಕಿರಿ ಉಂಟಾಗುತ್ತದೆ. ಸೂರ್ಯನ ಕಿರಣಕ್ಕೆ ನಿಮ್ಮ ಚರ್ಮ ಒಡ್ಡಲು ಸಾಧ್ಯವಾಗದೆ ಇರಬಹುದು.
ನಿಂಬೆ ಹಣ್ಣನ್ನು ನೇರವಾಗಿ ಮುಖಕ್ಕೆ ಹಚ್ಚಿ ಹಾನಿಮಾಡಿಕೊಳ್ಳುವ ಬದಲು ಅದನ್ನು ಬೇರೆ ವಸ್ತುಗಳ ಜೊತೆ ಬೆರೆಸಿ ಬಳಸಬೇಕು.
ಕಿಡ್ನಿ ಸ್ಟೋನ್ ಗಿಂತ ಭೀಕರವಾಗಿರುತ್ತೆ ಪಿತ್ತಕೋಶದ ಕಲ್ಲು… ಮನೆಮದ್ದು ಇಲ್ಲಿವೆ
ನಿಂಬೆ ರಸವನ್ನು ಹೀಗೆ ಬಳಸಿ : ನೀವು ನಿಂಬೆ ಹಣ್ಣಿನ ರಸವನ್ನು ಜೇನು ತುಪ್ಪದ ಜೊತೆ ಬೆರೆಸಿ ಅದನ್ನು ಮುಖಕ್ಕೆ ಅಥವಾ ದೇಹದ ಇತರ ಭಾಗಕ್ಕೆ ಹಚ್ಚಿಕೊಳ್ಳಿ. ಜೇನುತುಪ್ಪ ಬೇಡ ಎನ್ನುವವರು ಮುಲ್ತಾನಿ ಮಿಟ್ಟಿಯನ್ನು ಬಳಕೆ ಮಾಡಬಹುದು. ಇಷ್ಟೇ ಅಲ್ಲ ರೋಸ್ ವಾಟರ್ ಜೊತೆ ನಿಂಬೆ ಹಣ್ಣಿನ ರಸಬೆರೆಸಿ ಹಚ್ಚಿಕೊಂಡ್ರೆ ಪರಿಣಾಮ ಹೆಚ್ಚು. ತಜ್ಞರ ಪ್ರಕಾರ, ಹರಳೆಣ್ಣೆಯನ್ನು ಕೂಡ ನೀವು ಬಳಕೆ ಮಾಡ್ಬಹುದು. ಗ್ಲಿಸರೀನ್ ಜೊತೆ ಬೆರೆಸಿ ಕೂಡ ನೀವು ನಿಂಬೆಯನ್ನು ಮುಖಕ್ಕೆ ಅನ್ವಯಿಸಿದ್ರೆ ಅದ್ರ ಪರಿಣಾಮ ಕಾಣಬಹುದು.